Sunday 18 March 2018

ನಿಬ್ಬಾಣ nibbana in kannada

 ನಿಬ್ಬಾಣ

ನಿಬ್ಬಾಣಂ ಪರಮ ಸುಖಂ
ನಿಬ್ಬಾಣವು ಸರ್ವರ ಅಂತಿಮ ಗುರಿಯಾಗಿದೆ. ಬುದ್ಧರ ಸರ್ವ ಬೋಧನೆಯು ಪೂರ್ಣವಾಗಿ ತರ್ಕಭರಿತವಾಗಿದ್ದರೂ ನಿಬ್ಬಾಣವು ಮಾತ್ರ ತಕರ್ಾತೀತವಾಗಿದೆ. ಇದು ಲೋಕೋತ್ತರ ಧಮ್ಮವಾಗಿದ್ದು, ಗೋತ್ರಭು ಜ್ಞಾನವು ಮಾತ್ರ ನಿಬ್ಬಾಣವನ್ನು ಅರಿಯುತ್ತದೆ. ನಿಬ್ಬಾಣವು ಅನಿವರ್ಾಚ್ಯವಾಗಿದೆ. ಇದು ಮಾತಿನಿಂದ ಆಗಲಿ, ಪದಗಳಿಂದಾಗಲಿ, ವಾಕ್ಯಗಳಿಂದಾಗಲಿ, ಗ್ರಂಥಗಳಿಂದಾಗಲಿ ವಿವರಿಸಲಾಗದು. ಅದು ದೇಹಕ್ಕೆ ಅತೀತ, ಮನಸ್ಸಿಗೂ ಅತೀತ, ಇಂದ್ರೀಯಗಳಿಗೂ ಅತೀತ, ಸಮಾಧಿ ಸ್ಥಿತಿಗಳಿಗೂ ಅತೀತವಾದುದು. ಸರ್ವಲೋಕಗಳಿಗೂ ಅತೀತವಾದುದು. ಅದು ಸ್ವತಃ ಅನುಭವಿಸುವಂತಹುದು ಸ್ವತಃ ಅರಿಯುವಂತಹುದು, ಪದಗಳಿಂದ ವಿವರಿಸಿದಷ್ಟು ಅದನ್ನು ತಪ್ಪಾಗಿ ಅಥರ್ೈಸಿಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ. ನಿಬ್ಬಾಣವನ್ನು ಲೋಕೋತ್ತರ ಮಾರ್ಗದಲ್ಲಿರುವವರು ಮಾತ್ರ ಸಾಕ್ಷಾತ್ಕರಿಸಬಹುದು.
ನಿಬ್ಬಾಣವನ್ನು ಶೂನ್ಯತಾ ಎನ್ನುತ್ತಾರೆ. ಏಕೆಂದರೆ ಇದು ಲೋಭ, ದ್ವೇಷ ಮತ್ತು ಮೋಹಗಳಿಂದ ಶೂನ್ಯವಾಗಿರುತ್ತದೆ. ಅಷ್ಟೇ ಅಲ್ಲ, ಸ್ಥಿತಿಗಳಿಗೆ ಅತೀತವಾಗಿರುತ್ತದೆ. ಅಂದರೆ ಎಲ್ಲಾ ಸ್ಥಿತಿಗಳಿಗೆ 3 ಅವಸ್ಥೆಗಳಿರುತ್ತದೆ. ಉದಯಿಸುವಿಕೆ, ಅಳಿಯುವಿಕೆ ಮತ್ತು ಬದಲಾಗುವಿಕೆ. ಆದರೆ ನಿಬ್ಬಾಣದಲ್ಲಿ ಈ 3 ಅವಸ್ಥೆಗಳಿರುವುದಿಲ್ಲ. ಆದ್ದರಿಂದ ಇದು ಸ್ಥಿತಿಗೆ ಅತೀತ ಶೂನ್ಯವಾಗಿದೆ. ನಿಬ್ಬಾಣವನ್ನು ನಿಮಿತ್ತರಹಿತ (ಅನಿಮಿತ್ತ) ಎನ್ನುತ್ತಾರೆ. ಏಕೆಂದರೆ ಲೋಭ ನಿಮಿತ್ತವಾಗಲಿ, ದ್ವೇಷ ನಿಮಿತ್ತವಾಗಲಿ, ಮೋಹ ನಿಮಿತ್ತವಾಗಲಿ ಯಾವುದೇ ನಿಮಿತ್ತಗಳು ಅಲ್ಲಿರುವುದಿಲ್ಲ. ನಿಬ್ಬಾಣವನ್ನು ಅಪ್ಪನಿಹಿತೊ ಅಂದರೆ ಆಸೆರಹಿತ ಎನ್ನುತ್ತಾರೆ. ಇದು ಎಲ್ಲಾರೀತಿಯ ಬಯಕೆಗಳಿಂದ ತನ್ಹಾಗಳಿಂದ, ಯೋಚನೆಗಳಿಂದ, ಗ್ರಹಿಕೆಗಳಿಂದ, ವೇದನೆಗಳಿಂದ ಮುಕ್ತವಾಗಿದೆ.
ನಿಬ್ಬಾಣವು ವೀಕ್ಷಿಸುವಂತಹುದ್ದಾಗಿದೆ, ನಿಬ್ಬಾಣವು ಅಮರವಾದುದು, ಆನಂತವಾದುದು, ಸ್ಥಿತಿಗೆ ಅತೀತವಾದುದು ಮತ್ತು ಅನುಪಮೇಯವು ಅನುತ್ತರವು ಆಗಿದೆ.
ಒಟ್ಟಾರೆ ಅದನ್ನು ಹೀಗೆ ವಿವರಿಸಬಹುದು.
ನಿಬ್ಬಾಣದ ನಕಾರಾತ್ಮಕ ವರ್ಣನೆ (ನಿಬ್ಬಾಣದಲ್ಲಿ ಏನಿಲ್ಲ?)
* ನಿಬ್ಬಾಣವು ಪೂರ್ಣವಾಗಿ ದುಃಖರಹಿತವಾದುದು
* ನಿಬ್ಬಾಣವು ಪೂರ್ಣವಾಗಿ ಅಹಂರಹಿತವಾದುದು
* ನಿಬ್ಬಾಣವು ಪೂರ್ಣವಾಗಿ ಲೋಭರಹಿತವಾದುದು
ನಿಬ್ಬಾಣವು ಪೂರ್ಣವಾಗಿ ದ್ವೇಷರಹಿತವಾದುದು
* ನಿಬ್ಬಾಣವು ಪೂರ್ಣವಾಗಿ ಮೋಹರಹಿತವಾದುದು
* ನಿಬ್ಬಾಣವು ಪೂರ್ಣವಾಗಿ ಕಶ್ಮಲರಹಿತವಾದುದು
* ನಿಬ್ಬಾಣವು ಪೂರ್ಣವಾಗಿ ಜನ್ಮರಹಿತವಾದುದು
* ನಿಬ್ಬಾಣವು ಪೂರ್ಣವಾಗಿ ತನ್ಹಾರಹಿತವಾದುದು
* ನಿಬ್ಬಾಣವು ಪೂರ್ಣವಾಗಿ ಅಸ್ತಿತ್ವರಹಿತವಾದುದು
* ನಿಬ್ಬಾಣವು ಪೂರ್ಣವಾಗಿ ಅರಚಿತವಾದುದು
* ನಿಬ್ಬಾಣವು ಅಭೂತವಾದುದು (ಅನುಪತ್ತಿ)
* ನಿಬ್ಬಾಣವು ಅಜಾತವಾದುದು (ಹುಟ್ಟಿಲ್ಲದ)
* ನಿಬ್ಬಾಣವು ಅಕತವಾದುದು (ಸ್ಥಿತಾತೀತವಾದುದು) (ಅವಸ್ಥೆಗೆ ಅತೀತ/ಗತಿಗೆ ಅತೀತ) (ಅನವಲಂಬಿತ/ಅಕಾರಣಿಯ)
* ನಿಬ್ಬಾಣವು ಜನ್ಮರಹಿತವಾದುದು
* ನಿಬ್ಬಾಣವು ಜರಾರಹಿತವಾದುದು
* ನಿಬ್ಬಾಣವು ಜರೆರಹಿತವಾದುದು
* ನಿಬ್ಬಾಣವು ಮರಣರಹಿತವಾದುದು
* ನಿಬ್ಬಾಣವು ಭಯರಹಿತವಾದುದು
* ನಿಬ್ಬಾಣವು ಉಪಾದಿರಹಿತವಾದುದು (ಬಂಧಗಳಿಲ್ಲದುದು).
* ನಿಬ್ಬಾಣದಲ್ಲಿ ಆತ್ಮವಿಲ್ಲ, ಜೀವಾತ್ಮವಿಲ್ಲ, ಪರಮಾತ್ಮವೂ ಇಲ್ಲ (ಏಕೆಂದರೆ ಇವೆಲ್ಲಾ ಕಲ್ಪಿತವಾಗಿದೆ)
* ನಿಬ್ಬಾಣದಲ್ಲಿ ದೇವರಿಲ್ಲ ಮತ್ತು ಇದು ದೇವರ ಜೊತೆ ಸಂಗಮವೂ ಅಲ್ಲ (ಇವೆಲ್ಲಾ ಕಲ್ಪಿತವಾಗಿದೆ)
* ನಿಬ್ಬಾಣದಲ್ಲಿ ಬ್ರಹ್ಮನಾಗಲಿ ಅಥವಾ ಪರಬ್ರಹ್ಮನಾಗಲಿ ಇಲ್ಲ (ಇವೆಲ್ಲದಕ್ಕಿಂತ ಅತೀತ ಸ್ಥಿತಿ).
* ನಿಬ್ಬಾಣವೆಂದರೆ ಮೃತ್ಯುವೂ ಅಲ್ಲ, ಶಾಶ್ವತವಾಗಿ ಇರುವುದೂ ಅಲ್ಲ.
* ನಿಬ್ಬಾಣವೆಂದರೆ ಸ್ವರ್ಗವಲ್ಲ, ಬ್ರಹ್ಮನೊಂದಿಗೆ ಐಕ್ಯವೂ ಅಲ್ಲ.
ನಿಬ್ಬಾಣದ ಸಕಾರಾತ್ಮಕ ವರ್ಣನೆ :
* ನಿಬ್ಬಾಣವು ಪರಮಸುಖಕರವಾದುದು
* ನಿಬ್ಬಾಣವು ಧ್ರುವವಾದುದು
* ನಿಬ್ಬಾಣವು ಶುಭವಾದುದು
* ನಿಬ್ಬಾಣವು ಕ್ಷೇಮಕರವಾದುದು
* ನಿಬ್ಬಾಣವು ಕೇವಲ (ಅದ್ವಿತೀಯವಾದುದು)
* ನಿಬ್ಬಾಣವು ಅಮರವಾದುದು
* ನಿಬ್ಬಾಣವು ಅನಂತವಾದುದು
* ನಿಬ್ಬಾಣವು ಅನುಪಮೇಯವಾದುದು
* ನಿಬ್ಬಾಣವು ಅನುತ್ತರವಾದುದು
* ನಿಬ್ಬಾಣವು ಪಾರವು (ಆಚೆಯದು)
* ನಿಬ್ಬಾಣವು ಪರ (ಪರಮಶ್ರೇಷ್ಟವಾದುದು)
* ನಿಬ್ಬಾಣವು ಪರಾಯಣವಾದುದು (ಶರಣು ಹೊಂದುವಂತಹದು)
* ನಿಬ್ಬಾಣವು ತಾಣ (ರಕ್ಷಿತವಾದುದು)
* ನಿಬ್ಬಾಣವು ಸಿವ (ಸುಖಕರವಾದುದು)
* ನಿಬ್ಬಾಣವು ಅನಾಲಯ (ಆಲಯವಿಲ್ಲದುದು/ನಿವಾಸವಿಲ್ಲದುದು)
* ನಿಬ್ಬಾಣವು ಅಕ್ಷರವಾದುದು (ನಾಶರಹಿತ)
* ನಿಬ್ಬಾಣವು ವಿಶುದ್ಧವಾದುದು (ಪರಿಪೂರ್ಣ ಪರಿಶುದ್ಧವಾದುದು)
* ನಿಬ್ಬಾಣವು ಲೋಕೋತ್ತರವಾದುದು (ಲೋಕಗಳಿಗೆ ಅತೀತವಾದುದು)
* ನಿಬ್ಬಾಣವು ಮುಕ್ತಿ
* ನಿಬ್ಬಾಣವು ವಿಮುಕ್ತಿ
* ನಿಬ್ಬಾಣವು ಶಾಂತಿ
* ನಿಬ್ಬಾಣವು ಪರಮಶಾಂತಿ
ಬುದ್ಧರಿಂದ ನಿಬ್ಬಾಣದ ವರ್ಣನೆ
ಓ ಭಿಕ್ಷುಗಳೇ, ಹುಟ್ಟಿಲ್ಲದ (ಅಜಾತ), ಉದಯರಹಿತವಾದ (ಅಭೂತ), ಅನಿಮರ್ಿತ (ಅಕತ) ಮತ್ತು ಸ್ಥಿತಿಯಿಲ್ಲದ/ಅಕಾರಣಿಯ/ಅನವಲಂಬಿತ (ಅಸಂಖತ)ವಾದ ಸ್ಥಿತಿಯೊಂದಿದೆ. ಓ ಭಿಕ್ಷುಗಳೇ ಒಂದುವೇಳೆ ಅಜಾತವಾದ, ಅಭೂತವಾದ, ಅಕತವಾದ, ಅಸಂಖತವಾದ ಈ ಸ್ಥಿತಿಯು ಇಲ್ಲದಿದ್ದರೆ ಹುಟ್ಟಿನಿಂದ, ಉದಯಿಸುವಿಕೆಯಿಂದ, ನಿಮರ್ಿತವಾದ, ಸ್ಥಿತಿಗಳಿಂದ ಮುಕ್ತರಾಗಲು ಸಾಧ್ಯವಿರುತ್ತಿರಲಿಲ್ಲ. ಹುಟ್ಟಿಲ್ಲದ, ಉದಯರಹಿತವಾದ ಅನಿಮರ್ಿತ, ಅನವಲಂಬಿತ ಸ್ಥಿತಿಯಿಲ್ಲದ ಸ್ಥಿತಿ ಇರುವುದರಿಂದಲೇ ಹುಟ್ಟಿನಿಂದ, ಉದಯಿಸುವಿಕೆಯಿಂದ ನಿಮರ್ಿತಗಳಿಂದ, ಸ್ಥಿತಿಗಳಿಂದ ಮುಕ್ತರಾಗಲು ಸಾಧ್ಯವಿದೆ.
ಎಲ್ಲಿ ಭೌತಿಕವು ಇಲ್ಲವೋ, ಮಾನಸಿಕತೆಯು ಇಲ್ಲವೋ, ಅದು ಈ ಲೋಕವು ಅಲ್ಲ, ಪರಲೋಕವೂ ಅಲ್ಲವೋ, ಇವೆರಡೂ ಅಲ್ಲವೋ, ಸೂರ್ಯನಾಗಲಿ, ಚಂದ್ರನಾಗಲಿ ಅಲ್ಲವೋ, ಎಲ್ಲಿ ಉದಯಿಸುವಿಕೆ ಇಲ್ಲವೋ, ಮುಂದುವರೆಯುವಿಕೆಯು ಇಲ್ಲವೋ, ನಿರಂತರತೆ ಇಲ್ಲವೋ, ಎಲ್ಲಿ ಸಾವಿಲ್ಲವೋ ಅಥವಾ ಪುನರ್ಜನ್ಮವಿಲ್ಲವೋ, ಯಾವುದಕ್ಕೂ ಆಧಾರವಾಗಿಲ್ಲವೋ, ಯಾವುದೋ ಬೆಳವಣಿಗೆಯಿಲ್ಲವೋ, ಯಾವುದೇ ಬೆಂಬಲವಿಲ್ಲವೋ ಇದೇ ದುಃಖದ ಅಂತ್ಯವಾಗಿದೆ, ನಿಬ್ಬಾಣವಾಗಿದೆ.
ಎಲ್ಲಿ ಯಾವುದು ಇಲ್ಲವೊ, ಎಲ್ಲಿ ಏನನ್ನು ಹಿಡಿಯಲಾರರೋ....
ವಿಮುಕ್ತ ಚಿತ್ತವು ಯಾವುದಕ್ಕೂ ಅಂಟಲಾರದು ಅಂದರೆ ನಿಬ್ಬಾಣ.
ಎಲ್ಲಿ ಪೃಥ್ವಿಯಿಲ್ಲವೋ, ಜಲವಿಲ್ಲವೋ, ಅಗ್ನಿಯಿಲ್ಲವೋ, ಗಾಳಿಯಿಲ್ಲವೋ ಅನಂತ ಆಕಾಶವಿಲ್ಲವೋ, ಅರಿವಿನ ಅನಂತತೆಯಿಲ್ಲವೋ, ಏನೂ ಇಲ್ಲವೆಂಬ ಸಮಾಧಿ ಸ್ಥಿತಿ ಅಲ್ಲವೋ, ಗ್ರಹಿಕೆಯಿಲ್ಲ, ಗ್ರಹಿಕೆಯಿಲ್ಲದೆಯೂ ಇಲ್ಲ ಅಲ್ಲವೋ, ಅದು ಈ ಲೋಕವಲ್ಲ, ಪರಲೋಕವೂ ಅಲ್ಲ. ಚಂದ್ರನೂ ಅಲ್ಲ, ಸೂರ್ಯನೂ ಅಲ್ಲ, ಅಲ್ಲಿ ಬರುವಿಕೆ ಆಗಲಿ, ಹೋಗುವಿಕೆಯಾಗಲಿ ಇಲ್ಲ. ಅಥವಾ ನಿಲ್ಲುವಿಕೆಯೂ ಅಲ್ಲ, ಅದಕ್ಕೆ ಯಾವುದೇ ಆಧಾರವಿಲ್ಲ, ಯಾವುದೇ ಬೆಂಬಲವಿಲ್ಲ. ಇದೇ ದುಃಖದ ಅಂತ್ಯವಾಗಿದೆ (ನಿಬ್ಬಾಣ).
ಹೇಗೆ ಜ್ವಾಲೆಯು ಆರಿಹೋದಾಗ, ಜ್ವಾಲೆಯನ್ನು ವಿವರಿಸಲಾಗದೋ ಅದೇರೀತಿಯಲ್ಲಿ ಅರಹಂತರು ನಾಮರೂಪಗಳಿಂದ ಮುಕ್ತರಾದಾಗ ಅವರನ್ನು ವಿವರಿಸಲಾಗುವುದಿಲ್ಲ.
...ಅವರನ್ನು ಅಳತೆ ಮಾಡಲು ಆಗುವುದಿಲ್ಲ, ಯಾವಾಗ ಎಲ್ಲವೂ ಹೋಗುತ್ತದೋ, ಆಗ ಎಲ್ಲಾರೀತಿಯ ಗುತರ್ಿಸುವಿಕೆಗಳೂ ಹೋಗುತ್ತದೆ.
ಯಾವಾಗ ಹಳೆಯ ಸ್ಥಿತಿಗಳೆಲ್ಲವೋ ಆಳಿಸಲಾಗಿದೆಯೋ ಮತ್ತು ಹೊಸದು ಉದಯಿಸಲಾರವೋ ಅಂತಹ ಚಿತ್ತಕ್ಕೆ ಮುಂದಿನ ಜನ್ಮವಿರಲಾರದು. ಬೀಜವು ಸುಟ್ಟು ಹಾಕಲ್ಪಟ್ಟಿದೆ. ತನ್ಹಾವು ಉದಯಿಸಲಾರದು, ಅಂತಹ ಜ್ಞಾನಿಗಳು ದೀಪದಂತೆ ಆರಿ (ನಂದಿ) ಹೋಗುತ್ತಾರೆ.
ಕಾಯವು ಚೂರಾಗಿ, ಗ್ರಹಿಕೆಯು ಅಳಿಸಿಹೋಗಿ, ವೇದನೆಗಳೆಲ್ಲವೂ ತಂಪಾಗಿ, ಸಂಖಾರವು ಉಪಶಮನ ಹೊಂದಿ ಇಲ್ಲವಾಗಿ, ವಿನ್ಯಾನವು ತನ್ನ ಕೊನೆಯನ್ನು ಮುಟ್ಟುತ್ತದೆ.
ಸಾರಿಪುತ್ತರ ಹೇಳಿಕೆ
ಲೋಭದ ನಾಶ, ದ್ವೇಷದ ನಾಶ ಮತ್ತು ಮೋಹದ ನಾಶ, ಮಿತ್ರನೇ ಇದೇ ನಿಬ್ಬಾಣವಾಗಿದೆ.
ನಿಬ್ಬಾಣದ ವಿಧಗಳು :
ಕಿಲೇಶ ಪರಿನಿಬ್ಬಾಣ ಮತ್ತು ಖಂದ ಪರಿನಿಬ್ಬಾಣ ಎಂದು ಎರಡು ವಿದಗಳಿವೆ.
ಕಿಲೇಶ ಪರಿನಿಬ್ಬಾಣ : ಕಿಲೇಶ (ಕ್ಲೇಷ) ಪರಿನಿಬ್ಬಾಣದಲ್ಲಿ ಅರಹಂತರ ರಾಗ, ದ್ವೇಷ ಮತ್ತು ಮೋಹಗಳು ನಾಶವಾಗುತ್ತದೆ, ಇನ್ನಿಲ್ಲವಾಗುತ್ತದೆ. ಮತ್ತೆ ಹುಟ್ಟುವುದಿಲ್ಲ. ಆದರೆ ಪಂಚಖಂಧಗಳು (ದೇಹ ಮತ್ತು ಮನಸ್ಸು) ಇರುತ್ತದೆ. ಅಂದರೆ ಮರಣದವರೆಗೂ ಇರುತ್ತದೆ. ಇದಕ್ಕೆ ಇನ್ನೊಂದು ಹೆಸರಿದೆ (ಸ. ಉಪಾದಿಸೇಸ ನಿಬ್ಬಾಣ) ಉಪಾದಿಗಳು (ಪಂಚಖಂಧಗಳು) ಶೇಷವಿರುವ ನಿಬ್ಬಾಣ ಎನ್ನುತ್ತಾರೆ. ಅಥವಾ ಪರಿನಿಬ್ಬಾಣ ಎನ್ನುತ್ತಾರೆ.
ಖಂದ ಪರಿನಿಬ್ಬಾಣ : ಖಂದ ಪರಿನಿಬ್ಬಾಣದಲ್ಲಿ ಅರಹಂತರು ತಮ್ಮ ಅಂತಿಮಾವಸ್ಥೆಯಲ್ಲಿ ಪಂಚಖಂಧಗಳನ್ನು ಬಿಟ್ಟುಬಿಡುತ್ತಾರೆ. ಅವು ನಾಶವಾಗುತ್ತವೆ, ಇನ್ನಿಲ್ಲವಾಗುತ್ತದೆ, ಮತ್ತೆ ಹುಟ್ಟಲಾರದು. ಅವರಲ್ಲಿ ಈ ಮೊದಲೇ ಕ್ಲೇಶಗಳು (ರಾಗ, ದ್ವೇಷ ಮತ್ತು ಮೋಹಗಳು) ನಾಶವಾಗಿರುತ್ತದೆ. ಈಗ ಪಂಚಖಂಧಗಳು ಇನ್ನಿಲ್ಲವಾಗುತ್ತವೆ. ಮತ್ತೆ ಉದಯಿಸಲಾರದು. ಇದಕ್ಕೆ ಇನ್ನೊಂದು ಹೆಸರೇ (ಅನುಪಾದಿಸೇಸ ನಿಬ್ಬಾಣ ಅಥವಾ ಪರಿನಿಬ್ಬಾಣ ಎನ್ನುತ್ತಾರೆ).
ನಿಬ್ಬಾಣ ಸಂಬಂಧ ಪಟ್ಟ ಪ್ರಶ್ನೆಗಳು ಮತ್ತು ಉತ್ತರಗಳು :
1. ನಿಬ್ಬಾಣವೆಂದರೆ ಶಾಶ್ವತವಾಗಿ ಇರುವಿಕೆಯೇ?
ಖಂಡಿತವಾಗಿ ಅಲ್ಲ, ಏಕೆಂದರೆ ನಾನು ಎಂಬುದೇ ಇಲ್ಲದಿರುವಾಗ ಇದು ಅನ್ವಯಿಸುವುದಿಲ್ಲ.
2. ಹಾಗಾದರೆ ಮೃತ್ಯುವೇ ? ನಶಿಸುವಿಕೆಯೇ ?
ಖಂಡಿತವಾಗಿ ಅಲ್ಲ. ಮೃತ್ಯುವೆಂದರೆ ತಾತ್ಕಾಲಿಕ ಜೀವನದ ತಾತ್ಕಾಲಿಕ ಕೊನೆಯಾಗಿದೆ. ಇಲ್ಲಿ ಇದು ಅಮರತ್ವ ಆಗಿರುವಾಗ ಮೃತ್ಯುವಾಗಲಿ, ನಶಿಸುವಿಕೆಯಾಗಲಿ ಇಲ್ಲ.
3. ನಿಬ್ಬಾಣವು ಇಲ್ಲವಾಗುವಿಕೆಯೇ ? ಶೂನ್ಯವೇ ?
ಆಕಾಶ ಮತ್ತು ನಿಬ್ಬಾಣಗಳೆರಡು ಧ್ರುವವಾದುದು ಮತ್ತು ಬದಲಾಗದ್ದು, ಇದು ಶಾಶ್ವತವಾದದ್ದು. ಏಕೆಂದರೆ ಇವು ಏನನ್ನೂ ಒಳಗೊಂಡಿಲ್ಲ. ಇವು ಕಾಲಾತೀತವಾದದ್ದು. ಆಕಾಶ ಇಲ್ಲದ ಸ್ಥಿತಿಯಾದರೆ, ನಿಬ್ಬಾಣ ಇದೆ, ಇಲ್ಲದಿದ್ದರೆ ಇರುವ ಸ್ಥಿತಿಗಳಿಂದ ಮುಕ್ತಿಯಾಗುತ್ತಿರಲಿಲ್ಲ. ಆದರೆ ಇದೆ ಎಂದು ಪಂಚಖಂಧಗಳನ್ನು, ಸಮಾಧಿ ಸ್ಥಿತಿಗಳನ್ನು ನೆನಪಿಸಿಕೊಂಡರೆ ಅದು ಇಲ್ಲವೆನ್ನಬೇಕಾಗುತ್ತದೆ.
4. ನಿಬ್ಬಾಣವು ಪರಮಸುಖ ಹೇಗೆ ?
ನಿಬ್ಬಾಣವು ಪರಮಸುಖ. ಹೇಗೆಂದರೆ ದುಃಖವು ಇಲ್ಲದಿರುವುದರಿಂದಾಗಿ, ಹೊರತು ಇಂದ್ರೀಯ ಸುಖಗಳಿಲ್ಲ, ಸಮಾಧಿ ಸುಖಗಳು ಅಲ್ಲ. ಅಷ್ಟೇ ಅಲ್ಲ, ಇದು ಅನುಭವಿಸುವಂತಹುದು ಅಲ್ಲ. ಅಂದರೆ ವೇದನೆಯಲ್ಲ, ವೇದನೆಗೆ ಅತೀತ ಸ್ಥಿತಿಯಾಗಿದೆ. ಅನುಭವಿಸಲಾರದ ಸ್ಥಿತಿಯಾಗಿದ್ದರಿಂದಲೆ ಇದು ಪರಮ ಸುಖವಾಗಿದೆ. ಅಷ್ಟೇ ಅಲ್ಲ, ಯಾವುದೆಲ್ಲವನ್ನು ನಾವು ಅನುಭವಿಸುವೆವೋ ಆ ಎಲ್ಲಾ ಸುಖಗಳು ದುಃಖವೆಂದು ಆರ್ಯರಿಂದ ಪರಿಗಣಿಸಲ್ಪಡುತ್ತದೆ.
5. ನಿಬ್ಬಾಣಕ್ಕೆ ನಾವು ನಾನು ಎಂದು ಅಥವಾ ಆತ್ಮ ಅಥವಾ ದೇವರು ಎಂದು ಕರೆಯಬಹುದೇ ?
ಖಂಡಿತವಾಗಿಯೂ ತಪ್ಪು. ಏಕೆಂದರೆ ನಾನು ಅಥವಾ ದೇವರು ಅಥವಾ ಆತ್ಮಗ್ರಹಿಕೆ ಮಾಡುವವರು ಪಕ್ಷಪಾತಿಗಳಾಗಿರುತ್ತಾರೆ. ಅವರು ನಿಜವಾದ ಸತ್ಯವೀಕ್ಷಕ ರಾಗಿರುವುದಿಲ್ಲ. ಅಂದರೆ ಅವರಲ್ಲಿ ಲೋಭ ಮತ್ತು ಮೋಹವಿರುತ್ತದೆ. ಅಂತಹವರಿಗೆ ನಿಬ್ಬಾಣವೇ ದೊರಕುವುದಿಲ್ಲ. ಅಂತಹ ಎಲ್ಲಾ ದೃಷ್ಟಿಗಳು ಸಂಶಯ ದಾಟುವ ವಿಶುದ್ಧಿಯಲ್ಲೇ ತಡೆಯಲ್ಪಡುತ್ತವೆ ಮತ್ತು ಸತ್ಯ ವೀಕ್ಷಣೆಯ ಬಗ್ಗೆ ಮಜ್ಜಿಮ ನಿಕಾಯ 1ನೇ ಸುತ್ತದಲ್ಲೇ ಬಹು ಚೆನ್ನಾಗಿ ವಿವರಿಸಲಾಗಿದೆ.
6. ನಿಬ್ಬಾಣ ಎಲ್ಲಿದೆ ?
ನಿಬ್ಬಾಣವು ಎಲ್ಲಿಯೂ ಇಲ್ಲ, ಅದನ್ನು ಯಾರು ಎಲ್ಲೇ ಇರಲಿ, ಶೀಲ, ಸಮಾಧಿ, ಪ್ರಜ್ಞಾ ಸ್ಥಾಪಿಸಿದಾಗ ಅದನ್ನು ಸಾಕ್ಷಾತ್ಕರಿಸಬಹುದು. ಹೇಗೆ ಜ್ವಾಲೆಯು ಎಲ್ಲಿಯೂ ಇರುವುದಿಲ್ಲವೋ ಬೆಂಕಿಕಡ್ಡಿ ಗೀರಿದಾಗ ಹುಟ್ಟುವುದೋ ಹಾಗೇ ಕೆಲವು ಅಗತ್ಯ ಸ್ಥಿತಿಗಳು ಪೂರೈಕೆಯಾದಾಗ ನಿಬ್ಬಾಣ ದಶರ್ಿಸಬಹುದು.
7. ನಿಬ್ಬಾಣವನ್ನು ಪ್ರಾಪ್ತಿ ಮಾಡುವುದು ಯಾವುದು?
ಈ ಪ್ರಶ್ನೆಯು ಪಕ್ಕಕ್ಕೆ ಇಡುವಂತಹದ್ದಾಗಿದೆ. ಏಕೆಂದರೆ ನಾನು, ನನ್ನದು, ನನ್ನ ಆತ್ಮ ಈ ಎಲ್ಲಾ ಭಾವನೆಗಳ ಸಂಶಯ ನಿವಾರಣೆಯದಾಗಲೇ ನಿಬ್ಬಾಣ ಪ್ರಾಪ್ತಿಯಾಗುವುದು ಆ ಅರ್ಥದಲ್ಲಿ. ನಾನು ಎಂಬುದು ಇಲ್ಲ. ಆತ್ಮ ಎಂಬುದು ಇಲ್ಲ. ಇವೆಲ್ಲ ಈ ಹಿಂದಿನ ಹಂತಗಳಲ್ಲಿ ವಿವರಿಸಲಾಗಿದೆ. ವ್ಯಾವಹಾರಿಕವಾಗಿ ಹೇಳಬೇಕಾದರೆ ಅರಹಂತರು ನಿಬ್ಬಾಣವನ್ನು ಸಾಕ್ಷಾತ್ಕರಿಸುತ್ತಾರೆ. ಪಾರಮಾಥರ್ಿಕವಾಗಿ ಹೇಳಬೇಕಾದರೆ ನಿಬ್ಬಾಣವಿದೆ, ಆದರೆ ಮಾನವ ಅದರಲ್ಲಿ ಪ್ರವೇಶಿಸಲಾರ/ಹುಡುಕಲಾರ. ಮಾರ್ಗವಿದೆ, ಆದರೆ ಯಾವ ಪ್ರಯಾಣಿಕನಿಲ್ಲ ಎಂದು ಹೇಳಬೇಕಾಗುತ್ತದೆ.
8. ಪ್ರತಿಯೊಬ್ಬರ ಗುರಿ ನಿಬ್ಬಾಣವೇಕೆ ಆಗಬೇಕು?
ಇಲ್ಲಿ ಎಲ್ಲರಿಗೂ ನಿಬ್ಬಾಣ ಕಡ್ಡಾಯವಾಗಿ ಗುರಿ ಎಂದು ಹೇಳುತ್ತಿಲ್ಲ. ಅದು ವ್ಯಕ್ತಿಗತ ಸ್ವತಂತ್ರ್ಯವಾಗಿದೆ. ಯಾರು ಯಾವುದನ್ನು ಬೇಕಾದರೂ ಗುರಿ ಇಟ್ಟುಕೊಳ್ಳಬಹುದು. ಆದರೆ ಎಲ್ಲದರ ಪರಿಣಾಮ, ಫಲಿತಾಂಶ ಮೊದಲು ಸುಖ, ನಂತರ ದುಃಖ ಸಿಗುತ್ತಿರುತ್ತದೆ. ಅವರಿಗೆ ಅದೇ ಇಷ್ಟವಾದರೆ ನಮ್ಮ ಅಭ್ಯಂತರವೇನು ಇಲ್ಲ. ಆದರೆ ಪ್ರಜ್ಞಾವಂತರ ಗುರಿ ಮಾತ್ರ ನಿಬ್ಬಾಣ ಆಗಿರುತ್ತದೆ. ಏಕೆಂದರೆ ಅವರು ಪುನಃ ದುಃಖ ಜಾಲಕ್ಕೆ ಸಿಲುಕಲು ಇಚ್ಛಿಸುವುದಿಲ್ಲ.
ನಿಬ್ಬಾಣದ ವಿಷಯದಲ್ಲಿ ಗೊಂದಲ ಮೂಡದಿರಲು ಒಂದು ಸಣ್ಣ ಕಥೆ
ಸದಾ ನೀರಿನಲ್ಲಿದ್ದ ಮೀನಿಗೆ ಒಮ್ಮೆ ದೂರದ ಪ್ರಾಂತ್ಯದ ಆಮೆಯು ಸಿಗುತ್ತದೆ. ಆ ಆಮೆಯು ತಾನು ನೆಲದಿಂದ ಬಂದೆ ಎಂದು ಹೇಳುತ್ತದೆ.
ಮೀನು : ಆ ನೆಲವು (ಭೂಮಿ) ಹೇಗಿರುತ್ತದೆ ?
ಆಮೆ : ಅದು ಒಣಗಿರುತ್ತದೆ.
ಮೀನು : ಅಂದರೆ ಅದರ ಅರ್ಥವೇನು ?
ಆಮೆ : ಅಲ್ಲಿ ತೇವಾಂಶವಿರುವುದಿಲ್ಲ
ಮೀನು : ಅಂದರೆ ಅಲ್ಲಿ ತಂಪಿರುತ್ತದೆಯೆ?
ಆಮೆ : ಹೌದು ಮತ್ತು ಅಲ್ಲ
ಮೀನು : ಏನು ನೀನು ಹೇಳುತ್ತಿರುವುದು ಅಸಂಬದ್ಧವಾಗಿದೆ. ಅಲ್ಲಿ ಅಲೆಗಳಿವೆಯೇ?
ಆಮೆ : ಇಲ್ಲ ಅಲ್ಲಿ ಈಜಾಡುವುದು ಸಾಧ್ಯವಿಲ್ಲ
ಮೀನು : ಈಜಾಡಲು ಸಾಧ್ಯವಿಲ್ಲವೇ? ಅಂತಹುದು ಯಾವುದೂ ಇಲ್ಲ. ಅಲ್ಲಿ ಮೀನುಗಳು ಇವೆಯೇ ?
ಆಮೆ : ಇಲ್ಲ, ಪ್ರಾಣಿಗಳು ಇವೆ ಮತ್ತು ಕಟ್ಟಡಗಳಿವೆ, ಮಾನವರಿದ್ದಾರೆ.
ಮೀನು : ಅವೆಂದರೆ ಏನು? ಹೋಗಲಿ ನೆಲದಲ್ಲಿ ತಂಪಿದೆಯೆ, ಮೃದುತನವಿದೆಯೇ ಹೇಳು.
ಆಮೆ : ಇಲ್ಲ, ಒರಟುತನವಿದೆ, ಕೆಲವೊಮ್ಮೆ ತಂಪು, ಕೆಲವೊಮ್ಮೆ ಬಿಸಿಲು ಇರುತ್ತದೆ.
ಮೀನು : ನಾನು ನಂಬುವುದೇ ಇಲ್ಲ. ನೀನು ದೊಡ್ಡ ಸುಳ್ಳುಗಾರ. ನೀನು ನನಗೆ ಮಾತನಾಡಿಸಬೇಡ.
ಆಗ ಆಮೆಯು ಇದರ ಬಳಿ ಚಚರ್ೆಯೆ ವ್ಯರ್ಥ ಎಂದು ತಿಳಿದು ನೆಲದೆಡೆ ಹೊರಟಿತು.
ಹೀಗೆ ನಿಬ್ಬಾಣವು ಅನುಭವ ವೇದ್ಯ ಹೊರತು ಚಚರ್ೆಯ ವಿಷಯವಲ್ಲ. ಸಾಕ್ಷಾತ್ಕರಿಸುವ ವಿಷಯವಾಗಿದೆ