Thursday 21 December 2017

ಸಮಾಧಿಯ ಲೋಕೋತ್ತರ ಪ್ರಯಾಣ

                               ಸಮಾಧಿಯ ಲೋಕೋತ್ತರ ಪ್ರಯಾಣ :




ಮನಸ್ಸಿನ ಏಕತೆಯೇ ಸಮಾಧಿ, ನಾಲ್ಕು ಸತಿಪಟ್ಠಾನವೇ ಧ್ಯಾನದ ವಿಷಯಗಳು, 4 ಸಮ್ಮಾ ಪ್ರಯತ್ನಗಳೇ ಅವುಗಳ ಸಲಕರಣೆಗಳು. ಇವುಗಳ ನಿರಂತರ ಅಭ್ಯಾಸದ ವೃದ್ಧಿಯೇ ಸಮಾಧಿ ವೃದ್ಧಿ.

ಸಮಾಧಿಯ ಸ್ಥಳ :

ಅದು ಅರಣ್ಯವಾಗಿರಬಹುದು, ಮರದ ಬುಡ, ಗುಹೆ, ಬೆಟ್ಟ, ವಿಹಾರ, ಧ್ಯಾನಮಂದಿರ ಅಥವಾ ಶೂನ್ಯಗೃಹ (ಯಾರು ಇಲ್ಲದ ಮನೆ), ಇವು ಯಾವುದಾದರೂ ಆಗಬಹುದು. ಆದರೆ ಆ ಸ್ಥಳವು ಅತಿ ನಿಶ್ಶಬ್ದವಾಗಿರಬೇಕು. ಹಾಗು ನಿರ್ಜನವಾಗಿರಬೇಕು. ಏಕೆಂದರೆ ಪ್ರಥಮ ಸಮಾಧಿಗೆ ಶಬ್ದವೇ ಶತ್ರು ಎನ್ನುತ್ತಾರೆ. ಆ ಸ್ಥಳವು ವಾಹನಗಳ ಶಬ್ದ, ಸಂಗೀತ, ಹಾಡುಗಳ, ಕಾಖರ್ಾನೆಗಳ ಒಟ್ಟಾರೆ ಸರ್ವರೀತಿಯ ಶಬ್ದಗಳಿಂದ ಮುಕ್ತವಾಗಿರಬೇಕು. ಹಾಗೆಯೇ ಹಾವು ಮುಂತಾದ ಸರಿಸೃಪಗಳಿಂದ ಮುಕ್ತವಾಗಿರಬೇಕು.

ಸಮಾಧಿಯ ಸಕಾಲ :

ಭಿಕ್ಷುಗಳು ಇಡೀ ಜೀವನ ಧ್ಯಾನದಲ್ಲಿ ಕಳೆಯಬೇಕಾಗುತ್ತದೆ. ಆದರೆ ಗೃಹಸ್ಥರು ಪ್ರತಿದಿನ ಕನಿಷ್ಠ ಅರ್ಧಗಂಟೆ ಧ್ಯಾನಿಸುವುದು ಅವರ ಲೌಕಿಕ, ಅಲೌಕಿಕ ಮತ್ತು ಲೋಕೋತ್ತರ ಲಾಭಕ್ಕಾಗಿ ಉತ್ತಮವಾದುದು. ಬೆಳಿಗ್ಗೆ 3 ರಿಂದ 7ರ ತನಕ ಅಥವಾ ಸಂಜೆ ಅಥವಾ ರಾತ್ರಿ ಮಲಗುವ ಮುನ್ನ ಮಾಡಬಹುದು. ಯಾವುದೇ ಕಾಲವಾಗಿರಲಿ, ನಿಗದಿತ ಸಮಯ ಸುಲಾಭಕಾರಿ.
ಸಮಾಧಿಯ ಭಂಗಿ : ಪದ್ಮಾಸನವು ಸವರ್ೊತ್ತಮವಾದುದು. ಇದು ಸಮತೋಲನತೆಗೆ, ಆರೋಗ್ಯಕ್ಕೆ, ಚಳಿಗೆ ಸಹಾಯಕಾರಿಯಾಗಿದೆ. ಸೊಂಟ, ಬೆನ್ನು, ಕುತ್ತಿಗೆ ನೇರವಾಗಿರಬೇಕು. ಕಣ್ಣುಮುಚ್ಚಿದರೆ ಉತ್ತಮ, ಅರ್ಧ ಪದ್ಮಾಸನ ಅಥವಾ ಸುಖಾಸನವು ಧ್ಯಾನಕ್ಕೆ ಉತ್ತಮವೇ ಆಗಿದೆ.

ಸಮಾಧಿಗೆ ಬಾಹ್ಯ ಅಡ್ಡಿಗಳು :

 ಇವು ಧ್ಯಾನಕ್ಕೆ ಬಹಳಷ್ಟು ಬಾರಿ ಅಡ್ಡಿತರುತ್ತದೆ. 

1. ವಾಸಸ್ಥಳ 2. ಕುಟುಂಬ 3. ಪ್ರಯಾಣ 4. ವಿಪರೀತ ಲೌಕಿಕ ಕೆಲಸಗಳು 5. ರೋಗ  6. ಅತಿಯಾಧ ಅಧ್ಯಯನ 7. ಅಲೌಕಿಕ ಧ್ಯಾನ ಶಕ್ತಿಗಳು 8. ಶಬ್ದದ ವಾತಾವರಣ
9. ಲೌಕಿಕರ ಸ್ನೇಹ 10. ಹರಟೆ 11. ನೋವು ಇತ್ಯಾದಿ.

ಆಂತರಿಕ ಅಡ್ಡಿಗಳು

1. ಮಾರನ ಸೈನ್ಯ   2. ಪಂಚ ನೀವರಣ

1) ಮಾರನ ಸೈನ್ಯ :

1. ಕಾಮ : ಇಂದ್ರೀಯ ಬೋಗಾಭಿಲಾಷೆ, ಸ್ತ್ರೀ, ಮಕ್ಕಳು ಐಶ್ವರ್ಯ, ಅಧಿಕಾರಲಾಲಸೆ.
2. ಅರತಿ (ಅತೃಪ್ತಿ) : ಶ್ರೇಷ್ಠ ಧಮ್ಮ ಜೀವನದಲ್ಲಿ ಆನಂದಿಸದಿರುವಿಕೆ.
3. ಹಸಿವು ಮತ್ತು ಬಾಯಾರಿಕೆ : ನಾಲಿಗೆಗೆ ವಶವಾಗುವಿಕೆ
4. ತನ್ಹಾ : ಕಾಯತನ್ಹಾ, ಭವತನ್ಹಾ ಮತ್ತು ವಿಭವತನ್ಹಾ
5. ಜಡತೆ ಮತ್ತು ಸೋಮಾರಿತನ : ಪ್ರಯತ್ನವಿಲ್ಲದಿರುವಿಕೆ
6. ಭಯ : ಹೆದರುವಿಕೆ
7. ಸಂದೇಹ : ತ್ರಿರತ್ನ ಮತ್ತು ತನ್ನಲ್ಲಿ ಸಂದೇಹ
8. ಅಹಂಕಾರ ಮತ್ತು ಕೃತಘ್ನತೆ : ತನ್ನನ್ನು ಶ್ರೇಷ್ಠ ಎಂದು ಭಾವಿಸಿ ಸೇವೆ ಮರೆಯುವಿಕೆ.
9. ಲಾಭ ಕೀತರ್ಿ, ಗೌರವ : ಪ್ರಶಂಸೆಗೆ, ಲೌಕಿಕತೆಗೆ ಹಾತೊರೆಯುವಿಕೆ.
10. ಸ್ವಪ್ರಶಂಸೆ ಮತ್ತು ಪರನಿಂದೆ : ತನ್ನನ್ನು ಹೊಗಳುವಿಕೆ ಪರರ ಹುಳುಕನ್ನು ಹುಡುಕಿ ನಿಂದಿಸುವಿಕೆ.

ಪಂಚ ನೀವರಣಗಳು

1. ಇಂದ್ರೀಯ ಬೋಗದ ಚಿಂತನೆ (ಕಾಮಚ್ಚಂದ)
2. ದ್ವೇಷಿಸುವಿಕೆ (ವ್ಯಾಪಾದ)
3. ಜಡತೆ ಮತ್ತು ಸೋಮಾರಿತನ (ತೀನ ಮತ್ತು ಮಿದ್ದ)
4. ಅವಿಶ್ರಾಂತಿ ಮತ್ತು ಪಶ್ಚಾತ್ತಾಪ (ಉದ್ಧಚ ಮತ್ತು ಕುಕ್ಕುಚ್ಚ)
5. ಸಂದೇಹ (ವಿಚಿಕಿಚ್ಚಾ)

ಧ್ಯಾನಕ್ಕೆ ಪೂರ್ವ ಸಿದ್ಧತೆ :

1. ಶೀಲವಂತ, ತ್ಯಾಗಿಗಳ, ಪ್ರಯತ್ನಶೀಲರ, ಧ್ಯಾನಿಗಳ, ಮೈತ್ರಿವಂತರ, ಪ್ರಜ್ಞಾವಂತರ ಸಹವಾಸದಲ್ಲಿರಬೇಕಾಗುತ್ತದೆ.
2. ಅಧ್ಯಯನ ಮತ್ತು ಚಚರ್ೆ
3. ಮಿತಾಹಾರ
4. ಶೀಲಪಾಲನೆ, ಇಂದ್ರಿಯ ನಿಗ್ರಹ ಮತ್ತು ಕರ್ಮಫಲಗಳ ಅರಿಯುವಿಕೆ,
5. ಪ್ರತಿಯೊಂದು ಕುಶಲದ ಮಹತ್ವ ಮತ್ತು ಧ್ಯಾನದ ಪ್ರತಿಹಂತಗಳ ಅರಿಯುವಿಕೆ ಮತ್ತು ಅಡ್ಡಿಗಳ ನಿವಾರಣೆಗೆ ಸಿದ್ಧವಾಗುವುದು.
6. ಧ್ಯಾನದ ಸ್ಥಳ, ಕಾಲ, ಭಂಗಿಯನ್ನು ನಿಧರ್ಿಷ್ಟಗೊಳಿಸಬೇಕು. ತಾಜಾತನದ ಮನಸ್ಸಿನಿಂದ ಆರಂಭಿಸಬೇಕಾಗುತ್ತದೆ.
ಆನಾಪಾನಾ ಝಾನದ ಆರಂಭ :
ಇಲ್ಲಿ ಸಾಧಕ ಅಥವಾ ಭಿಕ್ಷುವು, ಅರಣ್ಯಕ್ಕೂ ಅಥವಾ ವೃಕ್ಷ ಮೂಲದಲ್ಲೋ ಅಥವಾ ಶೂನ್ಯಗೃಹದಲ್ಲೋ ಪದ್ಮಾಸನದಲ್ಲಿ ಕುಳಿತುಕೊಳ್ಳುತ್ತಾನೆ ಮತ್ತು ತನ್ನ ಶರೀರವನ್ನು ನೇರವಾಗಿಡುತ್ತಾನೆ ಮತ್ತು ಜಾಗರೂಕತೆಯನ್ನು ತನ್ನ ಮುಂದೆ ಸ್ಥಾಪಿಸುತ್ತಾನೆ. ಸದಾ ಒಳ ಉಸಿರು ಮತ್ತು ಹೊರ ಉಸಿರು (ಅನಾ ಮತ್ತು ಅಪಾನ)ನಲ್ಲೇ ಜಾಗ್ರತೆ (ಸತಿ) ಸ್ಥಾಪಿಸುತ್ತಾನೆ.
ಅಂದರೆ ಇಲ್ಲಿ ಒಂದು ನಿಗದಿತ ಕಾಲದಲ್ಲಿ ಅಥವಾ ಭಿಕ್ಷುವಾಗಿದ್ದರೆ ಸದಾಕಾಲ ಅಭ್ಯಸಿಸಬೇಕಾಗುತ್ತದೆ. ಆಗಿನ ಕಾಲದಲ್ಲಿ ಅರಣ್ಯವು ಏಕಾಂತ ಸ್ಥಳವಾಗಿದ್ದರಿಂದ ಅದೇ ವಿವರಣೆ ಇಲ್ಲಿ ನೀಡಿದೆ. ವೃಕ್ಷಮೂಲ ಅಥವಾ ಮರದ ಬುಡವು ಚಳಿ, ಮಳೆ ಮತ್ತು ಬಿಸಿಲಿಗೆ ರಕ್ಷಣೆ ನೀಡುವುದರಿಂದ ಅದನ್ನು ಆಯ್ಕೆ ಮಾಡಬಹುದು ಅಥವಾ ಆಧುನಿಕ ಕಾಲದಂತೆ ಧ್ಯಾನಮಂದಿರ ಅಥವಾ ಶೂನ್ಯಗೃಹ ಅಂದರೆ ಶಬ್ದವಿಲ್ಲದ, ಬೇರೆ ವ್ಯಕ್ತಿಗಳಿಲ್ಲದ ಕಡೆ ಧ್ಯಾನದಲ್ಲಿ ನೆಲೆಸಿ ಸಾಧಿಸಬೇಕಾಗುತ್ತದೆ.
ಆತನು ಪದ್ಮಾಸನ ಅಥವಾ ವಜ್ರಾಸನ ಅಥವಾ ಸುಖಾಸನದಲ್ಲಿ ಅಥವಾ ಅರ್ಧ ಪದ್ಮಾಸನದಲ್ಲಿ ಕುಳಿತು ಬೆನ್ನನ್ನು ಮತ್ತು ಕತ್ತನ್ನು ಒಟ್ಟಾರೆ ಶರೀರದ ಭಂಗಿ ನೇರವಾಗಿಟ್ಟುಕೊಂಡು ಕುಳಿತು ತನ್ನ ಗಮನವೆಲ್ಲಾ, ತನ್ನ ಮನಸ್ಸನ್ನು ಉಸಿರಿನಲ್ಲೇ ಅಂದರೆ ಒಳ ಉಸಿರು ಮತ್ತು ಹೊರ ಉಸಿರಿನಲ್ಲೇ ಕೇಂದ್ರೀಕೃತಗೊಳಿಸಿ ಜಾಗ್ರತೆಯಲ್ಲಿರಬೇಕು. ಇಲ್ಲಿ ಉಸಿರನ್ನು ಹಿಡಿಯುವುದಾಗಲಿ (ಕುಂಭಕ) ಅಥವಾ ಉಸಿರನ್ನು ಬಿಟ್ಟು ಉಸಿರನ್ನು ಹಿಡಿಯುವುದಾಗಲಿ (ಬಾಹ್ಯ ಕುಂಭಕ) ಮಾಡಬಾರದು. ಅಥವಾ ಒಂದು ಮೂಗಿನ ಹೊಳ್ಳೆಯಿಂದ ಉಸಿರು ತೆಗೆಯುವುದು, ಬಿಡುವುದು ಇತ್ಯಾದಿ. ಉಸಿರಾಟದ ವ್ಯಾಯಾಮಗಳನ್ನು ಮಾಡಬೇಡಿ. ಏಕೆಂದರೆ ಇದು ಉಸಿರಾಟದ ವ್ಯಾಯಾಮವಲ್ಲ, ಬದಲಾಗಿ ಉಸಿರಾಟದ ಧ್ಯಾನವಾಗಿದೆ. ಹಾಗೆಯೇ ಬಲವಂತವಾಗಿ ಉಸಿರಾಟ ಮಾಡುವುದು ಬೇಡ. ಸಹಜ ಸ್ಥಿತಿಯಲ್ಲೇ ಉಸಿರಾಟ ಹೇಗೆ ಒಳಹೋಗುವುದು ಅಥವಾ ಹೊರಬರುತ್ತದೋ ಅದನ್ನು ಹಾಗೆಯೇ ವೀಕ್ಷಿಸಿ, ಅನುಭವಿಸಿ, ಜಾಗ್ರತೆಯಿಂದ ಗಮನಿಸಿ. ಹಾಗೆಯೇ ಉಸಿರಿನ ಜೊತೆಗೆ ರೂಪವನ್ನು (ರೂಪ/ವಿಗ್ರಹ/ಭಾವಚಿತ್ರ) ಕಲ್ಪಸಬೇಡಿ. ಹಾಗೆಯೇ ಜಪವನ್ನು ಮಾಡಬೇಡಿ. ಹಾಗೆ ಮಾಡಿದಾಗ ಅದು ಉಸಿರಾಟದ ಧ್ಯಾನವಾಗದೆ ಕಸಿನಾ ಅಥವಾ ಜಪಧ್ಯಾನವಾಗುತ್ತದೆ. ಆಗ ನೀವು ಅನಾಪಾನಾಸತಿಯ ಅತ್ಯುನ್ನತ ಲಾಭದಿಂದ ವಂಚಿತರಾಗುತ್ತೀರಿ. ಆದ್ದರಿಂದ ಕಡ್ಡಾಯವಾಗಿ ರೂಪ ಅಥವಾ ನಾಮ (ಜಪ) ಸೇರಿಸಬೇಡಿ.
ಉಸಿರಾಟವು ಸಹಜವಾಗಿ ನಡೆಯುತ್ತಿರುತ್ತದೆ. ನೀವು ಸಹಾ ಸಹಜವಾಗಿಯೇ ಅದನ್ನು ಗಮನಿಸುತ್ತಿರಿ. ಮನಸ್ಸಿನಲ್ಲಿ, ಉಸಿರಾಟದಲ್ಲೇ ಕೇಂದ್ರೀಕೃತಗೊಳಿಸಿ. ಉಸಿರಾಟದಲ್ಲೇ ಹರಿಸಿರಿ. ಏಕಾಗ್ರಗೊಳಿಸಿರಿ, ನಿಮ್ಮ ಮನಸ್ಸು ಚದುರದಿರಲಿ, ಚೆಲ್ಲಾಪಿಲ್ಲಿಯಾಗಿ ಚಲಿಸದಿರಲಿ. ಬೇರೆ ವಿಷಯದ ಕಡೆ ಹರಿಯದಿರಲಿ, ಯಾವುದರಿಂದಲೂ ಕ್ಷೊಭೆಗೆ ಒಳಗಾಗಬಾರದು. ಚದುರದ, ಅಬಾಧಿತವಾದ ಏಕಾಗ್ರತೆಯನ್ನು ಉಸಿರಾಟದ ಮೇಲೆ ಹರಿಸಿ, ಮಿಕ್ಕೆಲ್ಲಾ ವಿಷಯದಿಂದ ನಿಮ್ಮ ಮನಸ್ಸು ವಿಮುಖವಾಗಲಿ, ಹಾಗೆಯೇ ಉಸಿರಾಟದಲ್ಲಿ ನಿಮ್ಮ ಮನಸ್ಸು ಒಮ್ಮುಖವಾಗಿರಲಿ.

ಮಾರನ ತಡೆಗಳು :

ಆದರೆ ನಿಮ್ಮ ಮನಸ್ಸು ಸುಶಿಕ್ಷಿತವಾಗಿಲ್ಲದ ಕಾರಣ, ಧ್ಯಾನದಲ್ಲಿ ನೆಲೆಸದ ಕಾರಣ, ಈ ಹಿಂದೆ ಚಂಚಲತೆಗೆ ಒಳಪಟ್ಟ ಕಾರಣದಿಂದ, ಅದು ಉಸಿರಾಟದಲ್ಲಿ ತಲ್ಲೀನವಾಗದು. ಅದು ನಾನಾ ವಿಷಯಗಳಲ್ಲಿ ಚಲಿಸುತ್ತಿರುತ್ತದೆ. ಮೊಲದಂತೆ ಚೆಲ್ಲಾಪಿಲ್ಲಿಯಾಗಿ ಚಲಿಸುತ್ತದೆ. ಮಂಗವು ಒಂದು ವೃಕ್ಷದಿಂದ ಮತ್ತೊಂದು ವೃಕ್ಷಕ್ಕೆ ನೆಗೆಯುವ ಹಾಗೆ ಅದು ಸಹಾ ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಹಾರುತ್ತಿರುತ್ತದೆ. ನೆಲಕ್ಕೆ ಬಿದ್ದ ಪಾದರಸದಂತೆ ಚದುರಿ ಹೋಗುತ್ತದೆ.
ಇಷ್ಟಕ್ಕೂ ನಮ್ಮ ಮನಸ್ಸನ್ನು ಆಕ್ರಮಿಸುವಂತಹುದು ಯಾವುದು? ಸುಖಪೂರಿತವಾದ ಇಂದ್ರಿಯ ಸುಖಗಳು ಚಿತ್ತಾಕರ್ಷಕವಾಗಿ ಕಾಡುತ್ತದೆ. ಇದು 6 ಇಂದ್ರಿಯಗಳ ಸುಖವೆಂದು ಹೇಳಬಹುದು. ಅಂದರೆ ಕಣ್ಣಿಗೆ ಆಕರ್ಷಕವಾದುದು, ಕಿವಿಗೆ ಆಕರ್ಷಕವಾದುದು, ಮೂಗಿಗೆ ಆಕರ್ಷಕವಾದುದು, ನಾಲಿಗೆಗೆ ಆಕರ್ಷಕವಾದುದು, ದೇಹಕ್ಕೆ ಆಕರ್ಷಕವಾದದ್ದು ಮತ್ತು ಮನಸ್ಸಿಗೆ ಆಕರ್ಷಕವಾದುದ್ದು ಹಾಗೆಯೇ ಹಣ, ಅಧಿಕಾರ, ಕೀತರ್ಿ, ಸ್ತ್ರೀ ಅಥವಾ ಪುರುಷ, ಪುತ್ರರು ಇತ್ಯಾದಿ ಸುಖಗಳ ಯೋಜನೆಗಳು ಬಂದು ಕಾಡುತ್ತದೆ. ಆಗ ಮನಸ್ಸು ಅದರ ಹಿಂದೆ ಹೊರಡುತ್ತದೆ.
ಅಥವಾ ಆರು ಇಂದ್ರೀಯಗಳಿಗೆ ಅಪ್ರಿಯವಾದದ್ದು, ಕಾಡಬಹುದು. ರೂಪದ್ವೇಷ (ಕಣ್ಣಿನ ಮೂಲಕ ದ್ವೇಷಿಸುವಂತಹುದು) ಶಬ್ದದ ದ್ವೇಷ, ವಾಸನೆಯ ದ್ವೇಷ, ಸ್ಪರ್ಶದ ದ್ವೇಷ, ರುಚಿಯ ದ್ವೇಷ, ದ್ವೇಷಿಸುವ ವ್ಯಕ್ತಿಗಳ ಯೋಚನೆ. ಅಪ್ರಿಯ ಸನ್ನಿವೇಶಗಳ ಯೋಚನೆ, ಅಪ್ರಿಯ ವಸ್ತುಗಳ ಯೋಚನೆ, ಭಯದ ಯೋಚನೆ, ಚಿಂತೆ, ಕಾಡಬಹುದು. ಆದರೆ ಪ್ರತಿ ಭಯ ಅಥವಾ ಚಿಂತೆಯ ಹಿಂದೆ ಪ್ರಿಯ ಅಥವಾ ಅಪ್ರಿಯ ಯೋಚನೆ ಇದ್ದೇ ಇರುತ್ತದೆ. ಅಥವಾ ಪಶ್ಚಾತ್ತಾಪ ಉಂಟಾಗಬಹುದು. ಹಿಂದೆ ಮಾಡಿರುವ ಪಾಪ ಅಥವ ತಪ್ಪುಗಳು ಪಶ್ಚಾತ್ತಾಪ ಉಂಟುಮಾಡುತ್ತಿರುತ್ತದೆ. ಹಾಗೆಯೇ ಭವಿಷ್ಯದಲ್ಲಿ ಸಾಧಿಸದಿರುವ ಈಗ ಸಾಧಿಸಲು ಸಾಧ್ಯವಾಗದೆ ಉಂಟಾಗುತ್ತಿರುವ ಪಶ್ಚಾತ್ತಾಪವಾಗ ಬಹುದು. ಅಥವಾ ಧ್ಯಾನದ ಬಗ್ಗೆಯೇ ಬೇಸರವಾಗಬಹುದು. ಜಯ-ಪರಾಜಯ, ಲಾಭ-ನಷ್ಟ, ಸ್ತುತಿನಿಂದ ಇವುಗಳು ಕಾಡಬಹುದು.
ಅಥವಾ ಜಡಸ್ಥಿತಿಯು ಉಂಟಾಗಿ ಅಲಕ್ಷವು ಅತಿಯಾಗಿ ಯತ್ನಶೀಲತೆಯು ನಿಂತೇ ಹೋಗಬಹದು. ನಾಳೆ ಮಾಡೋಣ, ಅನಂತರ ಮಾಡೋಣ, ಮುಂದಿನ ತಿಂಗಳು ಮಾಡೋಣ ಹೀಗೆಯೇ ಸೋಮಾರಿತನ ಉಂಟಾಗಬಹುದು.
ಅಥವಾ ಧ್ಯಾನದ ಮೇಲೆ ಸಂದೇಹ ಉಂಟಾಗಬಹುದು. ತನ್ನ ಮೇಲೆ ಸಂದೇಹ ಉಂಟಾಗಬಹುದು. ಅಥವಾ ತ್ರಿರತ್ನದ ಮೇಲೆ (ಬುದ್ಧ, ಧಮ್ಮ, ಸಂಘ) ಸಂದೇಹ ಉಂಟಾಗಬಹುದು.
ಅಥವಾ ಕಾಲುಗಳು ನೋವನ್ನು ತರಬಹುದು, ದೇಹವನ್ನು, ಉಸಿರನ್ನು ಮತ್ತು ಸಂವೇದನೆಗಳನ್ನು ಯಾವಾಗಲು, ವೀಕ್ಷಿಸದ ಕಾರಣ ಆ ಅನುಭವವನ್ನು ಕಂಡು ಭೀತಿಗೊಳ್ಳಬಹುದು. ವಿಪರೀತ ಸಂದೇಹಕ್ಕೆ ಗುರಿಯಾಗಬಹುದು. ಹಸಿವು, ನೀರಡಿಕೆ ಕಾಡಬಹುದು. ಭಯವು ಉಂಟಾಗಬಹುದು, ಲಾಭ, ಪ್ರಶಂಸೆಗಳ ಬಗ್ಗೆ ಮನವು ಚಲಿಸಬಹುದು.
ಇಂತಹುದೇ ಭೂತಕಾಲದ ಯೋಚನೆಗಳಲ್ಲಿ ಮನಸ್ಸು ಹರಿಯುತ್ತದೆ ಅಥವಾ ಇಂತಹುದೇ ಭವಿಷ್ಯಕಾಲ ಯೋಚನೆಗಳಲ್ಲಿ ಮುಳುಗಬಹುದು ಅಥವಾ ವರ್ತಮಾನದ ನೋವು, ಬೇಸರ, ಜಡತೆ ಕಾಡಬಹುದು.

ಮಾರನ ತಡೆಗಳ ನಿವಾರಣೆ :

ಈ ರೀತಿ ನಿಮಗೆ ಕಾಡುವ ಯೋಚನೆಗಳ ಸಂಗ್ರಹವೇ ಪಂಚನೀವರಣ. ಅಂದರೆ ಇಂದ್ರಿಯಾಸಕ್ತಿ, ದ್ವೇಷ, ಜಡತೆ, ಚಿಂತೆ ಮತ್ತು ಸಂದೇಹ ಹಾಗು ನೋವು ಇವೇ ನಿಮ್ಮನ್ನು ಕಾಡುತ್ತಿರುವುದು. ಇವು ಭೂತಕಾಲದ ಯೋಚನೆಗಳ ರೂಪದಲ್ಲಿ ಬಂದು ಕಾಡುತ್ತದೆ ಅಥವಾ ಭವಿಷ್ಯದ ಯೋಚನೆಗಳ ರೂಪದಲ್ಲಿ ಬಂದು ಕಾಡುತ್ತದೆ ಅಥವಾ ವರ್ತಮಾನದಲ್ಲಿ ಬೇಸರ, ಸೋಮಾರಿತನ ಅಥವಾ ಕಾಲುಗಳ ನೋವಿನ ದ್ವೇಷದ ರೂಪದಲ್ಲಿ ಕಾಡಬಹುದು.
ಇವೆಲ್ಲದರಿಂದ ಮೀರಿ ಸಾಧನೆ ಮಾಡುತ್ತೇವೆ ಎಂದು ಸಂಕಲ್ಪಿಸಿ ಹಾಗು ದೃಢ ನಿಧರ್ಾರದಿಂದ ಪ್ರಯತ್ನಶೀಲರಾಗಿ ಮತ್ತು ಯಶಸ್ವಿಗಳಾಗಿ ಆಗಲೇ ನಿಮಗೆ ಜಯ ಸಾಧ್ಯ.
ಇವೆಲ್ಲವೂ ಯೋಚನೆಗಳಾಗಿವೆ, ಇವು ಭೂತಕಾಲದ ನೆನಪುಗಳಾಗಿರುತ್ತವೆ ಅಥವಾ ಭವಿಷ್ಯದ ಯೋಜನೆ ಅಥವಾ ಕನಸುಗಳಾಗಿರುತ್ತದೆ ಅಷ್ಟೇ. ಈ ಯೋಚನೆಗಳನ್ನು ನೀವು ಮೀರಿ ಸಾಧನೆ ಮಾಡಬೇಕು.
ಈ ತಡೆಗಳನ್ನು ಮೀರಬೇಕಾದರೆ ನೀವು ಈ ಹಿಂದೆ ಶೀಲವನ್ನು ಪಾಲಿಸುತ್ತಿರಬೇಕು, ಇಂದ್ರಿಯಗಳ ರಕ್ಷಣೆ (ಸಂಯಮ) ಮಾಡಬೆಕು, ಅಧ್ಯಯನ ಮಾಡಿ ಜ್ಞಾನ ಗಳಿಸಿ ಸಂದೇಹ ಮುಕ್ತವಾಗಿರಬೇಕು. ಸತ್ಸಂಗದಲ್ಲಿ ಇರಲೇಬೇಕು.
ವರ್ತಮಾನದಲ್ಲಿ ತಡೆಗಳ ರಹಿತ ಸ್ಥಿತಿಗೆ ನಿರಂತರ ಶ್ರಮಿಸಬೇಕು. ಪಂಚ ಬಲಗಳನ್ನು ಸಪ್ತಬೋಧಿ ಅಂಗಗಳನ್ನು ವೃದ್ಧಿಗೊಳಿಸಬೇಕು.
ಈ ಹಿಂದೆಯೇ ಅಶುಭ ಧ್ಯಾನ, ಬ್ರಹ್ಮವಿಹಾರ ಧ್ಯಾನ, ಕರ್ಮಫಲ ಚಿಂತನೆ, ಪ್ರಯತ್ನಶೀಲತೆಯ ಮಹತ್ವ, ಅಲೋಕ ಕಸಿನಾ, ಸುಖವೃದ್ಧಿ, ಶ್ರದ್ಧೆ, ಜ್ಞಾನದ ವೃದ್ಧಿ ಮಾಡಿದರೆ ಪಂಚ ತಡೆಗಳು ಬಲಹೀನವಾಗುತ್ತದೆ, ನಾಶವಾಗುತ್ತದೆ.
ಇವೆಲ್ಲವೂ ಯೋಚನೆಗಳಾಗಿವೆ, ಯಾವಾಗ ನೀವು ಯೋಚನೆ ಮೀರುವಿರೋ ಆಗ ನೀವು ತಡೆಗಳನ್ನು ಮೀರುವಿರಿ. ಈ ರೀತಿಯ ಅಕುಶಲ ಯೋಚನೆ ಉಂಟಾದಾಗ ನೀವು ಅವುಗಳ ಉತ್ಪತ್ತಿಯಾಗದಂತೆಯೇ ತಡೆಯಬೇಕು. ಏಕೆಂದರೆ ಪಾಪಯುತವಾದ ಅಕುಶಲ ಯೋಚನೆಗಳು ಪ್ರಾರಂಭ ಸ್ಥಿತಿಯಲ್ಲಿಯೇ ದಮನ ಮಾಡಿದರೆ ಸೂಕ್ತ. ಇಲ್ಲದೇ ಹೋದರೆ ಅವು ನಿಮ್ಮನ್ನು ದಮನಮಾಡಿ ಬಿಡುತ್ತದೆ.


ಕೇವಲ ನಿಮ್ಮ ಯೋಚನೆಗಳನ್ನು ನಿಯಂತ್ರಿಸಿ (ರಕ್ಷಿಸಿರಿ) :

ಶ್ರಾವಸ್ತಿಯಲ್ಲಿ ಒಬ್ಬ ಗೃಹಪತಿ ಪುತ್ರನಿದ್ದನು. ಆ ಯುವಕನು ಧಮರ್ಾಚಾರಿ ಯಾಗಿದ್ದನು. ಭಿಕ್ಷುಗಳಿಗೆ ದಾನ ನೀಡುತ್ತಾ, ಶೀಲ ಪಾಲಿಸುತ್ತಾ ಸದ್ಗೃಹಸ್ಥನಾಗಿದ್ದನು. ಒಮ್ಮೆ ಭಿಕ್ಷುವಿನ ವಚನದಂತೆ ಆತ ತನ್ನ ಐಶ್ವರ್ಯವನ್ನು 3 ಭಾಗ ಮಾಡಿ 1 ಭಾಗವನ್ನು ಉದ್ಯಮದಲ್ಲಿ ಹೂಡಿದನು. ಮತ್ತೊಂದು ಭಾಗವನ್ನು ಕುಟುಂಬ ಪಾಲನೆಗೆ ಮೀಸಲಿಟ್ಟನು. ಮತ್ತು 3ನೆಯ ಭಾಗವನ್ನು ದಾನಕ್ಕೆ ಮೀಸಲಿಟ್ಟು ದಾನಿಯಾದನು. ಇದೇರೀತಿ ದಾನ, ಶೀಲ ಪಾಲಿಸುತ್ತಾ ಆತನಿಗೆ ಆನಂದ ಉಂಟಾಗಿ ಮುಂದೆ ನಾನು ಏನನ್ನು ಮಾಡಬೇಕೆಂದು ಆತ ಕೇಳಿದಾಗ, ತ್ರಿಶರಣು ಪಡೆ ಎಂದು ಭಿಕ್ಷುಗಳು ನುಡಿದರು. ಹಾಗೆಯೇ ಆತನು ತ್ರಿಶರಣು ಪಡೆದು ಮುಂದೆ ಹಾಗೆಯೇ ಪಂಚಶೀಲ ಪಾಲಿಸುತ್ತಾ ಹಾಗೆಯೇ ದಶಶೀಲ ಪಾಲಿಸಲು ಆರಂಭಿಸಿದನು. ನಂತರ ಆತನು ಪ್ರಾಪಂಚಿಕತೆಯಿಂದ ಮುಕ್ತನಾಗಿ ಭಿಕ್ಷುವಾದನು.
ಆತನು ಭಿಕ್ಷುವಾದಾಗ ಆತನಿಗೆ ಅಭಿಧಮ್ಮವನ್ನು ಒಬ್ಬ ಭಿಕ್ಷು ಉಪದೇಶಿಸಿದರು. ಹಾಗೆಯೇ ವಿನಯದ ಗುರುಗಳು ಆತನಿಗೆ ಭಿಕ್ಷುಗಳ ನಿಯಮಗಳನ್ನು ತಿಳಿಸಿ ಅದನ್ನು ನೆನಪಿಡಲು ಮತ್ತು ಪಾಲಿಸಲು ತಿಳಿಸಿದರು. ಆತನು ಚಿಂತಾಕ್ರಾಂತನಾದನು. ಏಕೆಂದರೆ ಶೀಲದ ನಿಯಮಗಳು 227 ಇದ್ದವು. ಜೊತೆಗೆ ಧ್ಯಾನದ ವಿಷಯಗಳು, ಜೊತೆಗೆ ಬೌದ್ಧ ಮನಶಾಸ್ತ್ರ (ಅಭಿಧಮ್ಮದ) ವಿಸ್ತಾರ ವಿಶ್ಲೇಷಣೆ ಬೇರೆ. ಸುತ್ತಗಳ ನೆನಪು ಬೇರೆ ಇಡಬೇಕಿತ್ತು. ಆತನಿಗೆ ಇದಕ್ಕಿಂತ ಗೃಹಸ್ಥ ಜೀವನ ಸ್ವತಂತ್ರ ಎನಿಸಿತು. ಆತನು ಮತ್ತೆ ಗೃಹಸ್ಥನಾಗಲು ಸಿದ್ಧನಾದನು. ಆದರೆ ಅದು ಬಿಡಲಾರದೆ ಇದು ಹಿಡಿಯಲಾರದೆ ಆತನು ತನ್ನ ಮಾನಸಿಕ ಹೊರೆಯಿಂದ ಕುಗ್ಗಿದನು, ಅತೃಪ್ತನಾದನು, ಸಂದೇಹದಿಂದ ಕೂಡಿದನು. ಅಸಂತುಷ್ಟನಾದನು, ಅಸುಖಿಯಾಗಿ ದುರ್ಬಲನಾದನು. ಆತನ ಈ ಚಿಂತೆ, ದುಃಖ ಬುದ್ಧರಿಗೆ ಅರಿವಾಗಿ ಆತನಿಗೆ ಈ ರೀತಿ ಉಪದೇಶ ನೀಡಿದರು.
ನೀನು ಕೇವಲ ಮನಸ್ಸನ್ನು ನಿಯಂತ್ರಿಸಿದರೆ ಅಷ್ಟೇ ಸಾಕು, ನೀನು ಮತ್ತೆ ಏನನ್ನೂ ನಿಯಂತ್ರಿಸುವುದು ಬೇಡ. ಆದ್ದರಿಂದ ಕೇವಲ ನಿನ್ನ ಮನಸ್ಸನ್ನು ಅಕುಶಲಗಳಿಂದ ರಕ್ಷಿಸಿಕೋ.
ಮನಸ್ಸನ್ನು ಗ್ರಹಿಸುವುದು ಅತಿ ಕಷ್ಟಕರ, ಅದು ಅತ್ಯಂತ ಕೋಮಲವು ಮತ್ತು ಅತಿ ಸೂಕ್ಷ್ಮವೂ ಆಗಿದೆ. ಅದು ಇಷ್ಟವಾದುದೆಡೆ ಚಲಿಸುವುದು ಮತ್ತು ನೆಲೆಸುವುದು. ಆದರೆ ಮೇಧಾವಿಯು ಚಿತ್ತದ ರಕ್ಷಣೆ ಮಾಡುತ್ತಾನೆ. ರಕ್ಷಿತ ಚಿತ್ತವು ಸುಖಕಾರಿಯಾಗಿದೆ.
- ಧಮ್ಮಪದ 36
ನಂತರ ಆ ಯುವ ಭಿಕ್ಷುವು ಅದರಂತೆಯೇ ಸಾಧಿಸಿ ಅರಹಂತನಾಗುತ್ತಾನೆ.
ಹೀಗೆ ಚಿತ್ತದ ರಕ್ಷಣೆ ಅಥವಾ ಯೋಚನೆಗಳ ರಕ್ಷಣೆ ಮಾಡಿದಾಗ ಮಾತ್ರ ನಾವು ಧ್ಯಾನದಲ್ಲಿ ಯಶಸ್ವಿಯಾಗುತ್ತೇವೆ.
ಬುದ್ಧರು ತಮ್ಮ ಬೋಧಿ ಪ್ರಾಪ್ತಿಯ ಮುನ್ನ ಮಾಡಿದ ಮಹಾ ಸಂಕಲ್ಪ ನೆನಪಿಸಿಕೊಳ್ಳಿ.
ನನ್ನ ಚರ್ಮ, ಮಾಂಸ, ಮೂಳೆ ಮತ್ತು ರಕ್ತಗಳೆಲ್ಲವೂ ಒಣಗಿಹೋದರೂ ಸರಿಯೆ, ಸಂಬೋಧಿಪ್ರಾಪ್ತಿಯ ವಿನಃ ನಾನು ಈ ಪದ್ಮಾಸನ ಭಂಗಿಸಲಾರೆ. ಈ ಸ್ಥಳದಿಂದ ಅಲುಗಾಡಲಾರೆ. ಅದರಂತೆಯೇ ಅವರು ಸಹಸ್ರ ವಿಘ್ನಗಳು ಬಾಧಿಸಿದರೂ ಅಲುಗಾಡದೆ ಸಮ್ಮಾ ಸಂಬೋಧಿ ಪ್ರಾಪ್ತಿ ಮಾಡಿದರು.
ನಾವು ಸಹ ಹಾಗೆಯೇ ನಮ್ಮ ಯೋಚನೆಗಳನ್ನು ಗೆಲ್ಲಬೇಕಾಗಿದೆ. ಧ್ಯಾನಸಿದ್ಧಿಗೊಳಿಸ ಬೇಕಾಗಿದೆ. ವಿಶುದ್ಧಿ ಪ್ರಾಪ್ತಿಗೊಳಿಸಬೇಕಾಗಿದೆ. ವಿಮುಕ್ತರಾಗಬೇಕಾಗಿದೆ. ನಿಬ್ಬಾಣ ಪಡೆಯಬೇಕಾಗಿದೆ.

ಯೋಚನೆಗಳೊಂದಿಗೆ ಹೋರಾಟ :

ಒಂದು ನಾವು ಅಕುಶಲ ಯೋಚನೆ ಉಂಟಾಗದಂತೆ ಮನಸ್ಸನ್ನು ರಕ್ಷಿಸಬೇಕಾಗುತ್ತದೆ (ಸಂಯಮ ತಾಳಬೇಕಾಗುತ್ತದೆ).
ಒಂದುವೇಳೆ ಎಂದಾದರೂ ಉದಯಿಸಿದರೆ ಅದನ್ನು ಅಲಕ್ಷಿಸದೆ ವಜರ್ಿಸಬೇಕು. ಅದರಲ್ಲಿಯೆ ದೃಢ ಶ್ರಮಪಟ್ಟು ಯಶಸ್ಸು ಪಡೆಯಬೇಕು. ತಕ್ಷಣ ಉಸಿರಾಟದಲ್ಲಿ ಮನಸ್ಸು ತಿರುಗಿಸಬೇಕು. ಹಾಗೆಯೇ ಮುಂದುವರೆಯಬೇಕು. ನೆನಪಿಡಿ, ಒಬ್ಬನು ಪೂರ್ವದ ಕಡೆ ಪ್ರಯಾಣ ಮಾಡಿದಷ್ಟು ಪಶ್ಚಿಮದಿಂದ ವಿಮುಖನಾಗುತ್ತಾನೆ. ಹಾಗೆಯೇ ನೀವು ಉಸಿರಾಟದಲ್ಲಿ ತಲ್ಲೀನರಾದಷ್ಟು ನೀವು ಅಕುಶಲದಿಂದ ದೂರವಾಗುತ್ತೀರಿ ಅಥವಾ ಈ ಯೋಚನೆಗಳು ಅತಿ ಅಪಾಯಕಾರಿ ಎಂದು ಅಪಾಯ ಪರಿಶೋಧನೆ ಮಾಡಿದಾಗ ಅವು ಅಂತ್ಯಗೊಳಿಸಿ ಅಥವಾ ಅಕುಶಲ ಯೋಚನೆಗಳನ್ನು ಮರೆಯಬೇಕು ಅಥವಾ ಅವುಗಳ ಪ್ರಕ್ರಿಯೆ ವೀಕ್ಷಿಸಿ ಸಮತೋಲನದಿಂದ ಸ್ಥಿರಗೊಳಿಸಬೇಕು ಅಥವಾ ಪ್ರಬಲವಾದ ಬಲಪ್ರಯೋಗದಿಂದ, ದೃಢನಿಧರ್ಾರದಿಂದ, ಶ್ರದ್ಧೆಯಿಂದ ಅವುಗಳ ಅಂತ್ಯ ಮಾಡಿರಿ.
(ಇದರ ವಿವರಕ್ಕಾಗಿ ಬೌದ್ಧರ ಅದ್ವಿತೀಯ ಧ್ಯಾನಗಳ ಮಾರ್ಗ ಭಾಗ-1 ಓದಿರಿ)
ಛಾವಣಿ ಸರಿಯಿಲ್ಲದ ಮನೆಯಲ್ಲಿ ಮಳೆಯ ನೀರು ನುಗ್ಗುವಂತೆ ಅಭಿವೃದ್ಧಿ ಹೊಂದದ ಚಿತ್ತದಲ್ಲಿ ರಾಗವು ನುಗ್ಗುತ್ತದೆ.
ಛಾವಣಿ ಸರಿಯಿರುವ ಮನೆಯಲ್ಲಿ ಮಳೆಯ ನೀರು ನುಗ್ಗದಂತೆ ಅಭಿವೃದ್ಧಿ ಹೊಂದಿರುವ ಚಿತ್ತದಲ್ಲಿ ರಾಗವು ನುಗ್ಗಲಾರದು ಧಮ್ಮಪದ 13/14
ಹೀಗೆ ಅಭಿವೃದ್ಧಿ ಹೊಂದದ ಚಿತ್ತದಲ್ಲಿ ರಾಗವಷ್ಟೇ ಅಲ್ಲ, ದ್ವೇಷ ಮತ್ತು ಮೋಹಗಳು ಪ್ರವೇಶಿಸುತ್ತದೆ. ಆದ್ದರಿಂದ ನಾವು ಪ್ರಜ್ಞಾದಿಂದ ಮತ್ತು ಸಮಾಧಿಯಿಂದ ಚಿತ್ತಾಭಿವೃದ್ಧಿ ಹೊಂದಿದಾಗ ಯಾವುದೇ ಕೆಟ್ಟ ಯೋಚನೆಗಳು ಉಂಟಾಗಲಾರದು.
ನಿಮ್ಮ ಮನಸ್ಸನ್ನು ನಿಯಂತ್ರಿಸಿ :
ಆರು ಭಿಕ್ಷುಗಳು ಬುದ್ಧರಿಂದ ಧ್ಯಾನದ ವಸ್ತು ಸ್ವೀಕರಿಸಿ ಪರ್ವತದ ಬುಡದ ಬಳಿಯಲ್ಲಿದ್ದ ಹಳ್ಳಿಗೆ ಧ್ಯಾನಿಸಲು ಹೊರಟರು. ಅಲ್ಲಿ ಮಾತಿಕಮಾತೆ ಎಂಬುವಳು ಹಳ್ಳಿಗೆ ಮುಖ್ಯಸ್ಥರಾಗಿದ್ದಳು. ಆಕೆ ಭಿಕ್ಷುಗಳಿಗಾಗಿ ಅವರ ಮಳೆಗಾಲದ ಆಶ್ರಯಕ್ಕಾಗಿ ನೆಲೆ ಮಾಡಿಕೊಟ್ಟಳು. ಭಿಕ್ಷುಗಳು ಅಲ್ಲೇ ಧ್ಯಾನಿಸಿ ವಾಸಿಸತೊಡಗಿದರು.
ಒಮ್ಮೆ ಆಕೆಯು ಭಿಕ್ಷುಗಳಿಂದ ಧ್ಯಾನ ಕಲಿಯಲು ಇಚ್ಛಿಸಿದಳು. ಅವರು ಅಕೆಗೆ 32 ದೇಹ ಭಾಗಗಳನ್ನು ಧ್ಯಾನಿಸುವಂತಹ ಕಾಯಾಗತಸತಿ ಕಲಿಸಿದರು. ಆಕೆಯು ಶ್ರದ್ಧೆಯಿಂದ, ಪ್ರಯತ್ನದಿಂದ ಮತ್ತು ಪ್ರಜ್ಞಾದಿಂದ ದೇಹದ ಅನಿತ್ಯತೆ ಗಮನಿಸಿ ಅನಾಗಾಮಿತ್ವವನ್ನು ಪಡೆದಳು ಮತ್ತು ಅಷ್ಟೇ ಅಲ್ಲ, ಆಕೆ ಅಭಿಜ್ಞಾಶಕ್ತಿಯನ್ನು ಪಡೆದು ದಿವ್ಯಚಕ್ಷುವನ್ನು ಸಂಪಾದಿಸಿದಳು. ಅಂತಹುದನ್ನು ಇನ್ನೂ ಆ ಭಿಕ್ಷುಗಳೇ ಸಂಪಾದಿಸಿರಲಿಲ್ಲ.
ಆಕೆ ತನ್ನ ದಿವ್ಯಚಕ್ಷುವಿನ ಸಹಾಯದಿಂದ ಭಿಕ್ಷುಗಳು ಇನ್ನೂ ಅರಹಂತರಾಗಿಲ್ಲ ಎಂದು ಅರಿತಳು. ಆಕೆಗೆ ಭಿಕ್ಷುಗಳು ಶಾರೀರಿಕವಾಗಿ ದುರ್ಬಲರಾಗಿದ್ದು, ಆದ್ದರಿಂದಲೆ ಅವರ ಮನಸ್ಸಿಗೆ ಶಾಂತಿ ಸಿಕ್ಕಿಲ್ಲ ಎಂದು ಅರಿತು ಆಕೆಯು ಅವರಿಗಾಗಿ ಪುಷ್ಟಿಯುತ ಸ್ವಾದಿಷ್ಟಕರ ಆಹಾರ ಮಾಡಿ ಬಡಿಸಲಾರಂಭಿಸಿದಳು. ಇದರಿಂದಾಗಿ ಭಿಕ್ಷುಗಳು ಶ್ರೇಷ್ಠವಾಗಿ ಅರಹಂತತ್ವ ಪ್ರಾಪ್ತಿ ಮಾಡಿದರು.
ವಷರ್ಾವಾಸ ಮುಗಿದ ನಂತರ ಅವರು ಭಗವಾನರ ಬಳಿಗೆ ಬಂದು ಎಲ್ಲ ವಿಷಯವನ್ನು ಹೇಳಿದರು. ಒಬ್ಬ ಭಿಕ್ಷುವು ಈ ವಿಷಯ ತಿಳಿದು ಅತನು ಅಲ್ಲೇ ಧ್ಯಾನ ವಿಮುಕ್ತಿ ಸಾಧಿಸಲು ಭಗವಾನರಿಂದ ಧ್ಯಾನವಸ್ತು ಪಡೆದು ಆಕೆಯ ಮನೆಯಲ್ಲಿದ್ದು ಧ್ಯಾನವನ್ನು ಆರಂಭಿಸಿದನು. ಆತನಿಗೆ ಇಷ್ಟವಾದ ತಿಂಡಿಗಳೇ ಆಹಾರಗಳೇ ಆಕೆ ಬಡಿಸಿದಾಗ ಆತನಿಗೆ ಆಶ್ಚರ್ಯವಾಯಿತು. ಆತ ಆಕೆಗೆ ವಿಚಾರಿಸಿದಾಗ ಆಕೆ ಆತನ ಮನಸ್ಸು ಓದಿ ಸಿದ್ಧಪಡಿಸಿರುವುದಾಗಿ ಒಪ್ಪಿದಳು.
ಆಗ ಆ ಭಿಕ್ಷುವು ಈ ರೀತಿ ಯೋಚಿಸಿದನು. ನಾನಿನ್ನೂ ಪ್ರಾಪಂಚಿಕನಾಗಿದ್ದೇನೆ, ನನ್ನಲ್ಲಿ ಇನ್ನೂ ಕಶ್ಮಲಗಳಿಂದ ಕೂಡಿದ ಪಾಪಯುತ ಯೋಚನೆಗಳೇ ಉದಯಿಸುತ್ತಿರುತ್ತವೆ. ಆಕೆಯೇನಾದರೂ ಅದನ್ನು ಓದಿದರೆ ನನ್ನ ಬಗ್ಗೆ ಕೆಟ್ಟದಾಗಿ ಯೊಚಿಸುವಳು ಹೀಗೆ ಯೋಚಿಸಿ ಭೀತನಾಗಿ ಆತನು ಜೇತವನಕ್ಕೆ ಹಿಂದಿರುಗಿದನು ಮತ್ತು ಬುದ್ಧರಿಗೆ ಎಲ್ಲಾ ವಿಷಯವನ್ನು ತಿಳಿಸಿದನು. ಆಗ ಬುದ್ಧರು ಆತನಿಗೆ ನಿನ್ನ ಮನಸ್ಸನ್ನು ನಿಯಂತ್ರಿಸು ಎಂದರು.
ಮನಸ್ಸನ್ನು ನಿಯಂತ್ರಿಸುವುದು ಕಷ್ಟಕರ. ವೇಗವಾಗಿ ಚಲಿಸುವಂತಹುದು, ಇಷ್ಟವಿರುವ ಕಡೆಗೆ ಎಲ್ಲಾ ಚಲಿಸುವಂತಹುದು. ಅದನ್ನು ಪಳಗಿಸುವುದು ಒಳ್ಳೆಯದು. ಪಳಗಿಸಲ್ಪಟ್ಟ ಮನಸ್ಸು ಸುಖಕಾರಿ ಎಂದು ನುಡಿದು ಧ್ಯಾನ ವಿಷಯವಲ್ಲದೆ ಮತ್ತೇನೂ ಯೋಚಿಸಬೇಡ ಎಂದು ತಿಳಿಸಿ ಕಳಿಸಿಕೊಟ್ಟರು. (ಧಮ್ಮಪದ 35)
ಈಗ ಆತನು ಮನಸ್ಸನ್ನು ನಿಯಂತ್ರಿಸಿದ್ದರಿಂದಾಗಿ ಪ್ರಶಾಂತವಾಗಿ ಧ್ಯಾನಿಸ ಲಾರಂಭಿಸಿದನು. ಆತನು ಸ್ವಲ್ಪ ಕಾಲದಲ್ಲೇ ಚಿತ್ತಶುದ್ಧಿ ಪಡೆದು ಅರಹಂತನಾದನು.

No comments:

Post a Comment