Sunday 25 June 2017

NEITHER PERCEPTION NOR NON PERCEPTION MEDITATION ನೇವಸನ್ಯಾನಸನ್ನಾಆಯಾತನ

ನೇವಸನ್ಯಾನಸನ್ನಾಆಯಾತನ :

                ಆತನು ಅಕಿಂಚಯಾತನದಲ್ಲಿ 5 ರೀತಿಯ ಧ್ಯಾನ ಪ್ರವೀಣನಾಗುತ್ತಾನೆ. ಅನಂತರ ಆತನು ಅದರಿಂದ ಹೊರಬಂದು ಅದನ್ನು ಪುನರ್ ಅವಲೋಕಿಸುತ್ತಾನೆ. ಆಗ ಆತನಿಗೆ ಅಕಿಂಚಾಯಾತನವು ಸಹಾ ಸ್ಥೂಲವಾಗಿ ಕಾಣಿಸುತ್ತದೆ ಮತ್ತು ಗ್ರಹಿಕೆಯೆ ಇಲ್ಲದಂತಹ ಸ್ಥಿತಿಯು ಇನ್ನೂ ಸೂಕ್ಷ್ಮವಾಗಿ ಕಂಡುಬರುತ್ತದೆ ಮತ್ತು ಶಾಂತವಾಗಿ ಕಂಡುಬರುತ್ತದೆ. ಆಗ ಆತನಿಗೆ ಗ್ರಹಿಕೆಯೇ ರೋಗ, ಗ್ರಹಿಕೆಯು ಹುಣ್ಣು, ಗ್ರಹಿಕೆಯೇ ಅಪಾಯ ಎಂಬ ಜ್ಞಾನೋದಯವಾಗಿ ಆತನು ಅಕಿಂಚಯಾತನವನ್ನು ಮೀರಲು ಸತತವಾಗಿ ಯತ್ನಿಸುತ್ತಾನೆ. ಅದರ ಅಂಟುವಿಕೆಯಿಂದ ಪೂರ್ಣವಾಗಿ ವಿಮುಖವಾದ ನಂತರ ಆತನು ನೇವಸನ್ಯಾನಸನ್ನಾ ಆಯಾತನ ಸ್ಥಿತಿಯಲ್ಲಿ ಗಮನವಿಟ್ಟು ಅಕಿಂಚಾಯಾತನವನ್ನು ಮೀರಿ ಹೋಗುತ್ತಾನೆ. ನೇವಸನ್ಯಾನಸನ್ನಾ ಆಯಾತನವೆಂದರೆ ಗ್ರಹಿಕೆ ಇಲ್ಲ, ಗ್ರಹಿಕೆ ಇಲ್ಲದೆಯೂ ಇಲ್ಲ ಎಂಬ ಸ್ಥಿತಿ. ಅಂದರೆ ಸ್ಥಿತಿಯಲ್ಲಿ ಗ್ರಹಿಕೆಯನ್ನು ಅತ್ಯಂತ ಗರಿಷ್ಠ ಪ್ರಮಾಣದಲ್ಲಿ ಮೀರಿಹೋಗುತ್ತಾರೆ. ಅಂದರೆ ಸ್ಥೂಲ ಗ್ರಹಿಕೆಗಳು ಇಲ್ಲವಾಗಿ, ಸೂಕ್ಷ್ಮ ಗ್ರಹಿಕೆಗಳು ಇರುತ್ತದೆ. ಇಲ್ಲ ಕೇವಲ ಗ್ರಹಿಕೆ ಮಾತ್ರ ವೇದನೆಗಳಲ್ಲು ಇದೇರೀತಿ ಭಾವಿಸಬೇಕು, ಹಾಗೆಯೇ ವಿನ್ಯಾನ ಮತ್ತು ಸ್ಪರ್ಶಗಳು ಸಹಾ. ಸ್ಥಿತಿಯನ್ನು ರೀತಿ ಉದಾಹರಿಸಬಹುದು. ಒಂದು ಪಾತ್ರೆಯಲ್ಲಿ ಎಣ್ಣೆಯಿರುತ್ತದೆ. ಅದನ್ನು ಚೆಲ್ಲುತ್ತೇವೆ. ಆಗ ಅದರಲ್ಲಿ ಎಣ್ಣೆ ಇರುವುದಿಲ್ಲ. ಆದರೂ ಮುಟ್ಟಿದಾಗ ಅಲ್ಲಿ ಸೂಕ್ಷ್ಮವಾಗಿ ಎಣ್ಣೆಯು ಪಾತ್ರೆಗೆ ಅಂಟಿರುತ್ತದೆ. ಅದೇ ರೀತಿಯಲ್ಲಿ ಭಿಕ್ಷುವು ತನ್ನ ಸ್ಥಿತಿಯಾದ ಗ್ರಹಿಕೆ ಇಲ್ಲ, ಹಾಗು ಗ್ರಹಿಕೆ ಇಲ್ಲದೆಯೂ ಇಲ್ಲ ಹೀಗೆ ಇರುತ್ತದೆ. ಆತ ಇದರಲ್ಲಿ ಲಕ್ಷ್ಯಕೊಟ್ಟು ಕ್ಷಿಪ್ರವಾಗಿ ಪ್ರವೇಶಿಸುತ್ತಾನೆ. ಹಾಗೆಯೇ ದೀರ್ಘಕಾಲ ಅದರಲ್ಲಿ ನೆಲೆಸುತ್ತಾನೆ. ಹಾಗೆಯೇ ಕ್ಷಿಪ್ರವಾಗಿ ಹೊರಗೆ ಬರುತ್ತಾನೆ. ಅದರ ಪುನರ್ ಅವಲೋಕನ ಮಾಡುತ್ತಾನೆ. ಆತ ರೀತಿಯಲ್ಲಿ ವಿಹರಿಸುತ್ತಾನೆ.
                ಅರೂಪ ಧ್ಯಾನಗಳ ಪ್ರತಿಸ್ಥಿತಿಯಲ್ಲೂ ಏಕಾಗ್ರತೆ ಮತ್ತು ಸಮಚಿತ್ತತೆಯಿರುತ್ತದೆ. ಹಾಗು ಇವುಗಳು ಪ್ರತಿಯೊಂದು ಅನಂತವಾಗಿರುತ್ತದೆ. ಆದರೆ ಒಂದಕ್ಕಿಂತ ಮತ್ತೊಂದು ಸೂಕ್ಷ್ಮವಾಗಿರುತ್ತದೆ.

ಇಲ್ಲಿಗೆ ಅರೂಪ ಝಾನ ಮುಗಿಯಿತು

No comments:

Post a Comment