Tuesday 12 December 2017

ಸಮ್ಮಾಸಂಕಲ್ಪ (ಯೋಗ್ಯವಾದ ಸಂಕಲ್ಪ/ಯೋಚನೆಗಳು)

ಸಮ್ಮಾಸಂಕಲ್ಪ (ಯೋಗ್ಯವಾದ ಸಂಕಲ್ಪ/ಯೋಚನೆಗಳು) :

                ಸಮ್ಮಾ (ಸಂಯಕ್) ಸಂಕಪ್ಪ (ಸಂಕಲ್ಪ) ಇದಕ್ಕೆ ರೀತಿಯ ಅರ್ಥಗಳನ್ನು ನೀಡಬಹುದು. ಯೋಗ್ಯವಾದ ಸಂಕಲ್ಪ ಅಥವಾ ಯೋಗ್ಯವಾದ ನಿಧರ್ಾರ ಅಥವಾ ಯೋಗ್ಯವಾದ ಆಕಾಂಕ್ಷೆ ಅಥವಾ ಯೋಗ್ಯವಾದ ಚಿಂತನೆ ಅಥವಾ ಯೋಗ್ಯವಾದ ಯೋಚನೆಗಳು. ಇಲ್ಲಿ ಸಾಧಕ ತನ್ನ ಧ್ಯಾನದ ಉಳಿದ ಸಮಯದಲ್ಲಿ ಅಥವಾ ಬಿಡುವಿನ ಸಮಯದಲ್ಲಿ ಅಕುಶಲದಿಂದ ಮುಕ್ತನಾಗಲು ಸದಾ ಹಾತೊರೆಯುತ್ತಾನೆ. ಹಾಗೆಯೇ ಸಮ್ಮಾದೃಷ್ಟಿಯಿಂದ ಆತನಿಗೆ ಯೋಗ್ಯವಾದುದನ್ನು ಆರಿಸಲು ನಿಧರ್ಾರ ಶಕ್ತಿಯಿರುತ್ತದೆ. ಹೀಗಾಗಿ ಆತನು ಯೋಗ್ಯವಾದುದನ್ನೇ ಆರಿಸುತ್ತಾನೆ. ಬೋಧಿಯನ್ನು ಮತ್ತು ನಿಬ್ಬಾಣವನ್ನು ಮತ್ತು ಆರ್ಯ ಅಷ್ಠಾಂಗ ಮಾರ್ಗದಲ್ಲಿ ಕ್ರಮಿಸಲು ಸದಾ ಹಾತೊರೆಯುತ್ತಾನೆ ಮತ್ತು ಸಂಕಲ್ಪಸುತ್ತಿರುತ್ತಾನೆ.
                ಭಗವಾನರು ಇದರ ಬಗ್ಗೆ ಹೀಗೆ ಹೇಳಿದ್ದಾರೆ ಭಿಕ್ಷುಗಳೇ, ಯಾವುದು ಸಮ್ಮಾಸಂಕಲ್ಪ? ತ್ಯಾಗ ವೈರಾಗ್ಯದ ಚಿಂತನೆ (ಸಂಕಲ್ಪ) ದ್ವೇಷವನ್ನು ಇಲ್ಲದಂತೆ ಮಾಡುವ (ಸಂಕಲ್ಪ) ಚಿಂತನೆ, ಕ್ರೂರತ್ವ (ಹಿಂಸೆ)ವನ್ನು ಇಲ್ಲದಂತೆ ಮಾಡುವ ಚಿಂತನೆ (ಸಂಕಲ್ಪ) ಇದೇ ಸಮ್ಮಾ ಸಂಕಲ್ಪವಾಗಿದೆ.
                ಸಮ್ಮಾದೃಷ್ಟಿಯು ಜಾಗೃತವಾದಾಗ ಆತನಲ್ಲಿ ಕೇವಲ ಗುರಿಯನ್ನು ಸಾಧಿಸುವಂತಹ ಚಿಂತನೆಗಳೇ ಬರುತ್ತದೆ. ಗುರಿಯನ್ನು ಸಾಧಿಸಲು ಇಲ್ಲಿ ಎರಡು ಪ್ರಬಲ ಅಸ್ತ್ರಗಳಿವೆ.  1. ಪ್ರಜ್ಞಾ 2. ಇಚ್ಛಾಶಕ್ತಿ. ಇವೆರಡರ ಬಲಿಷ್ಠ ಬೆಳವಣಿಗೆಯಲ್ಲಿ ಮಿಕ್ಕವೆಲ್ಲವೂ ಅಡಕವಾಗುತ್ತದೆ.
                ಇಚ್ಛೆಯೇ ಕ್ರಿಯೆಗೆ ಮೂಲ, ಕ್ರಿಯೆಯು ಶೀಲ ಆಗಿರಬಹುದು, ಸಮಾಧಿ ಆಗಿರಬಹುದು, ಮಿಕ್ಕವೇ ಆಗಿರಬಹುದು. ಎಷ್ಟು ಇಚ್ಛೆ ವಿಕಾಸವಾಗುವುದು, ಅಷ್ಟು ಶ್ರಮ ಹರಿಯುತ್ತದೆ. ಆದ್ದರಿಂದಲೇ ಭಗವಾನರು ಸಮ್ಮಾ ಸಂಕಲ್ಪಕ್ಕೆ ಅಷ್ಟೊಂದು ಮಹತ್ವ ನೀಡಿದ್ದಾರೆ.
                ಇಲ್ಲಿ ಸಾಧಕ ತ್ಯಾಗವೈರಾಗ್ಯದಿಂದ ಲೋಭವನ್ನು ನಾಶಪಡಿಸುತ್ತಾನೆ.
                ಮೆತ್ತಾ, ಕರುಣಾ, ಮುದಿತಾದಿಂದ ದ್ವೇಷ, ಕ್ರೂರತ್ವ ಮತ್ತು ಅಸೂಯೆಗಳನ್ನು ನಾಶಪಡಿಸುತ್ತಾನೆ.
ಸಿದ್ಧಾಂತವೇ ಸಾಧನೆಯಲ್ಲ, ಜ್ಞಾನವೇ ಸಾಕ್ಷಾತ್ಕಾರವಲ್ಲ :
                ಬಹಳಷ್ಟು ಜನರು ಓದಿ ಅಥವಾ ಕೇಳಿ ಜ್ಞಾನವನ್ನು ಪಡೆದು ಅದೇ ಅಂತಿಮವೆಂದು ತಿಳಿಯುತ್ತಾರೆ, ಅವರ ನಡವಳಿಕೆಯ ಪ್ರಕಾರ ಜ್ಞಾನ ತಿಳುವಳಿಕೆಗೆ ಹೊರತು ಪಾಲನೆಗಲ್ಲ. ಅವರ ಪ್ರಕಾರ ಸಿದ್ಧಾಂತಕ್ಕೆ ಮತ್ತು ಜ್ಞಾನಕ್ಕೆ ಮಹತ್ವವಿದೆ. ಅಂತಹವರು ಗೌರವಯುತವಾದ ಸಾಧನೆಗೆ ಇಳಿಯುವುದಿಲ್ಲ ಮತ್ತು ಸಾಕ್ಷಾತ್ಕಾರವಾಗಲಿ ಸಾಕ್ಷಾತ್ಕಾರದ ಫಲಕ್ಕಾಗಲಿ ಭಾಗಿಯಾಗುವುದಿಲ್ಲ, ಆದರೆ ನಿಜವಾದ ಪ್ರಜ್ಞಾವಂತರಿಗೆ ಸಿದ್ಧಾಂತಕ್ಕಿಂತ ಸಾಧನೆ ಮುಖ್ಯವಾದುದು ಮತ್ತು ಸಾಕ್ಷಾತ್ಕಾರ ಮತ್ತು ಪಾಲನೆಯೇ ಜ್ಞಾನಕ್ಕಿಂತ ಪ್ರಧಾನವಾದುದು ಆಗಿದೆ. ಅದಕ್ಕೆ ಉದಾಹರಣೆ ಘಟನೆ.
                ಸದ್ವಂಶಸ್ಥರಾದ ಇಬ್ಬರು ಮಿತ್ರರು ಭಿಕ್ಷುಗಳಾದರು. ಅವರಲ್ಲಿ ಒಬ್ಬ ತಿಪಿಟಕದ ಅಧ್ಯಯನದಲ್ಲಿ ತಲ್ಲೀನನಾಗಿ ವಿದ್ವಾಂಸನಾದನು ಮತ್ತು ಚೆನ್ನಾಗಿ ಬೋಧಿಸುತ್ತಿದ್ದನು. ರೀತಿಯಿಂದಾಗಿ ಆತನು 18 ಭಿಕ್ಷುಗಳ ಗುಂಪಿಗೆ ಬೋಧಕನಾದನು. ಆದರೆ ಇನ್ನೊಬ್ಬ ಭಿಕ್ಷುವು ತಿಳಿದಿರುವುದನ್ನು ಚೆನ್ನಾಗಿ ಪಾಲಿಸತೊಡಗಿದನು. ಆತನು ಶೀಲದಲ್ಲಿ ಅತ್ಯಂತ ನಿಷ್ಠಾವಂತನಾದನು. ಸದಾ ಜಾಗ್ರತೆಯನ್ನು ಹೊಂದಿದವನು, ಅತ್ಯಂತ ಪ್ರಯತ್ನಶಾಲಿಯು, ಧ್ಯಾನಸಿದ್ಧನು ಮತ್ತು ಕೊನೆಗೆ ಅರಹಂತನೇ ಆದನು. ವಿಪಶ್ಶನದ ಆಳ ಜ್ಞಾನವನ್ನು ಸಾಕ್ಷಾತ್ಕರಿಸಿದನು, ಮುಕ್ತನಾದನು. ಆದರೆ ಇದು ಪರರಿಗೆ ಗೊತ್ತಾಗಲಿಲ್ಲ.
                ಒಮ್ಮೆ ಜೇತವನದಲ್ಲಿ ಬುದ್ಧಭಗವಾನರು ತಂಗಿದ್ದಾಗ ಅಲ್ಲಿ ಇಬ್ಬರು ಭಿಕ್ಷುಗಳು ಭೇಟಿಯಾದರು. ಮೊದಲನೆಯವ ತನ್ನ ಪಾಂಡಿತ್ಯ ಪ್ರದಶರ್ಿಸಿ, ಎರಡನೆಯ ಭಿಕ್ಷುವನ್ನು ಕೀಳಾಗಿ ಭಾವಿಸಿದನು. ಭಿಕ್ಷುವು ಅತ್ಯಂತ ಕಡಿಮೆ ಸಿದ್ಧಾಂತವನ್ನು ತಿಳಿಸಿದ್ದಾನೆ. ಈತನ ಜ್ಞಾನವು ಅಪಕ್ವವಾಗಿದೆ ಎಂದು ತಿಳಿದು ತನ್ನ ಬಗ್ಗೆ ಅಹಂಭಾವ ವ್ಯಕ್ತಪಡಿಸಿದನು. ಆತನ ಜೊತೆ ವಾದವಿವಾದ ಮಾಡಿ, ಪ್ರಶ್ನಿಸಿ ಆತನಿಗೆ ತೇಜೋಭಂಗ ಮಾಡಲು ಸಿದ್ಧನಾದನು. ಆದರೆ ಹಾಗೆ ಮಾಡಿದರೆ ಆತನಿಗೆ ಅರಹಂತರ ತೇಜೋವಧೆಯ ಪಾಪಕ್ಕೆ ಸಿಲುಕಿ ದೀರ್ಘಕಾಲ ದುಃಖಕ್ಕೆ ಸಿಲುಕುತ್ತಿದ್ದನು. ಆದ್ದರಿಂದ ಬುದ್ಧರಿಗೆ ವಿಷಯ ತಿಳಿದು ಆತನನ್ನು ಸರಿದಾರಿಗೆ ತರಲು ನಿರ್ಧರಿಸಿ ಅವರನ್ನು ಕ್ಷಣವೇ ಭೇಟಿಯಾದರು. ಹಾಗು ಅವರನ್ನು ಭಗವಾನರು ವಿಪಶ್ಶನ ಧ್ಯಾನಗಳ ಮಾರ್ಗ ಮತ್ತು ಫಲಗಳ ಬಗ್ಗೆ ಪ್ರಶ್ನಿಸಿದರು. ಒಣ ಜ್ಞಾನಿಯಾದ ಪಂಡಿತನಿಗೆ ಉತ್ತರಿಸಲು ಆಗಲಿಲ್ಲ. ಆದರೆ ಸಾಧನೆಯಲ್ಲಿ ಪ್ರವೀಣ ಹಾಗು ಅರಹಂತ ಭಿಕ್ಷುವು ಮಾತ್ರ ತನ್ನ ಸಾಕ್ಷಾತ್ಕಾರದ ಅನುಭವದಿಂದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದನು.
                ಆಗ ಬುದ್ಧ ಭಗವಾನರು ಅರಹಂತ ಭಿಕ್ಷುವಿಗೆ ತುಂಬ ಪ್ರಶಂಸಿಸಿದರು ಮತ್ತು ಮತ್ತೊಬ್ಬ ಭಿಕ್ಷುವಿಗೆ ಯಾವರೀತಿಯ ಪ್ರಶಂಸೆಯು ಸಿಗಲಿಲ್ಲ. ಆಗ ಭಗವಾನರು ಗಾಥೆಗಳನ್ನು ಹೇಳಿದರು.
                ಒಬ್ಬನು ಪವಿತ್ರ ಗ್ರಂಥಗಳನ್ನು ಎಷ್ಟೇ ಓದಿರಲಿ ಅಥವಾ ಉಚ್ಛರಿಸಲಿ. ಆದರೆ ಅದರಂತೆ ಅನುಸರಿಸದಿದ್ದರೆ ಆತನು ಪರರ ಗೋವುಗಳನ್ನು ಎಣಿಸುವವನಂತೆ ಆತನ ಪವಿತ್ರ ಜೀವನದ ಫಲದಲ್ಲಿ ಭಾಗಿಯಾಗುವುದಿಲ್ಲ.            (ಧಮ್ಮಪದ 19)
                ಪವಿತ್ರ ಗ್ರಂಥಗಳನ್ನು ಅಲ್ಪವಾಗಿ ಅರಿತಿದ್ದರೂ, ಅದರಂತೆ ಅನುಸರಿಸುವವನು ಹಾಗು ರಾಗವನ್ನು, ದ್ವೇಷವನ್ನು ಮತ್ತು ಮೋಹವನ್ನು ತ್ಯಜಿಸುವವನು. ನಿಜವಾಗಿ ಅರಿತವನು, ಸುವಿಮುಕ್ತ ಚಿತ್ತವುಳ್ಳವನು ಆದ ಆತನು ಇಲ್ಲಿಯಾಗಲಿ ಅಥವಾ ನಂತರದ ಕಾಲದಲ್ಲಿಯಾಗಲಿ ಆತನು ಪವಿತ್ರ ಜೀವನದ ಫಲದಲ್ಲಿ ಭಾಗಿಯಾಗುತ್ತಾನೆ.  -20
ಸೌಂದರ್ಯದ ನಿಜಸ್ವರೂಪ :
                ರಾಜಗೃಹದಲ್ಲಿ ಸಿರಿಮಾ ಎಂಬ ನರ್ತಕಿಯಿದ್ದಳು. ಆಕೆ ತನ್ನ ಸೌಂದರ್ಯದಿಂದ ಬಹು ಖ್ಯಾತಿ ಪಡೆದಿದ್ದಳು. ಎಲ್ಲೆಡೆ ಆಕೆಯ ಚೆಲುವಿನ ಸುದ್ದಿ ಹಬ್ಬಿತ್ತು. ಆಕೆಯೂ ಸಹ ಭಿಕ್ಷುಗಳಿಗೆ ಆಹಾರ ನೀಡುತ್ತಿದ್ದಳು. ಈಕೆಯ ಖ್ಯಾತಿಯ ಬಗ್ಗೆ ಕೇಳಿ ಒಬ್ಬ ಯುವಕ ಭಿಕ್ಷು ಮೋಹಗೊಂಡನು. ಆತನು ಆಕೆಯನ್ನು ಕಾಣಲು ಹೋದನು. ಆಗ ಆಕೆ ರೋಗದಿಂದ ಕೂಡಿದ್ದು. ಆದರೂ ಸಹ ಭಿಕ್ಷುಗಳಿಗೆ ವಂದಿಸಿ ಆಹಾರ ನೀಡಿ ಹೊರಟಳು. ಯುವಕ ಭಿಕ್ಷುವು ಹೀಗೆ ಯೋಚಿಸಿದನು ರೋಗದಿಂದ ಇರುವಾಗಲೇ ಹೀಗಿರಬೇಕಾದರೆ ಚೆನ್ನಾಗಿರುವಾಗ ಇನ್ನೆಷ್ಟು ಸುಂದರಳಾಗಿ ಇದ್ದಿರಬಹುದು ಎಂದು ಯೋಚಿಸಿ ಮತ್ತಷ್ಟು ರಾಗಾಸಕ್ತನಾದನು.
                ರಾತ್ರಿಯೇ ಆಕೆಯು ಸತ್ತುಹೋದಳು. ವಿಷಯವನ್ನು ರಾಜ ಬಿಂಬಸಾರನು ಭಗವಾನರಲ್ಲಿಗೆ ಬಂದು ತಿಳಿಸಿದನು. ಭಗವಾನರು ಸತ್ಯದರ್ಶನ ಮಾಡಿಸುವುದಕ್ಕಾಗಿ, ಬಿಂಬಸಾರನಿಗೆ 3 ದಿನಗಳ ಕಾಲ ಆಕೆಯ ಶವವನ್ನು ಸಂಸ್ಕಾರ ಮಾಡದಿರುವಂತೆ ಬುದ್ಧಿವಾದ ನೀಡಿದರು. 4ನೆಯ ದಿನ ಆಕೆಯ ಶರೀರವು ಬಣ್ಣಗೆಟ್ಟು ಊದಿ, ಹುಳುಗಳು ಹೊರಬರಲಾರಂಭಿಸಿತು. ಆಗ ರಾಜನು ಸಿರಿಮಾವನ್ನು 1000 ರೂ.ಗೆ ಮಾರಾಟ ಘೋಷಿಸಿ ಯಾರು ಬೇಕಾದರೂ ಪಡೆಯಬಹುದೆಂದು ಡಂಗೂರ ಸಾರಿದನು. ಆದರೆ ಯಾರೂ ಬರಲಿಲ್ಲ. ಕೊನೆಗೆ ಪುಕ್ಕಟೆಯಾಗಿ ಆಕೆ ಶವ ಸಿಗುವುದೆಂದು ಡಂಗೂರ ಸಾರಿದನು. ಯಾರಿಗೂ ಸಹ ಆಕೆಯ ಶರೀರ ಬೇಕಾಗಿರಲಿಲ್ಲ. ಎಲ್ಲರೂ ಆಕೆ ಬದುಕಿದ್ದಾಗ ಎಷ್ಟು ಆಸೆಪಡುತ್ತಿದ್ದರೋ ಸತ್ತಾಗ ಅಷ್ಟೇ ಅಸಹ್ಯಪಡುತ್ತಿದ್ದರು.
                ಯುವಕ ಭಿಕ್ಷುವಿಗೆ ಸಿರಿಮಾ ಸತ್ತಳೆಂದು ಇನ್ನೂ ತಿಳಿದಿರಲಿಲ್ಲ. ಬುದ್ಧರು ಮತ್ತು ಭಿಕ್ಷುಗಳು ಸಿರಿಮಾಳನ್ನು ಕಾಣಲು ಹೋಗುತ್ತಿದ್ದಾರೆಂದು ಆತನು ಸಂತೋಷದಿಂದ ಅವರೊಂದಿಗೆ ಹೋದನು.
                ಆಗ ಭಗವಾನರು ಆಕೆಯ ಶವವನ್ನು ತೋರಿಸಿ ಭಿಕ್ಷುಗಳೊಂದಿಗೆ ಹೀಗೆ ಹೇಳಿದರು: ಭಿಕ್ಷುಗಳೇ ನೋಡಿ, ಆಕೆ ಜೀವಂತವಾಗಿದ್ದಾಗ ಆಕೆಯನ್ನು ಪಡೆಯಲು ಸಹಸ್ರ ಸಹಸ್ರ ರೂಪಾಯಿಗಳನ್ನು ಸುರಿಯಲು ಸಿದ್ಧರಾದವರು ಈಗ ಪುಕ್ಕಟೆಯಾಗಿ ಪಡೆಯಲು ಸಿದ್ಧವಿಲ್ಲ. ಏಕೆಂದರೆ ಶರೀರವು ಅನಿತ್ಯವಾದುದು. ಕೊಳೆಯುವಂತಹದು. ಅಶುಭವು, ಮರಣದಲ್ಲಿ ಅಂತ್ಯವಾಗುವಂತಹುದು.
                ಸುಂದರವಾದ ಶರೀರವನ್ನು ಗಮನಿಸಿ, ಹುಣ್ಣುಗಳ ರಾಶಿ, ಅಸಹ್ಯತೆ ಗುಡ್ಡೆ, ರೋಗಗ್ರಸ್ತವು, ದ್ರುವವಲ್ಲದ, ಸ್ಥಿರವಲ್ಲದ ದೇಹವಿದು.
                ಇದನ್ನು ಕೇಳಿದಾಗ, ನೋಡಿದಾಗ ಯುವಕ ಭಿಕ್ಷುವು ಆಸಕ್ತಿಗಳನ್ನು ತೊರೆದು ಸ್ಥಿರಚಿತ್ತನಾದನು.
ಐಶ್ವರ್ಯವು ಮೂರ್ಖನನ್ನು ನಾಶಮಾಡುತ್ತದೆ
                ಒಮ್ಮೆ ಕೋಶಾಧೀಶನು ಬುದ್ಧರಿಗೆ ವಂದಿಸಲು ಬಂದನು. ಆತ ವಂದಿಸಿ ಭಗವಾನ್ ನಾನು ಬರಲು ತಡವಾಯಿತು. ಏಕೆಂದರೆ ಒಬ್ಬ ಶ್ರೀಮಂತನು ಸತ್ತುಹೋದನು ಮತ್ತು ಆತನಿಗೆ ಯಾರೂ ಮಕ್ಕಳಿಲ್ಲದ ಕಾರಣ ಆತನ ಸ್ವತ್ತೆಲ್ಲವೂ ರಾಜ್ಯಕ್ಕೆ ಸೇರಿತು. ಆತನು ಬದುಕಿರುವತನಕ ಯಾರಿಗೂ ದಾನ ಮಾಡಲಿಲ್ಲ. ಹಾಗು ಸ್ವತಃ ಅನುಭವಿಸಲೂ ಇಲ್ಲ. ಇದಕ್ಕೆ ತಾವೇ ಕಾರಣ ತಿಳಿಸಬೇಕು ಎಂದು ಕೇಳಿಕೊಂಡನು.
                ಆಗ ಭಗವಾನರು ಆತನ ಪೂರ್ವ ಜನ್ಮದ ವೃತ್ತಾಂತ ತಿಳಿಸಿದರು. ಹಿಂದಿನ ಜನ್ಮವೊಂದರಲ್ಲಿಯೂ ಶ್ರೀಮಂತನಾಗಿದ್ದನು. ಒಮ್ಮೆ ಶ್ರೀಮಂತನ ಮನೆಗೆ ಪಚ್ಚೇಕಬುದ್ಧರು ಬಂದಿದ್ದರು. ಆಗ ಆತನು ತನ್ನ ಪತ್ನಿಗೆ ಆಹಾರ ನೀಡಲು ಹೇಳಿದನು. ಆಕೆಗೂ ಆಶ್ಚರ್ಯವಾಯಿತು. ಏಕೆಂದರೆ ಅವಳ ಪತಿಯು ರೀತಿ ಹೇಳಿದ್ದೇ ಆಕೆ ಕಂಡಿರಲಿಲ್ಲ. ಆಕೆ ತಕ್ಷಣ ಪಚ್ಚೇಕ ಬುದ್ಧರಿಗೆ ಆಹಾರ ನೀಡಿದಳು. ಅವರು ಆಹಾರ ತೆಗೆದುಕೊಂಡು ಹೋಗುತ್ತಿರುವಾಗ ಶ್ರೀಮಂತನು ರೀತಿ ಯೋಚಿಸಿದನು. ಓಹ್ ಭಿಕ್ಷುವು ಇದನ್ನು ತಿಂದು ಮಲಗಬಹುದು. ಇದರ ಬದಲು ಇದನ್ನು ಸೇವಕರು ತಿಂದಿದ್ದರೆ ಸ್ವಲ್ಪ ಕೆಲಸ ನಡೆಸುತ್ತಿದ್ದರು ಎಂದು ದಾನ ನೀಡಿ ಪಶ್ಚಾತ್ತಾಪಟ್ಟನು.
                ಹೀಗೆ ಆತನು ಪಚ್ಚೇಕಬುದ್ಧರಿಗೆ ದಾನ ನೀಡಿದ್ದರಿಂದಾಗಿ ಅತನು ಜನ್ಮದಲ್ಲಿ ಶ್ರೀಮಂತನಾದನು. ಆದರೆ ನೀಡಿ ಪಶ್ಚಾತ್ತಾಪ ಪಟ್ಟಿದ್ದರಿಂದಾಗಿ ಆತನು ಯಾವ ಸುಖವನ್ನು ಜನ್ಮದಲ್ಲಿ ಹೊಂದಲು ಸಾಧ್ಯವಾಗಲಿಲ್ಲ.

                ಆತ ಹಿಂದಿನ ಅದೇ ಜನ್ಮದಲ್ಲಿ ತನ್ನ ಸೋದರ ಆಸ್ತಿಯನ್ನು ಕಬಳಿಸಲು ಸೋದರನ ಮಗನನ್ನು ಕೊಂದನು. ಅದರ ಪರಿಣಾಮವಾಗಿ ದೀರ್ಘ ಕಾಲದಲ್ಲಿ ದುಃಖ ಅನುಭವಿಸಿ ಜನ್ಮದಲ್ಲಿ ಅದರ ಪರಿಣಾಮವಾಗಿ ಆತನಿಗೆ ಯಾವುದೇ ಮಕ್ಕಳಾಗಲಿಲ್ಲ ಎಂದು  ಭಗವಾನರು ಕೋಶಲದ ರಾಜನಿಗೆ ತಿಳಿಸಿದರು. ಆಗ ರಾಜರು ಭಗವಾನ್ ಆತ ಬುದ್ಧರು ಉದಯಿಸಿ ಇಂತಹ ಕಾಲದಲ್ಲೂ ಯಾವುದೇ ದಾನ ನೀಡದೆ ಸುವರ್ಣಮಯ ಅವಕಾಶ ಕಳೆದುಕೊಂಡನು ಎಂದರು

No comments:

Post a Comment