Monday 19 September 2016

caganussati in kannada ( ತ್ಯಾಗನುಸ್ಸತಿ)

 ತ್ಯಾಗನುಸ್ಸತಿ
                ಹೇಗೆ ಪುಷ್ಪರಾಶಿಗಳಿಂದ ಅನೇಕ ಬಗೆಯ ಮಾಲೆಗಳನ್ನು ರಚಿಸಬಹುದೋ ಹಾಗೆಯೇ ಜನ್ಮಿಸಿ-ಮೃತ್ಯುವಪ್ಪುವ ಮನುಜನು ಸಹಾ ಕುಶಲ ಕಾರ್ಯಗಳನ್ನು ಬಹುವಾಗಿ ಮಾಡಬಹುದು
                ದಾನ ಗುಣವನು ಪ್ರೋತ್ಸಾಹಿಸುವಂತಹ ಧಮ್ಮಪದದ ಗಾಥೆಯಿದು. ಬುದ್ಧ ಭಗವಾನರು ಲೋಕವನ್ನು ನಾಲ್ಕು ಗುಣಗಳು ಕಾಪಾಡುತ್ತದೆ ಎನ್ನುತ್ತಾರೆ. ಅವೆಂದರೆ ಸುವಾಚ, ಶೀಲ, ಸಮದಶರ್ಿತ್ವ ಮತ್ತು ದಾನ.
                ನಿಜಕ್ಕೂ ದಾನ ಗುಣವು ಪರಮೋತ್ತರವಾದುದು. ಈ ದಾನಿಯು ತನ್ನ ದಾನಗಳಿಂದ ಸಂತೃಪ್ತನಾಗಿ ಅವುಗಳನ್ನು ಪುನರ್ ಅವಲೋಕಿಸುತ್ತಾನೆ. ಮತ್ತೆ ಮತ್ತೆ ಚಿಂತಿಸುತ್ತಾನೆ, ಆನಂದಿಸುತ್ತಾನೆ.  ದೃಢವಾದ ಏಕಾಗ್ರತೆ ಪಡೆದು ಪಂಚ ನಿವರಣಗಳಿಂದ ಮುಕ್ತನಾಗುತ್ತಾನೆ. ಉಪಚರ ಸಮಾಧಿ ಪಡೆಯುತ್ತಾನೆ.
                ತ್ಯಾಗಾನುಸ್ಸತಿಯು ಕೇವಲ ದಾನಿ ಮಾಡುವಂತಹುದು. ಅಂದರೆ ಮೊದಲು ದಾನ ನೀಡುವವನು ಆಗಿ ನಂತರ ದಾನದ ಬಗ್ಗೆ ಧ್ಯಾನ ಮಾಡಬೇಕಾಗುತ್ತದೆ. ಆ ಪುನರ್ ಅವಲೋಕನ ಮತ್ತು ಭವಿಷ್ಯದ ಲಾಭ ಅರಿತು ವರ್ತಮಾನದಲ್ಲಿ ಕ್ಲೇಷಮುಕ್ತನಾಗಿ ಸದಾ ಆನಂದದ ರಸದಲ್ಲೇ ಜೀವಿಸುವ ಸುಮಧುರ ಚಿಂತನೆಯೇ ತ್ಯಾನುಸ್ಸತಿಯಾಗಿದೆ.
                ಯಾರು ತ್ಯಾಗಾನುಸ್ಸತಿ ಮಾಡಲು ಸಿದ್ಧರಾಗಿರುವವರೋ ಅವರು ನಿರ್ಜನ, ನಿಶ್ಶಬ್ದ ವಾತಾವರಣದಲ್ಲಿ, ಪದ್ಮಾಸನಬದ್ಧನಾಗಿ ಕುಳಿತು ಹಿಂದೆ ತಾನು ಮಾಡಿರುವ ದಾನಗಳನ್ನು ನೆನೆಯುತ್ತ ಆನಂದಿತನಾಗುತ್ತಾನೆ, ಅವುಗಳನ್ನು ಗಾಢವಾಗಿ, ಏಕಾಗ್ರವಾಗಿ ನೆನೆಯುತ ಆನಂದವನ್ನು ವೃದ್ಧಿಸುತ್ತಾನೆ. ನಿಜಕ್ಕೂ ದಾನವು ಪ್ರಶಂಸನೀಯ! ದೇವತೆಗಳ ಬಳಿ ತಲುಪಿಸುವಂತಹ, ಪುರುಷೋತ್ತಮನನ್ನಾಗಿ ಮಾಡುವಂತಹ, ನನ್ನದೆನ್ನುವ ತೃಷ್ಣೆಯನ್ನು ನಾಶಮಾಡುವ, ನಾನು ಎಂಬ ಅಹಂಕಾರನ್ನು ಸ್ತಬ್ದಗೊಳಿಸುವಂತಹ ಈ ಜಗತ್ತೆ ಶ್ರೇಷ್ಠ, ಸುಖಕರ, ಈ ಇಂದ್ರೀಯ ಯೋಗಗಳು ಸುಖ ಮತ್ತು ಈ ಐಶ್ವರ್ಯವೇ ಸರ್ವಸ್ವ ಎಂಬ ಮಿಥ್ಯತೆಯನ್ನು ಮೌಢ್ಯತೆಯನ್ನು ನಾಶಮಾಡುವ ದಾನಗುಣ ನಿಜಕ್ಕೂ ಶ್ರೇಷ್ಠ ಹಾಗು ಶ್ರೇಯಸ್ಕರವಾದುದು. ನಾನು ಪ್ರತಿನಿತ್ಯ ದಾನ ಮಾಡುತ್ತಿರುವೆ, ಮುಂದೆಯು ಮಾಡುವೆನು. ನನ್ನ ಬಳಿ ಬರಿಗೈಯಿಂದ ಯಾರು ಹೋಗಬಾರದು. ನಾನು ಹಿಂದೆಯು ಸ್ವಾರ್ಥವನ್ನು ದಮಿಸಿದ್ದೇನೆ ಹಾಗು ನನ್ನದೆನ್ನುವ ಐಶ್ವರ್ಯ, ಹಣ, ಆಹಾರ, ಬಟ್ಟೆ, ವಸತಿ, ಔಷಧ, ಎಲ್ಲವನ್ನೂ ನೀಡಿದ್ದೇನೆ.
                ನಾನು ಹಲವಾರು ಜನರಿಗೆ, ಪ್ರಾಣಿಗಳಿಗೆ ಅಭಯ ನೀಡುವೆನು. ನನ್ನ ಶರೀರವನ್ನು ಸಹ ನಾನು ಶಿಬಿಯಂತೆ ದಾನ ಮಾಡುವೆ, ನಾನು ವಸ್ಸಂತರ ಬೋಧಿಸತ್ವರಂತೆ ನನ್ನ ಸರ್ವಸ್ವ ಧಾನಗೈಯುವೆ. ಅನಾಥ ಪಿಂಡಕರಂತೆ ಸಂಘಕ್ಕೆ ಆಧಾರನಾಗಿರುವೆ, ಅನಾಥ ಬಂಧುವಾಗುವೆ.
                ನಾನು ಆಮಿಷದಾನ ಮಾಡಿರುವೆ.
                ನಾನು ಅಭಯದಾನ ಮಾಡಿರುವೆ, ಮುಂದೆಯೂ ಮಾಡುವೆ
                ನಾನು ಧಮ್ಮದಾನ ಮಾಡಿರುವೆ, ಮುಂದೆಯೂ ಮಾಡುವೆ
                ನಾನು ಧಾನಾಧಿಪತಿ ಆಗುವೆ.
                ನನ್ನನ್ನು ಕೇಳುವ, ಕೇಳದೆಯಿರುವ ಎಲ್ಲರನ್ನು ಸಹಾಯ ಮಾಡುವೆ, ಮಾಡಿರುವೆ, ಯಾರು ಭಿಕ್ಷುಗಳಿಗೆ, ಬಡವರಿಗೆ ಆಹಾರ ದಿನ ನೀಡುವರೋ ಅವರು ಮಾನವರಾಗಿ ಅಥವಾ ದೇವತೆಗಳಾಗಿ ಹುಟ್ಟುವರು. ಹೀಗಾಗಿ ನಾನು ಅತ್ಯಂತ ಧನ್ಯನಾಗಿರುವೆ. ನಾನು ಲೋಭಮುಕ್ತನಾಗಿರುವೆ. ದಾನಿಯು ಸರ್ವಜನ ಪ್ರಿಯನಾಗುವನು.
                ನಾನು ಲೋಭವಿಲ್ಲದೆ, ದ್ವೇಷವಿಲ್ಲದೆ, ಮೋಹವಿಲ್ಲದೆ ದಾನ ಮಾಡಿರುವೆ. ನಾನು ಲೋಭರಹಿತರಿಗೆ, ದ್ವೇಷರಹಿತರಿಗೆ, ಮೋಹರಹಿತರಿಗೆ ದಾನ ಮಾಡಿರುವೆ. ನನಗೆ ಇದು ಅತ್ಯಂತ ಲಾಭಕಾರಿಯಾಗಿದೆ. ನಾನು ನಿಜಕ್ಕೂ ಧನ್ಯ !
                ನಾನು ನಿಜಕ್ಕೂ ಧನ್ಯ ಎಂದು ಗಾಢವಾಗಿ ಆನಂದಿಸುತ್ತಾ ಚಿಂತಿಸುತ್ತಾನೆ. ಹಾಗು ಉಪಚರ ಸಮಾಧಿ ಹೊಂದುತ್ತಾನೆ.

ತ್ಯಾಗಾನುಸತಿಯ ಲಾಭಗಳು :
1.            ಪರಮಾನಂದ ಪಡೆಯುತ್ತಾನೆ.
2.            ಸ್ವಾರ್ಥರಹಿತನಾಗುತ್ತಾನೆ.
3.            ಸರ್ವಜನಪ್ರಿಯನಾಗುತ್ತಾನೆ.
4.            ಪರರಿಗೆ ಹೆದರುವುದಿಲ್ಲ.
5.            ಮೆತ್ತಾ ಮುದಿತಾ ಮತ್ತು ಕರುಣ ಧ್ಯಾನ ಗಳಿಸುತ್ತಾನೆ.
6.            ಧ್ಯಾನ ಗಳಿಸುತ್ತಾನೆ.
7.            ಸುಗತಿ ಪ್ರಾಪ್ತಿಯಾಗುತ್ತದೆ.
                ಈಗ ಮಾನವ ನಿಜಕ್ಕೂ ಜ್ಞಾನಿಯಾಗಿದ್ದರೆ, ಆತನ ನಿರಂತರ ಕೆಲಸವು ತ್ಯಾಗಾನುಸ್ಸತಿಯಾಗಿದೆ. ನಿಜಕ್ಕೂ ಅಂತಹ ಬೃಹತ್ ಗುಣಶಾಲಿಗಳು ಧನ್ಯರೇ ಸರಿ!)

ಇದು ತ್ಯಾಗಾನುಸ್ಸತಿಯಾಗಿದೆ

No comments:

Post a Comment