Sunday 18 October 2015

metta meditation in kannada ಮೆತ್ತಾ ಧ್ಯಾನ

ಮೆತ್ತಾ ಧ್ಯಾನ :

                ಮೊದಲು ಕನ್ನಡಿಯಲ್ಲಿ ಅಥವಾ ಕೊಳದಲ್ಲಿ ತನ್ನ ಪ್ರಶಾಂತ ಮುಖವನ್ನು ನೋಡಿ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನಂತರ ಆತನು ಏಕಾಂತದಲ್ಲಿ ನಿರ್ಜನ ನಿಶ್ಶಬ್ದ ವಾತಾವರಣದಲ್ಲಿ ಪದ್ಮಾಸನದಲ್ಲಿ ಕುಳಿತು, ಅಕುಶಲವಾದ ಮತ್ತು ಆಸೆಗಳಿಂದ ಕೂಡಿದ ಹಾಗು ದ್ವೇಷದಿಂದ ಕೂಡಿದ ಎಲ್ಲಾರೀತಿಯ ಯೋಚನೆಗಳಿಂದ ಮುಕ್ತನಾಗಬೇಕು. ನಂತರ ತನ್ನ ಮುಖವನ್ನು ಪ್ರಶಾಂತ ಮುಖವನ್ನು ನೆನಪಿಸಿಕೊಳ್ಳಬೇಕು. ಹಾಗೆಯೇ ಆ ನಗುಮುಖವನ್ನು ನೆನೆಸಿಕೊಳ್ಳುತ್ತಾ ನಾನು ಸುಖಿಯಾಗಿರಲಿ, ನಾನು ದುಃಖದಿಂದ ಮುಕ್ತನಾಗಲಿ, ನಾನು ದ್ವೇಷದಿಂದ ಮುಕ್ತನಾಗಲಿ, ನಾನು ಹಿಂಸಾ ಭಾವನೆಯಿಂದ ಮುಕ್ತನಾಗಲಿ, ನಾನು ನೋವುಗಳಿಂದ ಮುಕ್ತನಾಗಲಿ, ನಾನು ಸದಾ ಸುಖಿಯಾಗಿರಲಿ ಎಂದು ಸ್ವಹಾರೈಕೆ ಮಾಡಿಕೊಳ್ಳಬೇಕು. ಇದನ್ನೇ ನಿರಂತರ ಕೆಲಕಾಲ ಅಥವಾ 20 ರಿಂದ 25 ಸಲ ಕನಿಷ್ಠಪಕ್ಷ ಹೇಳಿಕೊಳ್ಳಬೇಕು. ಇದು ಜಪದ ರೀತಿ ಇರಬಾರದು, ಅತ್ಯಂತ ನೈಜವಾಗಿ, ಹೃತ್ಫೂರ್ವಕವಾಗಿ, ಆನಂದವಾಗಿ ಮಾಡಬೇಕು.
                ನಂತರ ಪೂಜ್ಯರಾದವರನ್ನು ಆಯ್ಕೆ ಮಾಡಬೇಕು ಅಥವಾ ಗುರುಗಳನ್ನು ಅಥವಾ ಭಿಕ್ಷುಗಳನ್ನು ಆಯ್ಕೆ ಮಾಡಿಕೊಂಡು ಅವರ ನಿರ್ಮಲವಾದ, ಮುಗ್ಧವಾದ, ಆನಂದಭರಿತ ಮುಖವನ್ನು ಸ್ಪಷ್ಟ ನೆನಪು ಮಾಡುತ್ತಾ, ಈ ಪೂಜ್ಯರು ಸುಖಿಯಾಗಿರಲಿ ಮತ್ತು ಎಲ್ಲಾ ರೀತಿಯ ದುಃಖಗಳಿಂದ ಮುಕ್ತರಾಗಲಿ, ಹಾಗು ಎಲ್ಲಾ ರೀತಿಯ ಚಿತ್ತ ಕ್ಲೇಷಗಳಿಂದ ಮುಕ್ತರಾಗಲಿ ಎಂದು ಹೃತ್ಪೂರ್ವಕವಾಗಿ ನಿರಂತರ ಹಾರೈಸಬೇಕು.
                ಅನಂತರ ತಂದೆ ನಂತರ ತಾಯಿಯನ್ನು ಆಯ್ಕೆ ಮಾಡಿಕೊಂಡು ಅವರ ಸಂತೋಷದ ಅಥವಾ ಆನಂದದ ಮುಖವನ್ನು ನೆನೆಯುತ್ತಾ ಈ ನನ್ನ ತಂದೆ ಅಥವಾ ತಾಯಿಯು ಸದಾ ಸುಖಿಯಾಗಿರಲಿ ಹಾಗು ಎಲ್ಲಾ ರೀತಿಯ ದುಃಖಗಳಿಂದ ಮುಕ್ತರಾಗಲಿ, ಎಲ್ಲಾ ರೀತಿಯ ದ್ವೇಷದಿಂದ ಮುಕ್ತರಾಗಲಿ. ಅವರ ಮನಸ್ಸು ಆನಂದದಿಂದ ಇರಲಿ ಎಂದು ಹೃತ್ಫೂರ್ವಕವಾಗಿ ನಿರಂತರ ಹಾರೈಸಬೆಕು.
                ನಂತರ ಕುಟುಂಬದ ಸದಸ್ಯರನ್ನು ಅಥವಾ ಮಿತ್ರರನ್ನು ಒಬ್ಬೊಬ್ಬರಾಗಿ ನೆನೆಯುತ್ತ ಇವರು ಸದಾ ಸುಖಿಗಳಾಗಿರಲಿ ಹಾಗು ಎಲ್ಲಾ ರೀತಿಯ ದುಃಖಗಳಿಂದ ಮುಕ್ತರಾಗಲಿ, ಇವರು ದ್ವೇಷದಿಂದ ಮುಕ್ತರಾಗಲಿ, ಹಾಗು ಕ್ಲೇಷಗಳಿಂದ ಮುಕ್ತರಾಗಲಿ ಎಂದು ಹಾರೈಸಬೇಕು.
                ನಂತರ ಅತ್ಯಂತ ಪ್ರೀತಿಪಾತ್ರರನ್ನು ನೆನೆಯುತ್ತ ಇವರು ಸದಾ ಸುಖಿಯಾಗಿರಲಿ ಮತ್ತು ಇವರ ಮನವು ಆನಂದದಿಂದ ತುಂಬಿರಲಿ, ಎಲ್ಲಾ ರೀತಿಯ ದುಃಖಗಳಿಂದ ಮುಕ್ತರಾಗಲಿ. ಇವರು ದ್ವೇಷದಿಂದ ಮುಕ್ತರಾಗಲಿ ಎಂದು ಹಾರೈಸಬೇಕು.
                ನಂತರ ಪರಿಚಯವುಳ್ಳವರನ್ನು ನೆನೆಯುತ್ತಾ ಹೀಗೆಯೇ ಹಾರೈಸಬೇಕು.
                ನಂತರ ನಮ್ಮ ಮೇಲೆ ದ್ವೇಷವಿರುವ ಅಥವಾ ನಾವು ದ್ವೇಷಿಸುವಂತಹ ವ್ಯಕ್ತಿಗಳನ್ನು ನೆನೆಯುತ್ತಾ ಹೀಗೆಯೇ ಹಾರೈಸಬೇಕು. ದ್ವೇಷಿಯನ್ನು ಸಹಾ ಅತ್ಯಂತ ಹೃತ್ಫೂರ್ವಕವಾಗಿ ಹಾರೈಸುತ್ತಾ ಆತನ ಮೇಲಿನ ದ್ವೇಷವನ್ನು ವಿಶೇಷವಾಗಿ ನಾಶಮಾಡಬೇಕು.
                ಕೆಲವೊಮ್ಮೆ ಕಷ್ಟವಾದರೆ ಅತ್ಯಂತ ಪ್ರೀತಿಪಾತ್ರರನ್ನು ನೆನೆಯುತ್ತಾ ಮೈತ್ರಿ ಪ್ರಸಾರ ಮಾಡಿ ನಂತರ ಅದೇ ರೀತಿಯಾದ ಸಿಹಿ ಮನಸ್ಸಿನಿಂದ, ಮೃದು ಮನಸ್ಸಿನಿಂದ ದ್ವೇಷಿಯ ಮೇಲೆ ಮೈತ್ರಿಧ್ಯಾನ ಮಾಡಬೆಕು.
                ಈ ರೀತಿಯಾಗಿ ಆತನು ಸರ್ವರ ಮೇಲೂ ಸಮಾನವಾಗಿ, ಪೂರ್ಣವಾಗಿ, ಪರಿಶುದ್ಧವಾಗಿ ಅದೇರೀತಿಯ ಮಧುರ ಮೌನದಿಂದ ಕೂಡಿರುವವನಾಗಿ ಎಲ್ಲರಲ್ಲೂ ತನನ್ನೇ ಕಾಣುತ್ತಾನೆ. ಅಥವಾ ತನ್ನ ಪ್ರೀತಿ ಪಾತ್ರರನ್ನು ಕಾಣುತ್ತಾನೆ. ಯಾರಲ್ಲೂ ಕೋಪವಿಲ್ಲ, ಎಲ್ಲರ ಕ್ಷೇಮವನ್ನೇ ಹಾರೈಸುತ್ತಾರೆ. ಒಂದುವೇಳೆ ನಿಮ್ಮಲ್ಲಿ ಕೋಪವಿದೆ ಎಂದರೆ ನೀವು ಶಾಶ್ವತವಾಗಿ ಕೋಪವಿಲ್ಲದಂತೆ ಮಾಡಿಕೊಳ್ಳಬೇಕು.
                ನಂತರ ಸರ್ವಜೀವಿಗಳ ಮೇಲೆ ಮಾಡಬೇಕು ಎಲ್ಲಾ ಜೀವಿಗಳು ಸುಖಿಯಾಗಿರಲಿ, ಸುಖಯುತ ಮನಸ್ಸಿನಿಂದ ಕೂಡಿರಲಿ, ಅವು ಎಲ್ಲಾ ವಿಧವಾದ ದುಃಖಗಳಿಂದ ಮುಕ್ತರಾಗಲಿ, ಅವು ಎಲ್ಲಾ ವಿಧವಾದ ದ್ವೇಷದಿಂದ ಮುಕ್ತರಾಗಲಿ ಎಂದು ಹಾರೈಸಬೇಕು.
2ನೇಯ ಪಯರ್ಾಯ ವಿಧಾನ :

                ಮೆತ್ತಾ ಸುಖದಲ್ಲಿ ಈ ರೀತಿಯ ಧ್ಯಾನ ಕ್ರಮವಿದೆ. ಇಲ್ಲಿ ನೀವು ಈ ರೀತಿಯಲ್ಲಿ ಧ್ಯಾನ ಮಾಡಬೇಕು. ಹಾಗು ಇದೇರೀತಿ ನಿರಂತರ ಹಾರೈಕೆ ಮಾಡಬೇಕು.
                ಎಲ್ಲಾ ಜೀವಿಗಳು ಸುಖಿಯಾಗಿರಲಿ ಮತ್ತು ಕ್ಷೇಮವಾಗಿರಲಿ ಹಾಗು ಅವರ ಮನಗಳು ಸುಖದಿಂದ ಸದಾ ತುಂಬಿರಲಿ.
                ಯಾವೆಲ್ಲಾ ಜೀವಿಗಳು ಇವೆಯೋ ಅವು ದುರ್ಬಲವಾಗಿರಲಿ ಅಥವಾ ಬಲಿಷ್ಠವಾಗಿರಲಿ, ಕಿರಿದಾಗಿರಲಿ ಅಥವಾ ದಪ್ಪವಾಗಿರಲಿ ಅಥವಾ ತೆಳುವಾಗಿರಲಿ ಅಥವಾ ಶ್ರೇಷ್ಠವಾಗಿರಲಿ, ಚಿಕ್ಕದಾಗಿರಲಿ ಅಥವಾ ಮಧ್ಯಮ ಪ್ರಮಾಣದವು ಆಗಿರಲಿ.
                ಗೋಚರವಾಗಿರಲಿ ಅಥವಾ ಅದೃಶ್ಯವಾಗಿರಲಿ, ಹತ್ತಿರ ಜೀವಿಗಳಾಗಲಿ ದೂರದ ಜೀವಿಗಳಾಗಲಿ, ಹುಟ್ಟಿರುವ ಜೀವಿಗಳಾಗಲಿ ಅಥವಾ ಮುಂದೆ ಹುಟ್ಟುವ ಜೀವಿಗಳಾಗಲಿ ಅವೆಲ್ಲಾ ಜೀವಿಗಳ ಹೃದಯ (ಮನಸ್ಸು) ಸುಖದಿಂದ, ಆನಂದದಿಂದ ತುಂಬಿರಲಿ.
                ಒಬ್ಬನು ಮತ್ತೊಬ್ಬನನ್ನು ಹಿಂಸಿಸದಿರಲಿ, ಇನ್ನೊಬ್ಬನನ್ನು ಯಾವ ಕಾರಣಕ್ಕೂ ಕೀಳಾಗಿ ಕಾಣದಿರಲಿ (ಅಸಹ್ಯ ಪಡದಿರಲಿ), ಎಂದಿಗೂ ದ್ವೇಷದಿಂದ ಮತ್ತು ಕೋಪದಿಂದ ಇರದಿರಲಿ. ಯಾರೂ ಪರರ ನೋವನ್ನು ಬಯಸದಿರಲಿ. ಹೇಗೆ ತಾಯಿಯು ತನ್ನ ಏಕಮಾತ್ರ ಪುತ್ರನನ್ನು ತನ್ನ ಎಲ್ಲಾ ಶಕ್ತಿಮೀರಿ ರಕ್ಷಿಸುವಳೋ (ಪ್ರಾಣ ಕೊಟ್ಟಾದರೂ) ಅದೇರೀತಿಯಲ್ಲಿ ಅಸೀಮ ಮೈತ್ರಿಯಿಂದ ಸರ್ವಜೀವಿಗಳ ಮೇಲೆ ಮೈತ್ರಿ ಪ್ರಸರಿಸಲಿ.
                ಹೀಗೆ ಒಬ್ಬನು ಇಡೀ ವಿಶ್ವಕ್ಕೆ (ಬ್ರಹ್ಮಾಂಡಕ್ಕೆ) ತಡೆಯಿಲ್ಲದೆ, ಸರ್ವರನ್ನು ಹಾರೈಸುವ ಮನಸ್ಸಿನಿಂದ ಕೂಡಿರಲಿ, ಮೇಲೆ ಹಾರೈಸಲಿ, ಕೆಳಗೆ ಹಾರೈಸಲಿ, ಸುತ್ತಲು ಹಾರೈಸಲಿ ಅವರು ದ್ವೇಷವಿಲ್ಲದೆ, ಕೋಪವಿಲ್ಲದೆ ಮತ್ತು ಶೋಕವಿಲ್ಲದೆ ಎಲ್ಲಾ ದಿಕ್ಕುಗಳಲ್ಲೂ ಪ್ರಸರಿಸಲಿ.
                ಸಾಧಕನು ಈ ರೀತಿಯಾದ ಚಿತ್ತದಿಂದ ಆತನು ನಿಂತಿರಲಿ, ನಡೆಯುತ್ತಿರಲಿ, ಕುಳಿತಿರಲಿ ಅಥವ ಮಲಗಿರಲಿ ಆತನು ಸದಾ ಈ ರೀತಿಯ ಚಿತ್ತದಿಂದಲೇ ಕೂಡಿರಲಿ. ಎಲ್ಲಿಯವರೆಗೆ ಆತ ಜಾಗ್ರತನೋ, ಅಲ್ಲಿಯವರೆಗೆ ಹೀಗೆಯೇ ಸಾಧನೆ ಮಾಡುವುದಕ್ಕೆ ಅವರು ಬ್ರಹ್ಮವಿಹಾರ ಎನ್ನುತ್ತಾರೆ.
3ನೇಯ ಪಯರ್ಾಯ ವಿಧಾನ :
ಇಲ್ಲಿ ಆತನು ಈ ರೀತಿ ಮೈತ್ರಿಯನ್ನು ಧ್ಯಾನಿಸುತ್ತಾನೆ.
1.            ಎಲ್ಲಾ ಜೀವಿಗಳು ದ್ವೇಷದಿಂದ, ಶೋಕದಿಂದ, ನೋವಿನಿಂದ ಮುಕ್ತರಾಗಲಿ ಹಾಗು ಸದಾ ಸುಖದಿಂದ ಇರುವಂತಾಗಲಿ.
2.            ಉಸಿರಾಡುವಂತಹ ಎಲ್ಲಾ ಜೀವಿಗಳು ದ್ವೇಷದಿಂದ, ಶೋಕದಿಂದ, ನೋವಿನಿಂದ ಮುಕ್ತರಾಗಲಿ ಹಾಗು ಸದಾ ಸುಖದಿಂದ ಇರುವಂತಾಗಲಿ.
3.            ಎಲ್ಲಾ ಪ್ರಾಣಿಗಳು ದ್ವೇಷದಿಂದ, ಶೋಕದಿಂದ, ನೋವಿನಿಂದ ಮುಕ್ತರಾಗಲಿ ಹಾಗು ಸದಾ ಸುಖದಿಂದ ಇರುವಂತಾಗಲಿ.
4.            ಎಲ್ಲಾ ವ್ಯಕ್ತಿಗಳು ದ್ವೇಷದಿಂದ, ಶೋಕದಿಂದ, ನೋವಿನಿಂದ ಮುಕ್ತರಾಗಲಿ ಹಾಗು ಸದಾ ಸುಖದಿಂದ ಇರುವಂತಾಗಲಿ.
5.            ಯಾವುವೆಲ್ಲಾ ತಾನು ಎಂಬ ಭಾವನೆ ಹೊಂದಿವೆಯೋ ಅವೆಲ್ಲಾ ಜೀವಿಗಳು ದ್ವೇಷದಿಂದ, ಶೋಕದಿಂದ, ನೋವಿನಿಂದ ಮುಕ್ತರಾಗಲಿ ಹಾಗು ಸದಾ ಸುಖದಿಂದ ಇರುವಂತಾಗಲಿ.
4ನೇಯ ಪಯರ್ಾಯ ವಿಧಾನ :
ಇಲ್ಲಿ ಆತನು ಈ ರೀತಿ ಮೈತ್ರಿಯನ್ನು ಧ್ಯಾನಿಸುತ್ತಾರೆ.
1.            ಎಲ್ಲಾ ಸ್ತ್ರೀಯರು ದ್ವೇಷದಿಂದ, ರೋಗದಿಂದ, ಶೋಕದಿಂದ, ಮುಕ್ತರಾಗಿ ಸದಾ ಸುಖಿಯಾಗಿರಲಿ.
2.            ಎಲ್ಲಾ ಪುರುಷರು ದ್ವೇಷದಿಂದ, ರೋಗದಿಂದ, ಶೋಕದಿಂದ, ಮುಕ್ತರಾಗಿ ಸದಾ ಸುಖಿಯಾಗಿರಲಿ.
3.            ಎಲ್ಲಾ ಆರ್ಯರು (ಶ್ರೇಷ್ಠರು) ದ್ವೇಷದಿಂದ, ರೋಗದಿಂದ, ಶೋಕದಿಂದ, ಮುಕ್ತರಾಗಿ ಸದಾ ಸುಖಿಯಾಗಿರಲಿ.
4.            ಎಲ್ಲಾ ಅನಾರ್ಯರು (ಶ್ರೇಷ್ಠರಲ್ಲದಂತಹ) ದ್ವೇಷದಿಂದ, ರೋಗದಿಂದ, ಶೋಕದಿಂದ, ಮುಕ್ತರಾಗಿ ಸದಾ ಸುಖಿಯಾಗಿರಲಿ.
5.            ಎಲ್ಲಾ ದೇವತೆಗಳು ದ್ವೇಷದಿಂದ, ರೋಗದಿಂದ, ಶೋಕದಿಂದ, ಮುಕ್ತರಾಗಿ ಸದಾ ಸುಖಿಯಾಗಿರಲಿ.
6.            ಎಲ್ಲಾ ಮಾನವರು ದ್ವೇಷದಿಂದ, ರೋಗದಿಂದ, ಶೋಕದಿಂದ, ಮುಕ್ತರಾಗಿ ಸದಾ ಸುಖಿಯಾಗಿರಲಿ.
7.            ಎಲ್ಲಾ ದುರ್ಗತಿಯ ಜೀವಿಗಳು ದ್ವೇಷದಿಂದ, ರೋಗದಿಂದ, ಶೋಕದಿಂದ, ಮುಕ್ತರಾಗಿ ಸದಾ ಸುಖಿಯಾಗಿರಲಿ.
5ನೇಯ ಪಯರ್ಾಯ ವಿಧಾನ :
ಇಲ್ಲಿ ಆತನು ಈ ರೀತಿ ಮೈತ್ರಿಯನ್ನು ಧ್ಯಾನಿಸುತ್ತಾನೆ :
1.            ಪೂರ್ವ ದಿಕ್ಕಿನಲ್ಲಿರುವ ಎಲ್ಲಾ ಜೀವಿಗಳು, ದುಃಖದಿಂದ, ನೋವಿನಿಂದ, ದ್ವೇಷದಿಂದ ಮುಕ್ತರಾಗಿ, ಸದಾ ಸುಖಿಯಾಗಿರಲಿ.
2.            ಪಶ್ಚಿಮ ದಿಕ್ಕಿನಲ್ಲಿರುವ ಎಲ್ಲಾ ಜೀವಿಗಳು, ದುಃಖದಿಂದ, ನೋವಿನಿಂದ, ದ್ವೇಷದಿಂದ ಮುಕ್ತರಾಗಿ, ಸದಾ ಸುಖಿಯಾಗಿರಲಿ.
3.            ಉತ್ತರ ದಿಕ್ಕಿನಲ್ಲಿರುವ ಎಲ್ಲಾ ಜೀವಿಗಳು, ದುಃಖದಿಂದ, ನೋವಿನಿಂದ, ದ್ವೇಷದಿಂದ ಮುಕ್ತರಾಗಿ, ಸದಾ ಸುಖಿಯಾಗಿರಲಿ.
4.            ದಕ್ಷಿಣ ದಿಕ್ಕಿನಲ್ಲಿರುವ ಎಲ್ಲಾ ಜೀವಿಗಳು, ದುಃಖದಿಂದ, ನೋವಿನಿಂದ, ದ್ವೇಷದಿಂದ ಮುಕ್ತರಾಗಿ, ಸದಾ ಸುಖಿಯಾಗಿರಲಿ.
5.            ಊದ್ರ್ವ ದಿಕ್ಕಿನಲ್ಲಿರುವ (ಮೇಲೆ) ಎಲ್ಲಾ ಜೀವಿಗಳು, ದುಃಖದಿಂದ, ನೋವಿನಿಂದ, ದ್ವೇಷದಿಂದ ಮುಕ್ತರಾಗಿ, ಸದಾ ಸುಖಿಯಾಗಿರಲಿ.
6.            ಅಧೋ ದಿಕ್ಕಿನಲ್ಲಿರುವ (ಕೆಳಗೆ) ಎಲ್ಲಾ ಜೀವಿಗಳು, ದುಃಖದಿಂದ, ನೋವಿನಿಂದ, ದ್ವೇಷದಿಂದ ಮುಕ್ತರಾಗಿ, ಸದಾ ಸುಖಿಯಾಗಿರಲಿ.
6ನೇಯ ಮಿಶ್ರಣ ವಿಧಾನ ಇಲ್ಲಿ ಹೀಗೆ ಧ್ಯಾನಿಸುತ್ತಾನೆ.
                ಪೂರ್ವ ದಿಕ್ಕಿನಲ್ಲಿರುವ ಎಲ್ಲಾ ಆರ್ಯರು ದುಃಖದಿಂದ ಮುಕ್ತರಾಗಿ ಸದಾ ಸುಖಿಯಾಗಿರಲಿ
                ಪಶ್ಚಿಮ ದಿಕ್ಕಿನಲ್ಲಿರುವ ಎಲ್ಲಾ ದೇವತೆಗಳು ದುಃಖದಿಂದ ಮುಕ್ತರಾಗಿ ಸದಾ ಸುಖಿಯಾಗಿರಲಿ
                ಉತ್ತರ ದಿಕ್ಕಿನಲ್ಲಿರುವ ಎಲ್ಲಾ ಮಾನವರು ದುಃಖದಿಂದ ಮುಕ್ತರಾಗಿ ಸದಾ ಸುಖಿಯಾಗಿರಲಿ
                ಹೀಗೆಯೇ ಎಲ್ಲಾ ದಿಕ್ಕುಗಳು ಮತ್ತು 4ನೆಯ ವಿಧಾನದ 7 ಗುಂಪುಗಳನ್ನು ಮಿಶ್ರಣ ಮಾಡಿ ಧ್ಯಾನಿಸಬೆಕು.
                ಈ ರೀತಿಯಲ್ಲಿ ಆತನು ಮೈತ್ರಿಭರಿತನಾಗಿ ಪ್ರತಿ ದಿಕ್ಕುಗಳಲ್ಲಿ ಮೈತ್ರಿ ಪ್ರಸರಿಸುತ್ತಾ, ಹಾರೈಸುತ್ತಾ ವಿಹರಿಸುವನು. ಎಲ್ಲೆಲ್ಲೂ ಸಮನಾಗಿ, ಸರ್ವಜೀವಿಗಳ ಮೇಲೆ ಇಡೀ ಬ್ರಹ್ಮಾಂಡದ ಮೇಲೆ ಮೈತ್ರಿಚಿತ್ತದವನಾಗಿ, ಅಳತೆಯಿಲ್ಲದ ರೀತಿ ಪ್ರಸರಿಸಿ, ಅಸೀಮವಾಗಿ, ಯಾವುದೇ ರೀತಿ ಶತ್ರುತ್ವವಿಲ್ಲದೆ, ಯಾವುದೇ ರೀತಿಯ ಶೋಕವಿಲ್ಲದೆ ನೆಲಸುತ್ತಾನೆ. ಎಲ್ಲಾ ಜೀವಿಗಳ ಮೇಲೆ, ಎಲ್ಲಾ ಪ್ರಾಣಿಗಳ ಮೇಲೆ, ಎಲ್ಲಾ ಕೀಟಗಳ ಮೇಲೆ, ನಾನು, ನನ್ನದು ಎಂದು ಭಾವಿಸುವ ಎಲ್ಲಾ ಜೀವಿಗಳ ಎಲ್ಲರ ಮೇಲೆ ಯಾವುದೇ ರೀತಿಯ ಬೇಧಭಾವವಿಲ್ಲದ ಸಮನಾಗಿ ಮೈತ್ರಿಧ್ಯಾನ ಮಾಡಿದಾಗ ಆತನಿಗೆ ಪ್ರಥಮ ಧ್ಯಾನ ಲಭಿಸುತ್ತದೆ.
ಆತನು ನಾಲ್ಕು ರೀತಿಯಲ್ಲಿ ಪ್ರಥಮ ಸಮಾಧಿ ಪಡೆಯಬಹುದು.
1.            ಎಲ್ಲಾ ಜೀವಿಗಳೂ ದ್ವೇಷದಿಂದ ಮುಕ್ತರಾಗಲಿ
2.            ಎಲ್ಲಾ ಜೀವಿಗಳೂ ಶೋಕದಿಂದ ಮುಕ್ತರಾಗಲಿ
3.            ಎಲ್ಲಾ ಜೀವಿಗಳೂ ನೋವಿನಿಂದ ಮುಕ್ತರಾಗಲಿ
4.            ಎಲ್ಲಾ ಜೀವಿಗಳೂ ಸದಾ ಸುಖಿಯಾಗಿ ಇರುವಂತಾಗಲಿ.
                ಈ ರೀತಿಯಲ್ಲಿ ಒಂದೊಂದೇ ವಾಕ್ಯದಲ್ಲೂ ಸಮಾಧಿಗಳಿಸಬಹುದು. ಮಿಶ್ರಣ ವಿಧಾನದಲ್ಲಿ ಆತನು 528 ರೀತಿಯಲ್ಲಿ ಮೈತ್ರಿಧ್ಯಾನ ಆಚರಿಸಿ ಧ್ಯಾನ ಲಾಭಗಳನ್ನು ಪಡೆಯಬಹುದು.
                ಹಾಗೆಯೇ ಮುಂದುವರೆದು ತ್ರಿತೀಯ ಧ್ಯಾನದ ಹಂತಗಳನ್ನು ಮುಟ್ಟಬಹುದು. ಶುಭ ವಿಮೋಕ್ಷಗಳಲ್ಲಿ ಮೈತ್ರಿ ಧ್ಯಾನವು ಶ್ರೇಷ್ಠವಾದುದು ಎನ್ನುತ್ತಾರೆ.

                ಹೀಗೆ ಓ ಭಿಕ್ಷುಗಳೇ ಈ ರೀತಿ ಮೈತ್ರಿ ಧ್ಯಾನದಿಂದ ಚಿತ್ತವಿಮುಕ್ತಿ ಪಡೆಯುತ್ತ, ಅಭಿವೃದ್ಧಿಗೊಳಿಸುತ್ತಾ ಬೆಳವಣಿಗೆ ಮಾಡುತ್ತಾ, ಈ ಮೈತ್ರಿ ಧ್ಯಾನವನ್ನೇ ವಾಹನದಂತೆ ಬಳಸುತ್ತಾ (ಅಂದರೆ ಧ್ಯಾನದಲ್ಲಿ ಅತ್ಯಂತ ಹಿಡಿತವಿಟ್ಟಿರುವ) ಚೆನ್ನಾಗಿ ಸ್ಥಾಫಿಸಿ ಮತ್ತು ದೃಢವಾಗಿ ಪ್ರತಿಷ್ಠಾಪಿಸಿ (ಅಂದರೆ ಯವುದರಿಂದಲೂ ಅಲ್ಲಾಡುವ) ಶ್ರೇಷ್ಠತ್ವವನ್ನು ಪಡೆಯುತ್ತಾ, ಪರಿಪೂರ್ಣತೆಯನ್ನು ಸಾಧಿಸಿದಾಗ ಆತನು ಹನ್ನೊಂದು ಲಾಭಗಳನ್ನು ಪಡೆಯುತ್ತಾನೆ.

No comments:

Post a Comment