Saturday 21 April 2018

ಮೈತ್ರಿಧ್ಯಾನ

ಮೈತ್ರಿಧ್ಯಾನ


ಮೈತ್ರಿಯನ್ನು ಮೊದಲು ನಿಮ್ಮ ಮೇಲೆ ಪ್ರಸರಿಸಿಕೊಳ್ಳಿ. ನೀವು ನಿಮ್ಮ ಮೇಲೆ ಪ್ರೀತಿ (ಹಿತಭಾವ) ತಾಳದಿದ್ದರೆ ಪರರಿಗೆ ಹೇಗೆ ಪ್ರೀತಿಸಬಲ್ಲಿರಿ? ಆದ್ದರಿಂದ ಮೊದಲು ನಿಮಗೆ ನೀವು ಮಿತ್ರರಾಗಿ. ನಿಮ್ಮ ಮೇಲೆ ನೀವು ಅನಾರೋಗ್ಯಕರ ಪಾಪಯುತ ಕೀಳರಿಮೆ ಬೆಳೆಸಿಕೊಳ್ಳಬೇಡಿ.  ಮಾನವನ ಸ್ವರೂಪವು ಮಾನವನ ಸ್ವರೂಪವೇ. ಯಾರೊಬ್ಬರು ಪೂರ್ಣವಾಗಿ ಒಳ್ಳೆಯವರೆ ಅಲ್ಲ (ಬುದ್ಧ ಹಾಗು ಅರಹಂತರನ್ನು ಬಿಟ್ಟು). ಅಥವಾ ಯಾರು ಸಹಾ ಪೂರ್ಣವಾಗಿ ಪಾಪಿಗಳು ಅಲ್ಲ. ನೀವು ಏನಾದರೂ ತಪ್ಪು ಮಾಡಿದರೆ ನೀವು ಅದಕ್ಕೆ ಚಿಂತೆಪಟ್ಟು ನೀವು ಪಾಪಿಗಳಂತೆ ವ್ಯಕ್ತಿತ್ವ ನಿಮರ್ಾಣ ಮಾಡಬೇಕಾಗಿಲ್ಲ. ಬದಲಾಗಿ ಯೋಗ್ಯ ಅರಿವು ಪ್ರಾಪ್ತಿ ಮಾಡಿ ಸರಿಯಾದ ಅವಕಾಶದಲ್ಲಿ ನಿಮ್ಮನ್ನು ಬದಲಿಸಿಕೊಳ್ಳಿ. ನೀವು ಹಿಂದಿನದಕ್ಕೆ ಪಶ್ಚಾತ್ತಾಪ ಪಡಬೇಡಿ. ಭವಿಷ್ಯದ ಬಗ್ಗೆ ಚಿಂತೆಯು ಪಡಬೇಡಿ. ನಿಮ್ಮ ಆಂತರಿಕದ ಕಡೆ ನೋಡಿಕೊಳ್ಳಿ. ನಿಮ್ಮಲ್ಲಿರುವ ಕೀಳರಿಮೆ ಹಾಗು ಅಹಂಕಾರಗಳನ್ನು ನಾಶಮಾಡಿ. ನೀವು ಅಂತಹ ಸ್ಥಿತಿಯನ್ನು ತಲುಪಿ ಅಲ್ಲಿ ಕೆಟ್ಟ ಯೋಚನೆಗಳು ಉತ್ಪತ್ತಿಯೇ ಆಗದಿರಲಿ.
ನೀವು ಪರರಿಗೆ ನಿಮ್ಮಲ್ಲಿರುವುದನ್ನು ಮಾತ್ರ ಕೊಡಬಲ್ಲಿರಿ. ನೀವು ಅನುಭವಿಸಲಾಗದಂತಹುದು ನೀವು ಕೊಡಲಾರಿರಿ. ನಿಮ್ಮ ಮೇಲೆ ಮೈತ್ರಿಯನ್ನು ಪ್ರಸರಿಸಿದಲ್ಲಿ ನಿಮ್ಮ ಯೋಗ್ಯತೆ ಏರುತ್ತದೆ. ನಿಮ್ಮ ಉನ್ನತಿಯ ಸಂತುಷ್ಟತೆಯ ಜೊತೆಯಲ್ಲೇ ಪರರ ಉನ್ನತಿಯಲ್ಲಿ ಆನಂದಿಸಿ ಹಾಗು ಮಾನವ ಕುಲಕ್ಕೆ ಸೇವೆಮಾಡಿ. ಎಂದೂ ನೀವು ನಿಮ್ಮನ್ನು ಅತ್ಯುತ್ತಮವಾಗಬಲ್ಲಿರಿ ಎಂದು ಅರಿಯಬಲ್ಲಿರೋ ಹಾಗೆಯೇ ಪರರು ಸಹಾ ಅತ್ಯುತ್ತಮತೆಯನ್ನು ಸಾಧಿಸಬಲ್ಲರು ಎಂದು ಸಹಾ ಅರಿಯುವಿರಿ.
ಮೈತ್ರಿಯು ಕೋಪಕ್ಕೆ ಅತ್ಯುತ್ತಮ ಔಷಧ. ಮೈತ್ರಿಯು ತಮ್ಮಲ್ಲೇ ಕೋಪಗೊಳ್ಳುವವರಿಗೆ ಔಷಧವೂ ಸಹ. ನಾವು ನಮ್ಮ ಮೈತ್ರಿಯನ್ನು ಎಲ್ಲ ಜೀವಿಗಳ ಮೇಲೆ ಸ್ವತಂತ್ರವಾಗಿ, ಅತೀಮವಾಗಿ, ಅಗಾಧವಾಗಿ ಪ್ರಸರಿಸೋಣ.
ಮೈತ್ರಿಯು ಸ್ಥಿರವಾದದ್ದು. ಆದರೆ ಹಿಡಿದುಕೊಂಡಿರುವಂತದಲ್ಲ (ಅಂಟಿಕೊಳ್ಳುವುದಿಲ್ಲ).
ಮೈತ್ರಿಯು ಅಚಲವಾದುದು, ಆದರೆ ಬಂಧನಯುತವಲ್ಲ.
ಮೈತ್ರಿಯು ಗಂಭೀರ ಸಭ್ಯವಾದುದು, ಕಠಿಣವಾದುದಲ್ಲ.
ಮೈತ್ರಿಯು ಸಹಾಯಕರವಾದುದು, ಆದರೆ ತಲೆಹಾಕುವುದಂತಹುದಲ್ಲ.
ಮೈತ್ರಿಯು ಶ್ರೇಷ್ಠವಾದುದು (ಗಂಭೀರ) ಆದರೆ ಅಹಂಕಾರರಹಿತವಾದುದು.
ಮೈತ್ರಿಯು ಕ್ರಿಯಾತ್ಮಕವಾದುದು, ನಿರಾಶಜನಕವಲ್ಲ (ಅಕ್ರಿಯಾತ್ಮಕವಲ್ಲ).
ದ್ವೇಷವು ಸಂಕುಚಿತಗೊಳಿಸುವಂತಹುದು, ಆದರೆ ಮೈತ್ರಿಯು ಸ್ವತಂತ್ರಗೊಳಿಸುವಂತಹುದು.
ದ್ವೇಷವು ದುಃಖವನ್ನುಂಟುಮಾಡುತ್ತದೆ, ಆದರೆ ಮೈತ್ರಿಯು ಶಾಂತಿ (ಆನಂದ)ಯನ್ನು ನೀಡುತ್ತದೆ.
ದ್ವೇಷವು ಉದ್ರೇಕಿಸುತ್ತದೆ, ಆದರೆ ಮೈತ್ರಿಯು ಪ್ರಶಾಂತತೆಯನ್ನು ನೀಡುತ್ತದೆ.
ದ್ವೇಷವು ಬೇರ್ಪಡಿಸುತ್ತದೆ. ಆದರೆ ಮೈತ್ರಿಯು ಒಂದಾಗಿಸುತ್ತದೆ.
ದ್ವೇಷವು ಅಡಚಣೆಯನ್ನುಂಟು ಮಾಡುತ್ತದೆ, ಆದರೆ ಮೈತ್ರಿಯು ಸಹಾಯ ಮಾಡುತ್ತದೆ.
ಮೈತ್ರಿಯು ಶ್ರೇಷ್ಠ ದೃಷ್ಟಿಗೆ ಮಾರ್ಗದಶರ್ಿಯಾಗಿದೆ.
ಮೈತ್ರಿಯು ಶ್ರೇಷ್ಠ ಚಿಂತನೆಗೆ ಮಾರ್ಗದಶರ್ಿಯಾಗಿದೆ.
ಮೈತ್ರಿಯು ಶ್ರೇಷ್ಠವಾಚಕ್ಕೆ ಮಾರ್ಗದಶರ್ಿಯಾಗಿದೆ.
ಮೈತ್ರಿಯು ಶ್ರೇಷ್ಠ ಕಾರ್ಯಕ್ಕೆ ಮಾರ್ಗದಶರ್ಿಯಾಗಿದೆ.
ಮೈತ್ರಿಯು ಶ್ರೇಷ್ಠ ಜೀವನಕ್ಕೆ ಮಾರ್ಗದಶರ್ಿಯಾಗಿದೆ.
ಮೈತ್ರಿಯು ಶ್ರೇಷ್ಠ ಪ್ರಯತ್ನಶೀಲತೆಗೆ ಮಾರ್ಗದಶರ್ಿಯಾಗಿದೆ.
ಮೈತ್ರಿಯು ಶ್ರೇಷ್ಠ ಎಚ್ಚರಿಕೆಗೆ ಮಾರ್ಗದಶರ್ಿಯಾಗಿದೆ.
ಮೈತ್ರಿಯು ಶ್ರೇಷ್ಠ ಸಮಾಧಿಗೆ ಮಾರ್ಗದಶರ್ಿಯಾಗಿದೆ.
ಮೈತ್ರಿಯು ನಮಗೆ ಪರಸ್ಪರ ಸೇವೆ ಮತ್ತು (ಆತಿಥ್ಯ) ದಾನ ಮನೋಭಾವದಿಂದಿರಿ ಎಂದು ಬೋಧಿಸುತ್ತದೆ. ಮೈತ್ರಿಯು ನಮಗೆ ಸಿಹಿಯಾಗಿ (ಪ್ರಿಯವಾಗಿ) ಮತ್ತು ಸರ್ವರೂ ಒಪ್ಪುವಂತಹ ನುಡಿಗಳನ್ನು ಆಡುವಂತೆ ತಿಳಿಸುತ್ತದೆ. ಮೈತ್ರಿಯು ನಮಗೆ ಪರಸ್ಪರ ಹೊಡೆದಾಡದೆ ಜಗಳವಾಡದೆ, ಪರಸ್ಪರ ಉನ್ನತಿಗೆ ಶ್ರಮಿಸುವಂತೆ ಬೋಧಿಸುತ್ತದೆ. ನಾವು ನಮ್ಮ ಮೈತ್ರಿಯನ್ನು ನಮಗೆ ದ್ವೇಷಿಸುವಂತವರ ಮೇಲೆಯೂ ಪ್ರಶಂಸಿಸುತ್ತೇವೆ. ನಮ್ಮ ಈಗಿನ ಶತ್ರು ನಮಗೆ ಹಿಂದಿನ ಜನ್ಮದಲ್ಲಿ ಒಮ್ಮೆ ತಾಯಿಯಾಗಿರಬಹುದು, ತಂದೆಯಾಗಿರಬಹುದು, ಸೋದರಿ ಅಥವಾ ಸೋದರಿಯಾಗಿರಬಹುದು. ಆದ್ದರಿಂದ ನಾವು ಇದನ್ನು ಚಿಂತಿಸಬೇಕು.
ಈ ವ್ಯಕ್ತಿಯು ಹಿಂದೆ (ಹಿಂದಿನ ಜನ್ಮದಲ್ಲಿ) ತಾಯಿಯಾಗಿರುವಾಗ ನನ್ನನ್ನು ಹೆತ್ತಳು. ತನ್ನ ಗರ್ಭದಲ್ಲಿ ಕಾಪಾಡಿಕೊಂಡಿದ್ದಳು. ನಾನು ಮಗುವಾಗಿದ್ದಾಗ ಆಕೆ ಅಸಹ್ಯವಿಲ್ಲದೆ ನನಗೆ ಶುಚಿಗೊಳಿಸಿದ್ದಾಳೆ. ಆಕೆ ನನ್ನೊಂದಿಗೆ ಆಟವಾಡಿದ್ದಾಳೆ. ಪಾಲನೆ ಮಾಡಿದ್ದಾಳೆ ಮತ್ತು ನನ್ನನ್ನು ತನ್ನ ಬಾಹುಗಳಲ್ಲಿ ಪ್ರೀತಿಯಿಂದ ಎತ್ತಿಕೊಂಡಿದ್ದಾಳೆ.
ಹಾಗೆ ನನ್ನನ್ನು ಆಳವಾದ ಪ್ರೀತಿಯಿಂದ (ವಾತ್ಸಲ್ಯ) ಸಲಹಿದ್ದಾಳೆ.  ಈ ವ್ಯಕ್ತಿಯು ಹಿಂದಿನ ಜನ್ಮದಲ್ಲಿ ನನಗೆ ತಂದೆಯಾಗಿರುವಾಗ, ಆತನು ನನಗಾಗಿ ಅತ್ಯಂತ ಶ್ರಮಪಟ್ಟು ಪ್ರಾಣವನ್ನು ಒತ್ತೆಯಿಟ್ಟು ಐಶ್ವರ್ಯ ದುಡಿದು ಸಲಹಿದ್ದಾನೆ. ನನಗೆ ಕ್ಷೇಮವನ್ನು ಕೊಟ್ಟಿದ್ದಾನೆ.
ನನಗೆ ಹಿಂದಿನ ಜನ್ಮಗಳಲ್ಲಿ ಇವರು ಸೋದರ, ಸೋದರಿ, ಮಗ ಅಥವಾ ಮಗಳು ಆಗಿದ್ದಾಗ ನನಗೆ ಮೈತ್ರಿಯಿಂದ ಕಂಡು, ಕಾಪಾಡಿ ಪ್ರತಿಕ್ಷಣದಲ್ಲೂ ನನ್ನ ಹಿತಕ್ಕಾಗಿ ಸಹಾಯಿಸಿದ್ದಾರೆ. ಆದ್ದರಿಂದ ನಾನು ಅವರ ಮೇಲೆ ಕೋಪಗೊಳ್ಳುವುದು ಅನ್ಯಾಯವಾಗುತ್ತದೆ. ಏಕೆಂದರೆ ಈ ಜನ್ಮದಲ್ಲಿ ಅವರು ಕ್ಷುಲ್ಲುಕವಾಗಿ ವತರ್ಿಸಿದ್ದಾರೆಂದು ಅವರು ಹಿಂದೆ ಮಾಡಿದ ಮೈತ್ರಿಯು ಮರೆಯಲಾರೆವು ಎಂದು ಚಿಂತಿಸಬೇಕಾಗುತ್ತದೆ.
ಕೋಪವು ಉತ್ಪತ್ತಿಯಾದಾಗ ನಾವು ಪ್ರತಿಯಾಗಿ ಅನಿತ್ಯತೆಯನ್ನು ಧ್ಯಾನಿಸಬೇಕಾಗುತ್ತದೆ ಹೀಗೆ :
ಆ ವ್ಯಕ್ತಿಯು ಈಗ ಪೂರ್ಣವಾಗಿ ಬದಲಿಸಿದ್ದಾನೆ, ದೇಹದಲ್ಲಿಯೂ ಹಾಗು ಮಾನಸಿಕವಾಗಿಯೂ. ನಾನು ಅಲ್ಲಿ ಯಾವುದರ ಮೇಲೆ ಕೋಪಗೊಳ್ಳಲಿ? ನಾನು ಉಗುರಿನ ಮೇಲೆ, ಕೂದಲಿನ ಮೇಲೆ, ಹಲ್ಲು ಅಥವಾ ಚರ್ಮದ ಮೇಲೆ ಕೋಪಗೊಳ್ಳಲೆ?
ಈ ವಿಧದಿಂದ ನಮಗೆ ಬೇರೊಬ್ಬನ ಮೆಲೆ ಕೋಪಿಸಿಕೊಳ್ಳಬಾರದು ಎಂದು ಅರಿವಾಗುತ್ತದೆ. ಆದರೆ ನಮ್ಮ ಯೋಚನೆಗಳು ಹಾಗು ವೇದನೆಗಳನ್ನು ಬದಲಿಸಬೇಕಾಗುತ್ತದೆ.  ಆದ್ದರಿಂದ ಮೈತ್ರಿಯನ್ನು ಮೊದಲು ನಮ್ಮ ಮೇಲೆ ಪ್ರಾರಂಭಿಸಿರಬೆಕು. ನೀವು ಹೀಗೆ ಧ್ಯಾನಿಸಿ :
ನಾನು ದುಃಖದಿಂದ ವಿಮುಕ್ತನಾಗಲಿ ಮತ್ತು ಸದಾ ಸುಖಿಯಾಗಿರಲಿ.
ನನ್ನ ಸುಖ ಕ್ಷೇಮ ಬಯಸುವ ಎಲ್ಲರೂ ಸಹಾ ದುಃಖದಿಂದ ಮುಕ್ತರಾಗಲಿ ಹಾಗು ಸದಾ ಸುಖಿಯಾಗಿರಲಿ.
ನನಗೆ ತಟಸ್ಥ (ಮಿತ್ರರೂ ಅಲ್ಲದೆ, ಶತ್ರುವು ಅಲ್ಲದೆ)ರಾಗಿರುವ ಎಲ್ಲರೂ ಸಹಾ ದುಃಖದಿಂದ ವಿಮುಕ್ತರಾಗಲಿ ಹಾಗು ಸದಾ ಸುಖಿಯಾಗಿರಲಿ.
ನನಗೆ ಯಾರು ದ್ವೇಷಿಸುವರೋ (ಶತ್ರು) ಅವರು ಸಹಾ ದುಃಖದಿಂದ ವಿಮುಕ್ತರಾಗಲಿ ಹಾಗು ಸದಾ ಸುಖಿಯಾಗಿರಲಿ.
ಯಾರು ಈ ನಗರದಲ್ಲಿ ವಾಸಿಸುವರೋ ಅವರೆಲ್ಲರೂ ದುಃಖದಿಂದ ಮುಕ್ತರಾಗಲಿ ಹಾಗು ಸದಾ ಸುಖಿಯಾಗಿರಲಿ.
ಯಾರು ದೂರದಲ್ಲಿ (ಸುತ್ತಲಿನ ಸರ್ವರು) ವಾಸಿಸುತ್ತಿರುವರೋ ಅವರೆಲ್ಲರೂ ದುಃಖದಿಂದ ಮುಕ್ತರಾಗಲಿ ಹಾಗು ಸದಾ ಸುಖಿಯಾಗಿರಲಿ.
ಎಲ್ಲಾ ಜೀವಿಗಳು ಎಲ್ಲೇ ಇರಲಿ, ಅವರೆಲ್ಲರೂ ದುಃಖದಿಂದ ಮುಕ್ತರಾಗಲಿ ಹಾಗು ಸದಾ ಸುಖಿಯಾಗಿರಲಿ.
ಈ ಜಗತ್ತಿನಲ್ಲಿರುವ ಎಲ್ಲಾ ಜೀವಿಗಳು ದುಃಖದಿಂದ ಮುಕ್ತರಾಗಲಿ ಹಾಗು ಸುಖಿಯಾಗಿರಲಿ
ಇಡೀ ಬ್ರಹ್ಮಾಂಡ (ಪೂರ್ಣ ವಿಶ್ವ)ದಲ್ಲಿರುವ ಸಕಲ ಜೀವಿಗಳೂ ದುಃಖದಿಂದ ಮುಕ್ತರಾಗಲಿ ಹಾಗು ಸುಖಿಯಾಗಿರಲಿ.
ಯಾವ ಯಾವ ಜೀವಿಗಳು ದುರ್ಬಲವಾಗಿವೆಯೋ, ಅಥವಾ ಬಲಿಷ್ಠವಾಗಿವೆಯೋ, ಸೂಕ್ಷ್ಮವಾಗಿವೆಯೋ ಅಥವಾ ಸ್ಥೂಲವಾಗಿವೆಯೋ, ಉದ್ಧವಾಗಿವೆಯೊ, ಅಗಲವಾಗಿವೆಯೋ, ಅಥವಾ ಮಧ್ಯಮ ಪ್ರಮಾಣದ್ದೂ. ಯಾವುವು ಕಣ್ಣಿಗೆ ಗೋಚರಿಸುವಂತಹುದೂ ಅಥವಾ ಅಗೋಚರವೋ, ಯಾವುವು ಹತ್ತಿರ ವಾಸಿಸುತ್ತಿವೆಯೋ ಅಥವಾ ದೂರ ವಾಸಿಸುತ್ತಿವೆಯೋ ಯಾವುವು ಜನ್ಮಿಸಿವೆಯೋ, ಅಥವಾ ಯಾವುದು ಜನ್ಮಿಸುವುವೋ ಅವೆಲ್ಲಾ ಜೀವಿಗಳೂ ದುಃಖದಿಂದ ಮುಕ್ತರಾಗಲಿ ಹಾಗು ಸುಖಿಯಾಗಿರಲಿ. ಸುಖಕರ ಮನವನ್ನು ಹೊಂದುವಂತಾಗಲಿ.
ಯಾರೂ ಸಹ ಪರರಿಗೆ ವಂಚಿಸದಿರಲಿ, ಯಾರು ಯಾರಿಗೂ ಸಹಾ ಕೀಳಾಗಿ ಕಾಣದಿರಲಿ, ಕೋಪದಿಂದಾಗಲಿ ಅಥವಾ ದ್ರೋಹದಿಂದಾಗಲಿ, ಯಾರಿಗೂ ಸಹಾ ಹಿಂಸಾಯುತ (ಅಹಿತ)ವಾಗಿ ಯೋಚಿಸದಿರಲಿ.
ತಾಯಿಯೊಬ್ಬಳು ತನ್ನ ಪ್ರಾಣವನ್ನು ಲೆಕ್ಕಿಸದೆ ತನ್ನ ಮಗುವನ್ನು ಹೇಗೆ ರಕ್ಷಿಸುವಳೊ, ಅದೇ ರೀತಿಯಾದ ಅಸೀಮ ಹೃದಯವನ್ನು ಸರ್ವಜೀವಿಗಳ ಮೇಲೆ ಬೆಳೆಸುವಂತಾಗಲಿ.
ಮೈತ್ರಿಯಿಂದ ಇಡೀ ಜಗತ್ತನ್ನೇ ಯಾವತಡೆ (ಅಪ್ರಿಯ)ವಿಲ್ಲದೆ ಮೇಲೆ, ಕೆಳಗೆ, ಸುತ್ತಲು (ಸೂರ್ಯನಂತೆ) ಪ್ರಸರಿಸಲಿ.
ಶ್ರೀಲಂಕ (ಸಿಂಹಳ)ದ ಸಂಪ್ರದಾಯದ ಮಂತ್ರವಂತೂ ಮೈತ್ರಿ ಸಾಧನೆಗೆ ಉತ್ತಮವಾದ ತಳಹದಿಯಾಗಿದೆ :
ಅಹಂ ಅವೇರೂ ಹೊಮಿ
ನಾನು ದ್ವೇಷದಿಂದ ಮುಕ್ತನಾಗಲಿ
ಅಬ್ಯಾಪಾಚ್ಚೊ ಹೊಮಿ
ನಾನು ಹಿಂಸೆ ಭಾವನೆಯಿಂದ ಮುಕ್ತನಾಗಲಿ
ಅನಿಘೋ ಹೊಮಿ
ನಾನು ಶಾರೀರಿಕ ಮತ್ತು ಮಾನಸಿಕ ಕ್ಲೇಷಗಳಿಂದ ಮುಕ್ತನಾಗಲಿ.
ಸುಖಿ ಅತ್ತನಂ ಪರಿಹರಾಮಿ
ನಾನು ನನ್ನ ಸುಖವನ್ನು ರಕ್ಷಿಸಿಕೊಳ್ಳಲಿ
ಸಬ್ಬೆ ಸತ್ತಾ ಅವೇರಾ ಹೊನ್ತು
ಸಬ್ಬೆ ಸತ್ತಾ ಅಬ್ಯಾಪಾಜೋ ಹೊನ್ತು
ಸಬ್ಬೆ ಸತ್ತಾ ಅನಿಪ್ಪೋ ಹೊನ್ತು
ಸಬ್ಬೆ ಸತ್ತಾ ಅತ್ತನಂ ಪರಿಹರಂತು
ಎಲ್ಲಾ ಜೀವಿಗಳೂ ದ್ವೇಷರಹಿತರಾಗಲಿ
ಎಲ್ಲಾ ಜೀವಿಗಳು ಹಿಂಸಾರಹಿತವಾಗಲಿ
ಎಲ್ಲಾ ಜೀವಿಗಳೂ ದುಃಖರಹಿತರಾಗಲಿ
ಎಲ್ಲಾ ಜೀವಿಗಳೂ ತಮ್ಮ ತಾವು (ಸುಖವನ್ನು) ರಕ್ಷಿಸಿಕೊಳ್ಳುವಂತಾಗಲಿ.
ಈ ಚಿಂತನೆಗಳು ಮತ್ತು ಧ್ಯಾನಗಳು ಬೌದ್ಧರ ಸಂಪ್ರದಾಯದಲ್ಲಿರು ವಂತಹುದು.
ನಾವು ಹೀಗೆ ಹೇಳಬಹುದು, ಏನೆಂದರೆ ಬೌದ್ಧರ ಶೀಲಕ್ಕೆ ಮೈತ್ರಿಯೇ ತಳಹದಿ. ಒಂದು ರೀತಿಯಲ್ಲಿ ಎಲ್ಲಾ ಮತಧರ್ಮಗಳು ಸಹಾ ಒಂದಲ್ಲ ಒಂದು ರೀತಿಯಲ್ಲಿ ಪ್ರೀತಿಯ ಹಾಗು ಸುಖದ ಯೋಚನೆಗಳನ್ನು ಪ್ರಸರಿಸುತ್ತದೆ. ಆದ್ದರಿಂದ ಇದು ಕೇವಲ ಬೌದ್ಧರಿಗೆ ಸೀಮಿತವಾಗಿಲ್ಲ. (ಆದರೆ ಬೌದ್ಧರಲ್ಲೆ ಅದು ಪೂರ್ಣ ಪರಿಶುದ್ಧ, ಪರಿಪೂರ್ಣ ರೂಪದಲ್ಲಿದೆ)
ಆದರೆ ಬುದ್ಧರ ಹಾದಿಯನ್ನು ಹಿಂಬಾಲಿಸುವವರು ದುಃಖವನ್ನು ಅಂತ್ಯಗೊಳಿಸುತ್ತಾರೆ. ಮೈತ್ರಿ ಧ್ಯಾನವು ತಳಹದಿಯಷ್ಟೇ ಅಲ್ಲದೆ, ಎಚ್ಚರಗೊಳಿಸಿ ದುಃಖದಿಂದ ಮುಕ್ತರಾಗಲು ಸಹಾಯಿಸುತ್ತದೆ.
ನಾವು ನಿಮಗೆ ಈ ಕೆಳಕಂಡ ಪವಿತ್ರ ವಾಕ್ಯಗಳನ್ನು ನಿಮ್ಮ ದಿನಚರಿಯಿಂದ ಪ್ರಾರಂಭಿಸಿ ಇದನ್ನು ಧ್ಯಾನಿಸಿ ಎನ್ನುವೆವು.
ಕರುಣಯುತ ಪ್ರೀತಿಯು ಹಂಚಿಕೊಳ್ಳುವಿಕೆ
ನಾನು ಸುಖಿಯಾಗಿರಲಿ, ಕ್ಷೇಮವಾಗಿರಲಿ, ಶಾಂತವಾಗಿರಲಿ, ಹಾಗು ಉನ್ನತನಾಗಲಿ.
ನನಗೆ ಯಾವ ಹಾನಿಯು ಸಂಭವಿಸದಿರಲಿ.
ನನಗೆ ಯಾವ ಕಷ್ಟಗಳು ಬಾರದಿರಲಿ
ನನಗೆ ಯಾವ ತೊಂದರೆಗಳೂ ಬರದಿರಲಿ
ಮತ್ತು ನಾನು ಯಶಸ್ಸನ್ನು ತಲುಪಲಿ
ನಾನು ಸಹನೆಯುಳ್ಳವನಾಗಲಿ,
ಧೈರ್ಯವಂತನಾಗಲಿ, ಜ್ಞಾನಿ ಯಾಗು ದೃಢನಾಗಲಿ ಮತ್ತು ಎಲ್ಲಾ ಕಷ್ಟಗಳನ್ನು ತೊಂದರೆಗಳನ್ನು ಹಾಗು ಸೋಲುಗಳನ್ನು ದಾಟಿಹೋಗಲಿ.
ನನ್ನ ಪೋಷಕರು ಸುಖಿಯಾಗಿರಲಿ, ಕ್ಷೇಮವಾಗಿರಲಿ,
ಶಾಂತರಾಗಿರಲಿ ಮತ್ತು ಉನ್ನತಿಗೇರಲಿ.
ಅವರಿಗೆ ಯಾವ ಹಾನಿಯು ಆಗದಿರಲಿ.
ಅವರಿಗೆ ಯಾವ ಕಷ್ಟಗಳು ಬಾರದಿರಲಿ.
ಅವರಿಗೆ ಯಾವ ತೊಂದರೆಯೂ ಬಾರದಿರಲಿ.
ಅವರು ಎಂದೆಂದೂ ಯಶಸ್ಸನ್ನು ಪ್ರಾಪ್ತಿಮಾಡಲಿ.
ಅವರು ಸಹನಾಶೀಲರಾಗಲಿ, ಧೈರ್ಯವಂತರಾಗಲಿ, ಜ್ಞಾನಿಗಳಾಗಲಿ ಹಾಗು ಗುರಿಯನ್ನು ಸೇರುವಂತಹ ದೃಢತೆಯಿರಲಿ.
ಅವರು ತಪ್ಪಿಸಿಕೊಳ್ಳಲಾಗದಂತಹ ಕಷ್ಟಗಳಿಂದ, ತೊಂದರೆಗಳಿಂದ, ಸೋಲುಗಳಿಂದ ಪಾರಾಗಲಿ.
ನನ್ನ ಗುರುಗಳು ಕ್ಷೇಮವಾಗಿರಲಿ, ಸುಖಿಯಾಗಿರಲಿ, ಶಾಂತರಾಗಿರಲಿ ಮತ್ತು ಉನ್ನತಿಗೇರಲಿ.
ಅವರಿಗೆ ಯಾವ ಹಾನಿಯು ಬಾರದಿರಲಿ.
ಅವರಿಗೆ ಯಾವ ಕಷ್ಟಗಳು ಬಾರದಿರಲಿ.
ಅವರಿಗೆ ಯಾವ ತೊಂದರೆಯೂ ಬಾರದಿರಲಿ.
ಅವರು ಎಂದೆಂದೂ ಯಶಸ್ಸನ್ನು ಪ್ರಾಪ್ತಿಮಾಡಲಿ.
ಅವರು ಸಹನಾಶೀಲರಾಗಲಿ, ಧೈರ್ಯವಂತರಾಗಲಿ, ಜ್ಞಾನಿಗಳಾಗಲಿ ಹಾಗು ಗುರಿಯನ್ನು ಸೇರುವಂತಹ ದೃಢತೆಯಿರಲಿ.
ಅವರು ತಪ್ಪಿಸಿಕೊಳ್ಳಲಾಗದಂತಹ ಕಷ್ಟಗಳಿಂದ, ತೊಂದರೆಗಳಿಂದ, ಸೋಲುಗಳಿಂದ ಪಾರಾಗಲಿ.
ನನ್ನ ಕುಟುಂಬವು ಕ್ಷೇಮವಾಗಿರಲಿ, ಸುಖಿಯಾಗಿರಲಿ, ಶಾಂತರಾಗಿರಲಿ ಮತ್ತು ಉನ್ನತಿಗೇರಲಿ.
ಅವರಿಗೆ ಯಾವ ಹಾನಿಯು ಬಾರದಿರಲಿ.
ಅವರಿಗೆ ಯಾವ ಕಷ್ಟಗಳು ಬಾರದಿರಲಿ.
ಅವರಿಗೆ ಯಾವ ತೊಂದರೆಯೂ ಬಾರದಿರಲಿ.
ಅವರು ಎಂದೆಂದೂ ಯಶಸ್ಸನ್ನು ಪ್ರಾಪ್ತಿಮಾಡಲಿ.
ಅವರು ಸಹನಾಶೀಲರಾಗಲಿ, ಧೈರ್ಯವಂತರಾಗಲಿ, ಜ್ಞಾನಿಗಳಾಗಲಿ ಹಾಗು ಗುರಿಯನ್ನು ಸೇರುವಂತಹ ದೃಢತೆಯಿರಲಿ.
ಅವರು ತಪ್ಪಿಸಿಕೊಳ್ಳಲಾಗದಂತಹ ಕಷ್ಟಗಳಿಂದ, ತೊಂದರೆಗಳಿಂದ, ಸೋಲುಗಳಿಂದ ಪಾರಾಗಲಿ.
ನನ್ನ ಮಿತ್ರರು ಕ್ಷೇಮವಾಗಿರಲಿ, ಸುಖಿಯಾಗಿರಲಿ, ಶಾಂತರಾಗಿರಲಿ ಮತ್ತು ಉನ್ನತಿಗೇರಲಿ.
ಅವರಿಗೆ ಯಾವ ಹಾನಿಯು ಬಾರದಿರಲಿ.
ಅವರಿಗೆ ಯಾವ ಕಷ್ಟಗಳು ಬಾರದಿರಲಿ.
ಅವರಿಗೆ ಯಾವ ತೊಂದರೆಯೂ ಬಾರದಿರಲಿ.
ಅವರು ಎಂದೆಂದೂ ಯಶಸ್ಸನ್ನು ಪ್ರಾಪ್ತಿಮಾಡಲಿ.
ಅವರು ಸಹನಾಶೀಲರಾಗಲಿ, ಧೈರ್ಯವಂತರಾಗಲಿ, ಜ್ಞಾನಿಗಳಾಗಲಿ ಹಾಗು ಗುರಿಯನ್ನು ಸೇರುವಂತಹ ದೃಢತೆಯಿರಲಿ.
ಅವರು ತಪ್ಪಿಸಿಕೊಳ್ಳಲಾಗದಂತಹ ಕಷ್ಟಗಳಿಂದ, ತೊಂದರೆಗಳಿಂದ, ಸೋಲುಗಳಿಂದ ಪಾರಾಗಲಿ.
ಯಾರು ನನಗೆ ಮಿತ್ರರಲ್ಲವೋ ಅವರು ಕ್ಷೇಮವಾಗಿರಲಿ, ಸುಖಿಯಾಗಿರಲಿ, ಶಾಂತರಾಗಿರಲಿ ಮತ್ತು ಉನ್ನತಿಗೇರಲಿ.
ಅವರಿಗೆ ಯಾವ ಹಾನಿಯು ಬಾರದಿರಲಿ.
ಅವರಿಗೆ ಯಾವ ಕಷ್ಟಗಳು ಬಾರದಿರಲಿ.
ಅವರಿಗೆ ಯಾವ ತೊಂದರೆಯೂ ಬಾರದಿರಲಿ.
ಅವರು ಎಂದೆಂದೂ ಯಶಸ್ಸನ್ನು ಪ್ರಾಪ್ತಿಮಾಡಲಿ.
ಅವರು ಸಹನಾಶೀಲರಾಗಲಿ, ಧೈರ್ಯವಂತರಾಗಲಿ, ಜ್ಞಾನಿಗಳಾಗಲಿ ಹಾಗು ಗುರಿಯನ್ನು ಸೇರುವಂತಹ ದೃಢತೆಯಿರಲಿ.
ಅವರು ತಪ್ಪಿಸಿಕೊಳ್ಳಲಾಗದಂತಹ ಕಷ್ಟಗಳಿಂದ, ತೊಂದರೆಗಳಿಂದ, ಸೋಲುಗಳಿಂದ ಪಾರಾಗಲಿ.
ಎಲ್ಲಾ ಜೀವಿಗಳೂ ಕ್ಷೇಮವಾಗಿರಲಿ, ಸುಖಿಯಾಗಿರಲಿ, ಶಾಂತರಾಗಿರಲಿ ಮತ್ತು ಉನ್ನತಿಗೇರಲಿ.
ಅವರಿಗೆ ಯಾವ ಹಾನಿಯು ಬಾರದಿರಲಿ.
ಅವರಿಗೆ ಯಾವ ಕಷ್ಟಗಳು ಬಾರದಿರಲಿ.
ಅವರಿಗೆ ಯಾವ ತೊಂದರೆಯೂ ಬಾರದಿರಲಿ.
ಅವರು ಎಂದೆಂದೂ ಯಶಸ್ಸನ್ನು ಪ್ರಾಪ್ತಿಮಾಡಲಿ.
ಅವರು ಸಹನಾಶೀಲರಾಗಲಿ, ಧೈರ್ಯವಂತರಾಗಲಿ, ಜ್ಞಾನಿಗಳಾಗಲಿ ಹಾಗು ಗುರಿಯನ್ನು ಸೇರುವಂತಹ ದೃಢತೆಯಿರಲಿ.
ಅವರು ತಪ್ಪಿಸಿಕೊಳ್ಳಲಾಗದಂತಹ ಕಷ್ಟಗಳಿಂದ, ತೊಂದರೆಗಳಿಂದ, ಸೋಲುಗಳಿಂದ ಪಾರಾಗಲಿ.
ನಿಮ್ಮ ಧ್ಯಾನವನ್ನು ಮುಂದುವರಿಸಲು (ಅಭಿವೃದ್ಧಿಗೊಳಿಸಲು) ನೀವು ಈ ಮೇಲಿನ ಯೋಚನೆಯಲ್ಲಿ (ಭಾವನೆಯಲ್ಲಿ) ಮೈತ್ರಿಯಲ್ಲಿ ಮನಸ್ಸನ್ನು ನಿಲ್ಲಿಸಬೇಕು. ಹಾಗು ಪ್ರತಿಯೊಂದು ಜೀವಿಗೂ ಪ್ರತಿಯೊಂದು ದಿಕ್ಕಿಗೂ ಹರಡಬೇಕು.
ನಾವು ಎಲ್ಲಾ ಜನರು ಈ ಮೈತ್ರಿಯ ಧ್ಯಾನ, ಆದರಣೆಯಿಂದ ಲಾಭ ಪಡೆಯಲೆಂದು ಆಶಿಸುತ್ತೇವೆ ಮತ್ತು ಈ ಬೌದ್ಧರ ಹಾರೈಕೆಯ ಗಾಥೆಯಿಂದ ಮುಕ್ತಾಯ ಮಾಡುತ್ತೇವೆ.
ದುಃಖವು ಇದ್ದರೂ ದುಃಖಿತನು ಇಲ್ಲದಿರಲಿ,
ಭಯವಿದ್ದರೂ, ಭೀತಿಗೊಳ್ಳುವವನು ಇಲ್ಲದಿರಲಿ,
ಶೋಕವು ಇದ್ದರೂ, ಶೋಕಪಡುವವನು ಇಲ್ಲದಿರಲಿ,
ಎಲ್ಲಾ ಜೀವಿಗಳೂ ಕ್ಷೇಮವಾಗಿರಲಿ ಹಾಗು ಸುಖಿಯಾಗಿರಲಿ.

No comments:

Post a Comment