Saturday 25 October 2014

ಮನೋ ಪ್ರಭುತ್ವ( how to win the mind or thoughts )

ಮನೋ ಪ್ರಭುತ್ವ
                ಮನಸ್ಸು ಒಂದು ಅದ್ಭುತವಾದ, ಅನುಪಮಯುತ ಶಕ್ತಿಯಾಗಿದೆ. ಮನಸ್ಸು ಸರ್ವವ್ಯಾಪಿಯಾಗಿದೆ. ಮನಸ್ಸಿಗೆ ಇಡೀ ಜಗತ್ತು ಹಿಂಬಾಲಿಸುತ್ತದೆ. ಮನಸ್ಸೇ ನಿಮರ್ಾತ, ಮನಸ್ಸಿನಿಂದಲೇ ಜಗತ್ತು ಚಲಿಸಲ್ಪಡುತ್ತದೆ. ಮನಸ್ಸೇ ಮುಂದಾಳು.

                ಪ್ರತಿ ಕೆಟ್ಟ ಮತ್ತು ಕುಶಲ ಕಾರ್ಯಗಳು ಮನಸ್ಸಿನಿಂದಲೇ ಆಗುತ್ತಿದೆ. ಮನಸ್ಸಿನಿಂದಲೇ ಸುಖ ಮತ್ತು ದುಃಖಗಳು ಉಂಟಾಗುತ್ತವೆ. ಇಡೀ ನಿಮರ್ಿತ ಸೃಷ್ಠಿ ಮನಸ್ಸಿನಿಂದಲೇ ಆಗುತ್ತದೆ.
                ಸರ್ವ ಶಾಸ್ತ್ರಗಳು, ವಿಜ್ಞಾನಗಳು, ಸರ್ವ ಗ್ರಂಥಗಳು ಆಧುನಿಕ ಜಗತ್ತು ಇವೆಲ್ಲವೂ ಮನಸ್ಸಿನಿಂದಲೇ ಆಗಿವೆ.
                ಆಧುನಿಕ ಸವರ್ೊಪಕರಣಗಳು, ಜಗತ್ತಿಗೆ ಈವರೆವಿಗೆ ಆಗಿರುವ ಎಲ್ಲಾ ಮಂಗಳ ಕಾರ್ಯಗಳು, ಸವಲತ್ತುಗಳು, ಮನಸ್ಸಿನಿಂದಲೇ ಅಗಿವೆ. 
                ಮನೋ ವೇಗದಷ್ಟು ಮತ್ತಾವದು ವೇಗವಿಲ್ಲ.
                ಮನಸ್ಸಿನ ಜ್ಞಾನಕ್ಕಿಂತ ಮಿಗಿಲಾದ ಜ್ಞಾನವಿಲ್ಲ.
                ಮನಸ್ಸು ಅನಘ್ರ್ಯ ಮೌಲ್ಯಗಳ ಐಶ್ವರ್ಯ ರಾಶಿ ಹಾಗೆಯೇ ಮಹಾ ಪಾಪಕೂಪವಾಗಿದೆ. ಇಲ್ಲಿ ಇವೆಲ್ಲವೂ ಮನಸ್ಸಿನಲ್ಲಿ ಸುಪ್ತವಾಗಿವೆ. ಪರಿಸರಕ್ಕೆ ಅನುಗುಣವಾಗಿ ಹಾಗು ಗ್ರಹಿಕೆಯಿಂದಾಗುವ ನಿಧರ್ಾರಕ್ಕೆ ಅನುಗುಣವಾಗಿ ಪ್ರತಿಕ್ರಿಯೆಯನ್ನುಂಟುಮಾಡುತ್ತವೆ. ವಿಚಿತ್ರಯುತವಾದ ಮನಸ್ಸಿನಿಂದ ಮಾನವ ಮಾನವತೆಗೆ ವರವೂ ಆಗಬಲ್ಲ ಹಾಗೆಯೇ ಶಾಪವು ಆಗಬಲ್ಲ.
                ಮಾನವ ತನ್ನೆಲ್ಲಾ ಸುಖಕ್ಕೂ ಹಾಗು ದುಃಖಕ್ಕೂ
                ಶಾಂತತೆಗೂ ಹಾಗು ಅಶಾಂತತೆಗೂ
                ಉನ್ನತಿಗೂ ಹಾಗು ಅವನತಿಗೂ
                ಪರಿಶುದ್ಧತೆಗೂ ಹಾಗು ಕಲ್ಮಶಯುಕ್ತತೆಗೂ
                ಜ್ಞಾನಿಯಾಗುವಿಕೆಗೂ ಹಾಗೂ ದಡ್ಡನಾಗುವುದಕ್ಕೂ
                ಮುಕ್ತಿಗೂ ಹಾಗು ಬಂಧನಕ್ಕೂ
                ಬುದ್ಧತ್ವಕ್ಕೂ ಹಾಗೂ ಜಡತ್ವಕ್ಕೂ
                - ಹೀಗೆ ಎಲ್ಲಕ್ಕೂ ತಾನೇ ಕಾರಣನಾಗಿದ್ದಾನೆ.
                ಅದಕ್ಕೇ ಸಂಬಂಧಿಸಿದಂತೆ ಬುದ್ಧಭಗವಾನರು ಹೀಗೆ ಹೇಳಿದ್ದಾರೆ.
                ತಾನಾಗಿಯೇ ಒಬ್ಬನು ಪಾಪ ಮಾಡುತ್ತಾನೆ.
                ತಾನಾಗಿಯೇ ಒಬ್ಬನು ಕಲುಶಿತನಾಗುತ್ತಾನೆ.
                ತಾನಾಗಿಯೇ ಒಬ್ಬನು ಪಾಪವನ್ನು ತಡೆಯುತ್ತಾನೆ.
                ತಾನಾಗಿಯೇ ಒಬ್ಬನು ಪರಿಶುದ್ಧನಾಗುತ್ತಾನೆ.
                ಪರಿಶುದ್ಧತೆ ಮತ್ತು ಅಪರಿಶುದ್ಧತೆ ತನ್ನನ್ನೇ ಅವಲಂಬಿಸಿದೆ.
                ಯಾರೊಬ್ಬರು ಯಾರಿಗೂ ಪರಿಶುದ್ಧಿಗೊಳಿಸಲಾರರು.
                ಸಾಧಾರಣವಾಗಿ ಮನಸ್ಸು ಚಂಚಲತೆಯಿಂದ ಕೂಡಿರುತ್ತದೆ. ಮನಸ್ಸನ್ನು ಅಂಕೆಯಲ್ಲಿಡುವುದು ಕಷ್ಟಕರ, ಎಲ್ಲೆಂದರಲ್ಲಿ ಚಲಿಸುತ್ತದೆ, ವಾಲುತ್ತದೆ. ಹರಿಯುತ್ತದೆ, ಬೇಕೆನಿಸಿದ ಸುಖಗಳ ಕಡೆ ಹರಿಯುತ್ತದೆ. ಅರಿಯಲು ಅತ್ಯಂತ ಕಷ್ಟಕರವಾದುದು, ಅತ್ಯಂತ ಸೂಕ್ಷ್ಮವಾದುದು ಅಶರೀರಿಯು, ವ್ಯಗ್ರವು, ವಿಲಾಸವನ್ನು ಅರಸುವಂತಹುದು. ಇಂದ್ರೀಯಗಳ ಪ್ರವಾಹದಲ್ಲಿ ಸಿಕ್ಕಿ ನರಳುವಂತಹುದು. ಆಲಸಿಯಾಗುವಂತಹುದು ಸದಾ ಕೆಟ್ಟ ಮಾರ್ಗದರ್ಶನದೆಡೆಗೆ ಹೋಗುವಂತಹದ್ದಾಗಿದೆ.
                ಆದರೆ ಇದರ ಪರಿಣಾಮ ಅತ್ಯಂತ ಭೀಕರವಾಗಿದೆ. ಮಾನವ ಅವನತಿಯೆಡೆಗೆ, ಮುಪ್ಪಿನೆಡೆಗೆ, ಮರಣದೆಡೆಗೆ ನಿರಂತರ ಮರುಜನ್ಮದೆಡೆಗೆ, ದುಃಖಯುತ ಸ್ಥಿತಿಗಳಲ್ಲಿ ಬೀಳಬೇಕಾಗುತ್ತದೆ.
                ಇದಕ್ಕೆ ಕಾರಣ ಕೆಟ್ಟ ಮಾರ್ಗದರ್ಶನದ ಮತ್ತು ಅಶಿಕ್ಷಿತ (ಪಳಗಿಲ್ಲದ) ಮನಸ್ಸೇ ಕಾರಣವಾಗಿದೆ.  ಮಿಥ್ಯಾ ದೃಷ್ಟಿಯುತ, ಲೋಭಪ್ರೇರಿತ ಹಾಗೂ ದ್ವೇಷಪ್ರೇರಿತ ಮನಸ್ಸು ಸದಾ ರೋಗದೆಡೆಗೆ, ದುಃಖದೆಡೆಗೆ, ಅವನತಿಯೆಡೆಗೆ ಹಾಗು ನೀಚಜನ್ಮ ಪ್ರಾಪ್ತಿ ಕಡೆಗೆ ಕರೆದೊಯ್ಯುತ್ತದೆ.
                ಆದರೆ ಸಮ್ಮ ದೃಷ್ಟಿಯುತ ಮನಸ್ಸು, ವಿರಾಗ (ಶಾಂತ) ಸ್ಪೂತರ್ಿಯುಳ್ಳ ಮನಸ್ಸು, ಕರುಣಾಚಾಲಿತ ಮನಸ್ಸು ಮತ್ತು ಪ್ರಜ್ಞಾಯುತ ಮನಸ್ಸು ನಮಗೆ ಸುಖದೆಡೆಗೆ ಉನ್ನತಿಯೆಡೆಗೆ, ಸುಗತಿಯೆಡೆಗೆ, ಬಲಿಷ್ಠತ್ವದ ಕಡೆಗೆ ಸಂಬೋಧಿಯ ಕಡೆಗೆ ಮತ್ತು ನಿಬ್ಬಾಣದ ಕಡೆಗೆ ಕರೆದೊಯ್ಯುತ್ತದೆ.
                ಇದು ಸಾಧ್ಯವಾಗುವುದು ಮನಸ್ಸಿನ ಪ್ರಭುತ್ವ ಸಾಧಿಸಿದಾಗ ಮಾತ್ರ.  ಆದ್ದರಿಂದ ನಿರಂತರ ದೃಢಪರಿಶ್ರಮದಿಂದ ಈ ಮನೋಪ್ರಭುತ್ವ ಸಾಧಿಸಬೇಕು.
                ನಾವು ಮನಸ್ಸನ್ನು ಅರಿತಷ್ಟು, ಎಲ್ಲವನ್ನೂ ಅರಿಯುತ್ತೇವೆ, ಎಲ್ಲರನ್ನೂ ಅರಿಯುತ್ತೇವೆ.
                ನಾವು ಮನಸ್ಸನ್ನು ನಿಗ್ರಹಿಸಿದಷ್ಟು, ಪರರನ್ನು ನಿಗ್ರಹಿಸುತ್ತೇವೆ. ಮನೋ ಪ್ರಭುಗಳು ನಾವಾದರೆ ವಿಶ್ವದ ಮೇಲೆ ಜಯ ಸಾಧಿಸಿ ಹಾಗೆಯೆ. ಏಕೆಂದರೆ ಎಲ್ಲಾ ವ್ಯಕ್ತಿಗಳ ಮೇಲೆ ನಮ್ಮ ನಿಯಂತ್ರಣವಿರುತ್ತದೆ ಮತ್ತು ಪ್ರಭಾವ ಇರುತ್ತದೆ ಆಗ ಮಾತ್ರ ನಾವು ಜಗತ್ತಿಗೆ ಸುಖ ನೀಡಬಹುದು. ಹಿತ ತೋರಿಸಬಹುದು. ಪರಹಿತ ಕಾರ್ಯ ಸಾಧಿಸಬಹುದು.
ಮನೋ ಪ್ರಭುತ್ವ ಹೇಗೆ ?
                ಅದು ಸಾಧ್ಯವಾಗುವುದು ಸಮ್ಮ ವ್ಯಾಯಾಮದಿಂದ ಮಾತ್ರ.
                ದೀರ್ಘನಿಘಾಯದಲ್ಲಿ ಈ ರೀತಿ ಬರುತ್ತದೆ.
                ಮತ್ತೆ ಭಿಕ್ಷುಗಳೇ ಸಮ್ಮ ವ್ಯಾಯಾಮ ಎಂದರೇನು?
                1. ಸಂಯಮ : ಇಲ್ಲಿ ಓ ಭಿಕ್ಷುಗಳೇ ಸಾಧಕನು ಇನ್ನೂ ಹುಟ್ಟದಿರುವ ಅಕುಶಲ ಸ್ಥಿತಿಗಳನ್ನು (ಅಕುಶಲ ಯೋಚನೆ) ಅವು ಹುಟ್ಟದೆ ಇರುವಂತೆ ನೋಡಿಕೊಳ್ಳುತ್ತಾನೆ. ತನ್ನ ಮನಸ್ಸನ್ನು ಆ ರೀತಿಯಲ್ಲಿಟ್ಟು ಪರಿಶ್ರಮಪಡುತ್ತಾನೆ, ದೃಢವಾಗಿರುತ್ತಾನೆ. ಹಾಗು ಚಿತ್ತವನ್ನು ಅದೇ ರೀತಿಯಲ್ಲಿ ಇಟ್ಟುಕೊಳ್ಳುತ್ತಾನೆ.
                2. ವರ್ಜನೆ : ಒಂದು ವೇಳೆ ಪಾಪಯುತ ಮತ್ತು ಅಕುಶಲ ಯೋಚನೆಗಳು (ಸ್ಥಿತಿಗಳು) ಉದಯಿಸಿದರೆ ಆತನು ಸಹಿಸುವುದಿಲ್ಲ. ತಕ್ಷಣ ವಜರ್ಿಸುತ್ತಾನೆ. ವಜರ್ಿಸಲು ದೃಢವಾದ ಪರಿಶ್ರಮಪಡುತ್ತಾನೆ. ಹಾಗು ಚಿತ್ತವನ್ನು ಅದೇರೀತಿ ಇಟ್ಟುಕೊಳ್ಳುತ್ತಾನೆ.
                3. ಭಾವನಾ : ಸಾಧಕನು ಇನ್ನೂ ಉದಯಿಸದಿರುವ ಕುಶಲ ಸ್ಥಿತಿಗಳನ್ನು (ತನ್ನ ಹಾಗು ಪರರ) ಹಿತಕಾರಿ ಯೋಚನೆಗಳು ಉದಯಿಸುವಂತೆ ಹಾಗು ಬೆಳೆಯುವಂತೆ ದೃಢ ಪರಿಶ್ರಮಪಡುತ್ತಾನೆ. ಅದೇರೀತಿಯಲ್ಲಿ ಚಿತ್ತವನ್ನು ಇಟ್ಟುಕೊಳ್ಳುತ್ತಾನೆ.
                4.            ರಕ್ಷಣೆ : ಸಾಧಕನು ಉದಯಿಸಿರುವ ಹಾಗು ವೃದ್ಧಿ ಹೊಂದಿದ ಕುಶಲ ಯೋಚನೆಗಳನ್ನು (ಸ್ಥಿತಿಗಳನ್ನು) ಅವು ಕ್ಷಯಿಸದಂತೆ ಮತ್ತು ಸದಾ ವೃದ್ಧಿ ಹೊಂದುವಂತೆ ನಿರಂತರ ವಿಕಾಸವಾಗುವಂತೆ ಪರಿಪೂರ್ಣ ಗೊಳಿಸಲು ಪರಿಶ್ರಮಪಡುತ್ತಾನೆ. ಚಿತ್ತವನ್ನು ಹೀಗೆಯೇ ಇಟ್ಟುಕೊಳ್ಳುತ್ತಾನೆ. ಇದೇ ಯೋಗ್ಯ ಮನಸ್ಸಿನ ವ್ಯಾಯಾಮವಾಗಿದೆ.
                ನಾವು ದಿನನಿತ್ಯ ಗಮನಿಸುವಂತೆ ಬಹಳಷ್ಟು ಜನರು ತಮ್ಮ ಮನಸ್ಸನ್ನು ಅತಿ ನಿರ್ಲಕ್ಷ್ಯವಾಗಿ ಇಟ್ಟುಕೊಳ್ಳುತ್ತಾರೆ. ನಿರ್ಲಕ್ಷ್ಯಗೊಂಡ ಮನಸ್ಸು ನಿರಂತರ ಕಲುಶಿತಗೊಳ್ಳುತ್ತಲೇ ಇರುತ್ತದೆ. ನಿಯಂತ್ರಣ ತಪ್ಪುತ್ತದೆ. ಪರಿಣಾಮವಶಾತ್ ಅವರು ದುಃಖಿಯಗಿಯೋ, ರೋಗಿಯಾಗಿಯೋ, ನಷ್ಟ ಹೊಂದಿದವರಾಗಿಯೋ, ಸದಾ ನಿಂದಿಸಲ್ಪಟ್ಟವರಾಗಿಯೋ ಅಥವಾ ವ್ಯಗ್ರರಾಗಿಯೋ, ಖಿನ್ನರಾಗಿಯೋ, ಮಾನಸಿಕ ಅಸ್ವಸ್ಥರಾಗಿಯೋ, ಅತ್ಯಂತ ನಿಯಂತ್ರಣ ತಪ್ಪಿದರೆ ಹುಚ್ಚರಾಗಿಯೋ ಇರುವುದನ್ನು ಕಾಣುತ್ತೇವೆ. ಇದಕ್ಕೆಲ್ಲಾ ಕಾರಣ ಮನಸ್ಸನ್ನು ತಮ್ಮ ಹಿಡಿತದಲ್ಲಿ ಇಡದೆ ಸೋಮಾರಿಯಾಗಿರುವುದೇ ಅಥವಾ ಅದರ ಬಗ್ಗೆ ಜ್ಞಾನವಿಲ್ಲದೆ ಅಜ್ಞಾನಿಗಳಾಗಿರುವುದೇ ಕಾರಣವಾಗಿದೆ.
                ಇಷ್ಟಕ್ಕೂ ಅಕುಶಲ ಮಾನಸಿಕ ಸ್ಥಿತಿಗಳಾವುವು?
                ಅವೆಂದರೆ ಮೋಹವರ್ಗ: ಅಜ್ಞಾನ, ಸಂದೇಹ (ಅನಿಧರ್ಾರತೆ), ಪಾಪಲಜ್ಜೆಯಿಲ್ಲದಿರುವಿಕೆ, ಪಾಪಭೀತಿಯಿಲ್ಲದಿರುವಿಕೆ, ಚದುರಿದ ಮತ್ತು ಕ್ಷೊಭೆಗೊಂಡ ಚಿತ್ತ, ಚಿಂತೆ ಮತ್ತು ಪಶ್ಚಾತ್ತಾಪ, ಮಿಥ್ಯಾದೃಷ್ಟಿ.
                ಲೋಭವರ್ಗ : ಲೋಭ (ಕಾಮ/ರಾಗ/ಜಿಪುಣತನ/ಇಂದ್ರೀಯಾಭಿಲಾಶೆ) ಅಹಂಕಾರ/ಗರ್ವ, ನಿರ್ಲಕ್ಷ, ನಿದ್ರೆ, ಸ್ವಾರ್ಥ, ಸೋಮಾರಿತನ, ಮೋಸ, ಹಠ.
                ದ್ವೇಷವರ್ಗ : ದ್ವೇಷ/ಕೋಪ/ಹಿಂಸೆ, ಈಷರ್ೆ, ಸೇಡು, ಖಿನ್ನತೆ, ಭಯ ಮತ್ತು ಇತ್ಯಾದಿ.
                ಇವನ್ನು ಸಂಕ್ಷಿಪ್ತವಾಗಿ ಐದಕ್ಕೆ ಇಳಿಸಬಹುದು. ಇದಕ್ಕೆ ಐದುತಡೆ (ಪಂಚನಿವರಣ) ಎನ್ನುತ್ತಾರೆ.
1.            ಇಂದ್ರೀಯಾಭಿಲಾಶೆ (ಕಾಮ)
2.            ದ್ವೇಷ
3.            ನಿರ್ಲಕ್ಷ ಮತ್ತು ಸೋಮಾರಿತನ
4.            ಚದುರಿದ ಅವಿಶ್ರಾಂತಿಯುತ ಚಿತ್ತ ಮತ್ತು ಪಶ್ಚಾತ್ತಾಪ
5.            ಸಂದೇಹ
                ಈ ಎಲ್ಲಾ ಸ್ಥಿತಿಗಳು ಮನಸ್ಸನ್ನು ಕಲುಷಿತಗೊಳಿಸಿವೆ. ಬಲಹೀನಗೊಳಿಸಿವೆ, ಮನಸ್ಸಿನ ದಿಕ್ಕು ತಪ್ಪಿಸಿದೆ, ಛಿದ್ರಛಿದ್ರಗೊಳಿಸಿವೆ. ರೋಗಗ್ರಸ್ತನನ್ನಾಗಿ ಮಾಡಿವೆ. ಅಜ್ಞಾನಿಯನ್ನಾಗಿ ಮಾಡುತ್ತಿವೆ. ಈ ಎಲ್ಲಾ ಸ್ಥಿತಿಗಳಿಗೆ ಕಾರಣ ಲೋಭ, ದ್ವೇಷ ಮತ್ತು ಮೋಹವಾಗಿದೆ. ಈ ಲೋಭ, ದ್ವೇಷ ಮತ್ತು ಮೋಹವೇ ಸರ್ವ ಅಕುಶಲ ಸ್ಥಿತಿಗಳಿಗೆ ಮೂಲಕಾರಣವಾಗಿದೆ.  ಅಜ್ಞಾನದಿಂದ (ಮೋಹ) ಲೋಭ ಮತ್ತು ದ್ವೇಶಗಳು ಉಂಟಾಗುತ್ತದೆ.
                ಲೋಭವು ಎಲ್ಲಾರೀತಿಯ ಇಂದ್ರಿಯ ಚಾಪಲ್ಯ ಮತ್ತು ಲೌಕಿಕತೆಗೆ ಬಯಸಿ ಅದಕ್ಕೆ ಎಂತಹ ತಪ್ಪುದಾರಿ ಹಿಡಿಯಲು ಪ್ರೇರೇಪಿಸುತ್ತದೆ.
                ದ್ವೇಷವು ಎಲ್ಲಾರೀತಿಯ ವಿರೋಧ (ವ್ಯಗ್ರ) ಮಾಡುತ್ತದೆ. ಅದು ಕೋಪವಾಗಿರ ಬಹುದು, ಭಯವಾಗಿರಬಹುದು ಮತ್ತು ಶೋಕವಾಗಿರಬಹುದು.
                ಕೋಪ = ಅಪ್ರಿಯ ವಸ್ತು/ವ್ಯಕ್ತಿ/ಘಟನೆಗೆ ವ್ಯಗ್ರವಾಗುವುದು.
                ಭಯ = ಅಪ್ರಿಯ ವಸ್ತು/ವ್ಯಕ್ತಿ/ಘಟನೆಗೆ ದುರ್ಬಲ ರೀತಿಯಲ್ಲಿ ವಿರೋಧಿಸುವುದು.
                ಚಿಂತೆ = ಅಪ್ರಿಯ ವಸ್ತು/ವ್ಯಕ್ತಿ/ಘಟನೆಗೆ ದುರ್ಬಲ ರೀತಿಯಲ್ಲಿ ಕುಗ್ಗಿಹೋಗುವುದು.
                ಮೋಹವು ಜ್ಞಾನರಹಿತ ಸ್ಥಿತಿಯಾಗಿದ್ದು, ಸಂದೇಹಗಳಿಂದ, ದ್ವಂದ್ವಗಳಿಂದ, ಮಿಥ್ಯಾ ದೃಷ್ಟಿಗಳಿಂದ, ಕೂಡಿರುತ್ತದೆ.
                ಈ ರೀತಿಯ ಅಕುಶಲ ಸ್ಥಿತಿಗಳು ಮನಸ್ಸು ಪ್ರವೇಶಿಸಿದಂತೆ ನೋಡಿಕೊಳ್ಳುವಂತೆ, ಹೊಕ್ಕರೂ ಅವನು ನಾಶ ಮಾಡುವಂತೆ ನಾವು ಅಕುಶಲ ಸ್ಥಿತಿಗಳನ್ನು ನಾವು ನಾಶ ಮಾಡಬೇಕು.
ಸಂಯಮ : ಸಂಯಮ (ಅಕುಶಲ ಚಿತ್ತಗಳು ಪ್ರವೇಶಿಸದಂತೆ ನೋಡುವುದು ಹೇಗೆ?
                ಮನೆಗೆ ಸರ್ಪಗಳು ಒಳನುಗ್ಗಲು ದಾರಿಗಳು ಹೀಗಿರುತ್ತದೆ :
                1. ಬಾಗಿಲು, 2. ಕಿಟಕಿ 3. ಸಂದುಗಳು 4. ಚಾವಣಿ. ಹಾಗೆಯೇ ನಮ್ಮ ಮನಸ್ಸಿನಲ್ಲಿ ಅಕುಶಲ ಸ್ಥಿತಿಗಳು ಪ್ರವೇಶಿಸಲು 6 ದ್ವಾರಗಳಿವೆ.  ಅವೆಂದರೆ : 1. ಕಣ್ಣು 2. ಕಿವಿ 
3. ಮೂಗು  4. ನಾಲಿಗೆ  5. ದೇಹ  6. ಮನಸ್ಸು.
                ಈ ಆರು ಇಂದ್ರೀಯಗಳಲ್ಲಿ ನಾವು ಜಾಗರೂಕರಾಗಿರಬೇಕು. ಇದರ ಬಗ್ಗೆ ವಿವರವಾಗಿ ಅರಿಯೋಣ.
                ಈಗ ನಮಗೆ ಚಕ್ಷುಯಿದೆ. ಚಕ್ಷುವಿಗೆ ಸಂಬಂಧಪಟ್ಟಿರುವುದು ಅಂದರೆ ಚಕ್ಷು ಇಂದ್ರಿಯಕ್ಕೆ ರೂಪವು ವಿಷಯವಾಗಿದೆ.  ಈ ಚಕ್ಷು ಹಾಗು ರೂಪವು ನೋಡಿದಾಗ ಎರಡು ಸ್ಪರ್ಶವಾಗುತ್ತದೆ. ಅಂದರೆ ಸಂಪರ್ಕಕ್ಕೆ ಬರುವುದು ಆಗ ಚಕ್ಷು ವಿಞ್ಞಾನ (ಚಕ್ಷುವಿನಿಂದ ಅರಿವು) ಉಂಟಾಗುತ್ತದೆ. ಆಗ ಅಲ್ಲಿ ಸನ್ಯಾ ವೇದನಾ (ಗ್ರಹಿಕೆ ಹಾಗು ಸಂವೇದನೆ) ಉಂಟಾಗುತ್ತದೆ. ಮನವು ಆನಂದಿಸುತ್ತದೆ. ಇಚ್ಛೆ (ಚೇತನಾ) ಉಂಟಾಗುತ್ತದೆ. ಹಾಗೆಯೇ ತೀವ್ರ ಬಯಕೆ (ತೃಷ್ಣಾ) ಉಂಟಾಗುತ್ತದೆ. ಅದರಲ್ಲಿ ಅತಿಯಾದ ಆಂಟು ಆಸಕ್ತಿ ಉಂಟಾಗುತ್ತದೆ. (ಉಪಾದಾನ). ಅಂದರೆ ಅದೇ ಚಟವಾಗಿಬಿಡುತ್ತದೆ. ಅದೇ ನಮ್ಮ ವ್ಯಕ್ತಿತ್ವ (ಭವ) ಆಗಿಬಿಡುತ್ತದೆ. ಇಷ್ಟೆಲ್ಲಾ ಆಗಿದ್ದು ಚಕ್ಷು ರೂಪವನ್ನು ನೋಡಿದ್ದರಿಂದಲೇ. ಇಲ್ಲಿ ಚಕ್ಷುವು ಟಿ.ವಿ.ಯನ್ನು (ರೂಪ) ನೋಡಿದೆ ಎಂದು ಭಾವಿಸೊಣ. ನಂತರ ಅದರ ಬಗ್ಗೆ ಗಮನ ಅರಿವು, ಗ್ರಹಿಕೆ, ಆನಂದಿಸುವಿಕೆ, ಇಚ್ಛೆ, ಬಯಕೆ, ತೀವ್ರಬಯಕೆ, ಅಂಟು ಆಸಕ್ತಿ, ಚಟ, ವ್ಯಕ್ತಿತ್ವ ಇವೆಲ್ಲಾ ಉಂಟಾಗುತ್ತದೆ.
                ನಮಗೆ ಚಕ್ಷುವಂತು ಇದೆ. ರೂಪಗಳು ಹೇರಳವಾಗಿವೆ. ಅವನ್ನೇನು ಮಾಡಲಾಗುವುದಿಲ್ಲ. ಅಂದರೆ ನಾವು ಸ್ಪರ್ಶವನ್ನು ತಡೆಯಬಹುದು. ಸ್ಪರ್ಶವಾದರೂ (ನೋಡಿದರೂ), ಅರಿವಾದರೂ, ಗ್ರಹಿಕೆಯನ್ನು ತಡೆಯಬಹುದು, ಆನಂದಿಸುವಿಕೆ (ಸಂವೇದನ) ತಡೆಯಬಹುದು. ಯೋಚನೆ ತಡೆಯಬಹುದು. ತೀವ್ರಬಯಕೆ ತಡೆಯಬಹುದು, ಮಿಕ್ಕವೆಲ್ಲಾ ತಡೆಯಬಹುದು.
                ನಾವು ಇಂಥದ್ದನ್ನು ನೋಡಿದಾಗ ರಾಗವು ಉಂಟಾಗುತ್ತದೆ ಎಂದು ಭಾಸವಾದರೆ ಅಥವಾ
                ನಾವು ಇಂಥದ್ದನ್ನು ನೋಡಿದರೆ ಕೋಪವು ಉಂಟಾಗುತ್ತದೆ ಎಂದು ಭಾಸವಾದರೆ, ಅಥವಾ
                ನಾವು ಇಂಥದ್ದನ್ನು ನೋಡಿದರೆ ಭಯವು ಅಥವಾ ಚಿಂತೆಯು ಉಂಟಾಗುತ್ತದೆ ಎಂದು ಭಾಸವಾದರೆ. ನಾವು ನೋಡಲು ಹೋಗಲೇ ಬಾರದು. ನೋಡಿದರೂ ಕೇವಲ ನೋಡಬೇಕು. ಯಾವುದೇ ಇಚ್ಛೆಯಾಗಲಿ, (ಬೇಕು/ಬೇಡ).
                ಗ್ರಹಿಕೆಯಾಗಲಿ, ಸಂವೇದನೆಯಾಗಲಿ (ಪ್ರಿಯವೇದನೆ/ಅಪ್ರಿಯ ವೇದನೆ) ತೀವ್ರಬಯಕೆಯಾಗಲಿ (ಯೋಚನೆಗಳಾಗಲಿ) ಇರಬಾರದು.
                ಆದರೆ ಸಂಬಂಧಿಸಿದಂತೆ ಒಂದು ಉಪಮೆಯಿದೆ. ಮುಖವನ್ನು ನೋಡುವ ದರ್ಪಣವನ್ನು ನೋಡಿ ಅದರಿಂದ ನಾವು ಪಾಠ ಕಲಿಯಬೇಕಾಗಿದೆ. ಹೇಗೆಂದರೆ ದರ್ಪಣವು ನಮ್ಮನ್ನು ಪ್ರತಿಫಲಿಸುತ್ತದೆ. ಆದರೆ ಗ್ರಹಿಕೆಯಾಗಲಿ, ಸಂವೇದನೆಯಾಗಲಿ, ಯೋಚನೆಯಾಗಲಿ, ತೀವ್ರ ಬಯಕೆಯಾಗಲಿ, ಮಾಡುವುದಿಲ್ಲ, ವ್ಯಕ್ತಿತ್ವವಾಗಲಿ ಇಡುವುದಿಲ್ಲ. ಅದು, ಏನನ್ನು ಇಟ್ಟುಕೊಳ್ಳುವುದಿಲ್ಲ. ಹಾಗೆಯೋ ಏನನ್ನು ನಿರಾಕರಿಸುವುದು ಇಲ್ಲ. ಕೇವಲ ಅರಿಯುತ್ತದೆ ಅಷ್ಟೆ. ಪ್ರತಿಕ್ರಿಯೆ ಮಾಡುವುದಿಲ್ಲ. ನಾವು ಇಂದ್ರೀಯಗಳನ್ನು ಹೀಗೆ ಪರಿವತರ್ಿಸಬೇಕಷ್ಟೆ.
                ನಾವು ಕಣ್ಣಿನಿಂದ ನೋಡುವಾಗ ಚಿತ್ರವಾದರೆ ಆನಂದಿಸಬಹುದು.
                ನಾವು ಕಣ್ಣಿನಿಂದ ನೋಡುವಾಗ ಶತೃವಾದರೆ ಕೋಪಬರಬಹುದು.
                ನಾವು ಕಣ್ಣಿನಿಂದ ನೋಡುವಾಗ ಹಾವಾದರೆ ಭಯಬರಬಹುದು.
                ನಾವು ಕಣ್ಣಿನಿಂದ ನೋಡುವಾಗ ನಷ್ಟವಾಗಿದ್ದರೆ ಚಿಂತೆ ಉಂಟಾಗಬಹುದು.
                ಇವೆಲ್ಲಾ ಸಂವೇದನೆಗಳಾಗಿವೆ. ಇವನ್ನು ಅವಲಂಬಿಸಿ ಗ್ರಹಿಕೆಗಳು, ಬಯಕೆಗಳು, ಬೇಕು ಅಥವಾ ಬೇಡ ಎಂಬ ತೀವ್ರ ಯೋಚನೆಗಳು ಉಂಟಾಗುತ್ತದೆ.
                ಆದ್ದರಿಂದ ಆರಂಭದಲ್ಲೇ ತಡೆದರೆ ಯಾವ ಯೋಚನೆಯೂ ಇಲ್ಲ, ಚಟವೂ ಇಲ್ಲ. ವ್ಯಕ್ತಿತ್ವವೂ ಇಲ್ಲ. ಇದೇರೀತಿಯಾಗಿ ಬೇರೆ ಇಂದ್ರೀಯಗಳಿಂದ ತಡೆಗಟ್ಟಬೇಕು, ನಿಗ್ರಹಿಸಬೇಕು, ಸಂಯಮಗೊಳಿಸಬೇಕು.
ವರ್ಜನೆ : ಉದಯಿಸಿರುವ ಅಕುಶಲ ಸಮೂಹವನ್ನು ನಾಶ ಮಾಡುವುದು (ವಜರ್ಿಸುವುದು) ಹೇಗೆ ?
                ಯಾರು ನಡೆಯುತ್ತಿರುವಾಗ, ನಿಂತಿರುವಾಗ, ಕುಳಿತಿರುವಾಗ ಅಥವಾ ಮಲಗಿರುವಾಗ ಬರುವ ಯೋಚನೆಗಳನ್ನು ಉಪಶಮನಗೊಳಿಸಿರುತ್ತಾನೋ, ಅದರಲ್ಲಿಯೆ ಅನಂದಿಸುತ್ತಾನೋ, ಆತನು ಶ್ರೇಷ್ಠರಾದ ಸಮ್ಮ ಸಂಬುದ್ಧರನ್ನು ಸೇರುತ್ತಾನೆ.
                ಇಲ್ಲಿ ಕೆಲವೊಮ್ಮೆ ಅಕುಶಲ ಯೋಚನಾ ಸಮೂಹ ಉದಯಿಸಬಹುದು. ಅಗ ಸಾಧಕನು ಅದನ್ನು ಸಹಿಸಬಾರದು, ಅಲಕ್ಷಿಸಬಾರದು ತಕ್ಷಣವೇ ವಜರ್ಿಸಬೇಕು. ಅದಕ್ಕಾಗಿ ದೃಢ ಪರಿಶ್ರಮ ನಿರಂತರವಾಗಿ ಪಟ್ಟು ಅದನ್ನು ನಾಶಗೊಳಿಸಿದಾಗಲೇ ಸಮಾಧಾನಗೊಳ್ಳಬೇಕು. ಹಾಗು ಚಿತ್ತವನ್ನು ಹಾಗೆಯೇ ಇಟ್ಟುಕೊಳ್ಳಬೇಕು.
                ಅಕುಶಲ ಯೋಚನಾ ಸಮೂಹವೆಂದರೆ ಲೋಭ, ದ್ವೇಷ, ಮೋಹ ಸಮೂಹವೇ ಆಗಿದೆ. ಅವು ಸ್ವಲ್ಪವಾಗಿದ್ದರೂ ಸರಿ ಮನುಷ್ಯ ವ್ಯಕ್ತಿತ್ವವೇ ಬದಲಿಸಿ, ಅವನತಿ ತಂದು ದುಃಖಕ್ಕೆ ತಳ್ಳುತ್ತದೆ. ಆದ್ದರಿಂದ ಅವುಗಳ ವರ್ಜನೆ ಅತ್ಯಗತ್ಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಭಗವಾನರು ಹೀಗೆ ಹೇಳಿದ್ದಾರೆ.  ಮನಸ್ಸಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಒಂದು ಶ್ರೇಷ್ಠವಾದ ಸುತ್ತವಿದೆ. ಅದೇ ವಿತ್ತಕ್ಕ ಸಂತಾನಸುತ್ತ. ಅದರಲ್ಲಿ ಹೀಗೆ ಬರುತ್ತದೆ.
                ಭಿಕ್ಷುಗಳೇ, ಯಾರು ಶ್ರೇಷ್ಠವಾದ ಅಧಿಚಿತ್ತದ ಮೇಲೆ ಇಚ್ಛೆಯುಳ್ಳವ ನಾಗಿದ್ದಾನೆಯೋ ಆತನು ಕಾಲಕಾಲಕ್ಕೆ ಈ ಐದು ರೀತಿಯಿಂದ ಮನಸ್ಸನ್ನು ನಿಯಂತ್ರಿಸಬೇಕು. ಅಕುಶಲವನ್ನು ವಜರ್ಿಸಬೇಕು. ಯಾವುವು ಆ ಐದು?
ವಿರೋಧಾತ್ಮಕ ಕೌಶಲ್ಯ :
                ಇಲ್ಲಿ ಭಿಕ್ಷುಗಳೇ ಇಲ್ಲಿ ಸಾಧಕನು. ಯಾವುದೇ ಸಾಧನೆಯಲ್ಲಿರಲಿ ಆತನಲ್ಲಿ ಪಾಪಯುತ ಅಕುಶಲ ಯೋಚನೆಗಳು ಆಸೆಯ ರೂಪದಲ್ಲಿ, ದ್ವೇಷದ ರೂಪದಲ್ಲಿ ಅಥವಾ ಗೊಂದಲದ ರೂಪದಲ್ಲಿ ಉಂಟಾದರೆ ಆ ವಿಷಯಗಳಿಗೆ ವಿರುದ್ಧವಾದ ಕುಶಲ ವಿಷಯವನ್ನು ಉದಯಿಸುವಂತೆ ಮಾಡಬೇಕು. ಹೀಗೆ ಕುಶಲಯುತ ವಿರುದ್ಧ ವಿಷಯ ಜಾಗೃತವಾದಾಗ, ಅಲ್ಲಿರುವಂತಹ ಅಕುಶಲ ವಿಷಯಗಳು (ಯೋಚನೆಗಳು) ದೂರವಾಗುತ್ತದೆ, ಅಂತ್ಯವಾಗುತ್ತದೆ. ಹೀಗೆ ಅವು ಇನ್ನಿಲ್ಲವಾದಾಗ ಆತನ ಮನಸ್ಸು ದೃಢವಾಗಿ ಕೇಂದ್ರೀಕೃತವಾಗುತ್ತದೆ, ಶಾಂತವಾಗುತ್ತದೆ, ಏಕಾಗ್ರವಾಗುತ್ತದೆ. ಸಮಾಧಿಯನ್ನು ಪಡೆಯುತ್ತದೆ.
                ಅಂದರೆ ಇಲ್ಲಿ ಸಾಧಕನಲ್ಲಿ ಸುಂದರ (ರಾಗ) ಎಂಬ ಮಿಥ್ಯಾದೃಷ್ಟಿಯು ಉಂಟಾದರೆ ಅಸಹ್ಯಕರ (ಕುರೂಪ/ಅಶುಭ) ಭಾವನೆ ಜಾಗೃತಗೊಳಿಸಬೇಕು.
                ಸುಖ ಎಂಬ ಭ್ರಮೆ ಉಂಟಾದರೆ ದುಃಖದ ನೈಜಸ್ವರೂಪ ನೆನಪಿಗೆ ತಂದು ಹೇಳಬೇಕು.
                ನಿತ್ಯ ಎಂಬ ಭಾವನೆಗೆ ಅನಿತ್ಯತಾ ಪರಿವರ್ತನೆ ನೆನಪಿಸಿಕೊಳ್ಳಬೇಕು.
ಕೋಪ ಉಂಟಾದಾಗ ಮೈತ್ರಿ, ಬೆಳವಣಿಗೆ ಮಾಡಬೇಕು.
ಹಿಂಸೆ ಉಂಟಾದಾಗ ಕರುಣೆ, ಬೆಳವಣಿಗೆ ಮಾಡಬೇಕು.
ಅಸೂಯೆ ಉಂಟಾದಾಗ ಮುದಿತಾ ಬೆಳವಣಿಗೆ ಮಾಡಬೇಕು.
ಇಂದ್ರೀಯ ಪ್ರತಿಕ್ರಿಯೆ ಉಂಟಾದಾಗ ಸಮಚಿತ್ತತೆ ಬೆಳವಣಿಗೆ ಮಾಡಬೇಕು.
ಆತ್ಮಭಾವನೆ ಉಂಟಾದಾಗ ಅನಾತ್ಮಭಾವನೆ ಬೆಳವಣಿಗೆ ಮಾಡಬೇಕು.
ನಾನು ಎಂಬ ಗರ್ವ (ಅಹಂಕಾರ) ಉಂಟಾದಾಗ ಅನಿತ್ಯ ಬೆಳವಣಿಗೆ ಮಾಡಬೇಕು.
ಸೇಡು ಉಂಟಾದಾಗ ಕ್ಷಮೆ ಬೆಳವಣಿಗೆ ಮಾಡಬೇಕು.
ಪಾಪ ಉಂಟಾದಾಗ ಶೀಲ ಬೆಳವಣಿಗೆ ಮಾಡಬೇಕು.
ಜಿಪುಣತನ ಉಂಟಾದಾಗ ದಾನ ಬೆಳವಣಿಗೆ ಮಾಡಬೇಕು.
                ಹೀಗೆ ವಿರುದ್ಧ ಕುಶಲ ವಿಷಯವನ್ನು ಹಾಗು ಅದರ ಮೌಲ್ಯವನ್ನು ಅರಿತಾಗ, ಹುಟ್ಟಿಸಿದಾಗ ಇರುವಂತಹ ಅಕುಶಲವು ವಜರ್ಿತವಾಗುತ್ತದೆ.
                ಹಾಗೆಯೇ ಸಮಾಧಿ ಹಂತದಲ್ಲಿ
                ಏಕಾಗ್ರತೆಯಿಂದ - ಇಂದ್ರೀಯಾಭಿಲಾಶೆ ತೊಡೆದು ಹೋಗುತ್ತದೆ.
                ಸುಖ ಮತ್ತು ಆನಂದದಿಂದ - ದ್ವೇಷ, ಚಿಂತೆ, ಪಶ್ಚಾತ್ತಾಪ, ಮುಂತಾದ ನಕಾರಾತ್ಮಕ ಸಂವೇದನೆ ತೊಡೆದು ಹೋಗುತ್ತದೆ.
                ಪ್ರಯತ್ನಶೀಲತೆಯಿಂದ ಸೋಮಾರಿತನ, ನಿರ್ಲಕ್ಷ್ಮ ತೊಡೆದು ಹೋಗುತ್ತದೆ.
                ದೃಢ ನಿಧರ್ಾರದಿಂದ - ಅನಿಧರ್ಾರ (ದ್ವಂದ್ವ) ತೊಡೆದುಹೋಗುತ್ತದೆ.
                ಜ್ಞಾನದಿಂದ ಮತ್ತು ಶ್ರದ್ಧೆಯಿಂದ - ಸಂದೇಹ ತೊಡೆದುಹೋಗುತ್ತದೆ.
2. ಅಪಾಯ ಪರಿಶೋಧನೆಯಿಂದ :ಭಿಕ್ಷುಗಳೇ, ಆಗಲೂ ಸಹಾ ಪಾಪಯುತವಾದ ಅಕುಶಲವಾದ ಯೋಚನೆಗಳು ಉಂಟಾಗುತ್ತಿದ್ದರೆ ಆ ಯೋಚನೆಗಳಿಂದಾಗುವ ಅಪಾಯ, ಆಪತ್ತನ್ನು, ಪರಿಶೋಧಿಸಬೇಕು. ಹೇಗೆಂದರೆ ನಿಜವಾಗಿಯೂ ಇವು ಅಕುಶಲ ಯೋಚನೆಗಳಾಗಿವೆ. ನಿಜಕ್ಕೂ ಇವು ಪಾಪವಾಗಿವೆ (ತಪ್ಪಾಗಿದೆ) ನಿಜಕ್ಕೂ ಇವು (ದುಃಖ) ನೋವಿನ ಪರಿಣಾಮಗಳನ್ನು ಉಂಟುಮಾಡುತ್ತವೆ. ಯಾವಾಗ ಆತನು ಈ ರೀತಿ ಅಪಾಯ ಶೋಧನೆ ಮಾಡುವನೋ ಆಗ ಪಾಪಯುತವಾದ (ಬಂಧನಕಾರಿ) ಅಕುಶಲ ಯೋಚನೆಗಳು ದೂರವಾಗುತ್ತದೆ, ಅಂತ್ಯಗೊಳ್ಳುತ್ತದೆ. ಇವುಗಳ ಅಂತ್ಯದಿಂದ ಮನಸ್ಸು ಧ್ಯಾನ ವಿಷಯದಲ್ಲಿ ಕೇಂದ್ರೀಕೃತವಾಗುತ್ತದೆ, ಶಾಂತವಾಗುತ್ತದೆ, ಏಕಾಗ್ರವಾಗುತ್ತದೆ. ಹಾಗು ಸಮಾಧಿ ಪಡೆಯುತ್ತದೆ.
3.            ಮರೆಯುವಿಕೆ ಮತ್ತು ಅಲಕ್ಷದಿಂದ : ಭಿಕ್ಷುಗಳೇ, ಆಗಲೂ ಸಹಾ ಪಾಪಯುತವಾದ ಅಕುಶಲ ಯೋಚನೆಗಳು ಉಂಟಾಗುತ್ತಿದ್ದರೆ ಆ ಸಾಧಕನು ಮರೆಯಲು ಯತ್ನಿಸಬೇಕು. ಆ ಯೋಚನೆಗಳ ಬಗ್ಗೆ ಅಲಕ್ಷ ವಹಿಸಬೇಕು (ಹೇಗೆಂದರೆ ಮುಖವನ್ನು ಬೇರೆಡೆಗೆ ತಿರುಗಿಸುವಂತೆ). ಆಗ ಅಕುಶಲ ಯೋಚನೆಗಳು ದೂರವಾಗುತ್ತದೆ, ಅಂತ್ಯಗೊಳ್ಳುತ್ತದೆ. ಇವುಗಳ ಅಂತ್ಯದಿಂದ ಮನಸ್ಸು ಕೇಂದ್ರೀಕೃತವಾಗಿ, ಏಕಾಗ್ರವಾಗಿ, ಶಾಂತವಾಗಿ ಸಮಾಧಿ ಪಡೆಯುತ್ತದೆ.
4.            ಸ್ವರೂಪ ಮತ್ತು ಕಾರ್ಯ ಗಮನಿಸುವಿಕೆಯಿಂದ : ಭಿಕ್ಷುಗಳೇ ಆಗಲೂ ಸಹಾ ಪಾಪಯುತ ಅಕುಶಲ ಯೋಚನೆಗಳು ಉಂಟಾಗುತ್ತಿದ್ದರೆ ಆ ಸಾಧಕನು ಆ ಯೋಚನೆಗಳ ಸ್ವಭಾವ ಮತ್ತು ಕಾರ್ಯವನ್ನು ವೀಕ್ಷಿಸಬೇಕು (ಅವು ಹೇಗೆ/ಏಕೆ/ಯಾವ ಕಾರಣದಿಂದ ಉದಯಿಸುತ್ತದೆ. ಹೇಗೆ ಅವು ಬೆಳವಣಿಗೆ ಹೊಂದುತ್ತವೆ, ಹೇಗೆ ದುರ್ಬಲವಾಗುತ್ತದೆ/ನಾಶವಾಗುತ್ತದೆ). ಆಗ ಅವು ದೂರವಾಗುತ್ತದೆ, ಅಂತ್ಯಗೊಳ್ಳುತ್ತದೆ. ಅವುಗಳ ಅಂತ್ಯದಿಂದ ಮನಸ್ಸು ಸ್ಥೀಮಿತಗೊಂಡು, ವಿಷಯದಲ್ಲಿ ಕೇಂದ್ರೀಕೃತವಾಗಿ, ಏಕಾಗ್ರವಾಗಿ, ಶಾಂತವಾಗಿ ಸಮಾಧಿ ಪಡೆಯುತ್ತದೆ. ಭಿಕ್ಷುಗಳೇ ಒಬ್ಬ ಮನುಷ್ಯನು ನಡೆದುಕೊಂಡು ಹೋಗುತ್ತಿರುತ್ತಾನೆ. ಆಗ ಆತನು ಈ ರೀತಿ ಯೋಚಿಸುತ್ತಾನೆ. ಈಗ ಏಕೆ ನಾನು ವೇಗವಾಗಿ ಹೋಗುತ್ತಿದ್ದೇನೆ. ನಿಧಾನವಾಗಿ ಏಕೆ ಹೋಗಬಾರದು? ಹಾಗೆಯೇ ಏಕೆ ನಾನು ನಿಧಾನವಾಗಿ ನಡೆಯುತ್ತಿರುವೇ? ನಾನೇಕೆ ನಿಲ್ಲಬಾರದು? ಹಾಗೆಯೇ ನಿಂತಿರುವಾಗ ನಾನೇಕೆ ನಿಂತಿರುವೆ, ಕುಳತುಕೊಳ್ಳಬಾರದೇಕೆ? ಹಾಗೆಯೇ ಕುಳಿತಿರುವಾಗ, ನಾನೇಕೆ ಕುಳಿತಿದ್ದೇನೆ. ಏಕೆ ಮಲಗಬಾರದು ಇದೇರೀತಿ ಆಗಿ ಭಿಕ್ಷುಗಳೇ ಕಠಿಣತರ ಭಂಗಿಯಿಂದ ಸುಲಭವಾದ ಭಂಗಿ ಪಡೆಯುವ ರೀತಿಯಲ್ಲಿ ಆತನು ಕಾರ್ಯಸ್ವಭಾವ ಅರಿತು ಮನಸ್ಸನ್ನು ಪಳಗಿಸುತ್ತಾನೆ.
5.            ಪ್ರಬಲವಾದ ಬಲಪ್ರಯೋಗದಿಂದ : ಆಗಲೂ ಸಹಾ ಅಕುಶಲ ಯೋಚನೆಗಳು ಉಂಟಾಗುತ್ತಿದ್ದರೆ ಸಾಧಕನು ಹಲ್ಲನ್ನು ಕಚ್ಚಿಕೊಂಡು, ನಾಲಿಗೆಯನ್ನು ತಾಲುವಿಗೆ ಒತ್ತಿ ಪ್ರಬಲವಾದ ಬಲಪ್ರಯೋಗದಿಂದ ಮನಸ್ಸನ್ನು ಸೋಲಿಸುತ್ತಾನೆ, ನಿಯಂತ್ರಿಸುತ್ತಾನೆ ಮತ್ತು ಜಯಿಸುತ್ತಾನೆ. ಹೀಗಾದಾಗ ಅಕುಶಲ ಯೋಚನೆಗಳು ದೂರವಾಗುತ್ತದೆ, ಅಂತ್ಯವಾಗುತ್ತದೆ. ಅವುಗಳ ಅಂತ್ಯದಿಂದ ಮನಸ್ಸು ಶಾಂತವಾಗಿ, ಕೇಂದ್ರೀಕೃತಗೊಂಡು ಏಕಾಗ್ರವಾಗಿ ಸಮಾಧಿ ಪಡೆಯುತ್ತದೆ. (ಹೇಗೆಂದರೆ ಬಲಿಷ್ಠ ಮಲ್ಲನು ದುರ್ಬಲ ಮಲ್ಲನನ್ನು ಅಡಗಿಸುವ ರೀತಿ).
                ಭಿಕ್ಷುಗಳೇ, ಈ ರೀತಿ ಸಾಧಿಸುವವನನ್ನು ಯೋಚನೆಗಳ ಹಾದಿಯಲ್ಲಿ ಮತ್ತು ವಿಧಾನದಲ್ಲಿ ಪ್ರಭು ಎಂದು ಕರೆಯುತ್ತಾರೆ. (ಏಕೆಂದರೆ) ಆತನು ಇಚ್ಛಿಸಿದ್ದನ್ನು ಯೋಚಿಸುತ್ತಾನೆ. ಇಚ್ಛಿಸಬಾರದ್ದನ್ನು ಯೋಚಿಸುವುದಿಲ್ಲ. ಆತನು ತೃಷ್ಣೆಯನ್ನು ಕತ್ತರಿಸಿದ್ದಾನೆ. ಬಂಧನಗಳನ್ನು ಕತ್ತರಿಸಿದ್ದಾನೆ. ಅಹಂಕಾರವನ್ನು ಜಯಿಸಿ ಆತನು ಸಂಕಟಗಳೆಲ್ಲವನ್ನು ಕೊನೆಗಾಣಿಸುತ್ತಾನೆ.
                ಈ ರೀತಿಯಾಗಿ ಭಿಕ್ಷುವು (ಸಾಧಕನು) ಪಾಪಯುತ ಕುಶಲ ಯೋಚನೆಗಳನ್ನು ವಜರ್ಿಸುತ್ತಾನೆ.
ಭಾವನ : ಪಾಳಿಯಲ್ಲಿ ಭಾವನ ಎಂದರೆ ಮನಸ್ಸಿನ ಅಭಿವೃದ್ಧಿ ಅಥವಾ ಮನಸ್ಸಿನ ಸುಸಂಸ್ಕೃತತೆ ಹೊರತು ಕನ್ನಡದ ಅರ್ಥವಲ್ಲ.
                ಪಳಗಿದ ಮನಸ್ಸು ಸುಖವನ್ನು ತರುತ್ತದೆ ಎಂದು ಭಗವಾನರು ನುಡಿಯುತ್ತಾರೆ.
                ಇಲ್ಲಿ ಸಾದಕನು ಇನ್ನೂ ಉದಯಿಸದಿರುವ ಕುಶಲ ಸ್ಥಿತಿಗಳನ್ನು, ಉದಯಿಸುವಂತೆ ಮಾಡುತ್ತಾನೆ ಮತ್ತು ಅವುಗಳ ವೃದ್ಧಿಯನ್ನು ಮಾಡುತ್ತಾನೆ. ಈ ರೀತಿಯಾದ ದೃಢವಾದ ಪರಿಶ್ರಮವನ್ನು ಪಡುತ್ತಾನೆ. ಹಾಗು ಆ ದಿಕ್ಕಿನಲ್ಲಿಯೆ ಮನಸ್ಸು ಹರಿಸುತ್ತಾನೆ.
ಕುಶಲ ಯೋಚನೆಗಳು ಅಥವಾ ಸ್ಥಿತಿಗಳು :
                ಇಲ್ಲಿ ನಾಲ್ಕು ಇದ್ದಿಪಾದಗಳನ್ನು, ಪಂಚಬಲ, ಪಂಚೇದ್ರೀಯಗಳು. ಇವುಗಳನ್ನು ಉದಾಹರಣೆಯಾಗಿ ಹೆಸರಿಸಬಹುದು.
ನಾಲ್ಕು ಇದ್ದಿಪಾದಗಳು :
1.            ಪ್ರಬಲ ಇಚ್ಛಾಶಕ್ತಿಯುತ ಸಮಾಧಿ (ಛಂದ)
2.            ನಿರಂತರ ದೃಢ ಪರಿಶ್ರಮಯುತ ಸಮಾಧಿ (ವೀರ್ಯ)
3.            ಚಿತ್ತದ ಆಳ ಸಮಾಧಿ (ಚಿತ್ತ)
4.            ವಿಶ್ಲೇಷಣೆಯುತ ಸಮಾಧಿ (ಮಿಮಾಂಸ)
                ಇವುಗಳು ಇದ್ಧಿಗೆ (ಅತೀಂದ್ರಿಯ ಶಕ್ತಿಗಳಿಗೆ) ಆಧಾರವಾಗಿದೆ. ಆದ್ದರಿಂದ ಇವನ್ನು ಇದ್ಧಿಪಾದ ಎನ್ನುತ್ತಾರೆ. ಛಂದದಲ್ಲಿ ದೃಢವಾದ ಇಚ್ಛಾಶಕ್ತಿಯ ಸಮಾಧಿಯಿರುತ್ತದೆ. ವೀರ್ಯಪಾದವು ಸಮ್ಮ ವ್ಯಾಯಾಮವೇ ಆಗಿದೆ. ಚಿತ್ತ ಇದ್ಧಿಪಾದವು ಸಮ್ಮ ಸಮಾಧಿಯಾಗಿದೆ. ಮಿಮಾಂಸ ಇದ್ಧಿಪಾದವು ಸಮಾದಿ ಹಾಗು ಅತೀಂದ್ರೀಯ ಶಕ್ತಿಗಳ ಕೌಶಲ್ಯವಾಗಿದೆ. ಇವು ಅತೀಂದ್ರಿಯ ಶಕ್ತಿಗಳಿಗೆ ಮಾತ್ರ ಮೀಸಲು ಆಗಿಲ್ಲ. ಇವು ಸರ್ವಸಿದ್ಧಿಗಳಿಗೆ, ಸರ್ವ ಯಶಸ್ಸಿನ ಆಧಾರವಾಗಿದೆ. ಇಚ್ಛಾಶಕ್ತಿಯು ಸರ್ವಸಾಧನೆಗೆ ಮೂಲಾಧಾರವಾಗಿದೆ. ಇಚ್ಛೆಯಿಲ್ಲದೆ ಸಣ್ಣ ಕಾರ್ಯವು ಜರುಗದು. ಪ್ರಯತ್ನವಿಲ್ಲದೆ ಯಾವ ಯಶಸ್ಸು ಇಲ್ಲ. ಹಾಗೆಯೇ ಏಕಾಗ್ರತೆಯಿಲ್ಲದೆ ಯಾವ ಜ್ಞಾನವೂ ಇಲ್ಲ, ಬಲವೂ ಇಲ್ಲ, ಶಾಂತಿಯೂ ಇಲ್ಲ, ಕಾರ್ಯವೂ ಇಲ್ಲ. ಅದರಂತೆಯೇ ಕೌಶಲ್ಯವಿಲ್ಲದೆ ಯಾವ ಪೂರ್ಣತೆಯೂ ಇಲ್ಲ.
                ಇವನ್ನು ಭಿಕ್ಷುವು ವೃದ್ಧಿಗೊಳಿಸುತ್ತಾನೆ. ದೃಢವಾಗಿರುತ್ತಾನೆ. ಅದೇ ದಿಕ್ಕಿನಲ್ಲಿ ಚಿತ್ತವನ್ನು ಇಡುತ್ತಾನೆ.
ಪಂಚಬಲಗಳು ಮತ್ತು ಪಂಚೇಂದ್ರಿಯಗಳು :
ಇವು ಹೀಗಿವೆ :
                ಶ್ರದ್ಧಾಬಲ          ಶ್ರದ್ಧಾ ಇಂದ್ರೀಯ
                ವೀರ್ಯಬಲ       ವೀರ್ಯ ಇಂದ್ರೀಯ
                ಸ್ಮೃತಿಬಲ         ಸ್ಮೃತಿ ಇಂದ್ರೀಯ
                ಸಮಾಧಿಬಲ       ಸಮಾಧಿ ಇಂದ್ರೀಯ
                ಪ್ರಜ್ಞಾಬಲ         ಪ್ರಜ್ಞಾ ಇಂದ್ರೀಯ
                ಎಲ್ಲೆಲ್ಲಿ 5 ಬಲಗಳು ಇರುತ್ತವೆಯೋ ಅಲ್ಲೆಲ್ಲಾ 5 ಇಂದ್ರೀಯಗಳು (ಅಧಿಪತ್ಯ ಮಾಡುವಂತಹುದು/ನಿಯಂತ್ರಣ ಮಾಡುವಂತಹುದು) ಇರುತ್ತವೆ.  ಎಲೆಲ್ಲಿ 5 ಇಂದ್ರೀಯಗಳು ಇರುತ್ತವೋ ಅಲ್ಲೆಲ್ಲಾ 5 ಬಲಗಳು ಇರುತ್ತವೆ.  ಇವು ಒಂದೇ ಆಗಿದ್ದು ಬಳಕೆಯಲ್ಲಿ ವ್ಯತ್ಯಾಸವಿದೆ ಅಷ್ಟೇ. ಇದಕ್ಕೊಂದು ಸುಂದರ ಉಪಮೆಯಿದೆ. ಒಂದು ನದಿಯು ಪೂರ್ವದ ಕಡೆ ಹರಿಯುತ್ತಿದೆ. ಇಳಿಜಾರಿನಲ್ಲಿ ಹರಿಯುತ್ತಿದೆ. ಪೂರ್ವದ ಕಡೆ ಬಾಗುತ್ತಾ ಹರಿಯುತ್ತಿದೆ. ಅದರ ಮಧ್ಯೆ ದ್ವೀಪವಿದೆ. ಆಗ ನದಿಯು 2 ವಿಭಾಗವಾಗಿ ಹರಿಯುತ್ತವೆ. ದ್ವೀಪದ ಈ ಬದಿ ಹಾಗು ದ್ವೀಪದ ಆ ಬದಿ ಈ ರೀತಿ ಲೆಕ್ಕಾಚಾರ ಹಾಕುವೆವು.
                ಅದೇ ರೀತಿಯಲ್ಲಿ ಯಾವುದು ಶ್ರದ್ಧೆ ಇಂದ್ರಿಯವೋ ಅದೇ ಶ್ರದ್ಧಾಬಲ ಆಗಿರುತ್ತವೆ. ಹಾಗೆಯೇ ವೀರ್ಯ/ಸ್ಮೃತಿ/ಸಮಾಧಿ ಯಾವುದು ಪ್ರಜ್ಞಾ ಇಂದ್ರೀಯವೋ ಅದೇ ಪ್ರಜ್ಞಾ ಬಲ ಆಗಿರುತ್ತದೆ. ಯಾವುದು ಪ್ರಜ್ಞಾ ಬಲವೋ ಅದೇ ಪ್ರಜ್ಞಾ ಇಂದ್ರೀಯ ಆಗಿರುತ್ತದೆ.
1.            ಭಿಕ್ಷುಗಳೇ, ನಾವು ಎಲ್ಲಿ ಶ್ರದ್ಧಾ ಇಂದ್ರೀಯವನ್ನು ಕಾಣಬಹುದು?
                ಸೋತಪನ್ನನಲ್ಲಿರುವ ನಾಲ್ಕು ಗುಣಗಳಲ್ಲಿ ಅದು ವ್ಯಕ್ತವಾಗುತ್ತದೆ.
2.            ಭಿಕ್ಷುಗಳೇ, ಪ್ರಯತ್ನಶೀಲತೆ (ವೀರ್ಯ)ಯ ಇಂದ್ರೀಯ ಎಲ್ಲಿ ಕಾಣಬಹುದು?
                ನಾಲ್ಕು ಸಮ್ಮ ವ್ಯಾಯಾಮದಲ್ಲಿ.
3.            ಭಿಕ್ಷುಗಳೇ, ಸ್ಮೃತಿಯ ಇಂದ್ರೀಯವನ್ನು ನಾವು ಎಲ್ಲಿ ಕಾಣಬಹುದು?
                ನಾಲ್ಕು ಸತಿ ಪಟ್ಠಾನಗಳಲ್ಲಿ.
4.            ಭಿಕ್ಷುಗಳೇ, ಸಮಾಧಿ ಇಂದ್ರೀಯವನ್ನು ನಾವು ಎಲ್ಲಿ ಕಾಣಬಹುದು?
                ನಾಲ್ಕು ಸಮಾಧಿಗಳಲ್ಲಿ.
5.            ಭಿಕ್ಷುಗಳೇ, ಪ್ರಜ್ಞಾ ಇಂದ್ರೀಯವನ್ನು ನಾವು ಎಲ್ಲಿ ಕಾಣಬಹುದು?
                ನಾಲ್ಕು ಆರ್ಯ ಸತ್ಯಗಳಲ್ಲಿ.
                ಈ ಪಂಚೇಂದ್ರಿಯಗಳನ್ನು ನಾವು ಕೌಶಲ್ಯಯುತವಾಗಿ ಅಭಿವೃದ್ಧಿ ಗೊಳಿಸಬಹುದು, ಹಾಗೆಯೇ ಅವನ್ನು ಕೌಶಲ್ಯಯುತವಾಗಿ ಬಳಸಿ ಕೊಳ್ಳಬಹುದು.
                ಶ್ರದ್ಧಾ (ಇಂದ್ರೀಯ/ಬಲ) : ಎಂದರೆ ಅವಿಚಲ ನಂಬಿಕೆಯ ಶಕ್ತಿಯಾಗಿದೆ. ಆದರೆ ಇದು ಅಂಧಶ್ರದ್ಧೆಯಲ್ಲ. ಮೌಢ್ಯವಲ್ಲ. ಬದಲಾಗಿ ಪ್ರಚಂಡಶಕ್ತಿಯಾಗಿದೆ. ಇದೊಂದು ನಂಬಿಕೆ, ಆನಂದ, ಗೌರವ ಹಾಗು ದೃಢತೆಯ ಮಿಶ್ರಣವಾಗಿದೆ. ಶ್ರದ್ಧೆಯು ಜ್ಞಾನಿಯ ಸಾಮಥ್ರ್ಯವಾಗಿದೆ. ಎಲ್ಲಾ ಕಾರ್ಯಗಳು ಶ್ರದ್ಧೆಯಿಂದಲೆ ಆರಂಭವಾಗುತ್ತದೆ.
                ಇಲ್ಲಿ ಸಾಧಕನು ಬುದ್ಧರಲ್ಲಿ, ಧಮ್ಮದಲ್ಲಿ ಮತ್ತು ಸಂಘದಲ್ಲಿ ಅವಿಚಲ ಶ್ರದ್ಧೆಯಿಡುತ್ತಾನೆ. ಹೇಗೆಂದರೆ :
                ಬುದ್ಧಶ್ರದ್ಧಾ : ಬುದ್ಧ ಭಗವಂತರು ಹೀಗಿದ್ದಾರೆ-ಅರಹಂತರಾಗಿರುವುದು (ಪೂರ್ಣಮುಕ್ತರು), ಸಮ್ಮ ಸಂಬುದ್ಧರಾಗಿರುವರು (ಪರಿಪೂರ್ಣ ಸ್ವಯಂ ಸಂಶೋಧನಾ ಜ್ಞಾನ ಪಡೆದವರಾಗಿದ್ದಾರೆ). ವಿಜ್ಞಾಚರಣ ಸಂಪನ್ನರು (ಜ್ಞಾನ ಹಾಗು ಕರುಣೆಯ ಆಚರಣಾ ಸಂಪನ್ನರು) ಸುಗತರು (ಅವರು ಪರಮಶ್ರೇಷ್ಠ ಸ್ಥಾನ, ಪಡೆದು, ಸರಿಯಾದ ದಾರಿಯಲ್ಲಿ ಹೋಗಿದ್ದಾರೆ). ಲೋಕವಿದರು (ಸರ್ವ ಲೋಕಗಳನ್ನು ಬಲ್ಲವರು) ಅನುತ್ತರರು (ಅಸಮಾನರು, ಉಪಮಾತೀತರು ಆಗಿದ್ದಾರೆ) ಧಮ್ಮಾಸಾರಥಿ (ಮಾನವರಿಗೆ ದಮಿಸಲು ಬಂದಂತಹ ದಿವ್ಯಸಾರಥಿಯಾಗಿದ್ದಾರೆ). ಸತ್ಥಾ ದೇವ ಮನುಸ್ಸಾನಂ (ದೇವತೆಗಳಿಗೆ ಹಾಗು ಮಾನವರಿಗೆ ಶ್ರೇಷ್ಠ ಗುರುವು) ಬುದ್ಧರು (ಪರಿಪೂರ್ಣ ಜ್ಞಾನ ಸ್ವರೂಪರು) ಭಗವಾನರು (ಪರಮ ಪೂಜ್ಯರು) ಆಗಿದ್ದಾರೆ.
                ಧಮ್ಮಶ್ರದ್ಧಾ : ಧಮ್ಮವು ಬುದ್ಧ ಭಗವಾನರಿಂದ ತುಂಬ ಚೆನ್ನಾಗಿ ವಿವರವಾಗಿ ತಿಳಿಸಲ್ಪಟ್ಟಿದೆ. ಇಲ್ಲೆ, ಈಗಲೇ ಕಾಣುವಂತಹದ್ದಾಗಿದೆ. ಕಾಲವಿಳಂಬವಿಲ್ಲದೆ ಫಲಕಾರಿಯಾಗಿದೆ. ಪ್ರತಿಯೊಬ್ಬರಿಗೂ ಪರಿಶೋಧಿಸಲು ಆಹ್ವಾನಿಸುತ್ತದೆ, ನಿಬ್ಬಾಣಗಾಮಿಯಗಿದೆ ಮತ್ತು ಜ್ಞಾನಿಗಳಿಂದ ನೇರವಾಗಿ ಅನುಭವಿಸುವಂತಹದ್ದಾಗಿದೆ.
ಸಂಘ ಶ್ರದ್ಧಾ :
ಬುದ್ಧ ಭಗವಾನರ ಸಂಘವು ಸುಮಾರ್ಗದಲ್ಲಿ ಚಲಿಸುವಂತಹುದ್ದಾಗಿದೆ.
ಬುದ್ಧ ಭಗವಾನರ ಸಂಘವು ನೇರವಾದ ಮಾರ್ಗದಲ್ಲಿ ಚಲಿಸು ವಂತಹುದ್ದಾಗಿದೆ.
ಬುದ್ಧ ಭಗವಾನರ ಸಂಘವು ಸತ್ಯದ ಮಾರ್ಗದಲ್ಲಿ ಚಲಿಸುವಂತಹುದ್ದಾಗಿದೆ.
ಬುದ್ಧ ಭಗವಾನರ ಸಂಘವು ಯೋಗ್ಯವಾದ ಸುಮಾರ್ಗದಲ್ಲಿ ಚಲಿಸು ವಂತಹುದ್ದಾಗಿದೆ.
                ಸಂಘವು 4 ಜೋಡಿಗಳ ಮತ್ತು 8 ವ್ಯಕ್ತಿರೀತಿಯ ವ್ಯಕ್ತಿಗಳಿಂದ ಕೂಡಿದ್ದು, ದಾನಕ್ಕೆ, ಆತಿಥ್ಯಕ್ಕೆ, ಸತ್ಕಾರಕ್ಕೆ, ಪೂಜೆಗೆ ಅರ್ಹವಾಗಿದ್ದು ಈ ಜಗಕ್ಕೆ ಅನುಪಮೇಯ ಪುಣ್ಯಕ್ಷೇತ್ರವಾಗಿದೆ.
                ಈ ರೀತಿಯಾಗಿ ಆತನು ತ್ರಿರತ್ನಗಳಲ್ಲಿ ಅಪಾರ ಶ್ರದ್ಧೆಯಿಂದ ಕೂಡಿರುತ್ತಾನೆ. ತ್ರಿರತ್ನದ ಸಹಾಯದಿಂದ ಆತನು ಅರಿವಿನಲ್ಲಿ ಸ್ಪಷ್ಟೀಕರಣ ಗೊಂಡು ಅಪಾರ ಸ್ಫೂತರ್ಿಗೊಳ್ಳುತ್ತಾನೆ. ಹಾಗೆಯೇ ಆತನು ತನ್ನಲ್ಲಿಯು ಅಪಾರ ಶ್ರದ್ಧೆಯಿಡುತ್ತಾನೆ. ಅದಕ್ಕೆ ಸಂಬಂಧಿಸಿದಂತೆ ಬುದ್ಧರ ಗಾಥೆಗಳು ಕೆಲವು ಹೀಗಿವೆ :
ಸ್ವ-ಶ್ರದ್ಧಾ
ನಿಮ್ಮನ್ನು ನೀವೇ ದ್ವೀಪವನ್ನಾಗಿಸಿಕೊಳ್ಳಿ.
                ಪರಿಶ್ರಮದಿಂದ, ಗಂಭೀರ ದೃಢತೆಯಿಂದ, ಶೀಲದಿಂದ
                ಮತ್ತು ಸ್ವ-ನಿಯಂತ್ರಣದಿಂದ ಜ್ಞಾನಿಯು
                ತನ್ನನ್ನು ದ್ವೀಪವನ್ನಾಗಿ ಮಾಡಿಕೊಳ್ಳಲಿ ಅದರಿಂದ
                ಆತನಿಗೆ ಯಾವುದೇ ಪ್ರವಾಹ ಪೀಡಿಸದಂತೆ ಇರಲಿ.
ನಿಮ್ಮ ಮುಕ್ತಿಗೆ ನೀವೇ ಶ್ರಮಿಸಬೇಕು
                ನೀವೇ ಪರಿಶ್ರಮಿಸಬೇಕು
                ತಥಾಗತರು ಕೇವಲ ಗುರುವಾಗಿದ್ದಾರೆ
                ಯಾರು ಈ ಮಾರ್ಗವನ್ನು ಪ್ರವೇಶಿಸುವರೋ
                ಮತ್ತು ಧ್ಯಾನಿಸುವರೋ ಅಂತಹವರು
                ಮಾರ ಬಂಧನದಿಂದ ಮುಕ್ತರಾಗುತ್ತಾರೆ.
ಪರಿಶುದ್ಧತೆ ಹಾಗು ಅಪರಿಶುದ್ಧತೆಗೆ ನೀವೇ ಹೊಣೆಗಾರರು
                ತನ್ನಿಂದಲೇ ಪಾಪವಾಗುತ್ತದೆ
                ತನ್ನಿಂದಲೇ ಕಲುಶಿನಾಗುತ್ತಾನೆ
                ತನ್ನಿಂದಲೇ ಪಾಪರಹಿತನಾಗುತ್ತಾನೆ ಮತ್ತು
                ತನ್ನಿಂದಲೇ ಶುದ್ಧನು ಆಗುತ್ತಾನೆ
                ಶುದ್ಧತೆ ಮತ್ತು ಅಶುದ್ಧತೆ ತನ್ನನ್ನೇ
                ಅವಲಂಬಿಸಿದೆ  ಯಾರು
                ಇನ್ನೊಬ್ಬರನ್ನು ಶುದ್ಧಿಗೊಳಿಸಲಾರರು.
ನಿಮಗೆ ನೀವೇ ಶರಣಾಗತರಾಗಿರಿ
                ಒಬ್ಬನು ತಾನೇ ತನ್ನ ರಕ್ಷಕ (ಶರಣು)
                ಪರರು ಹೇಗೆ ರಕ್ಷಕರಾಗಬಲ್ಲರು
                ಒಬ್ಬನು ಪೂರ್ಣವಾಗಿ ನಿಯಂತ್ರಿತನಾಗಿ
                ಸಾಧಿಸಲು ಕಠಿಣವಾದ ಶರಣನ್ನು (ರಕ್ಷಣೆ)
                ಪಡೆಯುತ್ತಾನೆ.
ನೀವೇ ಹೊಣೆಗಾರರು
                ನಿಮ್ಮ ಪಾಪಕೃತ್ಯಗಳು ನಿಮ್ಮ
                ಪೋಷಕರಿಂದಾಗಲಿ, ಸೋದರ ಸೋದರಿಯಿಂದಾಗಲಿ
                ನಿಮ್ಮ ಬಂಧು-ಮಿತ್ರರಿಂದಾಗಲಿ
                ಅಥವಾ ಸಮಣ ಬ್ರಾಹ್ಮಣರಿಂದಾಗಲಿ
                ಆಗಿಲ್ಲ. ಅದಕ್ಕೆ ನೀವೇ ಹೊಣೆಗಾರರು.
                ಯಾವ ಬೀಜವನ್ನು ಬಿತ್ತುವಿರೋ
                ಅಂತಹುದೇ ಫಲ ಪಡೆಯುವಿರಿ
                ಶೀಲವಂತನು ಪುಣ್ಯ ಸಂಗ್ರಹಣೆ ಮಾಡುತ್ತಾನೆ
                ಪಾಪಿಯು, ಕೆಟ್ಟದ್ದನ್ನು ಅನುಭವಿಸುತ್ತಾನೆ.
ಸ್ವ-ಶ್ರದ್ಧೆ :
                ಪರರನ್ನು ಅವಲಂಬಿಸಬೇಡಿ
                ಸ್ವ-ಶ್ರದ್ಧೆಯನ್ನು ಅಭಿವೃದ್ಧಿಗೊಳಿಸಿ
ನಿಮ್ಮ ಕ್ರಿಯಾತ್ಮಕತೆ ಬಳಸಿ
                ಅವಿಚಲ ನಿರಂತರ ಪರಿಶ್ರಮದಿಂದ ನಾನು
                ಬೆಳಕನ್ನು ತಲುಪಿದ್ದೇನೆ, ದೃಢ ಪರಿಶ್ರಮದಿಂದ
                ನಾನು ಪರಮಶಾಂತಿಯನ್ನು ತಲುಪಿದ್ದೇನೆ.
                ನೀವು ಸಹಾ ನಿರಂತರ ದೃಢವಾಗಿ ಶ್ರಮಿಸಿದರೆ
                ನೀವು ಸಹಾ ಅಲ್ಪ ಕಾಲದಲ್ಲೆ ಪರಮಸುಖದ
                ಶ್ರೇಷ್ಠ ಗುರಿಯನ್ನು ನೀವೆ ಅರಿತು ಸಾಧಿಸುವಿರಿ.
                ಹೀಗೆ ಭಗವಾನರು ನಾವು ಏನನ್ನಾದರೂ ಸಾಧಿಸಬಲ್ಲೆವು. ಎಲ್ಲವನ್ನು ಸಾಧಿಸಬಲ್ಲೆವು ಎಂಬ ಸತ್ಯ ನೀಡಿ ಸ್ಪೂತರ್ಿ ತುಂಬಿದ್ದಾರೆ. ನಮ್ಮಲ್ಲಿ ಪ್ರತಿಯೊಂದು ಸಾಧಿಸುವ ಪ್ರಚಂಡ ಪ್ರಚನ್ನತೆಯಿದೆ ಎಂದು ತಿಳಿಸಿದ್ದಾರೆ. ನಾವು ಕೇವಲ ವಿಕಸಿಸಬೇಕಷ್ಟೆ.
                ಈ ಸ್ವ-ಶ್ರದ್ಧೆಯಲ್ಲಿ ಕರ್ಮ ನಿಯಮವು ಬೇರೂರಿದೆ. ನಮ್ಮ ಸುಖ-ದುಃಖಗಳಿಗೆ, ಉನ್ನತಿ-ಅವನತಿಗೆ, ಲಾಭ-ನಷ್ಟಗಳಿಗೆ, ಜಯ-ಪರಾಜಯಕ್ಕೆ, ಮತ್ತು ಬಂಧನ-ಮುಕ್ತಿಗೆ, ಮರುಜನ್ಮ-ನಿಬ್ಬಾಣಕ್ಕೆ ನಾವೇ ಹೊಣೆಗಾರರು. ಹೊರತು ಬೇರಾವ ದೇವರಾಗಲಿ, ದೆವ್ವವಾಗಲಿ, ಶತ್ರುವಾಗಲಿ, ಮಿತ್ರನಾಗಲಿ ಹೊಣೆಯಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ವೀರ್ಯ ಇಂದ್ರೀಯ/ಬಲ : ಸಮ್ಮ ವ್ಯಾಯಾಮದಂತೆ ವಿವರಣೆ ಇರುತ್ತದೆ.
ಸ್ಮೃತಿ ಇಂದ್ರೀಯ/ಬಲ : ಸಮ್ಮಸತಿಯಂತೆಯೇ ವಿವರಣೆ ಇರುತ್ತದೆ.
ಸಮಾಧಿ ಇಂದ್ರೀಯ/ಬಲ : ಸಮ್ಮ ಸಮಾಧಿಯಂತೆಯೇ ವಿವರಣೆ ಇರುತ್ತದೆ.
ಪ್ರಜ್ಞಾ ಇಂದ್ರೀಯ/ಬಲ : ಸಮ್ಮ ದೃಷ್ಟಿಯಂತೆಯೆ ವಿವರಣೆ ಇರುತ್ತದೆ.
(ಮುಂದೆ ವಿವರಣೆ ಸಿಗುತ್ತದೆ)
ರಕ್ಷಣಾ : ಇಲ್ಲಿ ಸಾಧಕರು ಉದಯಿಸಿ ಬೆಳೆದಿರುವ ಕುಶಲಸ್ಥಿತಿಗಳನ್ನು ಹಾಗೆಯೇ ಇರುವಂತೆ ಉಳಿಯುವಂತೆ ನೋಡಿಕೊಳ್ಳುತ್ತಾನೆ. ವಿಕಸಿಸುವಂತೆ ಶ್ರಮಿಸುತ್ತಾನೆ. ಪರಿಪೂರ್ಣ ಮಾಡಲು ಪರಿಶ್ರಮಿಸುತ್ತಾನೆ. ಈ ದಿಕ್ಕಿನಲ್ಲಿ ದೃಢವಾದ ಪರಿಶ್ರಮಪಡುತ್ತಾನೆ.
                ಭದ್ರತೆಯನ್ನು ನೀಡಬಲ್ಲ ಸಮಾಧಿಯು ಉತ್ಪನ್ನವಾದಾಗ ಅದು ಆ ಸ್ಥಿತಿಯಲ್ಲೆ ಉಳಿಯುವಂತೆ ರಕ್ಷಿಸಿಕೊಳ್ಳುತ್ತಾನೆ.
                ನಗರವನ್ನು ಒಳಗೆ ಮತ್ತು ಹೊರಗೆ ಹೇಗೆ ರಕ್ಷಿಸುವರೋ ಹಾಗೆಯೇ ಮಾನವನು ತನ್ನನ್ನು ರಕ್ಷಿಸಿಕೊಳ್ಳಬೇಕು.
                ಒದಗಿದ ಈ ಅವಕಾಶವನ್ನು ಬಿಡಬಾರದು.
                ಈ ಅವಕಾಶದಿಂದ ತಪ್ಪಿಸಿಕೊಂಡವರು ಮುಂದೆ ಶೋಕ ಪಡಬೇಕಾಗುತ್ತದೆ.
                ನಿನಗೆ ನೀನೆ ಪರೀಕ್ಷಿಸಿಕೋ
                ನಿನ್ನನ್ನು ನೀನೇ ಖಂಡಿಸಿಕೋ,
                ಹೀಗೆ ಸ್ಮೃತಿವಂತರಾಗಿ ನಿನ್ನನ್ನು ನೀನೇ ರಕ್ಷಿಸಿಕೊಂಡು
                ಓ ಭಿಕ್ಷು ಸುಖವನ್ನು ಗಳಿಸು.
                ಸಂಯಮ ಮತ್ತು ವರ್ಜನೆ
                ಭಾವನ ಮತ್ತು ರಕ್ಷಣಾ
                ಈ ನಾಲ್ಕು ಸಮ್ಮ ವ್ಯಾಯಾಮವು
                (ಧಮ್ಮ) ಸೂರ್ಯರಿಂದ ತಿಳಿಸಲ್ಪಟ್ಟಿದೆ.
                ಯಾವ ಭಿಕ್ಷುವು
                ಅದರಲ್ಲಿ ದೃಢವಾಗಿ ಶ್ರಮಿಸುವನೋ
                ಆತನು ದುಃಖಗಳ
                ಅಂತ್ಯಕ್ಕೆ ತಲುಪುತ್ತಾನೆ.
ಪ್ರಯತ್ನಶೀಲನಾಗಲು 11 ಸಾಧಕಗಳು :
1.            ಸೋಮಾರಿತನದ ಅಪಾಯ ಅರಿಯುವಿಕೆ
2.            ಪ್ರಯತ್ನದ ಮಹಾಲಾಭ ಅರಿಯುವಿಕೆ
3.            ಬುದ್ಧರು, ಮುಂತಾದ ಮಹಾನುಭಾವರೆಲ್ಲರೂ ಪ್ರಯತ್ನದಿಂದಲೇ ಹಾಗೆ ಸಿದ್ಧಿಸಿಕೊಂಡಿದ್ದಾರೆ ಎಂಬುದು ಅರಿಯುವಿಕೆ
4.            ನನಗೆ ದಾನ ಮಾಡಿದ ದಾನಿಗಳಿಗೆ ಮಹತ್ವರ ಲಾಭವಾಗಬೇಕಾದರೆ ನಾನು ಶ್ರಮಿಸಬೇಕು ಎಂದು ಅರಿಯುವಿಕೆ
5.            ಸಾಧನೆಯಿಂದಲೆ ಗೌರವ ಎಂದು ಗುರವರ್ಯರು ಹೇಳಿದ್ದಾರೆ.
6.            ಈ ಧಮ್ಮವು ಪ್ರಯತ್ನಶೀಲರಿಗೆ. ಸೋಮಾರಿಗಳಿಗಲ್ಲ.
7.            ಆಲಸ್ಯ, ಜಡತೆ, ನಿದ್ದೆಗಳನ್ನು ಗೆಲ್ಲುವಿಕೆ
8.            ಸೋಮಾರಿಗಳನ್ನು ವಜರ್ಿಸುವುದು.
9.            ಪ್ರಯತ್ನಶೀಲರೊಂದಿಗೆ ಬೆರೆಯುವುದು.
10.          ಸಮ್ಮ ವ್ಯಾಯಾಮವನ್ನು ಪುನರ್ ಅವಲೋಕಿಸುವುದು.

11.          ಪ್ರಯತ್ನಶೀಲತೆಯಲ್ಲಿ ದೃಢವಾಗಿರುವುದು