Tuesday 19 December 2017

ಬುದ್ಧಘೋಷರವರ ವಿಶುದ್ಧಿ ಮಾರ್ಗ

                             ಬುದ್ಧಘೋಷರವರ ವಿಶುದ್ಧಿ ಮಾರ್ಗ


  ಬುದ್ಧಘೋಷರವರು ಬೋಧಿವೃಕ್ಷದ ಸಮೀಪದ ಘೋಷ ಎಂಬ ಹಳ್ಳಿಯಲ್ಲಿ ಕೆಸೀ ಮತ್ತು ಕೇಸೀಣೀ ಎಂಬ ಬ್ರಾಹ್ಮಣ ದಂಪತಿಗಳಿಗೆ ಕ್ರಿ.ಶ. 5ನೆಯ ಶತಮಾನದಲ್ಲಿ ಹುಟ್ಟಿದರು. ಬಾಲ್ಯದಲ್ಲಿ ಅತ್ಯಂತ ಪ್ರತಿಭಾವಂತರಾಗಿದ್ದರು. 7ನೆಯ ವಯಸ್ಸಿಗೆ ಸಕಲ ವೇದಾ ಪಾರಂಗತರಾಗಿದ್ದರು. ವೇದಗಳಲ್ಲಿ ಪ್ರಭುತ್ವ ಪಡೆದಿದ್ದರು. ಒಮ್ಮೆ ಒಬ್ಬ ಬೌದ್ಧಥೇರನೊಂದಿಗೆ ಚಚರ್ೆಯಾಗಿ ಬುದ್ಧರ ಬೋಧನೆಯ ಮಹತ್ವ ಕಂಡು ವೇದಗಳ ನಿಸ್ಸಾರ ಅರಿವಾಗಿ ಬೌದ್ಧ ಭಿಕ್ಷುವಾದರು. ನಂತರ ಗುರುವಿನ ಅಪ್ಪಣೆಯಂತೆ ಸಿಂಹಳ ದ್ವೀಪಕ್ಕೆ ಹೋಗಿ ಅಲ್ಲಿ ಸಿಂಹಳ ಭಾಷೆಯಲ್ಲಿದ್ದ ತಿಪಿಟಕವನ್ನು ಮತ್ತೆ ಪಾಳಿ ಭಾಷೆಗೆ ಅನುವಾದಿಸಲು ಅಪ್ಪಣೆ ಕೇಳಿದರು. ಆಗ ಅಲ್ಲಿದ್ದ ಗುರುಗಳು ಇವರ ವಿದ್ವತ್ತು ಪರೀಕ್ಷಿಸಲು ಗಾಥೆಯನ್ನು ನೀಡಿ ವ್ಯಾಖ್ಯಾನ ಮಾಡಲು ನೀಡಿದರು. ಆ ಗಾಥೆಯ ವ್ಯಾಖ್ಯಾನವೇ ವಿಸುದ್ದಿಮಾಗ್ಗ (ವಿಶುದ್ದಿಮಾರ್ಗ). ಇದೊಂದು ಅಪರೂಪದ ಅದ್ಭುತ ಗ್ರಂಥವಾಗಿದೆ. ಇಡೀ ತಿಪಿಟಕದ ಸಾರವನ್ನೇ ಹಿಂಡಿ ನೀಡಿದ ಹಾಗಿದೆ. ಧ್ಯಾನಾಸಕ್ತರಿಗೆ ಅತ್ಯುತ್ತಮ ಮಾರ್ಗದಶರ್ಿಯಾಗಿದೆ.
ನಂತರ ಗುರುಗಳ ಅಪ್ಪಣೆ ಸಿಗುತ್ತದೆ. ಆಗ ಇವರು ಇಡೀ ತಿಪಿಟಕವನ್ನು 3 ತಿಂಗಳಲ್ಲಿ ಅನುವಾದ ಮಾಡುತ್ತಾರೆ. ನಂತರ ಹಾಗೆಯೇ ತಿಪಿಟಕದ ಬಹುಪಾಲು ವ್ಯಾಖ್ಯಾನವನ್ನು ಇವರು ಮಾಡಿದ್ದಾರೆ.
ಇವರಿಗೆ ಪರೀಕ್ಷಿಸಲು ನೀಡಿದ ಗಾಥೆಯಿದು.
"ಯಾವಾಗ ಜ್ಞಾನಿಯು ಶೀಲದಲ್ಲಿ ಸುಪ್ರತಿಷ್ಠಾಪನೆಯಾಗುವನೋ, ಸಮಾಧಿ ಮತ್ತು ಪ್ರಜ್ಞಾವನ್ನು ಅಭಿವೃದ್ಧಿಗೊಳಿಸುತ್ತಾನೋ ಅಂತಹ ಉತ್ಸಾಹಿ ಮತ್ತು ಮೇಧಾವಿ ಭಿಕ್ಷುವು ಬಲೆಯ ಬಂಧನಗಳ ಬಿಡುಗಡೆಯಲ್ಲಿ ಯಶಸ್ವಿಯಾಗುತ್ತಾನೆ."

ಇಲ್ಲಿ ಈ ಗಾಥೆಯನ್ನು ವಿಸ್ತರಿಸಿ ಬರೆದ ಬುದ್ಧಘೋಷರವರು ಮಜ್ಜಿಮನಿಕಾಯದ 24ನೇ ಸುತ್ತವಾದ ರಥವಿನಿತಸುತ್ತದಂತೆ ನಿಬ್ಬಾಣದ ಹಾದಿಯನ್ನು ರಚಿಸಿದ್ದಾರೆ. ಇದು ನಿಜಕ್ಕೂ ಸಾರ್ವಕಾಲಿಕ ಶ್ರೇಷ್ಠ ಗ್ರಂಥವಾಗಿದೆ.

ರಥವಿನಿತ ಸುತ್ತ :

ಈ ಸುತ್ತದಲ್ಲಿ ಸಾರಿಪುತ್ತರವರು ಪುಣ್ಣ ಮಂಥಾನಿಪುತ್ತರವರನ್ನು ಬೇಟಿಯಾಗಿ ಈರೀತಿ ಪ್ರಶ್ನಿಸಿ ಅವರ ಪ್ರಜ್ಞಾಶಕ್ತಿಯನ್ನು ಪರೀಕ್ಷಿಸುತ್ತಾರೆ.
ಸಾರಿಪುತ್ತ : ನೀವು ಬುದ್ಧಭಗವಾನರ ಬಳಿ ಪರಿಶುದ್ಧವಾದ ಜೀವನ ನಡೆಸುತ್ತಿರುವಿರಾ?
ಪುಣ್ಣ : ಹೌದು ಮಿತ್ರ.
ಸಾರಿಪುತ್ತ : ಹಾಗಾದರೆ ನೀವು ಭಗವಾನರ ಬಳಿ ವಿಶುದ್ಧವಾದ ಜೀವನ ನಡೆಸುತ್ತಿರುವುದು ಶೀಲ ವಿಶುದ್ಧಿಗಾಗಿಯೇನು?
ಪುಣ್ಣ : ಇದಕ್ಕಾಗಿ ಅಲ್ಲ ಮಿತ್ರ.
ಸಾರಿಪುತ್ತ : ಹಾಗಾದರೆ... ಚಿತ್ತವಿಶುದ್ಧಿಗಾಗಿಯೇ?
ಪುಣ್ಣ : ಇದಕ್ಕಾಗಿಯೂ ಅಲ್ಲ ಮಿತ್ರ.
ಸಾರಿಪುತ್ತ : ಹಾಗಾದರೆ... ದಿಟ್ಟಿ (ದೃಷ್ಟಿ) ವಿಶುದ್ಧಿಗಾಗಿಯೇನು?
ಪುಣ್ಣ : ಇದಕ್ಕಾಗಿಯೂ ಅಲ್ಲ ಮಿತ್ರ.
ಸಾರಿಪುತ್ತ : ಹಾಗಾದರೆ...ಮಾಗರ್ಾ ಸಂದೇಹವನ್ನು (ಕಂಕವಿತರಣ ವಿಶುದ್ಧಿ) ದಾಟುವ ವಿಶುದ್ದಿಗಾಗಿಯೇನು?
ಪುಣ್ಣ : ಇದಕ್ಕಾಗಿಯೂ ಅಲ್ಲ ಮಿತ್ರ.
ಸಾರಿಪುತ್ತ : ಹಾಗಾದರೆ ಮಾರ್ಗ ಅಮಾರ್ಗ ಜ್ಞಾನ ದರ್ಶನ ವಿಶುದ್ದಿಗಾಗಿಯೇನು?
ಪುಣ್ಣ : ಇದಕ್ಕಾಗಿಯೂ ಅಲ್ಲ ಮಿತ್ರ.
ಸಾರಿಪುತ್ತ : ಹಾಗಾದರೆ... ಪಟಿಪದ ಜ್ಞಾನದರ್ಶನ ವಿಶುದ್ಧಿಗಾಗಿಯೇನು? (ಜ್ಞಾನ ಮತ್ತು ದರ್ಶನದ ಹಾದಿಯ ವಿಶುದ್ದಿಗಾಗಿಯೇ?)
ಪುಣ್ಣ : ಇದಕ್ಕಾಗಿಯೂ ಅಲ್ಲ ಮಿತ್ರ.
ಸಾರಿಪುತ್ತ : ಹಾಗಾದರೆ... ಜ್ಞಾನ ಮತ್ತು ದರ್ಶನದ ವಿಶುದ್ಧಿಗಾಗಿಯೇ?
ಪುಣ್ಣ : ಇದಕ್ಕಾಗಿಯೂ ಅಲ್ಲ ಮಿತ್ರ.
ಸಾರಿಪುತ್ತ : ಹಾಗಾದರೆ... ಮಿತ್ರನೇ ಭಗವಾನರ ಬಳಿ ಯಾವ ಉದ್ದೇಶದಿಂದ ವಿಶುದ್ದ ಜೀವನ ನಡೆಸುತ್ತಿರುವೆ?
ಪುಣ್ಣ : ಮಿತ್ರನೇ, ಅಂಟುವಿಕೆಯ ಸಂಪೂರ್ಣ ನಿರೋಧಕ್ಕಾಗಿ (ನಿಬ್ಬಾಣಕ್ಕಾಗಿ) ನಾನು ಬುದ್ಧ ಭಗವಾನರ ಬಳಿ ವಿಶುದ್ದವಾದ ಜೀವನ ನಡೆಸುತ್ತಿರುವೆ.
ಅಂದರೆ ಇಲ್ಲಿ ಸ್ಪಷ್ಟವಾಗಿ ಗೊತ್ತಾಗುವಂತಹ ಅಂಶ ಏನೆಂದರೆ ವಿಶುದ್ದಮಾರ್ಗದ 7ನೇಯ ಅಂತಿಮ ಹಂತವೂ ಸಹಾ ಗುರಿಯಲ್ಲ. ಇಲ್ಲಿ ಜೀವನದ ಉದ್ದೇಶವೆಂದರೆ ನಿಬ್ಬಾಣ (ಅಸಂಖತದಾತು). ಎಲ್ಲಾ ಬಗೆಯ ಕಲ್ಮಶಗಳಿಂದ, ಅಸ್ತಿತ್ವದಿಂದ, ದುಃಖಗಳಿಂದ, ಜನ್ಮಗಳಿಂದ ಪೂರ್ಣ ವಿಮುಕ್ತಿ. 

No comments:

Post a Comment