Tuesday 12 December 2017

ಹಲವು ಮಿಥ್ಯಾ ದೃಷ್ಟಿಗಳು

ಹಲವು ಮಿಥ್ಯಾ ದೃಷ್ಟಿಗಳು :

*             ದಾನಕ್ಕೆ ಫಲವಿಲ್ಲ ಎಂದು ತಿಳಿಯುವುದು, ಎಷ್ಟೇ ಪುಣ್ಯ ಮಾಡಲಿ ಲವಲೇಶವು ಲಾಭವಿಲ್ಲ ತಿಳಿಯುವುದು.
*             ಶೀಲಕ್ಕೆ ಫಲವಿಲ್ಲ ಎಂದು ತಿಳಿಯುವುದು, ಎಷ್ಟೇ ಪಾಪ ಮಾಡಲಿ, ಹತ್ಯೆ ಮಾಡಲಿ... ಅದರಿಂದ ಯಾವ ಹಾನಿಯು ಇಲ್ಲ ಎಂದು ಭಾವಿಸುವುದು (ಅಕರ್ಮಕ ಸಿದ್ಧಾಂತ)
*             ತಂದೆ-ತಾಯಿಯರಿಗೆ ಉಚಿತ ಸ್ಥಾನ ನೀಡದಿರುವಂತಹ ದೃಷ್ಟಿಕೋನ.
*             ತ್ಯಾಗ, ಧ್ಯಾನ, ಕ್ಷಮಾಶೀಲ, ಮುಕ್ತರು, ಜ್ಞಾನಿಗಳಾದಂತಹವರು ಇಲ್ಲವೇ ಇಲ್ಲ ಎಂದು ತಿಳಿಯುವುದು.
*             ಕಾರಣವಿಲ್ಲದೆ ಶುದ್ಧಿ, ಅಶುದ್ದಿ, ಲಾಭ, ನಷ್ಟ ಸಂಭವಿಸುತ್ತದೆ ಎಂದು ತಿಳಿಯುವುದು.
*             ಆತ್ಮವು, ಲೋಕವು ಶಾಶ್ವತ ಎಂದು ಭಾವಿಸುವುದು
*             ಎಲ್ಲವೂ ದೇವರಿಂದ ನಡೆಯುತ್ತದೆ ಎಂದು ಭಾವಿಸುವುದು.
*             ಲೋಕಪರಿಮಿತ/ಅಪರಿಮಿತ/ಅನಂತ/ಅಂತ್ಯವೆಂದು ಭಾವಿಸುವುದು.
*             ಕಾರಣವಿಲ್ಲದೆ, ಇದ್ದಕ್ಕಿದ್ದಂತೆ ಲೋಕ, ಆತ್ಮ ಉಂಟಾಯಿತು ಎಂದು ಭಾವಿಸುವುದು.
*             ಆತ್ಮವು ರೂಪಿ/ಅರೂಪಿ/ಅಂತ್ಯವುಳ್ಳದ್ದು/ಅಮರವಾದುದು/ಅನಂತ
*             ಯಾವ ಕಾರ್ಯಕ್ಕೂ ಪರಿಣಾಮವಿಲ್ಲ ಎಂದು ಭಾವಿಸುವುದು.
*             ಎಲ್ಲದಕ್ಕೂ ಹಿಂದಿನ ಜನ್ಮವೇ ಕಾರಣ ಎಂದು ಹೇಳಿ ವರ್ತಮಾನದ ಪ್ರಯತ್ನಕ್ಕೆ ಮಹತ್ವ ನೀಡದಿರುವುದು.
*             ನಮ್ಮೆಲ್ಲಾ ದುಃಖಕ್ಕೆ ಕಾರಣ, ದೇವರು/ವಿಧಿ/ಗ್ರಹಗಳು/ವಾಸ್ತು/ಪರರು, ಇತ್ಯಾದಿ ಎಂದು ತಿಳಿಯುವುದು.
*             ಧ್ಯಾನಕ್ಕೆ ಫಲವಿಲ್ಲ, ಜ್ಞಾನದಿಂದ ಫಲವಿಲ್ಲ, ವಿಮುಕ್ತಿ ಎಂಬುದೇ ಇಲ್ಲ ಎಂದು ಭಾವಿಸುವುದು. ಇತ್ಯಾದಿ...
ಮಿಥ್ಯಾ ದೃಷ್ಟಿಯ ಪರಿಣಾಮ
                ಯಾವ ಮನುಷ್ಯ ಮಿಥ್ಯಾ ದೃಷಿಯಿಂದ ಕೂಡಿರುವನೋ ಆತನಲ್ಲಿ ಮಿಥ್ಯಾ ಸಂಕಲ್ಪ ಉಂಟಾಗುತ್ತದೆ. ಮಿಥ್ಯಾ ಸಂಕಲ್ಪದಿಂದ ಮಿಥ್ಯಾವಾಚಾ ಉಂಟಾಗುತ್ತದೆ. ಮಿಥ್ಯಾವಾಚದಿಂದ ಮಿಥ್ಯಾ ಕರ್ಮಗಳು ಉಂಟಾಗುತ್ತದೆ. ಮಿಥ್ಯಾ ಕರ್ಮದಿಂದ ಮಿಥ್ಯಾ ಜೀವನ ಉಂಟಾಗುತ್ತದೆ. ಮಿಥ್ಯಾ ಜೀವನದಿಂದ ಮಿಥ್ಯಾ ವ್ಯಾಯಾಮ ಆಗುತ್ತದೆ. ಮಿಥ್ಯಾ ವ್ಯಾಯಾಮದಿಂದ ಮಿಥ್ಯಾ ಸ್ಮೃತಿ ಉಂಟಾಗುತ್ತದೆ. ಮಿಥ್ಯಾ ಸ್ಮೃತಿಯಿಂದ ಮಿಥ್ಯಾ ಸಮಾಧಿಯು, ಮಿಥ್ಯಾ ಸಮಾಧಿಯಿಂದ ಮಿಥ್ಯಾ ಜ್ಞಾನ ಉಂಟಾಗುತ್ತದೆ. ಮಿಥ್ಯಾ ಜ್ಞಾನದಿಂದ ಮಿಥ್ಯಾ ಬಂಧನ ಸಿಗುತ್ತದೆ
                ರೀತಿಯಾಗಿ ಮಿಥ್ಯಾದಿಂದ ಸೋಲು ಸಿಗುವುದೇ ಹೊರತು ಯಶಸ್ಸಲ್ಲ.
                ಬೀಜದಂತೆ ಫಲ, ಅದರಂತೆಯೇ ಸಮ್ಮಾದೃಷ್ಟಿಯಂತೆ ಸುಫಲ. ಹಾಗೆಯೇ ಮಿಥ್ಯಾ ದೃಷ್ಟಿಯಂತೆ ಕುಫಲ.
ಮಿಥ್ಯಾ ಯೋಚನೆಯಿಂದ ಮಿಥ್ಯಾದೃಷ್ಟಿ, ಮಿಥ್ಯಾದೃಷ್ಟಿಯಿಂದ ಬಂಧನ :
                ಯೋಚನೆಗಳಲ್ಲಿ ಸುರಕ್ಷಿತವಲ್ಲದವನು ರೀತಿ ಅಯೋಗ್ಯವಾಗಿ ಯೋಚಿಸುತ್ತಾನೆ.
                ನಾನು ಭೂತಕಾಲದಲ್ಲಿ ಇದ್ದೇನೆ? ಅಥವಾ ಇರಲಿಲ್ಲವೇ? ಆಗ ನಾನು ಏನಾಗಿದ್ದೆ? ಹೇಗಿದ್ದೆ? ಹೇಗಿದ್ದು ಹೇಗಾದೆ? ನಾನು ಭವಿಷ್ಯದಲ್ಲಿ ಇರುವನೇ? ನಾನು ಭವಿಷ್ಯದಲ್ಲಿ ಇರುವುದಿಲ್ಲವೇ? ಆಗ ನಾನು ಏನಾಗುತ್ತೇನೆ? ಹೇಗಿರುತ್ತೇನೆ? ಹೇಗಿದ್ದು ಹೇಗಾಗುತ್ತೇನೆ?
                ಹಾಗೆಯೇ ಆತನು ವರ್ತಮಾನದ ಬಗ್ಗೆಯು ಗೊಂದಲದಲ್ಲಿ ಬೀಳುತ್ತಾನೆ ನಾನು ಇದ್ದೇನೆಯೇ? ನಾನು ಇಲ್ಲವೇ? ನಾನು ಏನು? ಹೇಗಿರುವೆ? ಎಲ್ಲಿಂದ ನಾನು ಬಂದೆ? ಎಲ್ಲಿಗೆ ಹೋಗುತ್ತೇನೆ?
ರೀತಿ ಮಿಥ್ಯ ಯೋಚನೆ ಮಾಡುವವನಲ್ಲಿ 6 ವಿಧದ ಮಿಥ್ಯಾದೃಷ್ಟಿ ಉಂಟಾಗುತ್ತದೆ.
1.            ನನ್ನಲ್ಲಿ ಆತ್ಮವಿದೆ
2.            ನನ್ನಲ್ಲಿ ಆತ್ಮವಿಲ್ಲ
3.            ಆತ್ಮನಿಂದಲೇ ಆತ್ಮನನ್ನು ಗ್ರಹಿಸುತ್ತಿದ್ದೇನೆ
4.            ಆತ್ಮನಿಂದ ಅನಾತ್ಮನನ್ನು ಗ್ರಹಿಸುತ್ತಿದ್ದೇನೆ
5.            ಅನಾತ್ಮನಿಂದ ಆತ್ಮನನ್ನು ಗ್ರಹಿಸುತ್ತಿದ್ದೇನೆ
6.            ಇದೇ ನನ್ನ ಆತ್ಮ-ಅರಿಯುವವನು, ಮೋಕ್ಷವು, ಪುಣ್ಯ ಮತ್ತು ಪಾಪಗಳ ಫಲಗಳನ್ನು ಅನುಭವಿಸುವವನು. ನನ್ನ ಆತ್ಮವು ನಿತ್ಯವಾದುದು, ಶಾಶ್ವತವಾದುದು, ಬದಲಾವಣೆಯ ಹೊಂದದಂತಹುದು. ಅಮರವಾಗಿ, ಅನಂತವಾಗಿ ಇರುವಂತಹುದು ಎಂಬ ಮಿಥ್ಯಾದೃಷ್ಟಿ ಪ್ರಬಲವಾಗಿ ಮೂಡುತ್ತದೆ.
                ಇದೇ ದೃಷ್ಟಿಗಳ ಪೊದೆಗಳು, ದೃಷ್ಟಿಗಳ ಕಾಡು, ದೃಷ್ಟಿಗಳ ಮರುಭೂಮಿ, ದೃಷ್ಟಿಗಳ ತಿರುಚು, ದೃಷ್ಟಿಗಳ ಬಂಧನಗಳು ಆಗಿವೆ. ದೃಷ್ಟಿಗಳಿಂದ ಆತನು ಜನ್ಮ, ಜರೆ, ಜರಾ ಮತ್ತು ಮೃತ್ಯುಗಳಿಂದ ಪಾರಾಗಲಾರ, ದುಃಖಗಳಿಂದ ಪಾರಾಗಲಾರ.
ಸಮ್ಮಾ ದೃಷ್ಟಿಯಿಂದ ಬಿಡುಗಡೆ
                ಆದರೆ ಅದೇ ಸುಶಿಕ್ಷಿತ ಆರ್ಯ ಶ್ರಾವಕರು, ಶ್ರೇಷ್ಠರು, ಯೋಗ್ಯವಾಗಿ ಚಿಂತಿಸುತ್ತಾರೆ. ಹೇಗೆಂದರೆ :
1.            ಇದೇ ದುಃಖ
2.            ಇದೇ ದುಃಖ ಉದಯಕ್ಕೆ ಕಾರಣ
3.            ಇದೇ ದುಃಖ ನಿರೋಧ
4.            ಇದೇ ದುಃಖ ನಿರೋಧದ ಮಾರ್ಗ
                ರೀತಿಯಾಗಿ ಯೋಗ್ಯವಾಗಿ ಚಿಂತಿಸುವುದರಿಂದ ಆತನಲ್ಲಿ ಬಂಧನಗಳು ಕಳಚಿ ಬೀಳುತ್ತದೆ, ಮುಕ್ತನಾಗುತ್ತಾನೆ.
                ರೀತಿಯ ಸಮ್ಮಾ ದೃಷ್ಟಿಯಿಂದ ಸಮ್ಮಾ ಸಂಕಲ್ಪ ಉಂಟಾಗುತ್ತದೆ.
                ಸಮ್ಮಾ ಸಂಕಲ್ಪದಿಂದ ಸಮ್ಮಾ ವಾಚಾ ಉಂಟಾಗುತ್ತದೆ.
                ಸಮ್ಮಾ ವಾಚಾದಿಂದ ಸಮ್ಮಾ ಕರ್ಮ ಉಂಟಾಗುತ್ತದೆ.
                ಸಮ್ಮಾ ಕರ್ಮದಿಂದ ಸಮ್ಮಾ ಜೀವನ ಉಂಟಾಗುತ್ತದೆ.
                ಸಮ್ಮಾ ಜೀವನದಿಂದ ಸಮ್ಮಾ ವ್ಯಾಯಾಮ ಉಂಟಾಗುತ್ತದೆ.
                ಸಮ್ಮಾ ವ್ಯಾಯಾಮದಿಂದ ಸಮ್ಮಾ ಸ್ಮೃತಿ ಉಂಟಾಗುತ್ತದೆ.
                ಸಮ್ಮಾ ಸ್ಮೃತಿಯಿಂದ ಸಮ್ಮಾ ಸಮಾಧಿ ಉಂಟಾಗುತ್ತದೆ.
                ಸಮ್ಮಾ ಸಮಾಧಿಯಿಂದ ಸಮ್ಮಾ ವಿಮುಕ್ತಿ ಉಂಟಾಗುತ್ತದೆ.
                ರೀತಿಯಿಂದಾಗಿ ಸಮ್ಮಾದೃಷ್ಟಿ ಬಹು ಶುಭವಾಗಿದೆ.
ವಿಮಶರ್ಿಸಿ - ಅಕುಶಲವನ್ನು ವಜರ್ಿಸಿ, ಕುಶಲವನ್ನು ವೃದ್ಧಿಸಿ
                ಸುದ್ದಿಗಳನ್ನು ನಂಬಬೇಡಿ
                ದಂತಕಥೆ (ಪುರಾಣ)ಗಳನ್ನು ನಂಬಬೇಡಿ.
                ಸಂಪ್ರದಾಯವನ್ನು ನಂಬಬೇಡಿ
                ಪವಿತ್ರಗ್ರಂಥಗಳಲ್ಲಿದೆ ಎಂದೂ ನಂಬಬೇಡಿ
                ತರ್ಕಕ್ಕೆ ಹೊಂದುತ್ತದೆ ಎಂದೂ ನಂಬಬೇಡಿ
                ಒಳ್ಳೆಯ ಊಹೆ ಅಥವಾ ಕಲ್ಪನೆ ಎಂದೂ ನಂಬಬೇಡಿ
                ಚೆನ್ನಾಗಿ ಹೋಲುತ್ತದೆ ಎಂದೂ ನಂಬಬೇಡಿ
                ಚಿಂತನೆಯ ಫಲ ಎಂದೂ ನಂಬಬೇಡಿ
                ಸಾಧ್ಯತೆ ಇದೆ ಎಂದೂ ನಂಬಬೇಡಿ
                ಇದು ನಮ್ಮ ಗೌರವಯುತ ಗುರುವಿನಿಂದ ಬಂದದ್ದು ಎಂದು ಸಹಾ ನಂಬಬೇಡಿ
                ಯಾವಾಗ ನೀವು ವಿಮಶರ್ಿಸಿದಾಗ ಅವು ಅಕುಶಲವಾಗಿ ಕಂಡುಬಂದರೆ ಇವು ನಿಂದನೀಯವಾದುದು, ಜ್ಞಾನಿಗಳಿಂದ ಟೀಕಿಸಲ್ಪಡುತ್ತದೆ. ಇವನ್ನು ಹಿಡಿದಾಗ, ಇವನ್ನು ಪಾಲಿಸಿದಾಗ, ದುಃಖವು ಉಂಟಾಗುತ್ತದೆ ಎಂದು ಗೊತ್ತಾದಾಗ ಅವನ್ನು ವಜರ್ಿಸಿ.

                ಮತ್ತು ಯಾವಾಗ ನೀವು ವಿಮಶರ್ಿಸಿದಾಗ ಇವು ಕುಶಲವಾದುದು, ಇವು ನಿಂದಾತೀತವಾದುದು, ಜ್ಞಾನಿಗಳಿಂದ ಸ್ತುತಿಗೆ ಒಳಪಡುವಂತಹುದು, ಇವನ್ನು ಹೊಂದಿ ಪಾಲಿಸಿದಾಗ ಸುಖ ಮತ್ತು ಕ್ಷೇಮವನ್ನು ಹೊಂದುತ್ತದೆ ಎಂದು ಅರಿವಾದಾಗ ನೀವು ಖಂಡಿತವಾಗಿ ಅದನ್ನು ಪಾಲಿಸಿ ಮುಂದುವರಿಯುತ್ತಾ ಇರಿ.

No comments:

Post a Comment