Sunday 25 June 2017

loathsomeness of food in kannada ಆಹಾರೆ ಪತಿಕೂಲಸನ್ಯಾ

ಆಹಾರೆ ಪತಿಕೂಲಸನ್ಯಾ

(ಆಹಾರಲ್ಲಿ ಅಸಹ್ಯಿಸುವಿಕೆಯ ಧ್ಯಾನ)
                ನಿಬ್ಬಾಣಕ್ಕೆ ತನ್ನ ಜೀವನವನ್ನು ಮೀಸಲಾಗಿಟ್ಟ ಭಿಕ್ಷುವು ಆಹಾರದಂತಹ ಪ್ರಮುಖ ವಿಷಯದಲ್ಲೂ ಅತ್ಯಂತ ಜಾಗರೂಕತೆಯಿಂದ ಅರಿತು ಆಹಾರ ಸೇವಿಸಬೇಕಾಗುತ್ತದೆ. ಇಲ್ಲದೆ ಇದ್ದರೆ ಆತನು ಆಹಾರಕ್ಕೆ ಅಂಟಿ ತಿಂಡಿಪೋತನಾಗಿ, ಸೋಮಾರಿಯಾಗಿ, ಇಂದ್ರೀಯಗಳ ಜಾಲದಲ್ಲಿ ಬಿದ್ದು ಹೋಳಾಗಬೇಕಾಗುತ್ತದೆ. ಆತ ಆಹಾರ ಸೇವಿಸುವುದೇ ದೇಹವು ಜೀವಂತವಾಗಿರಿಸಲು, ವೇದನೆಗಳನ್ನು ದಮಿಸಲು, ಅತೃಪ್ತಿಯನ್ನು ಅಂತ್ಯ ಮಾಡಲು, ಜೀವನ ಪರಿಶುದ್ಧನಾಗಲು ಹೊರತು ರುಚಿಯ ಆನಂದಕ್ಕಾಗಿ ಅಲ್ಲ, ಸಂತೋಷಕ್ಕಾಗಿ ಅಲ್ಲ, ದೇಹ ಪುಷ್ಠತೆಗಾಗಿ ಅಲ್ಲ, ದೇಹದಾಡ್ರ್ಯತೆಗಾಗಿ ಅಲ್ಲ.
                ಧ್ಯಾನವು ಯಾರು ಆಹಾರದಲ್ಲಿ ಅತಿ ಅಂಟಿರುವರೋ ಅವರಿಗಾಗಿಯೇ ಇದೆ. ರೀತಿಯಲ್ಲಿ ಅವರು ಆಹಾರ ಪ್ರತಿಕೂಲಸನ್ಯಾ ಬೆಳೆಸಿ ಆಹಾರದ ಚಟದಿಂದ ಮುಕ್ತರಾಗಬೇಕಾಗುತ್ತದೆ.
                ಧ್ಯಾನದಿಂದ ಸಿಗುವ ಲಾಭಗಳೆಂದರೆ ಆಹಾರ ನಿಜಸ್ವರೂಪ ಅರಿಯುತ್ತಾನೆ. ಐದು ರೀತಿಯ ರಾಗಗಳನ್ನು ಅರಿಯುತ್ತಾನೆ. ಭೌತಿಕ ರಾಶಿಯಿನ್ನು ಅರಿಯುತ್ತಾನೆ. ಅಶುಭಾ ಸನ್ಯಾ ಪಡೆಯುತ್ತಾನೆ. ಆಂತರಿಕ ದೇಹದ ಜಾಗರೂಕತೆಯ ಅರಿವು ಪಡೆಯುತ್ತಾನೆ. ಆಹಾರ ಲಾಲಸೆಯಿಂದ ಮುಕ್ತನಾಗುತ್ತಾನೆ. ವಿಮುಕ್ತಿಗೆ ಹತ್ತಿರವಾಗುತ್ತಾನೆ.
                ಇಲ್ಲಿ ಧ್ಯಾನಿಯು ಏಕಾಂತ ಸ್ಥಳಕ್ಕೆ ತೆರಳಿ, ಪದ್ಮಾಸನದಲ್ಲಿ ಕುಳಿತು ಎಲ್ಲಾ ರೀತಿಯ ಯೋಚನೆಗಳಿಂದ ಮುಕ್ತವಾಗಿ, ತಾನು ಆಗಿದ, ನೆಕ್ಕಿದ, ತಿಂದ, ಕುಡಿದ ಆಹಾರದ ಬಗ್ಗೆ ಹೀಗೆ ಪುನರ್ ಅವಲೋಕನ ಮಾಡುತ್ತಾನೆ.
                ಇಂಥ ಕಡೆ ನಾನು ನಾನಾರೀತಿಯ ರುಚಿಕರವಾದ ಆಹಾರವನ್ನು ಸೇವಿಸಿದೆ. ಆಹಾರವು ಜನರನ್ನು ಆನಂದಿಸುತ್ತದೆ. ಅವುಗಳ ಬಣ್ಣ, ಆಕಾರ, ಸ್ಪರ್ಶ, ರುಚಿ, ಸುಗಂಧವೆಲ್ಲಾ ಚೆನ್ನಾಗಿಯೇ ಇರುತ್ತದೆ. ಆದರೆ ದೇಹವನ್ನು ಪ್ರವೇಶಿಸಿದ ಬಳಿಕ ಅವು ಬಣ್ಣಗೆಡುತ್ತದೆ, ವಿಕಾರವಾಗುತ್ತದೆ, ಸ್ಪಶರ್ಿಸಲು ಅಸಹ್ಯವಾಗುತ್ತದೆ. ಅಸಹ್ಯ ರುಚಿಯಿಂದ ಕೂಡಿರುತ್ತದೆ, ಹಾಗು ದುನರ್ಾತ ಬೀರುತ್ತದೆ. ಅಶುಚಿಯಾಗಿರುತ್ತದೆ, ಕೊಳೆತ ರೀತಿಯಲ್ಲಿ ಇರುತ್ತದೆ ಎಂದು ಚಿಂತಿಸುತ್ತಾನೆ.
                ಆಹಾರದ ಸಂಪಾದನೆಗಾಗಿ ಮಾನವ ಕೊಲ್ಲುತ್ತಾನೆ. ಕಳ್ಳತನ ಮಾಡುತ್ತಾನೆ, ಸುಳ್ಳು ಹೇಳುತ್ತಾನೆ, ಮೋಸ ಮಾಡುತ್ತಾನೆ, ಬೀದಿ ಬೀದಿ ಅಲೆಯುತ್ತಾನೆ, ನಿಜಕ್ಕೂ ಆಹಾರ ಅತ್ಯಂತ ನಿಷ್ಕೃಷ್ಟವಾದುದು!
                ಆಹಾರವು ಹಾಗೇ ತಿನ್ನುತ್ತಾರೆ. ಅಥವಾ ಬೇಯಿಸಿ ತಿನ್ನುತ್ತಾರೆ. ಸರಿಯಾಗಿ ಸಿದ್ಧಪಡಿಸದಿದ್ದರೆ ಅಥವಾ ಯಾವುದಾದರೂ ಒಂದು ಹೆಚ್ಚಾಗಿ ತಿಂದರೂ, ಕಡಿಮೆ ತಿಂದರೂ ರೋಗ ಬರುತ್ತದೆ. ನಿಜಕ್ಕೂ ಆಹಾರ ಅತ್ಯಂತ ನಿಷ್ಕೃಷ್ಟವಾದುದು.
                ಅಗಿದ ಮೆಲೆ ಆಹಾರ ಚೆನ್ನಾಗಿ ಕಾಣಿಸುವುದಿಲ್ಲ, ದುವರ್ಾಸನೆಯಿಂದ ಕೂಡುತ್ತದೆ. ಅದನ್ನು ಪುನಃ ಕೈಯಲ್ಲಿ ಯಾರೂ ಸ್ಪಶರ್ಿಸುವುದಿಲ್ಲ. ನಿಜಕ್ಕೂ ಆಹಾರ ಅತ್ಯಂತ ನಿಷ್ಕೃಷ್ಟಾವಾದುದು.
                ದೇಹವನ್ನು ಒಳಹೊಕ್ಕ ಆಹಾರವು ವಾಂತಿಯಿಂದ ಹೊರಬಿದ್ದರೆ, ದೃಶ್ಯವು ಬೀಭತ್ಸವಾಗಿರುತ್ತದೆ, ಶಬ್ದವು ಅಸಹನೀಯವಾಗಿರುತ್ತದೆ. ದುವರ್ಾಸನೆಯಿಂದ ಕೂಡಿದ ಅದನ್ನು ಯಾರಾದರೂ ಸ್ಪಶರ್ಿಸುವರೇ? ನಿಜಕ್ಕೂ ಆಹಾರ ಅತ್ಯಂತ ನಿಷ್ಕೃಷ್ಟಾವಾದುದು!.
                ಆಹಾರ ಸೇವಿಸುವಾಗ ಆನಂದದಿಂದ ಜೊತೆಗೂಡಿ ಸೇವಿಸುತ್ತಾರೆ. ಆದರೆ ವಿಸಜರ್ಿಸುವಾಗ ಒಂಟಿಯಾಗಿ ಅಸಹ್ಯಪಟ್ಟು ವಿಸಜರ್ಿಸಬೇಕಾಗುತ್ತದೆ. ನಿಜಕ್ಕೂ ಆಹಾರ ಅತ್ಯಂತ ನಿಷ್ಕೃಷ್ಟವಾದುದು!
                ನಮ್ಮ ಆಹಾರ ದೇಹವನ್ನು ಒಳಹೊಕ್ಕಿದ ಮೇಲೆ ಕೆಲವು ಭಾಗ ಜಂತುಗಳು, ಸೂಕ್ಷ್ಮಾಣುಜೀವಿಗಳು ಸೇವಿಸುತ್ತದೆ. ಕೆಲವು ಭಾಗದಿಂದ ಉಷ್ಣ ಉತ್ಪತ್ತಿಯಾಗುತ್ತದೆ. ಕೆಲವು ಭಾಗದಿಂದ ದೇಹ ಶಕ್ತಿ ಪಡೆದರೆ, ಶರೀರ ರಚನೆಯಾದರೆ ಮಿಕ್ಕ ಭಾಗವು ವಿಸರ್ಜನೆಯಾಗಿ ಹೊರಬೀಳುತ್ತದೆ. ನಿಜಕ್ಕೂ ಆಹಾರ ಅತ್ಯಂತ ನಿಷ್ಕೃಷ್ಟವಾದುದು.
                ಅಹಾರದ ಸೇವನೆಯ ನಂತರ ನವ ದ್ವಾರಗಳಿಂದ ಅಸಹ್ಯಗಳು ಸ್ರವಿತವಾಗುತ್ತದೆ. ಸದಾ ದೇಹವನ್ನು ಶುಚಿಯಾಗಿಡಬೇಕಾಗುತ್ತದೆ. ಆದ್ದರಿಂದ ನಿಜಕ್ಕೂ ಆಹಾರ ಅತ್ಯಂತ ನಿಷ್ಕೃಷ್ಟವಾದುದು.
                ...ಹೀಗೆಲ್ಲಾ ಚಿಂತಿಸುತ್ತಾ ಆತನು ಪಂಚನಿವರಣಗಳಿಂದ ಮುಕ್ತನಾಗುತ್ತಾನೆ. ಹಾಗು ಧ್ಯಾನಗಳಿಂದ ಕೂಡಿ ಆತನು ಸಾಮಿಪ್ಯ ಸಮಾಧಿ ಪಡೆಯುತ್ತಾನೆ.
ಇಲ್ಲಿಗೆ ಆಹಾರ ಪತಿಕೂಲಸನ್ಯಾ ಸಮಾಧಿ ಮುಗಿಯಿತು

No comments:

Post a Comment