Monday 7 December 2015

Dhammanusati in kannada ಧಮ್ಮಾನುಸತಿ

ಧಮ್ಮಾನುಸತಿ
                ಯಾವ ಭಿಕ್ಷುವು ಧಮ್ಮದಲ್ಲಿ ನೆಲೆಸಿರುವನೋ,
                ಯಾರು ಧಮ್ಮದಲ್ಲಿ ರತ (ಆನಂದ)ನಾಗಿರುವನೋ, ಯಾರು
                ಧಮ್ಮದ ಅನುಚಿಂತನೆ (ಧ್ಯಾನ)ದಲ್ಲಿರುವನೋ
                ಧಮ್ಮವನ್ನೇ ಅನುಸ್ಮೃತಿ (ಎಚ್ಚರದ ನೆನಪು) ಮಾಡುತಿಹನೋ
                ಅಂತಹವನು ಸ್ವಧಮ್ಮದಿಂದ ಎಂದಿಗೂ ಜಾರಿಬೀಳುವುದಿಲ್ಲ.        
                                                                                  - ಧಮ್ಮಪದ 364
                ವಿಶುದ್ಧಿಯ, ವಿಮುಕ್ತಿಯ, ದುಃಖ ನಿರೋಧದ ಯಾವ ನಿಯಮಗಳನ್ನು ಭಗವಾನರು ಸ್ವಸಂಶೋಧಿಸಿ, ಅದನ್ನು ಜಗದ ಹಿತಕ್ಕೆ ಬೋಧಿಸಿದರೋ, ಆ ಆರ್ಯ ಸತ್ಯಗಳೇ ಧಮ್ಮ ಎನಿಸಿಕೊಳ್ಳುತ್ತದೆ. ಇವುಗಳ ಚಿಂತನೆಯನ್ನು ಗಂಭೀರವಾಗಿ ವಿಶ್ಲೇಷಿಸುತ್ತಾ ವಿವರವಾಗಿ ಧ್ಯಾನದಲ್ಲಿ ಅರಿಯುವುದೇ ಧಮ್ಮಾನುಸತಿಯಾಗಿದೆ. ಯಾರು ಧಮ್ಮಾನುಸತಿಯನ್ನು ಅಭಿವೃದ್ಧಿಗೊಳಿಸಬೇಕೆಂದಿರುವರೋ ಅವರು ನಿರ್ಜನ ನಿಶಬ್ದ ವಾತಾವರಣದಲ್ಲಿ ಪದ್ಮಾಸನದಲ್ಲಿ ಆಸೀನರಾಗಿ ಧಮ್ಮದ ಮಹೋನ್ನತ ಗುಣಗಳನ್ನು ಸ್ಪಷ್ಟವಾಗಿ, ವಿವರವಾಗಿ, ವಿಶ್ಲೇಷಿಸುತ್ತಾ ಹೀಗೆ ಅರಿಯುತ್ತಾರೆ ಮತ್ತು ಧ್ಯಾನಿಸುತ್ತಾರೆ.
ಭಗವಾನ್ ಬುದ್ಧರ ಧಮ್ಮವು ಹೀಗಿದೆ :
1.            ಸ್ವಾಖ್ಖಾತೋ ಭಗವತ ಧಮ್ಮೋ : ಸವಿವರವಾಗಿ ಬೋಧಿಸಲ್ಪಟ್ಟಿದೆ. ಭಗವಾನರ ಧಮ್ಮವು.
2.            ಸಂದಿಟ್ಠಿಕೋ : ಸತ್ಯವು ನೇರವಾಗಿ ಇಲ್ಲೇ ಈಗಲೇ ದೃಷ್ಟಿಸಲ್ಪಡುತ್ತದೆ.
3.            ಅಕಾಲಿಕೋ : ಕಾಲವಿಳಂಬವಿಲ್ಲದೆ ಫಲಕಾರಿಯಾಗಿದೆ ಮತ್ತು ಸರ್ವಕಾಲಿಕವಾಗಿದೆ.
4.            ಏಹಿಪಸ್ಸಿಕೋ : ಬನ್ನಿ ಪರೀಕ್ಷಿಸಿ, ಸ್ವೀಕರಿಸಿ ಎಂದು ಧೈರ್ಯವಾಗಿ ಆಹ್ವಾನಿಸುತ್ತದೆ.
5.            ಓಪನಯಿಕೋ : ಉನ್ನತಿಯಡೆ, ಪರಿಶುದ್ಧದೆಡೆಗೆ ಸಾಗಿಸು ವುದಂತಹುದು.
6.            ಪಚ್ಚತ್ತಂ ವೇದಿತಬ್ಬೂ ವಿಞ್ಞೊಹಿ ತಿ : ಜ್ಞಾನಿಗಳಿಂದ ನೇರವಾಗಿ ಗ್ರಹಿಸುವಂತಹುದು.
1)            ಸ್ವಾಖಾತೋ ಭಗವತಾ ಧಮ್ಮೋ : ಭಗವಾನರ ಧಮ್ಮವು ಆದಿಯಲ್ಲಿ ಮಂಗಳಕರ. ಹೇಗೆಂದರೆ ಕೇಳಿದ ಕ್ಷಣದಿಂದಲೇ ಸಂಶಯಗಳು ಪರಿಹರಿಸಲ್ಪಟ್ಟು ಜ್ಞಾನದ ಅರಿವಾಗಿ ಮೋಹವು ಕ್ಷೀಣಿಸುತ್ತದೆ. ಸಂಕೋಲೆಗಳು ಕತ್ತರಿಸಲ್ಪಟ್ಟು ಶೀಲದಲ್ಲಿ ಪ್ರತಿಷ್ಠಾಪಿತರಾಗುತ್ತಾರೆ. ಹಾಗೆಯೇ ಧಮ್ಮವು ಮಧ್ಯದಲ್ಲಿ ಮಂಗಳಕರ ಹೇಗೆಂದರೆ ತ್ಯಾಗದಲ್ಲಿ ಮತ್ತು ಧ್ಯಾನದಲ್ಲಿ ತಲ್ಲೀನರಾಗಿ ಶ್ರೇಷ್ಠ ಸಮಾಧಿ ಸುಖ ಪಡೆಯುತ್ತಾ, ಸಮಥ ವಿಪಶ್ಶನ ಸಾಧಿಸುತ್ತಾ ಲೋಕೋತ್ತರ ಮಾರ್ಗದಲ್ಲಿ ಪ್ರತಿಷ್ಠಾಪಿತರಾಗುತ್ತಾರೆ. ಭಗವಾನರ ಧಮ್ಮವು ಅಂತ್ಯದಲ್ಲಿಯೂ ಮಂಗಳಕರ ಹೇಗೆಂದರೆ ಮಾರ್ಗಫಲ ಮತ್ತು ಮಹೋನ್ನತ ನಿಬ್ಬಾಣವನ್ನು ಸಾಕ್ಷಾತ್ಕರಿಸುತ್ತಾರೆ, ಸಾಧಿಸುತ್ತಾರೆ. ಈ ರೀತಿಯಲ್ಲಿ ಭಗವಾನರು ಮಂಗಳಕರವಾದ ಧಮ್ಮವನ್ನು ವಿವರವಾಗಿ ಪರಿಣಾತ್ಮಕವಾಗಿ ಬೊಧಿಸಿದ್ದಾರೆ. ಭಗವಾನರ ಮತ್ತೊಂದು ವಿಶೇಷತೆ ಎಂದರೆ ಅವರು ಎಂದೂ ಅನಾವಶ್ಯಕ ವಿಷಯಗಳನ್ನು ಹೇಳಿ ಸಮಯ ವ್ಯರ್ಥ ಮಾಡಲಿಲ್ಲ. ಗೊಂದಲವುಂಟು ಮಾಡಲಿಲ್ಲ. ಗುರಿಗೆ ಸಂಬಂಧವಿಲ್ಲದ ಯಾವುದನ್ನು ಹೇಳಿಲ್ಲ. ಅವರು ಪರಿಶುದ್ಧವಾದ, ಮುಕ್ತ ಪರಿಪೂರ್ಣವಾದ ಧಮ್ಮವನ್ನು ವ್ಯಕ್ತಿಗೆ ಅನುಗುಣವಾಗಿ ತಿಳಿಸಿದರು.
2)            ಸಂದಿಟ್ಠಕೋ : ಭಗವಾನರು ಧಮ್ಮವು ಅತ್ಯಂತ ಶ್ರೇಷ್ಠಕರವಾಗಿ, ಸತ್ವಭರಿತವಾಗಿರುವುದರಿಂದಲೇ ಅಲ್ಲೇ ಇಲ್ಲೇ ಮತ್ತು ಈಗಲೇ ಪ್ರಕಾಶಮಾನವಾಗಿ ಕಾಣುತ್ತದೆ. ಮೋಹದ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನದ ಪ್ರಕಾಶದಿಂದ ಜಗತ್ತನ್ನು ತನ್ನನ್ನು ಅದು ಹೇಗಿದೆಯೋ ಹಾಗೆಯೇ ವಸ್ತುಸ್ಥಿತಿಯನ್ನು ತೋರಿಸುತ್ತದೆ. ಸಾಧಾರಣ ಸತ್ಯ ವಿಶ್ಲೇಶಿಸುವುದಾದರೆ ರಾಗ ದ್ವೇಷ ಮತ್ತು ಮೋಹದಿಂದ ಕೂಡಿರುವವನು ತಾನು ನೋವನ್ನು ಅನುಭವಿಸುತ್ತಾನೆ. ಪರರಿಗೂ ನೋವನ್ನು ನೀಡುತ್ತಾನೆ. ಒಂದುವೇಳೆ ಆತನು ರಾಗ ದ್ವೇಷ ಮೋಹಗಳನ್ನು ವಜರ್ಿಸಿ ತನ್ನ ಮತ್ತು ಪರರ ಕೆಡಕು ಯೋಚಿಸುವುದನ್ನು ಮಾಡುವುದನ್ನು ಮತ್ತು ಯೋಚಿಸುವುದನ್ನು ನಿಲ್ಲಿಸಿದರೆ ನೋವುರಹಿತನಾಗಿ ಭಾವೋದ್ರೇಕವಹೀನನಾಗಿ ಪ್ರಶಾಂತತೆಯನ್ನು ನೆಲೆಸುತ್ತಾನೆ. ಈ ರೀತಿಯಾಗಿ ಇಲ್ಲೇ ಈಗಲೇ ಸತ್ಯತೆಯನ್ನು ಕಾಣಬಹುದಾಗಿದೆ. ಅದೇರೀತಿ ಪರಮಾರ್ಥ ಸತ್ಯದಲ್ಲಿ ಹೇಳುವುದಾದರೆ ಅನಾಸಕ್ತನಾಗಿ, ಧ್ಯಾನದ ಹಂತಗಳು, ಮಾರ್ಗಫಲ ಕೊನೆಗೆ ನಿಬ್ಬಾಣ ಸಾಕ್ಷಾತ್ಕಾರ ದಿಟ್ಟಿಸುವಂತೆ ಧಮ್ಮ ಸಹಾಯಕಾರಿ ಆಗಿದೆ. ಆದ್ದರಿಂದ ಸಂದಿಟ್ಟಿಕೋ (ಸರಿಯಾಗಿ ದೃಷ್ಠಿಸಿಕೋ) ಎಂದು ಹೇಳುತ್ತಾರೆ. ಹೇಗೆ ಸಾಗರದಲ್ಲಿ ಮಹಾರತ್ನಗಳನ್ನು ಮುತ್ತುಗಳನ್ನು ನೋಡಬಹುದೋ ಹಾಗೆಯೇ ಇನ್ನಿತರ ಅಮೂಲ್ಯ ವಸ್ತುಗಳನ್ನು ಕಾಣಬಹುದೋ ಹಾಗೆಯೇ ಧಮ್ಮದಲ್ಲಿ ಅನೇಕ ಅತ್ಯಮೂಲ್ಯ ಮೌಲ್ಯಾತೀತ ವಿಷಯಗಳನ್ನು ದೃಷ್ಠಿಸಬಹುದಾಗಿದೆ. ಹೇಗೆಂದರೆ 4 ಸತಿಪಟ್ಠಾನಗಳು 4 ಸಮ್ಮಪದಾನಗಳು, 4 ಇದ್ದಿಪಾದಗಳು, 5 ಬಲಗಳು, 5 ಇಂದ್ರಿಯಗಳು, 7 ಬೋಧಿ ಅಂಗಗಳು ಮತ್ತು ಆರ್ಯ ಅಷ್ಠಾಂಗಿಕ ಮಾರ್ಗ ಇತ್ಯಾದಿಗಳನ್ನು ನಾವು ಕಾಣಬಹುದಾಗಿದೆ. ಇದು ಧಮ್ಮದಲ್ಲಿರುವ ಅದ್ಭುತವಾದ ಮತ್ತು ಅಮೋಘವಾದ ಗುಣವಾಗಿದೆ.
3)            ಅಕಾಲಿಕೋ : ಇದರ ಅರ್ಥ ಏನೆಂದರೆ ನಿಧಾನವಿಲ್ಲದೆ ಈಗಲೇ ಫಲ ನೀಡುವಂತಹುದು ಅದಕ್ಕಾಗಿ ಕಾಲ ಕಾಯಬೇಕಿಲ್ಲ. ಇದರ ಫಲ ಈಗಲೇ ಸಿಗುತ್ತದೆ. ಉದಾ : ಹೇಳುವುದಾದರೆ ಶೀಲದಿಂದ ಕೀತರ್ಿ ಸಿಗುತ್ತದೆ. ಜ್ಞಾನದಿಂದ ಸಂಕೋಲೆಗಳು ಕತ್ತರಿಸುತ್ತದೆ. ಉದಾಹರಣೆಗೆ ಸಾರಿಪುತ್ರರಿಗೆ ಕೇವಲ 1 ವಾಕ್ಯ ಕೇಳಿದೊಡನೆಯೆ ಸೋತಪನ್ನ ಸ್ಥಿತಿ ಲಭಿಸಿತು. ಮೊಗ್ಗಲಾನವರಿಗೆ 2 ವಾಕ್ಯ ಕೇಳಿದಾಗ ಸೋತಪನ್ನ ಸ್ಥಿತಿ ಲಭಿಸಿತು. ಬಹಳಷ್ಟು ಜನರಿಗೆ ಸೋತಪನ್ನಸ್ಥಿತಿ 1 ಗಾಥೆಯಿಂದಲೆ ಸಿಕ್ಕಿದೆ. ಅತ್ಯುನ್ನತ ಸಾಮಥ್ರ್ಯವುಳ್ಳವರಿಗೆ ಒಂದು ಸುತ್ತ ಕೇಳುತ್ತಿದ್ದಂತೆಯೇ ಸಂಕೋಲೆಗಳು ಕಳಚಿ ಅರಹಂತರಾಗಿದ್ದಾರೆ. ಭಗವಾನರೇ ಕೇಳಿರುವ ಹೆಚ್ಚು ಎಂದರೆ 7 ವರ್ಷ ಅಕ್ಷರಶಃ ಪಾಲಿಸಿದರೆ ಅವರು ಅರಹಂತರು ಅಥವಾ ಅನಾಗಾಮಿಗಳಾಗುತ್ತಾರೆ. ಆದರೆ ಅಂತಹ ದೃಢ ನಿಧರ್ಾರದಿಂದ ಕಠಿಣ ಪರಿಶ್ರಮ ಪಡುವವರು ಅತಿ ವಿರಳರಾಗಿದ್ದಾರೆ. ಬುದ್ಧರಲ್ಲಿ ಮುಕ್ತಿ ಎನ್ನುವುದು ಸಾವಿನ ನಂತರ ಸಿಗುವುದು ಅಲ್ಲ,್ಲ ಇಲ್ಲೆ ಈಗಲೇ ಸಾಧಿಸುವುದಂತಹುದು ಎಂದು ಅಕಾಲಿಕೋ ಪದ ಸ್ಪಷ್ಟಪಡಿಸುತ್ತದೆ. ಇದರ ಇನ್ನೊಂದು ಅರ್ಥವು ಏನೆಂದರೆ ಸಾರ್ವಕಾಲಿಕವಾದದ್ದು. ಒಂದು ಕಾಲಕ್ಕೆ ಸೀಮಿತವಲ್ಲದ್ದು, ಒಬ್ಬ ವ್ಯಕ್ತಿಗೆ ಸೀಮಿತವಲ್ಲದ್ದು, ಭಗವಾನರ ಬೋಧನೆ ವ್ಯಕ್ತಿಗೆ ದೇಶಕ್ಕೆ ಮತ್ತು ಕಾಲಕ್ಕೆ ಮೀರಿದ್ದು ಏಕೆಂದರೆ ಅದು ಕೇವಲ ತರ್ಕವಲ್ಲ, ಸಿದ್ಧಾಂತವಲ್ಲ, ಅದು ಸತ್ಯವಾಗಿದೆ.
4)            ಏಹಿಪಸ್ಸಿಕೋ : ಬನ್ನಿ (ಎಹಿ) ಮತ್ತು ದಶರ್ಿಸಿ (ಪಸ್ಸಿ) ಈ ಧಮ್ಮವನ್ನು ಎಂದು ಸರ್ವರನ್ನು ಪರೀಕ್ಷಿಸಲು ಆಹ್ವಾನಿಸುತ್ತದೆ. ಏಕೆಂದರೆ ಪರೀಕ್ಷಿಸಲು ಸ್ವೀಕರಿಸಲು ಮತ್ತು ಸಾಧಿಸಿ ಸಿದ್ಧಿಸಲು ಅರ್ಹವಾಗಿದೆ ಈ ಧರ್ಮ.
ನಕಲಿ ಚಿನ್ನವನ್ನು ಯಾರು ಪರೀಕ್ಷಿಸಲು ಆಹ್ವಾನಿಸುವುದಿಲ್ಲ. ಹಾಗೆಯೇ ಮಿಶ್ರ ಚಿನ್ನವುಳ್ಳವರೂ ಸಹ. ಆದರೆ ನಿಜವಾದ ಚಿನ್ನ ಹೊಂದಿರುವಾತ ಧೈರ್ಯದಿಂದ ಆಹ್ವಾನಿಸುತ್ತಾರೆ. ಚಿನ್ನವನ್ನು ಹೊಡೆದು, ಉಜ್ಜಿ, ಸುಟ್ಟು ಪರೀಕ್ಷಿಸುತ್ತಾರೆ. ಹಾಗೆಯೇ ನನ್ನ ಬೋಧನೆಯನ್ನು ಕೇವಲ ನಂಬಬೇಡಿ, ಬನ್ನಿ ಪರೀಕ್ಷಿಸಿ ಫಲಭರಿತವಾಗಿದ್ದರೆ ಸ್ವೀಕರಿಸಿ ಎಂದು ಬುದ್ಧರು ಹೇಳುತ್ತಾರೆ. ಕಾಲಾಮರ ಹತ್ತಿರದಲ್ಲಂತು ವಿಶಾಲ ಮನಸ್ಕನು ಪಕ್ಷಪಾತಿಯಾಗಿರುವುದಿಲ್ಲ. ಪಕ್ಷಪಾತಿಯರು ಸತ್ಯಸ್ವೀಕೃತನಲ್ಲ ಎಂಬಂತೆ ಸಂಪ್ರದಾಯವಾಗಲಿ, ಧರ್ಮಗ್ರಂಥಗಳಲ್ಲಿದೆ ಎಂದಾಗಲಿ, ಪೂಜ್ಯ ಗುರುವಿನಂದ ಬಂದಿದೆ ಎಂದಾಗಲಿ, ತನ್ನ ದೃಷ್ಟಿಗೆ ಸಹಮತ ಎಂದಾಗಲಿ, ಬರಿ ಹಾಗೆಂದು ತೋರುತ್ತದೆ ಎಂದಾಗಲಿ ಏನನ್ನು ಸ್ವೀಕರಿಸದಿರಿ. ನಿಮಗೆ ನೀವೇ ಪರೀಕ್ಷಿಸಿದಾಗ ಇವು ಒಳಿತು (ತನಗೆ ಮತ್ತು ಪರರಿಗೆ), ನಿಂದಾತೀತವಾದುದು ಜ್ಞಾನಿಗಳಿಂದ ಪ್ರಶಂಸಾರ್ಹವಾದುದು. ಇವನ್ನು ಆಚರಿಸಿದಾಗ ಈಗಲೂ ಮುಂದೆಯೂ, ತನಗೂ ಪರರಿಗೂ ಸುಖ ನಿಶ್ಚಯವೆನಿಸಿದಾಗ ಅದನ್ನು ಸ್ವೀಕರಿಸಿ, ಅನುಸರಿಸಿ ಎಂದು ಹೇಳಿದ್ದಾರೆ.
ಧಮ್ಮವನ್ನು ಅಥರ್ೈಸಿಕೊಂಡಾಗ ಅದರ ಉದ್ದೇಶ, ಮಾರ್ಗ, ಫಲ, ಏನೆಲ್ಲಾ ತರ್ಕ ಮತ್ತು ಅನುಭವದ ಮೂಲಕ ಶೋಧಿಸಿದಾಗ ಲೋಕಕ್ಕೆ ಬೆಳಕಾಗಲು ಅರ್ಹವಾದದ್ದು ಈ ಧಮ್ಮ ಎಂದು ಅರಿವಾಗುತ್ತದೆ. ಹಾಗೆಯೇ ಧಮ್ಮವು ಈ ರೀತಿ ಪ್ರಧಾನ ಲಕ್ಷಣಗಳಿಂದ ಕೂಡಿದೆ ಎಂದು ಅರಿವಾಗುತ್ತದೆ. ಅವು ಯಾವುದೆಂದರೆ : (1) ಧಮ್ಮವು ಇಂದ್ರಿಯ ಭೋಗಕ್ಕಲ್ಲ ಹಾಗೆಯೇ ದೇಹದಂಡನೆಕಾರಿಯೂ ಅಲ್ಲ. (2) ಶಾಶ್ವತವಾದವು ಅಲ್ಲ ಹಾಗೆಯೇ ನಾಶವಾದವು ಅಲ್ಲ. (3) ಸಂಶಯವಾದವು ಅಲ್ಲ ಹಾಗೆಯೇ ಮೌಢ್ಯತೆಯಿಂದ (ಎಲ್ಲವನ್ನೂ) ಒಪ್ಪುವಂತಹುದು ಅಲ್ಲ (4) ಧಮ್ಮವು ನಿರಾಶವಾದವು ಅಲ್ಲ ಹಾಗೆಯೇ ಭೌತಿಕತೆಯ ಆಶಾವಾದವು ಅಲ್ಲ ಬದಲಾಗಿ ವಾಸ್ತವವಾದವಾಗಿದೆ. (5) ಧಮ್ಮವು ಗುಂಪುಗಳಲ್ಲಿ ಜಗದಲ್ಲಿ ಆನಂದಿಸು ವವರಿಗಲ್ಲ ಬದಲಾಗಿ ಸ್ವಕೇಂದ್ರೀಕೃತವಾಗಿ ಸ್ವವಿಶ್ಲೇಷಿಸುವಂತಹುದು. (6) ಪೂರ್ಣವಾಗಿ ಇಹವಾದವು ಅಲ್ಲ ಹಾಗೆಯೇ ಪೂರ್ಣವಾಗಿ ಪರವಾದವೂ ಅಲ್ಲ (7) ಧಮ್ಮವು ಧರ್ಮಗಳಲ್ಲಿ ಧಾಮರ್ಿಕವಾದದ್ದು (8) ತತ್ವಗಳಲ್ಲೆ ಪರಮ ಪ್ರಯೋಗಿಕ ತತ್ವಶಾಸ್ತ್ರವಾಗಿದೆ (9) ಇದೊಂದು ಜ್ಞಾನದ, ಪರಿಶುದ್ಧತೆಯ ಅದ್ವಿತೀಯ ಮಹಾನ್ ಮಾರ್ಗವಾಗಿದೆ ಎಂದೆಲ್ಲಾ ಪರೀಕ್ಷಿಸಿದಾಗ ಅರಿವಾಗುತ್ತದೆ.
5.            ಓಪನಯಿಕೋ : ಈ ಧಮ್ಮ ಊದ್ರ್ವಗಾಮಿಯಾಗಿದೆ. ಅಂದರೆ ನಿಬ್ಬಾಣಕ್ಕೆ ಕೇಂದ್ರೀಕೃತವಾದ ನಿಬ್ಬಾಣ ಮಾರ್ಗವಾಗಿದೆ. ಈ ಮಾರ್ಗದಲ್ಲಿ ಲೋಕೋತ್ತರ ಮಾರ್ಗ ಮತ್ತು ಫಲಗಳು ದೊರೆತು ನಿಬ್ಬಾಣ ಸಾಧಿಸುತ್ತಾರೆ.
                ಭಗವಾನರ ಧಮ್ಮವು ಯಾವುದೇ ರಹಸ್ಯವಿಲ್ಲದಂತೆ ತೆರೆದ ನೇರ ಮಾರ್ಗವಾಗಿದೆ. ಧಮ್ಮದ ಉದ್ದೇಶ ಸಂಪೂರ್ಣ ದುಃಖ ನಿರೋಧವಾಗಿದೆ. ಧರ್ಮನಂದವು ಮಿಕ್ಕ ಸರ್ವ ಆನಂದಕ್ಕಿಂತ ಶ್ರೇಷ್ಠವಾಗಿದೆ. ಈ ಮಾರ್ಗದ ಅನೇಕ ವೈಶಿಷ್ಟ್ಯತೆಗಳು ಇವೆ. ಹೇಳುವುದಾದರೆ ಅತಿರೇಕವಿಲ್ಲದ ಮಾರ್ಗವಿದು. ಸಮತೋಲನದ ಮಾರ್ಗವಿದು, ಭೋಗವಿಲ್ಲದ ಮಾರ್ಗವಿದು, ದ್ವೇಷ ಒಡಕು ಇಲ್ಲದ ಮಾರ್ಗವಿದು, ಮೂಡತೆ, ಗೊಂದಲ, ಭ್ರಮೆಯಿಲ್ಲದ ಮಾರ್ಗವಿದು. ಚಿತ್ತವಿಕಾಸದ ಮಾರ್ಗವಿದು, ಶೀಲವಿಶುದ್ಧಿಯ ಮಾರ್ಗವಿದು ಹಾಗೆಯೇ ಪ್ರಜ್ಞಾ ಪೂರ್ಣತೆಯ ಮಾರ್ಗವಾಗಿದೆ. ಇದು ಲೌಕಿಕ ಲಾಭದೆಡೆಗೆ ಕೊಂಡೊಯ್ಯುವ ಮಾರ್ಗವಲ್ಲ, ಅಮರತ್ವದ (ನಿಬ್ಬಾಣ) ಹಾದಿಯೆಡೆಗೆ ಸಾಗಿಸುವ ಮಹಾನ್ ಮಾರ್ಗವಾಗಿದೆ.
                ಜಗತ್ತಿನ ಸರ್ವ ಔಷಧಿಗಳಿಗಿಂತ ವಿಭಿನ್ನವಾದ ಮಿಗಿಲಾದ ಸಾಟಿಯಿಲ್ಲದ ಧಮ್ಮ ಔಷಧಿಯು ಇದಾಗಿದೆ. ಆದ್ದರಿಂದ ಭಿಕ್ಷುಗಳೇ, ಇದನ್ನು ಸೇವಿಸಿ ಆದ್ದರಿಂದ ಇದನ್ನು ಓಪನಯಿಕೊ ಎನ್ನುತ್ತಾರೆ.
6)            ಪಚ್ಚತ್ತಮ ವೇದಿತಬ್ಭೋ ವಿಞ್ಞಾಹಿತಿ : ಅಂದರೆ ಜ್ಞಾನಿಯಾದ ಪ್ರತಿಯೊಬ್ಬರಿಂದ ಅರಿಯಬಹುದಾದ ಧಮ್ಮವಾಗಿದೆ. ಅಂದರೆ ಭಗವಾನರ ಧಮ್ಮವು ಅತ್ಯಂತ ಗಂಭೀರವಾಗಿದೆ. ಅದನ್ನು ಪ್ರತಿಯೊಬ್ಬರು ಅಥರ್ೈಸಿಕೊಳ್ಳಲಾಗುವುದಿಲ್ಲ. ಯಾರು ರಾಗ ದ್ವೇಷ ಮೋಹಗಳಿಂದ ಅದ್ದಿ ಹೋಗಿರುವರೋ ಅವರಿಂದ ಅರಿಯಲಾಗುವುದಿಲ್ಲ. ಯಾರಲ್ಲಿ ರಾಗ, ದ್ವೇಷ ಮೋಹಗಳು ಕಡಿಮೆಯಿರುವುದೋ, ಯಾರು ಪ್ರಜ್ಞಾಶೀಲರೋ ನಿಸ್ಪಕ್ಷಪಾತವಾಗಿ ವಿಶ್ಲೇಷಿಸುವಂತಹವರಾಗಿರುವರೋ ಅವರು ಧಮ್ಮವನ್ನು ಕಾಣುತ್ತಾರೆ.
                ಈ ಧಮ್ಮವು ಅಲ್ಪ ಇಚ್ಚುಕರಿಗೆ, ಮಹಾ ಲೋಭಿಗಳಿಗೆಲ್ಲ ಈ ಧಮ್ಮವು ಸಂತೃಪ್ತರಿಗೆ, ಅತೃಪ್ತರಿಗಲ್ಲ. ಈ ಧಮ್ಮವು ಏಕಾಂತ ಪ್ರಿಯರಿಗೆ, ಸಾಮಾಜಿಕತೆಯಲ್ಲಿ ಆನಂದಿಸುವವರಿಗಲ್ಲ. ಈ ಧಮ್ಮವು ಪ್ರಯತ್ನಶೀಲರಿಗೆ, ಸೋಮಾರಿಗಳಿಗಲ್ಲ. ಈ ಧಮ್ಮವು ಸ್ಮೃತಿವಂತರಿಗೆ, ಗೊಂದಲವುಳ್ಳ ಅಲಕ್ಷಿಗಳಿಗಲ್ಲ. ಈ ಧಮ್ಮವು ಶಾಂತಪ್ರಿಯರಿಗೆ ಭಾವವೇಶಿಗಳಿಗಲ್ಲ. ಈ ಧಮ್ಮವು ಜ್ಞಾನಿಗಳಿಗೆ ಮೋಹಿಗಳಿಗಲ್ಲ. ಈ ಧಮ್ಮವು ನಿಖರತೆಯನ್ನು ಶುದ್ಧತೆಯನ್ನು ಪೂರ್ಣತೆಯನ್ನು ಬಯಸುವವರಿಗೆ, ಚದುರಿದ ಚಿತ್ತದಲ್ಲಿ ಸರಿಯುವ ಚಂಚಲಿಗರಿಗಲ್ಲ.
                ಈ ರೀತಿ ಸಾಧಕರು ಧಮ್ಮಾನುಪಥದಲ್ಲಿ ತೊಡಗಿದ ನಿವರಣಗಳಿಂದ ರಹಿತನಾಗಿ, ಧ್ಯಾನಗಳಿಂದ ಕೂಡಿ ಸಮಾಧಿಸ್ಥನಾಗುತ್ತಾನೆ. ಈ ರೀತಿ ಧಮ್ಮಾ ಚಿಂತತೆಯಲ್ಲಿರುವಾಗ ಯಾರು ಧಮ್ಮದ ಮೇಲೆ ಅಪಾರ ಶ್ರದ್ಧಾ ಭಕ್ತಿಯಿಂದ ಹೀಗೆ ತುಂಬಿಕೊಳ್ಳುತ್ತಾನೆ. ಈ ರೀತಿ ಶ್ರೇಷ್ಠತ್ವ ತೋರಿಸಿದ ಬೋಧಿಸಿದ ಸ್ಫೂತರ್ಿ ತುಂಬಿಸಿದ, ಈ ರೀತಿ ಘನತೆಯಿಂದ ಕೂಡಿದ, ಶ್ರೇಷ್ಠ ಆಚರಣೆಯಿಂದ ಕೂಡಿ, ಶ್ರೇಷ್ಠತ್ವ ಪ್ರಾಪ್ತಿ ಮಾಡಿದ, ಶ್ರೇಷ್ಠಚಿತ್ತದಿಂದ ಕೂಡಿದ, ಮಹಾ ಪರಮ ಬೋಧಿ ಜ್ಞಾನದಿಂದ ಕೂಡಿದ, ಮತ್ತೊಬ್ಬರನ್ನು ನಾನು ಕಾಣೆ ಎಂದು ಭಕ್ತಿಯಿಂದ ಆನಂದಿಸುತ್ತಾನೆ. ಭಯ ಚಿಂತೆಗಳಿಂದ ಮುಕ್ತನಾಗುತ್ತಾನೆ. ಅಪಾರ ಸಹನೆಯುಳ್ಳವನಾಗಿ ಭವಿಷ್ಯಕ್ಕೆ ಸಿದ್ಧನಾಗುತ್ತಾನೆ. ಧಮ್ಮದಲ್ಲೆ ಆನಂದಿತವಾಗಿ ಸದಾ ಧಮ್ಮಾನಂದನಾಗುತ್ತಾನೆ. ಬಹುಬೇಗ ನೇರ ಸಮ್ಮ ದೃಷ್ಟಿಯುಳ್ಳವನಾಗುತ್ತಾನೆ. ಮುಕ್ತಿ ಪಥದಲ್ಲಿ ತೀವ್ರತೆಯಿಂದ ಚಲಿಸುವವನಾಗುತ್ತಾನೆ.
                ಯಾರು ಧಮ್ಮದ ಆನಂದ ಸುಖವನ್ನು ಸೇವಿಸಿರುವರೋ ಅವರು ಉಪಶಾಂತ ಚಿತ್ತವನ್ನು ಹೊಂದಿ ಸುಖಿಸುವರು. ಆರ್ಯ (ಬುದ್ಧ)ರಿಂದ ಬೋಧಿತವಾದ ಧಮ್ಮದಲ್ಲೇ ಪಂಡಿತ (ಜ್ಞಾನಿ)ರು ಸದಾ ರಮಿಸುವರು.

                ಈ ಅನುಸ್ಸತಿಯಿಂದಾಗಿ ಸಾಮಿಪ್ಯ (ಉಪಚರ) ಸಮಾಧಿ ದೊರೆಯುತ್ತದೆ ಮತ್ತು ಸೋತಪನ್ನರೂ ಆಗವರು.

No comments:

Post a Comment