Tuesday 12 December 2017

ಕುಶಲ, ಅಕುಶಲ ಮತ್ತು ಅವುಗಳಿಗೆ ಮೂಲ

ಕುಶಲ, ಅಕುಶಲ ಮತ್ತು ಅವುಗಳಿಗೆ ಮೂಲ

                ಮಿತ್ರರೇ, ಯಾವಾಗ ಆರ್ಯ ಶ್ರಾವಕನು ಅಕುಶಲವನ್ನು ಮತ್ತು ಅಕುಶಲ ಮೂಲವನ್ನು, ಹಾಗೆಯೇ ಕುಶಲವನ್ನು ಮತ್ತು ಕುಶಲ ಮೂಲವನ್ನು ಅರಿಯುತ್ತಾನೆಯೋ ರೀತಿಯಾಗಿ ಆತನು ಸಮ್ಮಾದೃಷ್ಟಿಯುಳ್ಳವನಾಗುತ್ತಾನೆ. ಆತನ ಯೋಚನಾ ಕ್ರಮವು ನೇರಯುತ ವಾಗಿರುತ್ತದೆ, ನೇರದೃಷ್ಟಿಯಿಂದಿರುತ್ತಾರೆ. ಹಾಗು ಧಮ್ಮದಲ್ಲಿ ಪೂರ್ಣ ಶ್ರದ್ಧೆಯುಳ್ಳವ ನಾಗುತ್ತಾನೆ ಮತ್ತು ಆತನು ನಿಜಧಮ್ಮದ ಸನಿಹದಲ್ಲಿರುತ್ತಾನೆ.
                ಮತ್ತು ಮಿತ್ರರೇ ಯಾವುದು ಅಕುಶಲ? ಮತ್ತು ಅವುಗಳ ಮೂಲ ಯಾವುದು. ಹಾಗೆಯೇ ಕುಶಲ ಯಾವುದು? ಮತ್ತು ಅವುಗಳ ಮೂಲ ಯಾವುದು?
                ಜೀವಿಗಳ ಹತ್ಯೆ ಅಕುಶಲ
                ಕೂಡದಿದ್ದುದನ್ನು ತೆಗೆದುಕೊಳ್ಳುವುದು (ಕಳ್ಳತನ) ಅಕುಶಲ
                ಅನೈತಿಕತೆಯ ಕಾಮುಕತನ ಅಕುಶಲ
                ಸುಳ್ಳನ್ನು ನುಡಿಯುವಿಕೆ ಅಕುಶಲ
                ಚಾಡಿಯನ್ನು ನುಡಿಯುವಿಕೆ ಅಕುಶಲ
                ಕಟು ನಿಂದೆಯನ್ನು ನುಡಿಯುವಿಕೆ ಅಕುಶಲ
                ಕಾಡುಹರಟೆಯಲ್ಲಿ ತಲ್ಲೀನನಾಗುವಿಕೆ ಅಕುಶಲ
                ದುರಾಸೆಯು ಅಕುಶಲ
                ದ್ವೇಷಿಸುವಿಕೆ ಅಕುಶಲ
                ಮಿಥ್ಯಾ ದೃಷ್ಟಿಯಿಂದ ಕೂಡಿರುವಿಕೆ ಅಕುಶಲ
                ಇವಿಷ್ಟು ಅಕುಶಲವಾಗಿವೆ ಮತ್ತು ಯಾವುದು ಅಕುಶಲದ ಮೂಲವಾಗಿದೆ?
                ಲೋಭವು, ಅಕುಶಲದ ಮೂಲವಾಗಿದೆ
                ದ್ವೇಷವು ಅಕುಶಲದ ಮೂಲವಾಗಿದೆ
                ಮೋಹವು ಅಕುಶಲದ ಮೂಲವಾಗಿದೆ
                ಮತ್ತೆ ಯಾವುದು ಕುಶಲವಾಗಿದೆ ?
                ಜೀವಹತ್ಯೆಯಿಂದ ದೂರವಾಗುವಿಕೆಯು ಕುಶಲವಾಗಿದೆ.
                ಕಳ್ಳತನದಿಂದ ದೂರವಾಗುವಿಕೆಯು ಕುಶಲವಾಗಿದೆ.
                ಅನೈತಿಕತೆಯ ಕಾಮುಕತನದಿಂದ ದೂರವಾಗುವಿಕೆಯು ಕುಶಲವಾಗಿದೆ.
                ಸುಳ್ಳು ಸಂಭಾಷಣೆಯಿಂದ ದೂರವಾಗುವಿಕೆಯು ಕುಶಲವಾಗಿದೆ.
                ಚಾಡಿಯುತ ಸಂಭಾಷಣೆಯಿಂದ ದೂರವಾಗುವಿಕೆಯು ಕುಶಲವಾಗಿದೆ.
                ಕಟು ನಿಂದೆಯುತ ಸಂಭಾಷಣೆಯಿಂದ ದೂರವಾಗುವಿಕೆಯು ಕುಶಲವಾಗಿದೆ.
                ಕಾಡುಹರಟೆಯುತ ಸಂಭಾಷಣೆಯಿಂದ ದೂರವಾಗುವಿಕೆಯು ಕುಶಲವಾಗಿದೆ.
                ದುರಾಸೆಯಿಂದ ದೂರವಾಗುವಿಕೆಯು ಕುಶಲವಾಗಿದೆ.
                ದ್ವೇಷದಿಂದ ದೂರವಾಗುವಿಕೆಯು ಕುಶಲವಾಗಿದೆ.
                ಸಮ್ಮಾದೃಷ್ಟಿಯಿಂದ ಕೂಡಿರುವುದೇ ಕುಶಲವಾಗಿದೆ, ಇದೇ ಕುಶಲವಾಗಿದೆ.
                ಮತ್ತೆ ಯಾವುದು ಕುಶಲಗಳ ಮೂಲ
                ಅಲೋಭ ಕುಶಲಗಳ ಮೂಲವಾಗಿದೆ
                ಅದ್ವೇಷ ಕುಶಲಗಳ ಮೂಲವಾಗಿದೆ
                ಅಮೋಹ ಕುಶಲಗಳ ಮೂಲವಾಗಿದೆ.
                ಯಾವಾಗ ಆರ್ಯ ಶ್ರಾವಕನು ರೀತಿಯಾಗಿ ಅಕುಶಲ, ಕುಶಲ ಮತ್ತು ಅವುಗಳ ಮೂಲಗಳನ್ನು ಅರಿಯುತ್ತಾನೋ ಆತನು ಲೋಭವನ್ನು ವಜರ್ಿಸುತ್ತಾನೆ, ದ್ವೇಷವನ್ನು ವಜರ್ಿಸುತ್ತಾನೆ ಮತ್ತು ಮೋಹವನ್ನು ವಜರ್ಿಸುತ್ತಾನೆ. ನಾನು ಎಂಬ ಅಹಂಕಾರದಿಂದ ವಿರತನಾಗಿ, ಅಜ್ಞಾನವನ್ನು ತ್ಯಾಗಮಾಡಿ, ಇಲ್ಲಿಯೇ ಈಗಲೇ ಸಮ್ಮಾದೃಷ್ಟಿಯುಳ್ಳವನಾಗಿ ದುಃಖದ ಅಂತ್ಯಮಾಡುತ್ತಾನೆ.
10 ಕುಶಲ ಕರ್ಮಗಳು
                1.            ದಾನ
                2.            ಶೀಲ
                3.            ಧ್ಯಾನ
                4.            ಗೌರವ
                5.            ಸೇವೆ
                6.            ಪುಣ್ಯದಾನ
                7.            ಪರರ ಪುಣ್ಯದಲ್ಲಿ ಆನಂದಿಸುವುದು
                8.            ಧಮ್ಮ ಆಲಿಸುವಿಕೆ
                9.            ಧಮ್ಮ ಬೋಧಿಸುವಿಕೆ
                10.          ಯೋಗ್ಯ ದೃಷ್ಟಿಕೋನಗಳನ್ನು (ಸಮ್ಮಾದೃಷ್ಟಿ) ನೇರಗೊಳಿಸುವಿಕೆ (ಬೆಳಸುವಿಕೆ)
.               ಇವುಗಳಲ್ಲಿ 1 ದಾನ, 5 ಸೇವೆ, 6 ಪುಣ್ಯದಾನ 9 ಧಮ್ಮ ಬೋಧಿಸುವಿಕೆ ಇವು ದಾನದ ಗುಂಪಿಗೆ ಸೇರುತ್ತವೆ.
.               2 ಶೀಲ, 4 ಗೌರವ, 3 ಪರರ ಪುಣ್ಯದಲ್ಲಿ ಆನಂದಿಸುವಿಕೆ ಇವು ಶೀಲದ ಗುಂಪಿಗೆ ಸೇರುತ್ತವೆ.
.               3 ಧ್ಯಾನವು ಸಮಾಧಿ ಗುಂಪಿಗೆ ಸೇರುತ್ತದೆ.
ಗಿ.            8 ಧಮ್ಮ ಆಲಿಸುವಿಕೆ ಮತ್ತು ಯೋಗ್ಯ ದೃಷ್ಟಿಕೋನಗಳನ್ನು ಬೆಳೆಸುವಿಕೆ ಪ್ರಜ್ಞಾ ಗುಂಪಿಗೆ ಸೇರುತ್ತದೆ.

                ರೀತಿಯಾಗಿ ದಾನ, ಶೀಲ, ಸಮಾಧಿ, ಪ್ರಜ್ಞಾವು ಕುಶಲ ಕರ್ಮಗಳ ನಿಧಿಯಾಗಿದೆ. ಜ್ಞಾನಿಗಳು ಇದನ್ನು ಪರಮ ಐಶ್ವರ್ಯವೆಂದು ಭಾವಿಸಿ ಇವನ್ನು ಸದಾ ವೃದ್ಧಿಗೊಳಿಸುವರು

No comments:

Post a Comment