Saturday 21 April 2018

ಮೈತ್ರಿ, ಧ್ಯಾನ ಮತ್ತು ಎಚ್ಚರಿಕೆಯಲ್ಲಿ ನೆಲೆಗೊಳ್ಳುವಿಕೆ

ಮೈತ್ರಿ, ಧ್ಯಾನ ಮತ್ತು ಎಚ್ಚರಿಕೆಯಲ್ಲಿ ನೆಲೆಗೊಳ್ಳುವಿಕೆ

ಮೈತ್ರಿಯನ್ನು, ಕರುಣೆಯನ್ನು ಮುದಿತಾವನ್ನು ಹಾಗು ಉಪೇಕ್ಷವನ್ನು ಅಭಿವೃದ್ಧಿಗೊಳಿಸುವುದರಿಂದ ಅದರದೆ ವಿಶಿಷ್ಟ ಲಾಭ ಸಿಗುತ್ತದೆ.  ನಮ್ಮ ಅಭ್ಯುದಯದ ಸಾಮಥ್ರ್ಯದಂತೆ ನಮ್ಮ ದುಃಖವು ಕ್ಷೀಣವಾಗುತ್ತದೆ. ಹಾಗು ಪರರನ್ನು ನಾವು ದುಃಖದಿಂದ ಮುಕ್ತರಾಗಲು ಸಹಾಯ ಮಾಡಬಹುದು.
ಆದರೆ ಈ ದುಃಖವೇ ನಮಗೆ ಬೀಗದ ಕೈಯಾಗಿದೆ. ಬುದ್ಧರ ಬೋಧನೆಯಲ್ಲಿನ ಮೈತ್ರಿಯು ಕೇವಲ ಏನನ್ನೂ ಬೆಳೆಸುವಂತಹದಲ್ಲ, ಅಥವ ಅದು ಕೇಳಲು ಚೆನ್ನಾಗಿದೆ ಎಂದು ಅಥವಾ ಕುಟುಂಬದ ಮೌಲ್ಯವೆಂದಾಗಲಿ ಅಥವಾ ಸಂತುಷ್ಟತೆಯ ಯೋಚನೆಗಳಿಂದಾಗಲಿ ಅಲ್ಲ. ಈ ನಾಲ್ಕು ಬ್ರಹ್ಮವಿಹಾರಗಳು (ಪರಮ ದಿವ್ಯ ಸ್ಥಿತಿಗಳು) ಬುದ್ಧಭಗವಾನರ ನಾಲ್ಕು ಸತ್ಯಗಳಿಗೆ ಕೊಂಡೊಯ್ಯುವ ದಾರಿಯಾಗಿದೆ ಅದಕ್ಕೆ ತುಂಬ ಸಮೀಪವಾಗಿದೆ.
ಬುದ್ಧರ ಬೋಧನೆಯಲ್ಲಿ ದುಃಖವು ಈರೀತಿಯಿದೆ :
ಜನ್ಮ, ರೋಗ, ಮುಪ್ಪು, ಮರಣಗಳು ದುಃಖ,
ಶೋಕ, ನೋವು ಪಶ್ಚಾತ್ತಾಪ ಚಿಂತೆಗಳು ದುಃಖ
ಪ್ರಿಯರ ವಿಯೋಗ, ದುಃಖ
ಅಪ್ರಿಯದ ಆಗಮನ ದುಃಖ
ಒಟ್ಟಿನಲ್ಲಿ ದೇಹ ಮನಸ್ಸಿನ ಆಸಕ್ತಿಯೆ ದುಃಖ
ಈ ದುಃಖ ಅಥವಾ ಅತೃಪ್ತಿಕರವು ಬುದ್ಧಭಗವಾನರ ಅರ್ಥದಲ್ಲಿ ಪಾಪವೆಂದಲ್ಲ, ಆದರೆ ಅವು ಅಸುಖದೆಡೆಗೆ (ದುಃಖಕ್ಕೆ) ಕರೆದೊಯ್ಯುತ್ತದೆ.  ದುಃಖದ ನಾಶವನ್ನು ಮಾಡಬೇಕಾದರೆ, ದುಃಖದ ಸ್ವರೂಪವನ್ನು, ಅದರ ಉತ್ಪತ್ತಿಯನ್ನು, ಅದರ ನಿರೋಧವನ್ನು ಹಾಗು ಅದರ ಮಾರ್ಗವನ್ನು ಅರಿಯಬೇಕಾಗುತ್ತದೆ ಹಾಗು ಅದರಂತೆ ನಡೆಯಬೇಕಾಗುತ್ತದೆ.
ಇದರ ಪ್ರಧಾನ ಸಾಧನೆಯು ನಮ್ಮ ಮನಸ್ಸನ್ನು ಅಭಿವೃದ್ಧಿಗೊಳಿಸುವುದು ಮತ್ತು ಧ್ಯಾನದ ಮೂಲಕ ದುಃಖದ ಅಂತ್ಯಗೊಳಿಸುವುದು.
ಬೌದ್ಧರಲ್ಲಿ ಧ್ಯಾನವೆಂದರೆ ಕಠಿಣ ಚಿಂತನೆ (ಬಲಯುತ ಮಾನಸಿಕ ಸಂಘರ್ಷವಲ್ಲ)ಯಲ್ಲ. ಧ್ಯಾನದ ಅರ್ಥ ಶಾರೀರಿಕ ಹಾಗು ಮನಸ್ಸನ್ನು ಶಾಂತಗೊಳಿಸುವುದು ಹಾಗು ತನ್ನ ಆಂತರಿಕದ ಉತ್ಪತ್ತಿ ಹಾಗು ನಷ್ಟಗಳನ್ನು ಅರಿತು ನಿಸ್ಸಾರವನ್ನು ಮೀರಿ ಹೋಗುವುದು. 
ಅದರಲ್ಲಿ ಪ್ರಾಥಮಿಕವಾಗಿ ಉಸಿರಾಟ ಧ್ಯಾನ ಬರುತ್ತದೆ (ಪ್ರಾಣಾಯಮವಲ್ಲ). ಅದರಲ್ಲಿ ಮನಸ್ಸನ್ನು ಉಸಿರಿನ ಪ್ರವೇಶ ಹಾಗು ನಿರ್ಗಮನದ ಕಡೆಗೆ ಕೇಂದ್ರೀಕೃತಗೊಳಿಸಬೇಕಾಗುತ್ತದೆ. ನಂತರ ಹಾಗೆ ಮುಂದುವರೆದ ನಂತರ ಶಾರೀರದ ಹಾಗು ಮನಸ್ಸಿನ ಸೂಕ್ಷ್ಮಾತೀಸೂಕ್ಷ್ಮ ಕ್ರಿಯೆಗಳನ್ನು ಅರಿಯಬೇಕಾಗುತ್ತವೆ.
ಮೈತ್ರಿಯು ಧ್ಯಾನದ ಕ್ಷೇತ್ರದಲ್ಲಿ ಪ್ರಾಥಮಿಕ ಅವಸ್ಥೆಯಷ್ಟೆ. ಆದರೆ ಇದೇ ಪರಮೋತ್ತರ ಹಂತವಲ್ಲ. ಆದರೆ ಇದು ಅಲಕ್ಷ್ಯ ಮಾಡುವಂತಹುದು ಅಲ್ಲ. ಇದರಿಂದ ಶಾಂತತೆಯು ಆನಂದವು ಉಂಟಾಗಿ ಮುಖ್ಯವಾದ ಮಾನಸಿಕ ವಿಷವಾದ ಹಗೆತನ, ಹಿಂಸೆ, ಕೋಪಗಳನ್ನು ನಾಶ ಮಾಡುತ್ತದೆ. ಹಾಗು ಒಬ್ಬರು ಮಾನಸಿಕ ಸ್ಥಿತಿಗಳನ್ನು ಅರಿಯುತ್ತಾ ಅಂಟಿಕೊಳ್ಳುವಂತಹ ಮಹೋನ್ನತೆಗೇರುತ್ತಾನೆ.
ಮೈತ್ರಿಯಿಂದ ಸಾಮಾಜಿಕ ಲಾಭಗಳು ಆಗುವುದರ ಜೊತೆಗೆ ಸಾಧನೆಗಾರನಿಗೆ ಅಥವ ಸಾಧನೆಗಾತಿಗೆ ಮತ್ತು ಸರ್ವಜೀವಿಗಳ ದುಃಖದ ವಿಮುಕ್ತಿಯ ಮಾರ್ಗವು ಅರಿವಾಗುತ್ತದೆ. 

No comments:

Post a Comment