Sunday 25 June 2017

NEITHER PERCEPTION NOR NON PERCEPTION MEDITATION ನೇವಸನ್ಯಾನಸನ್ನಾಆಯಾತನ

ನೇವಸನ್ಯಾನಸನ್ನಾಆಯಾತನ :

                ಆತನು ಅಕಿಂಚಯಾತನದಲ್ಲಿ 5 ರೀತಿಯ ಧ್ಯಾನ ಪ್ರವೀಣನಾಗುತ್ತಾನೆ. ಅನಂತರ ಆತನು ಅದರಿಂದ ಹೊರಬಂದು ಅದನ್ನು ಪುನರ್ ಅವಲೋಕಿಸುತ್ತಾನೆ. ಆಗ ಆತನಿಗೆ ಅಕಿಂಚಾಯಾತನವು ಸಹಾ ಸ್ಥೂಲವಾಗಿ ಕಾಣಿಸುತ್ತದೆ ಮತ್ತು ಗ್ರಹಿಕೆಯೆ ಇಲ್ಲದಂತಹ ಸ್ಥಿತಿಯು ಇನ್ನೂ ಸೂಕ್ಷ್ಮವಾಗಿ ಕಂಡುಬರುತ್ತದೆ ಮತ್ತು ಶಾಂತವಾಗಿ ಕಂಡುಬರುತ್ತದೆ. ಆಗ ಆತನಿಗೆ ಗ್ರಹಿಕೆಯೇ ರೋಗ, ಗ್ರಹಿಕೆಯು ಹುಣ್ಣು, ಗ್ರಹಿಕೆಯೇ ಅಪಾಯ ಎಂಬ ಜ್ಞಾನೋದಯವಾಗಿ ಆತನು ಅಕಿಂಚಯಾತನವನ್ನು ಮೀರಲು ಸತತವಾಗಿ ಯತ್ನಿಸುತ್ತಾನೆ. ಅದರ ಅಂಟುವಿಕೆಯಿಂದ ಪೂರ್ಣವಾಗಿ ವಿಮುಖವಾದ ನಂತರ ಆತನು ನೇವಸನ್ಯಾನಸನ್ನಾ ಆಯಾತನ ಸ್ಥಿತಿಯಲ್ಲಿ ಗಮನವಿಟ್ಟು ಅಕಿಂಚಾಯಾತನವನ್ನು ಮೀರಿ ಹೋಗುತ್ತಾನೆ. ನೇವಸನ್ಯಾನಸನ್ನಾ ಆಯಾತನವೆಂದರೆ ಗ್ರಹಿಕೆ ಇಲ್ಲ, ಗ್ರಹಿಕೆ ಇಲ್ಲದೆಯೂ ಇಲ್ಲ ಎಂಬ ಸ್ಥಿತಿ. ಅಂದರೆ ಸ್ಥಿತಿಯಲ್ಲಿ ಗ್ರಹಿಕೆಯನ್ನು ಅತ್ಯಂತ ಗರಿಷ್ಠ ಪ್ರಮಾಣದಲ್ಲಿ ಮೀರಿಹೋಗುತ್ತಾರೆ. ಅಂದರೆ ಸ್ಥೂಲ ಗ್ರಹಿಕೆಗಳು ಇಲ್ಲವಾಗಿ, ಸೂಕ್ಷ್ಮ ಗ್ರಹಿಕೆಗಳು ಇರುತ್ತದೆ. ಇಲ್ಲ ಕೇವಲ ಗ್ರಹಿಕೆ ಮಾತ್ರ ವೇದನೆಗಳಲ್ಲು ಇದೇರೀತಿ ಭಾವಿಸಬೇಕು, ಹಾಗೆಯೇ ವಿನ್ಯಾನ ಮತ್ತು ಸ್ಪರ್ಶಗಳು ಸಹಾ. ಸ್ಥಿತಿಯನ್ನು ರೀತಿ ಉದಾಹರಿಸಬಹುದು. ಒಂದು ಪಾತ್ರೆಯಲ್ಲಿ ಎಣ್ಣೆಯಿರುತ್ತದೆ. ಅದನ್ನು ಚೆಲ್ಲುತ್ತೇವೆ. ಆಗ ಅದರಲ್ಲಿ ಎಣ್ಣೆ ಇರುವುದಿಲ್ಲ. ಆದರೂ ಮುಟ್ಟಿದಾಗ ಅಲ್ಲಿ ಸೂಕ್ಷ್ಮವಾಗಿ ಎಣ್ಣೆಯು ಪಾತ್ರೆಗೆ ಅಂಟಿರುತ್ತದೆ. ಅದೇ ರೀತಿಯಲ್ಲಿ ಭಿಕ್ಷುವು ತನ್ನ ಸ್ಥಿತಿಯಾದ ಗ್ರಹಿಕೆ ಇಲ್ಲ, ಹಾಗು ಗ್ರಹಿಕೆ ಇಲ್ಲದೆಯೂ ಇಲ್ಲ ಹೀಗೆ ಇರುತ್ತದೆ. ಆತ ಇದರಲ್ಲಿ ಲಕ್ಷ್ಯಕೊಟ್ಟು ಕ್ಷಿಪ್ರವಾಗಿ ಪ್ರವೇಶಿಸುತ್ತಾನೆ. ಹಾಗೆಯೇ ದೀರ್ಘಕಾಲ ಅದರಲ್ಲಿ ನೆಲೆಸುತ್ತಾನೆ. ಹಾಗೆಯೇ ಕ್ಷಿಪ್ರವಾಗಿ ಹೊರಗೆ ಬರುತ್ತಾನೆ. ಅದರ ಪುನರ್ ಅವಲೋಕನ ಮಾಡುತ್ತಾನೆ. ಆತ ರೀತಿಯಲ್ಲಿ ವಿಹರಿಸುತ್ತಾನೆ.
                ಅರೂಪ ಧ್ಯಾನಗಳ ಪ್ರತಿಸ್ಥಿತಿಯಲ್ಲೂ ಏಕಾಗ್ರತೆ ಮತ್ತು ಸಮಚಿತ್ತತೆಯಿರುತ್ತದೆ. ಹಾಗು ಇವುಗಳು ಪ್ರತಿಯೊಂದು ಅನಂತವಾಗಿರುತ್ತದೆ. ಆದರೆ ಒಂದಕ್ಕಿಂತ ಮತ್ತೊಂದು ಸೂಕ್ಷ್ಮವಾಗಿರುತ್ತದೆ.

ಇಲ್ಲಿಗೆ ಅರೂಪ ಝಾನ ಮುಗಿಯಿತು

NOTHINGNESS MEDITATION ಅಕಿಂಚಾಯಾತನ

ಅಕಿಂಚಾಯಾತನ :


                ನಂತರ ಭಿಕ್ಷುವು ವಿನ್ಯಾನಂಚಯಾತನ ಧ್ಯಾನದಲ್ಲಿ 5 ರೀತಿ ಪ್ರಾವಿಣ್ಯತೆ ಗಳಿಸುತ್ತಾನೆ. ಆಗ ಆತನು ಧ್ಯಾನವನ್ನು ಪುನರ್ ಅವಲೋಕನ ಮಾಡಿದಾಗ ಆತನಿಗೆ ವಿನ್ಯಾನಂಚಯಾತನವು ಸ್ಥೂಲವಾಗಿ ಕಂಡುಬರುತ್ತದೆಅದನ್ನು ಮೀರಿದ ಸ್ಥಿತಿಯಾದ ಅಕಿಂಚಾಯಾತನದ (ಶೂನ್ಯ) ಸೂಕ್ಷ್ಮತೆಯ ಸುಳಿವು ಸಿಗುತ್ತದೆ. ಆಗ ಆತನಿಗೆ ಅಕಿಂಚ (ಏನೂ ಇಲ್ಲ) ಆಯಾತನ ಸ್ಥಿತಿಯೇ ಸೂಕ್ಷ್ಮವಾಗಿ ಶಾಂತವಾಗಿ ಕಂಡುಬರುತ್ತದೆ. ಆಗ ಆತನು ವಿನ್ಯಾನಂಚಯಾತನವನ್ನು ಮೀರಲು ನಿರಂತರ ಯತ್ನಿಸುತ್ತಾನೆ. ವಿನ್ಯಾನದ (ಅರಿವಿನ) ನಿಮಿತ್ತ ಮೀರಿದಾಗ ಆತನಲ್ಲಿ ಏನೂ ಇಲ್ಲವೆಂಬ ಶೂನ್ಯಸ್ಥಿತಿಯು ಉಳಿಯುತ್ತದೆ. ಇದು ಅನಂತ ಅರಿವಿಗಿಂತ ಅಪಾರವಾಗಿ ಸೂಕ್ಷ್ಮತೆಯುಳ್ಳದ್ದು ಹಾಗು ಶ್ರೇಷ್ಠಕರವಾಗಿರುತ್ತದೆ. ಸ್ಥಿತಿಯು ಅವನಿಗೆ ವಿನ್ಯಾನಂಚ ಯಾತನವನ್ನು ಪೂರ್ಣವಾಗಿ ಮೀರಿದ್ದರಿಂದಾಗಿ ಏನೂ ಇಲ್ಲದ ಸ್ಥಿತಿಯು ಪ್ರಾಪ್ತಿಯಾಗಿರುತ್ತದೆ. ಆತನು ಅರಿವನ್ನು ಇಲ್ಲದಂತೆ ಮಡಿದ್ದಾನೆ. ಆತನು ಕೇವಲ ಏನೂ ಇಲ್ಲ ಸ್ಥಿತಿಯೇ ಗೋಚರಿಸುತ್ತದೆ. ಆಲ್ಲಿ ಆತನು ಹಿಡಿಯುವಂತಹುದು ಏನೂ ಇರುವುದಿಲ್ಲ. ಆತನು ಅರಿವನ್ನು ಇಲ್ಲದಂತೆ, ಗಮನಿಸದಂತೆ, ನೆನಪಿಸದಂತೆ ಮಾಡಿ ಏನೂ ಇಲ್ಲದಂತಹ ಶೂನ್ಯದಲ್ಲಿ ಪ್ರವೇಶಿಸಿ ದೀರ್ಘಕಾಲ ನೆಲಸುತ್ತಾನೆ. ಸ್ಥಿತಿಗೆ ಹೆಸರು ಬರಲು ಕಾರಣ ಏನೆಂದರೆ ಅಕಿಂಚ ಎಂದರೆ ಏನೂ ಇಲ್ಲ ಏನೂ ಇಲ್ಲದ ಸ್ಥಿತಿಯ ಆಧಾರವುಳ್ಳದರಿಂದ ಇದಕ್ಕೆ ಅಕಿಂಚಾಯಾತನ ಎನ್ನುತ್ತಾರೆ. ರೀತಿಯಲ್ಲಿ ಆತನು ಅಕಿಂಚಾಯಾತನದಲ್ಲಿ ವಿಹರಿಸುತ್ತಾನೆ

BOUNDLESS MIND MEDITATION ವಿನ್ಯಾನಂಚಯಾತನ

ವಿನ್ಯಾನಂಚಯಾತನ



                ಆಕಾಶ ಸಂಚಾಯತನದ ಧ್ಯಾನದಲ್ಲಿ 5 ರೀತಿ ಪ್ರವೀಣ್ಯತೆಯನ್ನು ಗಳಿಸುತ್ತಾನೆ. (ಅಂದರೆ ಲಕ್ಷ ನೀಡುವಿಕೆ, ಕ್ಷಿಪ್ರವಾಗಿ ಪ್ರವೇಶ, ದೀರ್ಘಕಾಲ ನೆಲೆಸುವಿಕೆ, ಕ್ಷಿಪ್ರ ಕಾಲದಲ್ಲಿ ಹೊರಬರುವಿಕೆ ಮತ್ತು ಪುನರ್ ಅವಲೋಕನ ಮಾಡುವಿಕೆ) ಆಗ ಆತನಿಗೆ ಆಕಾಶ ನಂಚಾಯಾತನವು ಸ್ಥೂಲವಾಗಿ ಕಂಡುಬರುತ್ತದೆ. ಅದನ್ನು ಮೀರಿದ ಸ್ಥಿತಿಯಾದ ವಿನ್ಯಾನಂಚಯಾನವೇ ಸೂಕ್ಷ್ಮವಾಗಿ, ಶಾಂತವಾಗಿ, ಕಂಡುಬರುತ್ತದೆ. ಆಗ ಆತನು ಆಕಾಶವನ್ನು ಮೀರಲು ಯತ್ನಿಸುತ್ತಾನೆ. ಆಕಾಶದ ನಿಮಿತ್ತಗಳನ್ನು ಮೀರಿದಾಗ ಆತನಲ್ಲಿ ವಿನ್ಯಾಸ (ವಿಞ್ಞಾನ = ಅರಿವು) ಉಳಿಯುತ್ತದೆ. ಅದನ್ನು ಏಕಾಗ್ರತೆಯಿಂದ ಅನಂತವಾಗಿ ಪ್ರಸರಿಸಿದಾಗ ಆಗ ಅದು ವಿನ್ಯಾನ + ಅನಂತ + ಆಯತನ = ವಿನ್ಯಾನಂಚಯಾತನ ಆಗುತ್ತದೆ. ಅಂದರೆ ಆತನು ಇಲ್ಲಿ ಆಕಾಶ ಅನಂತತೆಯನ್ನು ಪೂರ್ಣವಾಗಿ ಮೀರಿಹೋಗಿ ಅನಂತ ವಿನ್ಯಾನವನ್ನು ಸ್ಥಾಪಿಸುತ್ತಾನೆ. ಆತನು ಅದರಲ್ಲಿ ಪ್ರವೇಶಿಸಿ ಅದರಲ್ಲೇ ವಿಹರಿಸುತ್ತಾನೆ.

BOUNDLESS SPACE MEDITATION ಆಕಾಶ ನಂಚಾಯತನ

ನಾಲ್ಕು ಅರೂಪ ಝಾನಗಳು :
1.        ಆಕಾಶ ನಂಚಾಯತನ :

                ಇಲ್ಲಿ ಸಾಧಕನು 9 ಕಸಿನಾಗಳು ಪರಿಮಿತ ಆಕಾಶದ ಹೊರತು ಚತುರ್ಥ ಧ್ಯಾನ ಪ್ರಾಪ್ತಿ ಮಾಡಿದ ನಂತರ ಅಥವಾ ಅನಾಪಾನಾಸತಿಯಲ್ಲಿ ಚತುರ್ಥ ಧ್ಯಾನ ಪ್ರಾಪ್ತಿ ಮಾಡಿದ ನಂತರ ಅಥವಾ ಬ್ರಹ್ಮ ವಿಹಾರದ ಉಪೇಖ್ಖಾ ಧ್ಯಾನದ ಪ್ರಾಪ್ತಿಯ ನಂತರ 5 ವಿಧದಲ್ಲಿ ಧ್ಯಾನ ಪ್ರವೀಣನಾಗುತ್ತಾನೆ. (ಅಂದರೆ ಲಕ್ಷ ನೀಡುವಿಕೆ, ಪ್ರವೇಶ ಮಾಡುವಿಕೆ, ಸ್ಥಿರವಾಗಿ ನೆಲೆಸುವಿಕೆ, ಕ್ಷಿಪ್ರವಾಗಿ ಹೊರಬರುವಿಕೆ ಮತ್ತು ಪುನರ್ ಅವಲೋಕನ ಮಾಡುವಿಕೆ) ನಂತರ ಆತನಿಗೆ ರೂಪ ಝಾನವು ಸ್ಥೂಲವಾಗಿ ಕಂಡುಬರುತ್ತದೆ. ಆತನು ಅದನ್ನು ದಾಟಲು ಇಚ್ಛಿಸುತ್ತಾನೆ. ಆತನಿಗೆ ರೂಪ ಝಾನವು ಸ್ಥೂಲವಾಗಿ ಕಂಡುಬರುತ್ತದೆ. ಆತನು ಅದನ್ನು ದಾಟಲು ಇಚ್ಛಿಸುತ್ತಾನೆ. ಆತನಿಗೆ ರೀತಿಯ ಅರಿವು ಬರುತ್ತದೆ ದೇಹದಿಂದಲೇ (ರೂಪದಿಂದಲೇ) ನಾನಾರೀತಿಯ ಹೋರಾಟಗಳು, ವಿವಾದಗಳು, ಪಾಪಗಳು ಉಂಟಾಗುತ್ತವೆ. ರೂಪವಿಲ್ಲದಿದ್ದರೆ ಇದ್ಯಾವುದು ಇರುವುದಿಲ್ಲ.
                ದೇಹವಿದ್ದರೆ ನಾನಾ ರೊಗಗಳು, ಮುಪ್ಪು, ಮರಣಗಳಿಗೆ ಸಿಲುಕುತ್ತಲೆ ಇರಬೇಕಾಗುತ್ತದೆ. ಶೀತೋಷ್ಣ, ಹಸಿವು, ಬಾಯಾರಿಕೆ ಇತ್ಯಾದಿ ತೊಂದರೆ ಇದ್ದೇ ಇರುತ್ತದೆ. ಆದರೆ ರೂಪದ ಗ್ರಹಿಕೆಗಳನ್ನು ಮೀರಿದಾಗ, ಆತನಿಗೆ ಇನ್ನಾವುದು ತೊಂದರೆ ಇರುವುದಿಲ್ಲ ಎಂದು ಚಿಂತಿಸುತ್ತಾ ಆತನು ದೇಹತೀತ ಧ್ಯಾನವಾದ ಹಾಗು ರೂಪ ಶಬ್ದ, ವಾಸನೆ, ರುಚಿ ಮತ್ತು ಸ್ಪರ್ಶಗಳಿಗೆ ಅತೀತವಾದ ಅರೂಪ ಝಾನ ಮಾಡಲು ನಿರ್ಧರಿಸುತ್ತಾನೆ. ಮೊದಲನೆಯ ಸಮಾಧಿಯಲ್ಲಿ ಶಬ್ದವು ನಿಲ್ಲುತ್ತದೆ, ನಾಲ್ಕನೆಯ ಸಮಾದಿಯಲ್ಲಿ ಉಸಿರಾಟ ನಿಲ್ಲುತ್ತದೆ. ಆದರ ಅರೂಪ ಝಾನದಲ್ಲಂತು ಎಲ್ಲಾ ವಿಧವಾದ ರೂಪ ಮೀರಿ ರೂಪತೀತ (ದೇಹತೀತ ಮತ್ತು ಇಂದ್ರಿಯಾತೀತ) ಕ್ಷೇತ್ರಕ್ಕೆ ಹೋಗುತ್ತಾನೆ.
                ಇಂದ್ರಿಯ ವಲಯದ ಮಾನವ ಪ್ರಥಮ ಸಮಾಧಿಗೆ ಹೊರಟಾಗ ಆತನು ರೂಪ ಧ್ಯಾನದ ಬ್ರಹ್ಮಾ ವಲಯದಲ್ಲಿ ಪ್ರವೇಶಿಸುತ್ತಾನೆ. ಈಗ ಆತನು ರೂಪವಲಯವನ್ನು ದಾಟಿ ಅರೂಪ ವಲಯಕ್ಕೆ ಪ್ರವೇಶಿಸುತ್ತಾನೆ. ಸ್ಥಿತಿಯಲ್ಲಿರುವವರು ದೇಹದ ಎಲ್ಲಾ ವಿಧವಾದ ಸಂಪರ್ಕ ಕಡಿದುಕೊಳ್ಳುತ್ತಾರೆ. ಹೇಗೆ ಸರ್ಪಕ್ಕೆ ಭಯಪಡುವ ಮನುಷ್ಯ ಹಗ್ಗವನ್ನು ಕಂಡು ಬೆಚ್ಚಿಬಿದ್ದು ಅಲ್ಲಿಂದ ವಿಮುಖವಾಗುವಂತೆ ಆತನು ಚತುರ್ಥ ಧ್ಯಾನದಿಂದ ಮೀರಿಹೋಗಲು ಇಚ್ಛಿಸುತ್ತಾನೆ.
                ಆತನು 4ನೆಯ ಧ್ಯಾನದ ಪುನರ್ ಅವಲೋಕನ ಮಾಡಿದಾಗ ಆತನಿಗೆ ಚತುರ್ಥ ಧ್ಯಾನವು ಸ್ಥೂಲವಾಗಿ ಕಂಡುಬರುತ್ತದೆ. ಹಾಗೂ ಆಕಾಶದ ಅನಂತತೆಯು ಸೂಕ್ಷ್ಮವಾಗಿ, ಶಾಂತಿಯಾಗಿ ಕಂಡುಬರುತ್ತದೆ. ಆಗ ಆತನು ರೂಪದ ಚಿಹ್ನೆ (ರೂಪನಿಮಿತ್ತಗಳಿಂದ) ಹೊರಬರಲು ಯತ್ನಿಸುತ್ತಾನೆ. ಚತುರ್ಥ ಸಮಾಧಿಯಲ್ಲಿ ಗಮನ ನೀಡದೆ ಆಕಾಶದಲ್ಲಿ ಗಮನ ನೀಡಿದ್ದರಿಂದಾಗಿ ಆತನು ಝಾನ ಸಾಧಿಸುತ್ತಾನೆ ಅಥವಾ ರೂಪಚಿಹ್ನೆಗಳೆಲ್ಲವೂ ಮೀರಿ ಬರಿದು ಮಾಡಿದ್ದರಿಂದಾಗಿ ಆಕಾಶವು ಉಳಿಯುತ್ತದೆ. ಮತ್ತೆ ಮತ್ತೆ ಪ್ರಯತ್ನಿಸಿದ್ದರಿಂದ ಸ್ಮೃತಿಯು ಮನವು ಏಕಾಗ್ರವಾಗಿ ಅರೂಪ ಝಾನವು ಸ್ಥಾಪಿಸಲ್ಪಡುತ್ತದೆ.

                ರೂಪಚಿಹ್ನೆಗಳನ್ನು (ನಿಮಿತ್ತಗಳನ್ನು) ಪೂರ್ಣವಾಗಿ ಬರಿದು ಮಾಡಿ ಆಕಾಶ ಸಾದಿಸಿ, ಅಥವಾ ಆಕಾಶವನ್ನು ಸ್ಥಾಪಿಸಿ ರೂಪನಿಮತ್ತಗಳನ್ನು ಮೀರಿ, ಆತನು ಆಕಾಶ ಅನಂತ ಆಯಾತನ ಸ್ಥಿತಿ ಪ್ರವೇಶಿಸುತ್ತಾನೆ. (ಆಗ ಆತನಲ್ಲಿ ರೂಪದ ಗ್ರಹಿಕೆಗಳು ಮಾತ್ರವಲ್ಲ, ರೂಪದ ಸಂಖಾರಗಳು, ರೂಪದ ವೇದನೆಗಳು ಹಾಗು ರೂಪದ ವಿನ್ಯಾಸವು ಸಹಾ ಅಳಿಯುತ್ತದೆ). ಕೇವಲ ಅರೂಪ ಗ್ರಹಿಕೆ ಸ್ಥಾಪಿತವಾಗುತ್ತದೆ. ಕಸಿನಾದಿಂದ ಅರೂಪ ಸಾಧಿಸುವಾಗ ಆತನು ಎಲ್ಲಾ ಮಹಾಭೂತಗಳ ಅಥವಾ ಎಲ್ಲಾ ವರ್ಣಗಳ ನಿಮಿತ್ತಗಳನ್ನು ಮೀರುತ್ತಾನೆ. ಬ್ರಹ್ಮವಿಹಾರದಿಂದ ಅರೂಪ ಸಾಧಿಸುವಾಗ ಎಲ್ಲಾ ವ್ಯಕ್ತಿಗಳ ನಿಮಿತ್ತವನ್ನು ಮೀರುತ್ತಾನೆ. ಅನಾಪಾಸತಿಯಿಂದ ಅರೂಪ ಸಾಧಿಸುವಾಗ ಆತನು ದೇಹದ ಸ್ಪರ್ಶಗಳನ್ನು, ನಿಮಿತ್ತಗಳನ್ನು ಮೀರುತ್ತಾನೆ. ಹಾಗು ಉಳಿದಿರುವ ಆಕಾಶ (ಶೂನ್ಯತೆ), ಆತನು ತನ್ನ ಚಿತ್ತವನ್ನು ಅಕಾಶದಲ್ಲಿ ನೆಲೆಸಿ, ಅದನ್ನು ಅನಂತವಾಗಿ ಹರಡಿಸುತ್ತಾನೆ (ಪ್ರಸರಿಸುತ್ತಾನೆ). ಆತನು ರೀತಿಯ ಅನಂತ ಆಕಾಶದ ಸ್ಥಿತಿಯಲ್ಲಿ ವಿಹರಿಸುತ್ತಾನೆ. ಆಯಾತನ ಎಂದರೆ ಆಧಾರ ಎಂದರ್ಥ. ಒಟ್ಟಾರೆ ಹೇಳುವುದಾದರೆ ಆನಂತ ಆಕಾಶದ ಆಧಾರದಲ್ಲಿ ವಿಹರಿಸುತ್ತಾನೆ ಎಂದರ್ಥ. ಆದ್ದರಿಂದ ಸ್ಥಿತಿಗೆ ಆಕಾಶ ಅನಂತ ಆಯಾತನ ಎನ್ನುತ್ತಾರೆ ಅಥವಾ ಆಕಾಶ ನಂಚಾಯತನ ಎನ್ನುತ್ತಾರೆ. ರೀತಿಯಾಗಿ ಆತನು ಆಕಾಶ ಅನಂತ ಆಯಾತನ ಝಾನದಲ್ಲಿ ವಿಹರಿಸುತ್ತಾನೆ

HOW TO EXPERT IN KASINA MEDITATION ಕಸಿನಗಳಲ್ಲಿ ಪ್ರಾವಿಣ್ಯತಾ ಸಿದ್ಧಿಗಳಿಸುವಿಕೆ ಹೇಗೆ ?

ಕಸಿನಗಳಲ್ಲಿ ಪ್ರಾವಿಣ್ಯತಾ ಸಿದ್ಧಿಗಳಿಸುವಿಕೆ ಹೇಗೆ ?

1.            ಆತ ಅಭಿವೃದ್ಧಿ ಹೊಂದಿದ ಬಳಿಕ ಆತನಿಗೆ ಮಂಡಲಗಳು ಬೇಕಾಗಿರುವುದಿಲ್ಲ. ಆತನು ಸ್ವಾಭಾವಿಕವಾಗಿಯೆ ಗ್ರಹಿಕೆ ಧ್ಯಾನಿಸುತ್ತಾನೆ. ಉದಾಹರಣೆಗೆ ಹೊಲವನ್ನು ನೋಡಿಯೋ ಅಥವಾ ನದಿಯನ್ನು ನೋಡಿಯೋ, ಆಕಾಶವನ್ನು, ಚಂದ್ರನನ್ನು ನೋಡಿಯೋ, ಹಾಗೆಯೇ ಪ್ರಾಕೃತಿಕವಾಗಿ ನಿಮಿತ್ತ ಬಳಸುತ್ತನೆ.
2.            ಮುಂದೆ ಉಗ್ಗಹ ನಿಮಿತ್ತ ಬಳಸುತ್ತಾನೆ, ಪ್ರಾಕೃತಿಕವಲ್ಲ.
3.            ನಂತರ ಪ್ರತಿಭಾಗ ನಿಮಿತ್ತ ಬಳಸುತ್ತಾನೆ. ಉಗ್ಗಹವಲ್ಲ ಮತ್ತು ಅದನ್ನು ಸುತ್ತಮುತ್ತ ಎಲ್ಲಾ ದಿಕ್ಕಿಗೂ ವಿಕಸಿಸುತ್ತಾನೆ.
4.            ಮುಂದೆ ಧ್ಯಾನಂಗಗಳನ್ನು ಬಳಸುತ್ತಾನೆ ಹಾಗೆಯೇ ಚತುರ್ಥ ಸಮಾಧಿ ಪಡೆಯುತ್ತಾನೆ.
5.            ಎಲ್ಲಾ ಕಸಿನಾದಲ್ಲೂ ಚತುರ್ಥ ಧ್ಯಾನ ಪ್ರಾಪ್ತಿ ಮಾಡಿದರೆ ಆತ ಅಸಾಮಾನ್ಯ ಸಿದ್ಧಿಗಳನ್ನು ಮನೋ ಪ್ರಭುತ್ವವನ್ನು ಪಡೆದಿರುತ್ತಾನೆ.
6.            ಆತ ಪ್ರಥಮದಿಂದ ನೇವಸನ್ಯಾನಸನ್ಯಾ ಆಯಾತನ ವರೆಗೆ ಧ್ಯಾನಿಸಬೇಕು ಏರುಮುಖವಾಗಿ.
7.            ಹಾಗೆಯೇ ಇಳಿಮುಖವಾಗಿ ಪ್ರಥಮ ಸಮಾಧಿಗೆ ಬರಬೇಕು.
8.            ಆತ ಎಲ್ಲಾ ಕಸಿಣಾಗಳಲ್ಲಿ ಧ್ಯಾನದಿಂದ ಧ್ಯಾನಕ್ಕೆ ಜಿಗಿಯಬೇಕು.
9.            ಆತ ಎಲ್ಲಾ ಕಸಿನಗಳಲ್ಲಿ ಒಂದರಿಂದ ಇನ್ನೊಂದಕ್ಕೆ ಜಿಗಿಯಬೇಕು.


10.          4 ಇದ್ದಿಪಾದಗಳ ವೃದ್ಧಿ.

LIMITED SKY KASINA MEDITATION ಪರಿಮಿತ ಆಕಾಶ ಕಸಿನಾ

ಪರಿಮಿತ ಆಕಾಶ ಕಸಿನಾ :

                ಇಲ್ಲಿ ಸಾಧಕನು ನಿಶ್ಶಬ್ದ ವಾತಾವರಣದಲ್ಲಿದ್ದು ಯಾವುದಾದರೂ ರಂಧ್ರವಿರುವ ಗೋಡೆಯ ಮೂಲಕ ಕಾಣಿಸುವ ಆಕಾಶವನ್ನು ಧ್ಯಾನಿಸಬೇಕಾಗುತ್ತದೆ. ಅಥವಾ ಚಿಕ್ಕ ಕಿಟಕಿಯ ಮೂಲಕ ಕಾಣಿಸುವ ಆಕಾಶವನ್ನು ಧ್ಯಾನಿಸುತ್ತಾ... ಆಕಾಶ... ಆಕಾಶ... ಎಂದು ಜಪಿಸುತ್ತಾ ಧ್ಯಾನಿಸುತ್ತಾನೆ. ಹಾಗೆಯೇ ಚತುರ್ಥ ಧ್ಯಾನವನ್ನು ಪ್ರಾಪ್ತಿ ಮಾಡುತ್ತಾನೆ.
ಅಭಿಜ್ಞಾ ಲಾಭಗಳು :
1.            ಆತನಿಗೆ ಅಡಗಿರುವ ಪ್ರತಿಯೊಂದನ್ನು ನೋಡುತ್ತಾನೆ. ಭೂಮಿಯಲ್ಲಿರುವ ನೀರು, ಖನಿಜಗಳು, ಐಶ್ವರ್ಯ ಎಲ್ಲಾ ನೋಡುತ್ತಾನೆ.

2.            ಭೂಮಿಯಲ್ಲಿ ಸ್ಥಳವನ್ನು ಸೃಷ್ಟಿಸಿ ಒಳಗೆ ಹೋಗುತ್ತಾನೆ. ಗೋಡೆಗಳು, ಬಂಡೆಗಳ ಮೂಲಕ ಹಾದುಹೋಗುತ್ತಾನೆ ಇತ್ಯಾದಿ.

LIGHT KASINA MEDITATION ಅಲೋಕ ಕಸಿನಾ (ಬೆಳಕಿನ ಕಸಿನಾ)

ಅಲೋಕ ಕಸಿನಾ (ಬೆಳಕಿನ ಕಸಿನಾ) :

                ಇಲ್ಲಿ ಸಾಧಕನು ನಿಶ್ಶಬ್ದ ವಾತಾವರಣದಲ್ಲಿ ನೆಲೆಸಿ ಒಂದು ಗುಂಡಾಗಿರುವ ಪಾತ್ರೆಯಲ್ಲಿ ನೀರನ್ನು ಹಾಕಿ, ಅದನ್ನು ಸೂರ್ಯನ ಮುಂದೆ ಇರಿಸುತ್ತಾನೆ. ಅದರ ಪ್ರತಿಫಲನವನ್ನು ಗೋಡೆಯ ಮೇಲೆ ಬೀಳುವಂತೆ ಇಡುತ್ತಾನೆ. ನಂತರ ಗೋಡೆಗೆ ಅಭಿಮುಖವಾಗಿ ಕುಳಿತು ಬೆಳಕನ್ನು ವೀಕ್ಷಿಸುತ್ತಾ ಧ್ಯಾನಿಸುತ್ತಾ ಅಲೋಕ...ಅಲೋಕ...ಅಲೋಕ... ಎಂದು ಧ್ಯಾನಿಸುತ್ತಾ ಜಪಿಸುತ್ತಾ ಸಮಾಧಿಯ ಹಂತಗಳನ್ನು ಪ್ರಾಪ್ತಿ ಮಾಡುತ್ತಾನೆ.
ಪಯರ್ಾಯ ವಿಧಾನ : ಆತನು ಒಂದು ದೀಪವನ್ನು ರಂಧ್ರದ ಮಡಿಕೆಯಲ್ಲಿಟ್ಟು, ರಂಧ್ರದಿಂದ ಗೋಡೆಯ ಮೇಲೆ ಬೀಳುವ ಬೆಳಕಿನ ಅಭಿಮುಖವಾಗಿ ಕುಳಿತು ಬೆಳಕನ್ನೇ ಧ್ಯಾನಿಸುತ್ತಾನೆ. ಅಲೋಕ... ಎಂದು ಜಪಿಸುತ್ತಾ ಧ್ಯಾನಿಸುತ್ತಾ... ಇರುವಾಗ ಆತನಿಗೆ ಉಗ್ಗಹ ನಿಮತ್ತವು ಬೆಳಕಿನ ವೃತ್ತದಂತೆ ಕಾಣಿಸುತ್ತದೆ ಮತ್ತು ಪ್ರತಿಭಾಗ ನಿಮಿತ್ತವು ಬೆಳಕಿನ ಗೊಂಚಲಿನಂತೆ ಕಂಡುಬರುತ್ತದೆ. ಅದನ್ನು ಅವಲಂಬಿಸಿ ಧ್ಯಾನಿಸಿ ಚತುರ್ಥ ದ್ಯಾನ ಪಡೆಯುತ್ತಾರೆ.
ಅಭಿಜ್ಞಾ ಲಾಭಗಳು :

                ಆತನು ಹೊಳೆಯುವಂತಹ ಆಕಾರಗಳನ್ನು ಸೃಷ್ಟಿಸುತ್ತಾನೆ. ಜಡತೆ, ನಿದ್ರಾವಸ್ಥೆ, ದೂರಿಕರಿಸುತ್ತಾನೆ. ಕತ್ತಲೆಯನ್ನು ಹೋಗಲಾಡಿಸುತ್ತಾನೆ. ಬೆಳಕನ್ನು ಸೃಷ್ಟಿಸುತ್ತಾನೆ ಮತ್ತು ದಿವ್ಯದೃಷ್ಟಿ ಪ್ರಾಪ್ತಿ ಮಾಡುತ್ತಾನೆ. ಇತ್ಯಾದಿ.

WHITE KASINA MEDITATION ಒದತ (ಬಿಳಿ) ಕಸಿನ

ಒದತ (ಬಿಳಿ/ಶ್ರೇತ) ಕಸಿನ
:
                ಇಲ್ಲಿ ಸಾಧಕನು ನಿಶ್ಶಬ್ದ ವಾತಾವರಣದಲ್ಲಿದ್ದು, ಆತನು ಬಿಳಿ ಕಸಿನಗೋಸ್ಕರ ಬಿಳಿಯ ಬಟ್ಟೆಯನ್ನು ಅಥವಾ ಬಿಳಿಯ ವರ್ಣದ ಪುಷ್ಪಗಳನ್ನೋ ಅಥವಾ ಬಿಳಿಮಂಡಲ ಅಥವಾ ಬಿಳಿಯ ದಾತು/ವಸ್ತುವನ್ನು ಇಟ್ಟುಕೊಂಡು ತದೇಕವಾಗಿ ನೋಡುತ್ತಾ (ಬಿಳಿ) ಬಿಳಿ...ಬಿಳಿ...ಬಿಳಿ... ಎಂದು ಜಪಿಸುತ್ತಾ ಏಕಾಗ್ರತೆ ಸಾಧಿಸಬೇಕು... ನಂತರ ಉಗ್ಗಹ ನಿಮಿತ್ತ ಉಂಟಾಗುತ್ತದೆ. (ಹಾಗೆಯೇ ನೀಲಿ ಕಸಿನಾದಲ್ಲಿ ವಿವರಿಸುವಂತೆ) ಚತುರ್ಥ ಸಮಾಧಿ ಪಡೆಯಬೇಕು.
ಅಭಿಜ್ಞಾ ಲಾಭಗಳು :
                ಆತನು ಜಡತೆ, ನಿದ್ರಾ, ಸೋಮಾರಿತನದಿಂದ ದೂರವಾಗುತ್ತಾನೆ. ಯಾವುದೇ ವಸ್ತುವನ್ನು ಬಿಳಿಯಾಗಿ ಪರಿವತರ್ಿಸಬಲ್ಲ. ಬಿಳಿಯ ವಸ್ತುಗಳನ್ನು ಸೃಷ್ಟಿಸಬಲ್ಲ. ಬಿಳುಪನ್ನು ಸೃಷ್ಟಿಸಬಲ್ಲ, ದಿವ್ಯದೃಷ್ಟಿ ಪ್ರಾಪ್ತಿಯಾಗಿ ಅದರಿಂದ ಭೂತ, ಭವಿಷ್ಯ, ವರ್ತಮಾನದ ಎಲ್ಲವನ್ನೂ ಅರಿಯಬಲ್ಲ ಮತ್ತು ಶುಭ ವಿಮೋಕ್ಷ ಪಡೆಯಬಲ್ಲ