Sunday, 25 June 2017

LIGHT KASINA MEDITATION ಅಲೋಕ ಕಸಿನಾ (ಬೆಳಕಿನ ಕಸಿನಾ)

ಅಲೋಕ ಕಸಿನಾ (ಬೆಳಕಿನ ಕಸಿನಾ) :

                ಇಲ್ಲಿ ಸಾಧಕನು ನಿಶ್ಶಬ್ದ ವಾತಾವರಣದಲ್ಲಿ ನೆಲೆಸಿ ಒಂದು ಗುಂಡಾಗಿರುವ ಪಾತ್ರೆಯಲ್ಲಿ ನೀರನ್ನು ಹಾಕಿ, ಅದನ್ನು ಸೂರ್ಯನ ಮುಂದೆ ಇರಿಸುತ್ತಾನೆ. ಅದರ ಪ್ರತಿಫಲನವನ್ನು ಗೋಡೆಯ ಮೇಲೆ ಬೀಳುವಂತೆ ಇಡುತ್ತಾನೆ. ನಂತರ ಗೋಡೆಗೆ ಅಭಿಮುಖವಾಗಿ ಕುಳಿತು ಆ ಬೆಳಕನ್ನು ವೀಕ್ಷಿಸುತ್ತಾ ಧ್ಯಾನಿಸುತ್ತಾ ಅಲೋಕ...ಅಲೋಕ...ಅಲೋಕ... ಎಂದು ಧ್ಯಾನಿಸುತ್ತಾ ಜಪಿಸುತ್ತಾ ಸಮಾಧಿಯ ಹಂತಗಳನ್ನು ಪ್ರಾಪ್ತಿ ಮಾಡುತ್ತಾನೆ.
ಪಯರ್ಾಯ ವಿಧಾನ : ಆತನು ಒಂದು ದೀಪವನ್ನು ರಂಧ್ರದ ಮಡಿಕೆಯಲ್ಲಿಟ್ಟು, ಆ ರಂಧ್ರದಿಂದ ಗೋಡೆಯ ಮೇಲೆ ಬೀಳುವ ಬೆಳಕಿನ ಅಭಿಮುಖವಾಗಿ ಕುಳಿತು ಆ ಬೆಳಕನ್ನೇ ಧ್ಯಾನಿಸುತ್ತಾನೆ. ಅಲೋಕ... ಎಂದು ಜಪಿಸುತ್ತಾ ಧ್ಯಾನಿಸುತ್ತಾ... ಇರುವಾಗ ಆತನಿಗೆ ಉಗ್ಗಹ ನಿಮತ್ತವು ಬೆಳಕಿನ ವೃತ್ತದಂತೆ ಕಾಣಿಸುತ್ತದೆ ಮತ್ತು ಪ್ರತಿಭಾಗ ನಿಮಿತ್ತವು ಬೆಳಕಿನ ಗೊಂಚಲಿನಂತೆ ಕಂಡುಬರುತ್ತದೆ. ಅದನ್ನು ಅವಲಂಬಿಸಿ ಧ್ಯಾನಿಸಿ ಚತುರ್ಥ ದ್ಯಾನ ಪಡೆಯುತ್ತಾರೆ.
ಅಭಿಜ್ಞಾ ಲಾಭಗಳು :

                ಆತನು ಹೊಳೆಯುವಂತಹ ಆಕಾರಗಳನ್ನು ಸೃಷ್ಟಿಸುತ್ತಾನೆ. ಜಡತೆ, ನಿದ್ರಾವಸ್ಥೆ, ದೂರಿಕರಿಸುತ್ತಾನೆ. ಕತ್ತಲೆಯನ್ನು ಹೋಗಲಾಡಿಸುತ್ತಾನೆ. ಬೆಳಕನ್ನು ಸೃಷ್ಟಿಸುತ್ತಾನೆ ಮತ್ತು ದಿವ್ಯದೃಷ್ಟಿ ಪ್ರಾಪ್ತಿ ಮಾಡುತ್ತಾನೆ. ಇತ್ಯಾದಿ.

No comments:

Post a Comment