Tuesday 12 December 2017

ಪ್ರಜ್ಞಾ (ಪಞ್ಞಾ) panya or wisdom in kannada

.                                          ಪ್ರಜ್ಞಾ (ಪಞ್ಞಾ)


ಸೂರ್ಯನನ್ನು ಎಲ್ಲಾ ಗ್ರಹಗಳು ಹಿಂಬಾಲಿಸುವಂತೆ ಪ್ರಜ್ಞಾದ ಹಿಂದೆ ಎಲ್ಲಾ ಸದ್ಗುಣಗಳು ಹಿಂಬಾಲಿಸುತ್ತದೆ. ಪರಮಶ್ರೇಷ್ಠ (ಲೋಕೋತ್ತರ) ವಿಷಯಗಳ ಅರಿವಿಗೆ ಪ್ರಜ್ಞಾ ಎನ್ನುತ್ತಾರೆ. ಮಾನವನ ಲೌಕಿಕ ವ್ಯವಹಾರಗಳ ಅರಿವಿಗೆ ಜ್ಞಾನ ಎನ್ನುತ್ತಾರೆ.

ಪ್ರಜ್ಞಾಗೆ ಪೂಜ್ಯ ಬುದ್ಧಘೋಷರವರು ಈ ರೀತಿ ವಿವರಣೆ ಮಾಡುತ್ತಾರೆ. ಪ್ರಜ್ಞಾವು ನಾನಾ ರೀತಿಗಳಲ್ಲಿದೆ ಮತ್ತು ವಿವಿಧರೀತಿಯಲ್ಲಿ ಕಾಣುತ್ತದೆ. ಇದಕ್ಕೆ ಉತ್ತರ ನೀಡಲು ಪ್ರಯತ್ನಿಸಿದರೆ ಅದರ ಉದ್ದೇಶವಾಗಲಿ ಅಥವಾ ಇಚ್ಛೆಯಾಗಲಿ ನೆರವೇರುವುದಿಲ್ಲ. ಬದಲಾಗಿ ಇದು ಗೊಂದಲವನ್ನು ನಿಮರ್ಿಸುತ್ತದೆ. ಆದರೆ ಇಲ್ಲಿ ಇದನ್ನು ಚಿತ್ತಕ್ಕೆ ಲಾಭವನ್ನುಂಟು ಮಾಡುವ ಅಂತದರ್ೃಷ್ಟಿಯ ತಿಳುವಳಿಕೆ ಎನ್ನಬಹುದು.

ಆದರೆ ಅರಹಂತ ಉಪತಿಸ್ಸರವರು ಇದಕ್ಕೆ ಈ ರೀತಿ ವಿವರಣೆ ಮಾಡುತ್ತಾರೆ. ವಸ್ತು ವಿಷಯಗಳನ್ನು ಅವುಗಳ ಯತಾಭೂತ ಸ್ಥಿತಿಗಳಲ್ಲಿ ಹಾಗೆಯೇ ಮನಸ್ಸಿನಿಂದ ಅರಿಯುವುದು. ಹಾಗೆಯೇ ಅವುಗಳ ಪ್ರಯೋಜನ ಮತ್ತು ನಿಶ್ಪ್ರಯೋಜನಗಳನ್ನು ಅರಿಯುವುದು ಮತ್ತು ಶ್ರೇಷ್ಠತೆ ಅರಿಯುವುದು.

ಪ್ರಜ್ಞಾವು ಅರಿವಾಗಿದೆ (ತಿಳುವಳಿಕೆಯಾಗಿದೆ), ಇದು ಜ್ಞಾನವಾಗಿದೆ. ಇದು ಸತ್ಯದ ಅನ್ವೇಷಣೆಯಾಗಿದೆ, ಪ್ರಜ್ಞಾವು ಕುಶಲವಾಗಿದೆ, ಒಳಿತಾಗಿದೆ. ಪ್ರಜ್ಞಾವು ಅಧಿಪತ್ಯ ಮಾಡುವ ಇಂದ್ರೀಯವು ಆಗಿದೆ. ಪ್ರಜ್ಞಾವು ಶ್ರೇಷ್ಠ ಬಲವು ಆಗಿದೆ. ಪ್ರಜ್ಞಾವು ಶ್ರೇಷ್ಠ ಶಸ್ತ್ರವು ಆಗಿದೆ. ಪ್ರಜ್ಞಾವು ಉನ್ನತ ಶಿಖರವು ಆಗಿದೆ. ಪ್ರಜ್ಞಾವು ಸರ್ವ ಕುಶಲ ಸ್ಥಿತಿಗಳಿಗೆ ತಳಪಾಯವು ಆಗಿದೆ. ಪ್ರಜ್ಞಾವು ಮಹಾ ಹೊಂಬೆಳಕಾಗಿದೆ. ಪ್ರಜ್ಞಾವು ಭವ್ಯ ವೈಭವವಾಗಿದೆ. ಪ್ರಜ್ಞಾದ ಸದ್ಗುಣವನ್ನು ಎಷ್ಟು ಹೊಗಳಿದರೂ ಸಾಲದು. ಮಹಾಯಾನದ ಸೂತ್ರಗಳಲ್ಲಂತು ಇದನ್ನು ಪರಮಶ್ರೇಷ್ಠಕರ, ಅತ್ಯುಚ್ಛಕರ, ಅಸಮಾನ ಅನುಪಮೇಯ ಎಂದು ವಣರ್ಿಸಿದ್ದಾರೆ.

ಅಮೋಹ, ಸತ್ಯಾನ್ವೇಷಣೆ ಮತ್ತು ಸಮ್ಮಾದೃಷ್ಟಿ ಇವಕ್ಕೆ ಪ್ರಜ್ಞಾ ಎನ್ನುತ್ತಾರೆ. ಹಾಗೆಯೇ ಸಮ್ಮಾದೃಷ್ಟಿ ಮತ್ತು ಸಮ್ಮಾ ಸಂಕಲ್ಪಕ್ಕೂ ಪ್ರಜ್ಞಾ ಎನ್ನುತ್ತಾರೆ.

ಪ್ರಜ್ಞಾದ ಲಕ್ಷಣ, ಕ್ರಿಯೆ, ಸ್ಥಾಪನೆ ಮತ್ತು ಹತ್ತಿರದ ಕಾರಣಗಳು :

ಪ್ರಜ್ಞಾದ ಲಕ್ಷಣ :

ಪರಮಪೂಜ್ಯ ಬುದ್ಧಘೋಷರವರ ಪ್ರಕಾರ ಪ್ರಜ್ಞಾದ ಲಕ್ಷಣವೇನೆಂದರೆ ವ್ಯಕ್ತಿಯ ಸ್ಥಿತಿಗಳ ಸಾರವನ್ನು ಹರಿತವಾದ ಮತಿಯಿಂದ ಅರಿಯುವುದು.
ಅರಹಂತ ಉಪತಿಸ್ಸರವರ ಪ್ರಕಾರ ಸತ್ಯದ ಅನುಭೂತಿಯನ್ನು ಪಡೆಯುವುದೇ ಅಥವಾ ಸ್ಪಷ್ಟವಾದ ಅರಿವು ಹೊಂದುವುದೇ ಪ್ರಜ್ಞಾದ ಲಕ್ಷಣ.

ಪ್ರಜ್ಞಾದ ಕ್ರಿಯೆ :

ಪರಮಪೂಜ್ಯ ಬುದ್ಧಘೋಷರವರ ಪ್ರಕಾರ ಮೋಹದ ಕತ್ತಲೆಯನ್ನು ದೂರೀಕರಿಸುವುದು.
ಅರಹಂತ ಉಪತಿಸ್ಸರವರ ಪ್ರಕಾರ ಅನ್ವೇಷಣೆ ಹಾಗು ಅಜ್ಞಾನದ ಕತ್ತಲೆ ದೂರೀಕರಿಸುವುದು ಪ್ರಜ್ಞಾದ ಕ್ರಿಯೆಯಾಗಿದೆ ಹಾಗು ನಿಜವಾದ ಧಮ್ಮದ ಪ್ರವೇಶ ಮಾಡುವುದು.

ಪ್ರಜ್ಞಾದ ಸ್ಥಾಪನೆ :

ಬುದ್ಧಘೋಷರವರ ಪ್ರಕಾರ ಪ್ರಜ್ಞಾದ ಸ್ಥಾಪನೆಯು ಅಮೋಹದಿಂದಾಗುತ್ತದೆ. ಅಂದರೆ ಅಜ್ಞಾನದ ನಶಿಸುವಿಕೆಯಿಂದಾಗುತ್ತದೆ. ಅರಹಂತ ಉಪತಿಸ್ಸರವರ ವಿವರಣೆಯು ಇದೇ ರೀತಿಯಿದೆ.

ಪ್ರಜ್ಞಾದ ತತ್ಕ್ಷಣದ ಕಾರಣ :

ಬುದ್ಧಘೋಷರವರ ಪ್ರಕಾರ ಪ್ರಜ್ಞಾದ ಉಗಮಕ್ಕೆ ತತ್ಕ್ಷಣದ ಕಾರಣ ಏನೆಂದರೆ ಏಕಾಗ್ರತೆ. ಏಕಾಗ್ರತೆಯಿಂದಲೇ ಒಬ್ಬನು ಅರಿಯುತ್ತಾನೆ ಮತ್ತು ಸರಿಯಾಗಿ ಕಾಣುತ್ತಾನೆ.
ಅರಹಂತ ಉಪತಿಸ್ಸರವರ ಪ್ರಕಾರ ನಾಲ್ಕು ಆರ್ಯ ಸತ್ಯಗಳೇ ಹತ್ತಿರದ ಕಾರಣವಾಗಿದೆ. ಅಥವಾ 4 ವಿಧದ ವಿಶ್ಲೇಷಣ ಜ್ಞಾನವೇ ಪ್ರಜ್ಞಾದ ಹತ್ತಿರದ ಕಾರಣವಾಗಿದೆ.

ಪ್ರಜ್ಞಾದ ಮಹೋನ್ನತ ಲಾಭಗಳು :

ಪ್ರಜ್ಞಾಕ್ಕೆ ಲೆಕ್ಕವಿಲ್ಲದಷ್ಟು ಲಾಭಗಳಿವೆ.
ಉದಾಹರಣೆಗೆ :
ಪ್ರಜ್ಞಾದಿಂದಲೇ ಎಲ್ಲಾ ಜೀವಿಗಳು ಉನ್ನತಿ ಹೊಂದುತ್ತವೆ (ಪ್ರಕಾಶಿಸುತ್ತವೆ)
ಪ್ರಜ್ಞಾದಿಂದಲೇ ಒಬ್ಬನು ಪರಮಶ್ರೇಷ್ಠ ಸ್ಥಿತಿಯನ್ನು ಹೊಂದುತ್ತಾನೆ.
ಪ್ರಜ್ಞಾದಿಂದಲೇ ಒಬ್ಬನು ಪಾಪ ಸೈನ್ಯವನ್ನು ಬುಡಮೇಲು ಮಾಡುತ್ತಾನೆ.
ಪ್ರಜ್ಞಾದಿಂದಲೇ ಒಬ್ಬನು ರಾಗ, ದ್ವೇಷ ಮತ್ತು ಮೋಹಗಳನ್ನು ಜಯಿಸುತ್ತಾನೆ.
ಪ್ರಜ್ಞಾದಿಂದಲೇ ಒಬ್ಬನು ಜನನ ಮತ್ತು ಮರಣವನ್ನು ದಾಟುತ್ತಾನೆ.
ಪ್ರಜ್ಞಾದಿಂದಲೇ ಒಬ್ಬನು ಪರಿಶುದ್ಧವಾದ ಆರ್ಯ ಅಷ್ಟಾಂಗ ಮಾರ್ಗಕ್ಕೆ ಹೆಜ್ಜೆಯಿಡುತ್ತಾನೆ.
ಪ್ರಜ್ಞಾದಿಂದಲೇ ಒಬ್ಬನು ಧ್ಯಾನದ ಶಿಖರಗಳನ್ನು ತಲುಪುತ್ತಾನೆ.
ಪ್ರಜ್ಞಾದಿಂದಲೇ ಒಬ್ಬನು ಲೋಕೋತ್ತರ ಫಲಗಳನ್ನು ಪಡೆಯುತ್ತಾನೆ.
ಪ್ರಜ್ಞಾದಿಂದಲೇ ಒಬ್ಬನು ಎಲ್ಲಾ ಗಾಳಿ ಸುದ್ದಿಗಳನ್ನು, ಮೂಢನಂಬಿಕೆಗಳನ್ನು ಮಿಥ್ಯಾ ಸಂಪ್ರಾದಾಯಗಳನ್ನು, ಹೀನ ಧರ್ಮವನ್ನು ತ್ಯಜಿಸುತ್ತಾನೆ.
ಪ್ರಜ್ಞಾದಿಂದಲೇ ಒಬ್ಬನು ತೃಷ್ಣದಿಂದಾಗುವ, ಪಾಪಗಳೆಲ್ಲದರಿಂದ ವಿಮುಖವಾಗಿ ಜಯಿಸುತ್ತಾನೆ.
ಪ್ರಜ್ಞಾದಿಂದಲೇ ಒಬ್ಬನು ಕಾರಣ, ಸ್ಥಿತಿ, ಪರಿಣಾಮ, ಮನಸ್ಸು, ಬೋಧಿ, ವಿಮುಕ್ತಿಗಳೆಲ್ಲವನ್ನು ಅರಿಯುತ್ತಾನೆ.
ಪ್ರಜ್ಞಾವು ಸುಖದ ಸಾರವಾಗಿದೆ.
ಪ್ರಜ್ಞಾವು ನಾಲ್ಕು ಆರ್ಯಸತ್ಯಗಳೇ ಆಗಿದೆ.
ಪ್ರಜ್ಞಾವು ಪರಮೋಚ್ಛಕರವಾಗಿದೆ.
ಪ್ರಜ್ಞಾವು ಸರ್ವ ವಿಷಯಗಳ ಕಣ್ಣಾಗಿದೆ.
ಪ್ರಜ್ಞಾವು ಪರಿಶುದ್ಧಿಯನ್ನು ತರುತ್ತದೆ.
ಪ್ರಜ್ಞಾವು ಉನ್ನತಿಗೇರಿಸುತ್ತದೆ.
ಪ್ರಜ್ಞಾವು ಈ ಲೋಕ ಮತ್ತು ಪರಲೋಕದ ಲಾಭವನ್ನು ತಿಳಿಸುತ್ತದೆ.
ಪ್ರಜ್ಞಾಭಿವೃದ್ಧಿಯಿಂದ ನಾನಾ ವಿಧವಾದ ಕಲ್ಮಶಗಳಿಂದ ಮುಕ್ತರಾಗುತ್ತಾರೆ.
ಪ್ರಜ್ಞಾಭಿವೃದ್ಧಿಯಿಂದ ಆರ್ಯರ ಲೋಕೋತ್ತರ ಫಲಗಳನ್ನು ಪಡೆಯಬಹುದು.
ಪ್ರಜ್ಞಾಭಿವೃದ್ಧಿಯಿಂದ ನಿಬ್ಬಾಣವನ್ನು ಸಾಕ್ಷಾತ್ಕರಿಸಬಹುದು.
ಪ್ರಜ್ಞಾಭಿವೃದ್ಧಿಯಿಂದ ದಾನಕ್ಕೆ, ಆತಿಥ್ಯಕ್ಕೆ, ಪೂಜ್ಯತೆಗೆ ಅರ್ಹತೆ ಪಡೆಯುತ್ತಾರೆ.

ಪ್ರಜ್ಞಾದ ವಗರ್ಿಕರಣ ವಿಧಗಳು :

1. ಒಂದು ವಿಧದಲ್ಲಿ ಹೇಳುವುದಾದರೆ ಪ್ರತಿಯೊಂದು ಸ್ಥಿತಿಗಳ ಸಾರವನ್ನು ಕುಶಾಗ್ರಮತಿಯಿಂದ ಅರಿಯುವ ಲಕ್ಷಣವೇ ಪ್ರಜ್ಞಾ.

2. ಲೋಕಿಯ ಪ್ರಜ್ಞಾ ಮತ್ತು ಲೋಕೋತ್ತರ ಪ್ರಜ್ಞಾ.

3. ಅಸವಗಳಿಂದ ಕೂಡಿದ ಪ್ರಜ್ಞಾ ಮತ್ತು ಅಸವಗಳಿಂದ ಕೂಡಿರದ ಪ್ರಜ್ಞಾ.

4. ಭೌತಿಕತೆಯ ಪ್ರಜ್ಞಾ ಮತ್ತು ಮಾನಸಿಕದ ಪ್ರಜ್ಞಾ.

5. (1) ಕೇಳಿ/ಓದಿ ಪಡೆಯುವ ಸೋತಮಯ ಪ್ರಜ್ಞಾ (2) ಚಿಂತನೆಯಿಂದ ಪಡೆಯುವ ಚಿಂತನಾಮಯ ಪ್ರಜ್ಞಾ ಮತ್ತು (3) ಧ್ಯಾನದ ಸಾಕ್ಷಾತ್ಕರದಿಂದ ವೃದ್ಧಿಯಾಗುವ ಭಾವನಾಮಯ ಪ್ರಜ್ಞಾ.

6. ನಾಲ್ಕು ರೀತಿ ಪಟಿಸಂಭಿದಾ ಜ್ಞಾನಗಳಿವೆ - ಅವೆಂದರೆ :

ಅ) ಅರ್ಥಪಟಿಸಂಭಿದಾ ಪ್ರಜ್ಞಾ : ಅರ್ಥವೆಂದರೆ ಉದ್ದೇಶಿತ ಕಾರ್ಯದ ಪ್ರಾಪ್ತಿಯ ಜ್ಞಾನ ಅಂದರೆ : ) ಪದಶಃದ ಅರ್ಥ ) ಲೌಕಿಕ ಅರ್ಥ (ಐಶ್ವರ್ಯ)
) ಕರ್ಮಫಲ  ತ) ನಿಬ್ಬಾಣ.
ಆ) ಧಮ್ಮಪಟಿಸಂಭಿದಾ ಪ್ರಜ್ಞಾ :
) ಫಲ ನೀಡುವ ಯಾವುದೇ ಕಾರಣ
) ಮಧ್ಯಮ ಮಾರ್ಗ
) ಬೋಧನೆ
ತ) ಕುಶಲ ಮತ್ತು ಅಕುಶಲಗಳ ಜ್ಞಾನ
ಇ) ನಿರುತ್ತಿ - ಪಟಿಸಂಭಿದಾ ಜ್ಞಾನ :
ಪದ ಸಂಪತ್ತು ಹಾಗು ವ್ಯಾಕರಣದ ಅಂದರೆ ಭಾಷೆಯ ವಿಶ್ಲೇಷಣಾತ್ಮಕ ಜ್ಞಾನ
ಈ) ಪಟಿಭಾನ - ಪಟಿಸಂಭಿದಾ ಜ್ಞಾನ :
ಅಂದರೆ ಈ ಹಿಂದಿನ ಅರ್ಥ ಪಟಿಸಂಭಿದಾ (ಪರಿಣಾಮ), ಧಮ್ಮ ಪಟಿಸಂಭಿದಾ (ಕಾರಣ), ನಿರುತ್ತಿ (ಭಾಷೆ), ಪಟಿಸಂಭಿದಾ ಇವುಗಳ ವಿಶ್ಲೇಷಣಾತ್ಮಕ ಜ್ಞಾನ.

ಪ್ರಜ್ಞಾವನ್ನು ಸಂಪಾದಿಸುವ ಪ್ರಕ್ರಿಯೆ ಹೀಗಿದೆ :

1. ಹಿಂದಿನ ಜನ್ಮದಲ್ಲಿ ಆಸಕ್ತಿ, ಕುತೂಹಲ ಮತ್ತು ಶ್ರಮಪಟ್ಟಿರುವುದು.
2. ಕೇಳುವಿಕೆ ಮತ್ತು ಓದುವಿಕೆ
3. ಪ್ರಶ್ನಿಸುವಿಕೆ ಮತ್ತು ಚಚರ್ಿಸುವಿಕೆ
4. ಶಾಸ್ತ್ರದಲ್ಲಿ ಪ್ರಾವೀಣ್ಯತೆ : ಅಂದರೆ ಬುದ್ಧ ವಚನದಲ್ಲಿ (ತಿಪಿಟಕ) ಅರ್ಥ, ಅಕ್ಷರ ಸಹಿತ ನೆನಪು ಸ್ಥಾಪಿಸುವಿಕೆ ಹಾಗು ವಿಶ್ಲೇಷಣಾತ್ಮಕವಾಗಿ ಚಿಂತಿಸುವಿಕೆ ಮತ್ತು ವಿವರಿಸುವಿಕೆ.
5. ಧ್ಯಾನದಲ್ಲಿ ಹಂತಗಳನ್ನು ದಾಟುವಿಕೆ
6. ಸೋತಾಪತ್ತಿ, ಸಕದಾಗಾಮಿ, ಅನಾಗಾಮಿ ಮತ್ತು ಅರಹಂತ ಪದವಿಗಳನ್ನು ಪ್ರಾಪ್ತಿಗೊಳಿಸುವಿಕೆ.

ಪ್ರಜ್ಞಾ (ಪಞ್ಞಾ)ದ ವಿವರಣೆ :

ಇದು ಅರ್ಥಮಾಡಿಕೊಳ್ಳುವಿಕೆಯಾಗಿದೆ (ಪನ್ಯಾ) ಅಂದರೆ ಅರ್ಥಮಾಡಿಕೊಳ್ಳುವ ಕ್ರಿಯೆಯ ಅರ್ಥದಲ್ಲಿ ಹೀಗೆ ಹೇಳಲಾಗುತ್ತದೆ (ಪಜಾನನ).
ಅರ್ಥ ಮಾಡಿಕೊಳ್ಳುವ ಕ್ರಿಯೆ ಯಾವುದು ?
ಇದು ಅರಿಯುವಿಕೆ (ಜಾನನ). ಇದೇ ಅರ್ಥ ಬರುವಂತಹ ಇತರ ಪದಗಳೆಂದರೆ: ಗ್ರಹಿಕೆ (ಸಂಜ್ಞಾನನ) ಮತ್ತು ತಿಳುವಳಿಕೆ (ವಿಜಾನನ). ಅಂದರೆ ಅರಿಯುವಂತಹ ಸ್ಥಿತಿಯು ಸಮವಾಗಿ ಗ್ರಹಿಕೆ (ಸಂಜ್ಞಾ), ಅರಿವು (ವಿನ್ಯಾನ) ಮತ್ತು ಅರ್ಥ ಮಾಡಿಕೊಳ್ಳುವಿಕೆ (ಪನ್ಯಾ). ಈ ಮೂರರಲ್ಲೂ ಬರುತ್ತದೆ.
ಈ ಮೂರಕ್ಕೂ ಇರುವ ವ್ಯತ್ಯಾಸ ಏನೆಂದರೆ :
ಗ್ರಹಿಕೆಯಲ್ಲಿ (ಸಂಜ್ಞಾ) ಇದು ಕೆಂಪು ಬಣ್ಣ, ಇದು ಗುಂಡಾಗಿದೆ, ಇತ್ಯಾದಿ ಎಂಬ ಸ್ಥೂಲ ಗ್ರಹಿಕೆಯಿರುತ್ತದೆ. ಆದರೆ ಇದು ಲೋಕೋತ್ತರ ಜ್ಞಾನದ ತ್ರಿಲಕ್ಷಣ ಉಂಟು ಮಾಡುವುದಿಲ್ಲ.
ಅರಿವು (ವಿನ್ಯಾನ)ವು ಸ್ಥೂಲ ಪರಿಚಯವನ್ನೆಲ್ಲಾ ನೀಡುತ್ತದೆ, ಲಕ್ಷಣವನ್ನೆಲ್ಲಾ ತಿಳಿಸುತ್ತದೆ. ಆದರೂ ಇದು ಸಹಾ ತ್ರಿಲಕ್ಷಣಜ್ಞಾನ ನೀಡುವುದಿಲ್ಲ.
ಆದರೆ ಪಞ್ಞಾ (ಪ್ರಜ್ಞಾ)ದಿಂದ ಮಾತ್ರ ವಸ್ತು ವಿಷಯವನ್ನು ಪೂರ್ಣವಾಗಿ ಅರಿತು, ತ್ರಿಲಕ್ಷಣ ಅರಿತು, ಸ್ಫೂತರ್ಿಯುತ ಕ್ರಿಯಾಶೀಲತೆ ಜಾಗೃತವಾಗಿ, ಲೋಕೋತ್ತರ ಮಾರ್ಗದಲ್ಲಿ ಸ್ಥಾಪಿತನಾಗುತ್ತಾನೆ.
ಇದರ ವಿವರಣೆಗಾಗಿ ಈ ಕೆಳಕಂಡ ಉದಾಹರಣೆಯಿದೆ.
ಒಂದು ಮಗುವು ನಾಣ್ಯವನ್ನು ಕಂಡಾಗ ಅದಕ್ಕೆ ಅದು ಕೇವಲ ಆಟಿಕೆ ವಸ್ತು, ಕೇವಲ ಗುಂಡಗಿನ ವಸ್ತು ಆಗಿರುತ್ತದೆ.
ಅದೇ ಒಬ್ಬ ಹಳ್ಳಿಯವನಿಗೆ ಅದು ರೂಪಾಯಿ ಎಂದು ತಿಳಿದಿರುತ್ತದೆ. ಅದರಿಂದ ಏನಾದರೂ ಪಡೆಯಬಹುದು ಎಂದು ತಿಳಿದಿರುತ್ತದೆ ಅಷ್ಟೆ.
ಆದರೆ ಒಬ್ಬ ವ್ಯಾಪಾರಿಗೆ ಅದು ಅಸಲಿ ನಾಣ್ಯ ಅಥವಾ ನಕಲಿ ನಾಣ್ಯ ಎಂದು ಪಕ್ಕಾ ತಿಳಿದಿರುತ್ತದೆ ಹಾಗು ಅದರ ಸಾರ್ಥಕ ಪ್ರಯೋಜನೆ ಆತ ಪಡೆಯಬಲ್ಲ.
ಈ ನಾಣ್ಯದ ಉದಾಹಣೆಯ ರೀತಿಯಲ್ಲೇ ಸಂಜ್ಞಾವು ಮಗುವಿನ ರೀತಿಯಲ್ಲಿ ಅರಿಯುತ್ತದೆ. ವಿನ್ಯಾನವು ಹಳ್ಳಿಯವನ ರೀತಿಯಲ್ಲಿ ಅರಿಯುತ್ತದೆ. ಪ್ರಜ್ಞಾವು ವ್ಯಾಪಾರಿಯ ರೀತಿಯಲ್ಲಿ ಅರಿಯುತ್ತದೆ.
ಹೀಗಾಗಿ ಪ್ರಜ್ಞಾವು ವಿಶಾಲ ಅರ್ಥದಲ್ಲಿ ಪರಿಣಾಮಾತ್ಮಕ ರೀತಿಯಲ್ಲಿ ಅರಿಯುವ ಸಾಮಥ್ರ್ಯವಾಗಿದೆ.

ಆದರೆ ವಿಜ್ಞಾನಿಯೊಬ್ಬ ನಾಣ್ಯವನ್ನು ಕಂಡಾಗ ಆತನು ಅದು ಯಾವ ಲೋಹದಿಂದಾಗಿದೆ, ಅದು ಮಿಶ್ರಲೋಹವೇ ಅಥವಾ ಶುದ್ಧ ಲೋಹವೇ, ಎಷ್ಟು ಪರಿಣಾಮದಲ್ಲಿ ಲೋಹವಿದೆ. ಯಾವಾಗ ಇದು ಸಿದ್ಧವಾಯಿತು, ಹೇಗೆ ಸಿದ್ಧವಾಯಿತು, ಇನ್ನಷ್ಟು ಹೇಗೆ ಸಿದ್ಧಪಡಿಸಬಹುದು ಎಂದೆಲ್ಲಾ ಆತನಿಗೆ ಅರಿವಾಗುತ್ತದೆ. ಬುದ್ಧ ಭಗವಾನರ ಪ್ರಜ್ಞಾಶಕ್ತಿಯು ವಿಜ್ಞಾನಿಯ ತರಹವಾಗಿರುತ್ತದೆ. ಅವರು ವಸ್ತುಸ್ಥಿತಿಯ ಭೂತ, ವರ್ತಮಾನ ಮತ್ತು ಭವಿಷ್ಯವೆಲ್ಲಾ ಅರಿಯುತ್ತಾರೆ.

ಆದ್ದರಿಂದಲೇ ನಾಗಾಸೇನರು ಮಿಲಿಂದ ಮಹಾರಾಜರಿಗೆ ಹೀಗೆ ಹೇಳುತ್ತಾರೆ
ಓ ಮಹಾರಾಜ, ಒಂದು ಅತ್ಯಂತ ಕ್ಲಿಷ್ಟಕರ ವಿಷಯವನ್ನು ಬುದ್ಧರು ಸರಳವಾಗಿಸಿದ್ದಾರೆ. ಅದೆಂದರೆ ಅಭೌತಿಕವಾಗಿರುವ ಮನಸ್ಸನ್ನು ಮತ್ತು ಅದರ ವಿಭಾಗಗಳನ್ನು ಏಕ ವಿಷಯದಲ್ಲಿ ಕ್ರಿಯಬದ್ಧವಾಗಿರುವಾಗ ಇದೇ ಸ್ಪರ್ಶ, ಇದೇ ವೇದನೆ, ಇದೇ ಗ್ರಹಿಕೆ, ಇದೇ ಇಚ್ಛೆ, ಇದೇ ಅರಿವು ಎಂದು ವಿಶ್ಲೇಷಣಾತ್ಮಕವಾಗಿ ಅರಿತು ವಿವರಿಸುತ್ತಾರೆ.

ಬುದ್ಧರು ಪ್ರಜ್ಞಾಕ್ಕೆ ಬಹಳಷ್ಟು ಪ್ರಾಮುಖ್ಯತೆ ನೀಡಿದ್ದರು. ಅದು ಅವರ ಬೋಧಿ ಪಕ್ರಿಯೆಗಳಲ್ಲಿ (1) ಸಮ್ಮಾದಿಟ್ಟಿ (2) ಧಮ್ಮವಿಚಯ ಬೋಧಿ ಅಂಗ (ಸತ್ಯಶೋಧನೆ) (3) ಪ್ರಜ್ಞಾಬಲ (4) ಪ್ರಜ್ಞಾ ಇಂದ್ರೀಯ (5) ಮಿಮಾಂಸ ಇದ್ದಿಪಾದ (6) ನಾಲ್ಕು ಸತಿ ಪಟ್ಟಾನದಲ್ಲೂ ಬೆನ್ನೆಲುಬಾಗಿ ಪ್ರಜ್ಞಾವಿದ್ದೇ ಇದೆ. (7) ತ್ರಿಲಕ್ಷಣ ಜ್ಞಾನ (8) ಕರ್ಮಸಿದ್ಧಾಂತ ಜ್ಞಾನ (9) ಸರ್ವಲೋಕ ಜ್ಞಾನ, ಇತ್ಯಾದಿ. ವಿಶ್ವದ ಬೇರೆ ಯಾವ ಧರ್ಮವು ನೀಡದಂತಹ ವಿಚಾರಶೀಲತೆ, ವಿಮಶರ್ೆಯ ಮಹತ್ವ ಮತ್ತು ವಿಶ್ಲೇಷಣಾ ಜ್ಞಾನವನ್ನು ಬುದ್ಧರು ನೀಡಿದ್ದಾರೆ.

ಪ್ರಜ್ಞಾದ ಅಭಿವೃದ್ಧಿ :

ಯಾರು ಪ್ರಜ್ಞಾದ ಅಭಿವೃದ್ಧಿ ಮಾಡಬೇಕೆಂದು ಇರುವರೋ ಅವರು ಬುದ್ಧ ಭಗವಾನರ ಬೋಧನೆಯಲ್ಲಿ ಕಂಡುಬರುವಂತಹ ಪಂಚಖಂಧಗಳು (ದೇಹ ಮತ್ತು ಮನಸ್ಸು), ಇಂದ್ರೀಯ ಆಧಾರಗಳು, ಧಾತುಗಳು, ಇಂದ್ರೀಯಾಂಗಗಳು, ಆರ್ಯಸತ್ಯಗಳು, ಅಷ್ಠಾಂಗಮಾರ್ಗ, ಪಟಿಚ್ಚ ಸಮುಪ್ಪಾದ ಇತ್ಯಾದಿಗಳ ಬಗ್ಗೆ ಕೇಳಿ ಅಥವಾ ಓದಿ, ಪ್ರಶ್ನಿಸಿ ಅಥವಾ ಚಚರ್ಿಸಿ ನೆನಪಿಟ್ಟು ಮತ್ತು ಚಿಂತಿಸಿ ಅಥರ್ೈಸಿಕೊಳ್ಳಬೇಕು.  ಇದೇ ಪ್ರಜ್ಞೆಗೆ ಭೂಮಿ (ಆಧಾರ)ಯಾಗಿದೆ (ಅಂದರೆ ಸಮ್ಮಾದಿಟ್ಟಿ).

ನಂತರ ಶೀಲವನ್ನು ಮತ್ತು ಸಮಾಧಿಯನ್ನು ವೃದ್ಧಿಗೊಳಿಸಿ ಶೀಲವಿಶುದ್ದಿ ಮತ್ತು ಚಿತ್ತವಿಶುದ್ದಿ ಪ್ರಾಪ್ತಿಗೊಳಿಸಬೇಕು. ಇದೇ ಪ್ರಜ್ಞಾಗೆ ಮೂಲ ಅಥವಾ ಬೇರುಗಳಾಗಿವೆ, ತಳಹದಿಯಾಗಿವೆ.
ನಂತರ ಆತನು ಧ್ಯಾನದ ಹಂತಗಳಲ್ಲಿ ದಿಟ್ಟಿ ವಿಶುದ್ಧಿ, ಸಂಶಯ ವಿತರಣ ವಿಶುದ್ದಿ, ಮಾರ್ಗ ಅಮಾರ್ಗ ವಿಶುದ್ದಿ, ಪಟಿಪದ ಜ್ಞಾನ ದರ್ಶನ ವಿಶುದ್ದಿ ಮತ್ತು ಜ್ಞಾನದರ್ಶನ ವಿಶುದ್ದಿ ಪ್ರಾಪ್ತಿಗೊಳಿಸಬೇಕು. ಇದೇ ಮರದ ಕಾಂಡವಾಗಿದೆ, ಸಾರವಾಗಿದೆ. ಹೀಗೆ ಅತನ ಪ್ರಜ್ಞಾದ ಅಭಿವೃದ್ಧಿಯಾಗುತ್ತದೆ.
ಪ್ರಾರಂಭದಲ್ಲಿ ಆತನು ಕಲಿಯಬೇಕಾಗುತ್ತದೆ. ನಂತರ ಪ್ರಶ್ನಿಸಿ ಸಂದೇಹಗಳನ್ನು ನಿವಾರಿಸಿಕೊಳ್ಳಬೇಕು. ನಂತರ ಸಾಧನೆಯಲ್ಲಿ ತೊಡಗಿ ಶೀಲ ಮತ್ತು ಸಮಾಧಿಯ ಸ್ಥಾಪನೆ ಮಾಡಿಕೊಳ್ಳಬೇಕು. ನಂತರ ಪ್ರಜ್ಞೆಯಿಂದ ಶುದ್ಧಿಯಾಗುತ್ತದೆ.

ಪ್ರಜ್ಞಾವಂತರು ತಮ್ಮನ್ನು ದಮಿಸಿಕೊಳ್ಳುತ್ತಾರೆ:

ಪಂಡಿತನೆಂಬ ಸಾಮನೇರನು ಅತಿ ಕಡಿಮೆ ವಯಸ್ಸಿನ ಬಾಲಕನಾಗಿದ್ದನು. ಬಾಲ್ಯದಲ್ಲೇ ವಿರಕ್ತನಾಗಿ ಸಾಮನೇರನಾಗಿದ್ದನು. ಆತನು ದೀಕ್ಷೆ ಪಡೆದ 8ನೆಯ ದಿನದಂದು ಪೂಜ್ಯ ಸಾರಿಪುತ್ರರ ಜೊತೆ ಒಮ್ಮೆ ಭಿಕ್ಷಾಟನೆಗೆ ಹೊರಟನು. ದಾರಿಯಲ್ಲಿ ಕೆಲವು ರೈತರು ನೀರಿಗೆ ದಾರಿಮಾಡಿ ನೀರನ್ನು ಹಾಯಿಸುತ್ತಿದ್ದರು. ಆಗ ಪಂಡಿತ ಸಾರಿಪುತ್ತರೊಂದಿಗೆ ಪ್ರಶ್ನಿಸಿದನು.
ಪೂಜ್ಯರೇ ನೀರನ್ನು ನಮ್ಮ ಇಚ್ಛೆಯಂತೆ ಹೇಗೆ ಬೇಕಾದರೂ ಹಾಯಿಸಬಹುದೇ? ಸಾರಿಪುತ್ತ ಹೌದೆಂದರು. ಸ್ವಲ್ಪ ದೂರದಲ್ಲಿ ಒಬ್ಬನು ಬಾಣಗಳನ್ನು ಕಾಯಿಸುತ್ತಾ ನೇರ ಮಾಡುತ್ತಿದ್ದನು. ಇನ್ನೂ ಸ್ವಲ್ಪ ದೂರದಲ್ಲಿ ಬಡಗಿಕಾರರು ಮರಗಳನ್ನು ಕತ್ತರಿಸಿ ಗರಗಸದಿಂದ ನೇರಮಾಡಿ ಚಕ್ರಗಳನ್ನಾಗಿ ಸಿದ್ಧಮಾಡುತ್ತಿದ್ದರು.
ಆಗ ಆ ಬಾಲಕ ಈ ರೀತಿ ಚಿಂತಿಸಲಾರಂಭಿಸಿದನು ನಮ್ಮ ಇಚ್ಛೆಯಂತೆ ನೀರನ್ನು ಹೇಗೆ ಬೇಕಾದರೂ ಹಾಯಿಸಬಹುದು, ನಮ್ಮ ಇಚ್ಛೆಯಂತೆ ಕಬ್ಬಿಣವನ್ನು ಸಹ ಬಾಣದಂತೆ ನೇರ ಮಾಡಬಹುದು, ನಮ್ಮ ಇಚ್ಛೆಯಂತೆ ಬಿದಿರುಗಳನ್ನು ಸಹ ನೇರ ಮಾಡಬಹುದು. ಇವೆಲ್ಲವೂ ನಿಜರ್ಿವ ವಸ್ತುಗಳಾಗಿವೆ. ನಾನು ನನ್ನ ಇಚ್ಛೆಯಂತೆ ಮನಸ್ಸನ್ನು ಗೆಲ್ಲುತ್ತೇನೆ, ಧ್ಯಾನವನ್ನು ಸಿದ್ಧಿಸುತ್ತೇನೆ ಮತ್ತು ಅರಹತ್ವ ಸಾಧಿಸುತ್ತೇನೆ ಎಂದು ಚಿಂತಿಸಲಾರಂಭಿಸಿದನು.
ನಂತರ ಆತನು ಸಾರಿಪುತ್ತರಿಂದ ಅಪ್ಪಣೆ ಪಡೆದು ವಿಹಾರದಲ್ಲಿ ಧ್ಯಾನಿಸ ಲಾರಂಭಿಸಿದನು. ಆತನ ನಿಷ್ಠೆ ಗಮನಿಸಿ ದೇವತೆಗಳು ವಿಹಾರನ್ನು ನಿಶ್ಶಬ್ದವನ್ನಾಗಿಸಿದರು.  ಸ್ವಲ್ಪ ಕಾಲದಲ್ಲಿಯೇ ಆತನು ಆನಾಗಾಮಿಯಾದನು.

ಆಗ ಸಾರಿಪುತ್ತರು ಆ ಬಾಲಕನಲ್ಲಿಗೆ ಹೊರಟರು. ಇದನ್ನು ಅರಿತ ಭಗವಾನರು ಸಾರಿಪುತ್ತರು ಅಲ್ಲಿಗೆ ಹೊರಟರೆ ಆತನಿಗೆ ಅರಹಂತತ್ವಕ್ಕೆ ಅಡ್ಡಿ ಎಂದು ಭಾವಿಸಿ, ದ್ವಾರದಲ್ಲೇ ಸಾರಿಪುತ್ತರಿಗೆ ನಿಲ್ಲಿಸಿ ಪ್ರಶ್ನಿಸಲಾರಂಭಿಸಿದರು. ಈ ರೀತಿ ಸಂಭಾಷಣೆ ನಡೆಯುತ್ತಿರುವಾಗಲೇ ಪಂಡಿತ ಅರಹಂತತ್ವವನ್ನು ಸಾಧಿಸಿದನು. ಅದು ಬಾಲಕನಾಗಿರು ವಾಗಲೇ, ಅದು ಸಂಘಕ್ಕೆ ಸೇರಿದ 8ನೆಯ ದಿನಕ್ಕೆ. ಆತನ ನಿಷ್ಠೆಗೆ ದೇವತೆಗಳು ಮತ್ತು ಬುದ್ಧರು ಸಹ ಸಹಾಯ ಮಾಡಿದರು. ಆತನ ಬಗ್ಗೆ ಬುದ್ಧರು ಈ ಗಾಥೆ ನುಡಿದರು:

"ನೀರು ಹಾಯಿಸುವವರು ನೀರಿಗೆ ದಾರಿ ಮಾಡುವರು,
ಬಾಣ ನಿಮರ್ಾಣಗಾರರು ಬಾಣವನ್ನು ಬಾಗಿಸುವರು.
ಬಡಗಿಕಾರರು ಮರವನ್ನು ಮಣಿಸುವರು ಮತ್ತು
ಪಂಡಿತರು ತಮ್ಮನ್ನು ದಮಿಸುವರು" (ಧಮ್ಮಪದ 80 )

No comments:

Post a Comment