Sunday 25 June 2017

EARTH KASINA MEDITATION ಪಠವಿ ಕಸಿನಾ

1. (ಪ್ರಥ್ವಿ) ಪಠವಿ ಕಸಿನಾ :


                ಇಲ್ಲಿ ಭಿಕ್ಷುವು ತನ್ನ ಸಾಧನೆಗಾಗಿ ಹಿತಕರವಾದ ಸೌಲಭ್ಯಪೂರಿತ, ನಿರ್ಜನ ನಿಶ್ಶಬ್ದವಾದ ಮತ್ತು ಅಬಾಧಿತವಾದ ಸ್ಥಳವನ್ನು ಆಯ್ಕೆ ಮಾಡಿಕೊಂಡು, ಪದ್ಮಾಸನದಲ್ಲಿ ಅಸೀನನಾಗಿ ಆಸೆಯುತ ಹಾಗು ಅಕುಶಲ ಯೋಚನೆಯನ್ನೆಲ್ಲಾ ವಜರ್ಿಸಿ, ಮನಸ್ಸನ್ನು ಸಂಯಮಗೊಳಿಸುತ್ತಾನೆ. ನಂತರ ಸುಮಾರು 4 ಅಡಿ ದೂರದಲ್ಲಿ ಪಠವಿ ಕಸಿನಾ ಮಂಡಲವನ್ನು ಇಡಬೇಕು ಅದು 4 ಅಡಿಗಿಂತ ದೂರವು ಇರಬಾರದು. ತೀರ ಹತ್ತಿರವೂ ಇರಬಾರದು, ಅತಿ ಮೇಲಕ್ಕೂ ಇರಬಾರದು, ಅತಿ ಕೆಳಕ್ಕೂ ಇರಬಾರದು. ಅರ್ಧ ತೆರೆದ ಕಣ್ಣಿನಿಂದ ನೋಡಲು ಅನುಕೂಲವಾಗಿರುವಂತೆ ಇಡಬೇಕು. ಕೆಲವರು ಗೋಡೆಗೆ ನೇತುಹಾಕುತ್ತಾರೆ. ಕೆಲವರು ಹಾಗೆ ನೆಲದ ಮೇಲಿಡುತ್ತಾರೆ. (ಪಠವಿ ಕಸಿನಾ ಮಂಡಲ ಎಂದರೆ 1 ಅಡಿ ವ್ಯಾಸದ ವತರ್ೂಲ ತಟ್ಟೆ ಆಕಾರದ ರಟ್ಟನ್ನು ತೆಗೆದುಕೊಂಡು ಅದರ ಸುತ್ತಮುತ್ತಲೂ ಅಂಟು ಮಣ್ಣನ್ನು  ಮೆತ್ತುತ್ತಾರೆ. ಅದರ ಬಣ್ಣವು ಉದಯ ಸೂರ್ಯನ ವರ್ಣದಾಗಿರಬೇಕು. ಮಂಡಲದ ಅಂಚನ್ನು ಬೇರೆ ವರ್ಣದ ವಸ್ತುವಿನಿಂದ ಸುತ್ತಬೇಕು. ಏಕೆಂದರೆ ಅಂಚಿನ ಒಳಗಡೆಯ ಮಂಡಲ ಎದ್ದು ಕಾಣುವಂತಿರಬೇಕು). ರೀತಿಯ ಉದಯ ಸೂರ್ಯನ ವರ್ಣದ ಮಣ್ಣಿನ ಮಂಡಲವನ್ನು ತದೇಕ ದೃಷ್ಟಿಯಿಂದ ಗಮನಿಸಬೇಕು. ಪೂರ್ಣವಾಗಿ ಕಣ್ಣು ತೆರೆಯಬಾರದು. ಪ್ರಾರಂಭದಲ್ಲಿ ಕಣ್ಣು ಮುಚ್ಚಿಯು ಮಾಡಬಾರದು. ಅರ್ಧ ತೆರೆದ ಕಣ್ಣಿನಿಂದ ಹಿತವಾಗಿ ನೋಡಬೆಕು. ಕನ್ನಡಿಯಲ್ಲಿ ಮುಖ ನೋಡುವ ಹಾಗೆ ನೋಡಬೇಕು. ಬೇರೆಕಡೆ ನೋಡಬಾರದು. ಬೇರೆ ಕಡೆಗೆ ಗಮನವು ಹೋಗಬಾರದು. ಏನನ್ನೂ ಯೋಚಿಸಬಾರದು. ಕೇವಲ ಮಂಡಲವನ್ನು ಏಕಾಗ್ರತೆಯಿಂದ ಗಮನಿಸುತ್ತಿರಬೇಕು. ಹಾಗು ಪಠವಿ (ಪ್ರದ್ವಿ) ಪಠವಿ... ಪಠವಿ ಎಂದು ಜಪಿಸುತ್ತಿರಬೇಕು. ರೀತಿಯ ಗಮನಿಸುತ್ತಿರುವ ಧ್ಯಾನ ವಿಷಯವು ಪ್ರಾಥಮಿಕ ಚಿಹ್ನೆ (ಪರಿಕಮ್ಮ ನಿಮಿತ್ತ) ಎನ್ನುತ್ತಾರೆ. ರೀತಿ ಇದೇರೀತಿ ಆತನು ಸುಲಭವಾಗಿ ಕಲ್ಪಿಸುವವರೆಗೆ ಧ್ಯಾನಿಸಬೇಕು, ಜಪಿಸುತ್ತಿರಬೇಕು. ಹೀಗೆಯೆ ಕೆಲವು ದಿನಗಳವರೆಗೆ/ವಾರ/ತಿಂಗಳು/ವರ್ಷ ಆತನು ಮಾಡಿದ ನಂತರ ಆತನಿಗೆ ಸಾವಿರಸಲ/ಜಪಿಸಿದ ಲಕ್ಷ ಸಾರಿ ನಂತರ ಆತನಿಗೆ ಸುಲಭವಾಗಿ ತೆರೆದ ಕಣ್ಣಿನಿಂದ ಅಥವಾ ಮುಚ್ಚಿದ ಕಣ್ಣಿನಿಂದ ಕಲ್ಪಿಸಲು ಸಾಧ್ಯವಾಗುತ್ತದೆ. ಅದನ್ನು ಆಕಾಶದಲ್ಲಿರುವಂತೆ ಕಾಣುತ್ತಾನೆ. ಕೆಲವೊಮ್ಮೆ ಹತ್ತಿರ, ಕೆಲವೊಮ್ಮೆ ದೂರ, ಕೆಲವೊಮ್ಮೆ ಚಿಕ್ಕ, ಕೆಲವೊಮ್ಮೆ ದೊಡ್ಡದಾಗಿ ಕಾಣುತ್ತಾನೆ. ಇದಕ್ಕೆ ವಶೀಕೃತ ಚಿಹ್ನೆ (ಉಗ್ಗಹ ನಿಮಿತ್ತ) ಎನ್ನುತ್ತಾರೆ. ಆತನು ಅದನ್ನು ಕಣ್ಣುಮುಚ್ಚಿಯು ಸಹಾ ಸ್ಪಷ್ಟವಾಗಿ ನೋಡಬಲ್ಲ.
                ರೀತಿಯಾಗಿ ವಶೀಕೃತ ಚಿಹ್ನೆ (ಉಗ್ಗಹ ನಿಮಿತ್ತ) ಸಿದ್ಧಿಯಾದ ಮೇಲೆ ಆತನು ಬೇರೆ ಸ್ಥಳದಲ್ಲಿ ಧ್ಯಾನಿಸಬಹುದು. ಎಲ್ಲಿ ಬೇಕಾದರೂ ಧ್ಯಾನಿಸಬಹುದು. (ಒಂದುವೇಳೆ ಚಿಹ್ನೆ ಮಾಯವಾದರೆ ಮತ್ತೆ ಆತನು ಮೊದಲಿನಂತೆ ಸಿದ್ಧಿಸಬೇಕಾಗುತ್ತದೆ).
                ನಂತರ ಆತನು ವಶೀಕೃತ ಚಿಹ್ನೆ (ಉಗ್ಗಹ ನಿಮಿತ್ತ)ವನ್ನೇ ಧ್ಯಾನಿಸಬೇಕಾಗುತ್ತದೆ. ಹೀಗೆ ಧ್ಯಾನ ಮಾಡುತ್ತಿರುವಾಗ ಆತನಲ್ಲಿ ಪಂಚ ನಿವಾರಣೆಗಳು ನಶಿಸುತ್ತವೆ. ಮನಸ್ಸು ಏಕಾಗ್ರವಾಗಿ ಸಾಮಿಪ್ಯ ಸಮಾಧಿ (ಉಪಚರ ಸಮಾಧಿ)ಯಾಗಿ, ಪತಿಭಾಗ ನಿಮಿತ್ತ (ಪ್ರತಿಫಲಿತ ಚಿಹ್ನೆ) ಉಂಟಾಗುತ್ತದೆ. ಆತನು ಇಚ್ಛಿಸಿದಂತೆ ಪ್ರತಿಫಲಿತ ಚಿನ್ಹೆ ಕಾಣುತ್ತದೆ. ಹತ್ತಿರವೆಂದರೆ ಹತ್ತಿರ ಬರುವುದು. ಬಲಕ್ಕೆ ಇಚ್ಛಿಸಿದರೆ ಬಲಭಾಗಕ್ಕೆ ಬರುವುದು. ಪತಿಬಾಗ ನಿಮಿತ್ತವನ್ನು ತುಂಬ ಕಷ್ಟಪಟ್ಟು ಕೌಶಲ್ಯದಿಂದ, ರಕ್ಷಿಸಬೇಕಾಗುತ್ತದೆ. ಅದನ್ನು ಅಮೂಲ್ಯವಾದ ರತ್ನದಂತೆ ಕಾಪಾಡಿ ಹಗಲು ರಾತ್ರಿ ಧ್ಯಾನಿಸಬೆಕಾಗುತ್ತದೆ. ಮೊದಲಿನ ವಶೀಕೃತ ಚಿಹ್ನೆಗೂ ಹಾಗು ಈಗಿನ ಪ್ರತಿಫಲಿತ ಚಿಹ್ನೆಗೂ ವ್ಯತ್ಯಾಸವಿದೆ. ವಶೀಕೃತ (ಉಗ್ಗಹನಿಮಿತ್ತ) ಚಿಹ್ನೆಯಲ್ಲಿ ಯಾವುದೇ ತಪ್ಪಿದರೆ ಅದು ಸಹಜವಾಗಿ ಕಾಣುತ್ತಿತ್ತು. ಆದರೆ ಪ್ರತಿಪಲಿತ ಚಿಹ್ನೆ (ಪತಿಬಾಗನಿಮಿತ್ತ)ದಲ್ಲಿ ಉಗ್ಗಹ ನಿಮಿತ್ತವನ್ನು ಸೀಳಿಕೊಂಡು ಬಂದಂತೆ ಸಾವಿರಪಟ್ಟು ಶುದ್ಧವಾಗಿ ಕಂಡುಬರುತ್ತದೆ. ಹೇಗೆಂದರೆ ಚೀಲದಿಂದ ದರ್ಪಣವನ್ನು ತೆಗೆಯುವ ರೀತಿ, ಮೋಡಗಳಿಂದ ಹೊರಬರುವ ಚಂದಿರನ ರೀತಿ ಅಥವಾ ಕಾಮರ್ೊಡಗಳ ಎದುರು ಹಾರುವ ಕೊಕ್ಕರೆಗಳ ರೀತಿ ಕಂಡುಬರುತ್ತದೆ. ಆದರೆ ಪ್ರತಿಫಲಿತ ನಿಮಿತ್ತಕ್ಕೆ ಬಣ್ಣವಾಗಲಿ ಅಥವಾ ಆಕಾರವಾಗಲಿ ಇರುವುದಿಲ್ಲ. ಇದು ಸನ್ಯಾದಿಂದ (ಗ್ರಹಿಕೆಯಿಂದ) ಮಾತ್ರ ಉದಯಿಸುತ್ತದೆ. ಇದು ಉಂಟಾದ ಕ್ಷಣವೇ ನಿವರಣಗಳು ಸ್ತಬ್ದವಾಗಿ ಅಂತ್ಯವಾಗುತ್ತದೆ ಮತ್ತು ಮನಸ್ಸು ಏಕಾಗ್ರಗೊಂಡು ಸಾಮಿಪ್ಯ (ಉಪಚರ) ಸಮಾಧಿಗೆ ಹೋಗುತ್ತದೆ.
                ಸಾಧಕನಲ್ಲಿ ಪಂಚ ನಿವರಣಗಳು ಅಂತ್ಯಗೊಂಡು ಸಾಮಿಪ್ಯ (ಉಪಚರ) ಸಮಾಧಿ ಪಡೆದಿರುತ್ತಾರೆ. ಆದರೆ ಆತನಲ್ಲಿ ಇನ್ನೂ ಧ್ಯಾನಾಂಗಗಳಾದ ವಿತಕ್ಕ, ವಿಚಾರ, ಪ್ರೀತಿ, ಸುಖ, ಏಕಾಗ್ರತೆ - ಇವು ಇನ್ನೂ ಬಲಿಷ್ಠವಾಗಿರುವುದಿಲ್ಲ. ಇವನ್ನು ವೃದ್ಧಿಸಿದಾಗ ಆತನು ಸ್ಥಿರ ಸಮಾಧಿ ಪಡೆಯುತ್ತಾನೆ.
                ಸ್ಥಿತಿಯಲ್ಲಿ ಆತನ ಮನಸ್ಸು ಅತ್ಯಂತ ಮೃದು, ಅತಿ ಶಾಂತವಾಗಿರುತ್ತದೆ. ಅತ್ಯಂತ ಏಕಾಗ್ರತೆಯಲ್ಲಿ ತಲ್ಲೀನನಾಗುತ್ತಾನೆ. ಆತನು ತನ್ನ ಶರೀರ ಮರೆಯುತ್ತಾನೆ. ಆತನಿಗೆ ತನ್ನ ಶರೀರದ ಅನುಭೂತಿಯೆ ಆಗುವುದಿಲ್ಲ. ಹಾಗು ಆತನಿಗೆ ಯಾವ ಶಬ್ದವು ಕೇಳಿಸುವುದಿಲ್ಲ. ಅಪ್ಪಣ ಸಮಾಧಿಯು (ಸ್ಥಿರ ಸಮಾಧಿ) ಇದಕ್ಕಿಂತ ಸೂಕ್ಷ್ಮವಾಗಿರುತ್ತದೆ. ಮನಸ್ಸೇ ಪಠವಿಯಾಗಿರುತ್ತದೆ.
                ಹಾಗು ಪಠವಿಯೇ ಮನಸ್ಸಾಗಿರುತ್ತದೆ. ಅಷ್ಟು ಆಳವಾದ ಏಕಾಗ್ರ ಅನುಭವವಾಗುತ್ತದೆ. ಮನಸ್ಸು ಅತ್ಯಂತ ಸ್ತಬ್ದವಾಗುತ್ತದೆ. ಅತ್ಯಂತ ಸ್ವಚ್ಛವಾಗುತ್ತದೆ. ಅತ್ಯಂತ ಪ್ರಕಾಶಮಾನವಾಗಿರುತ್ತದೆ. ಪ್ರತಿಭಾಗ (ಪ್ರತಿಫಲಿತ) ನಿಮಿತ್ತವು ಶುದ್ಧಗೊಳ್ಳುತ್ತದೆ. ಹಾಗೆಯೇ ಮನಸ್ಸು ಸೂಕ್ಷ್ಮವಾಗಿ, ಹಗುರವಾಗುತ್ತ ಹೋಗುತ್ತದೆ. ಉಪಚರ (ಸಾಮಿಪ್ಯ) ಸಮಾಧಿಯು ಗಂಟೆಗಳವರೆವಿಗೂ ನಡೆಯುತ್ತದೆ. ನೀವು ಅಷ್ಟು ಕಾಲ ಕುಳಿತಿರಬೇಕಾಗುತ್ತದೆ. ಕೆಲವೊಮ್ಮೆಯಂತು ದಿನಗಳು ಕುಳಿತಿರಬೇಕಾಗುತ್ತದೆ. ಅತ್ಯಂತ ಆನಂದಮಯ ಹಾಗು ಸುಖಮಯ ಅನುಭವಗಳು ಉಂಟಾಗುತ್ತದೆ. ಆನಂದದಿಂದ ನಿಮ್ಮ ದೇಹ ಅತ್ಯಂತ ಹಗುರತನದ ಅನುಭೂತಿ ಆಗುತ್ತದೆ. ಅನೇಕ ವಿಧವಾದ ದರ್ಶನಗಳು ಉಂಟಾಗುತ್ತದೆ. ದಾರಿ ತಪ್ಪಿಸುವಂತಹ ದರ್ಶನಾನುಭವಗಳು ಉಂಟಾಗುತ್ತದೆ. ನಂತರ ನೀವು ಆಳವಾದ ಸಮಾಧಿಯ ಅಭಾದಿತ, ಅಭಂಗ ಸಮಾದಿಯ ಅನುಭೂತಿ ಪಡೆಯುವಿರಿ. ಆಗ ನೀವು ಧ್ಯಾನ ನಿಮಿತ್ತದಲ್ಲಿ ಆಳವಾಗಿ ಮುಳುಗುವಿರಿ. ನಂತರ ನಿಮಗೆ ನೀವು ಇಂದ್ರಿಯಭೋಗದ ಕ್ಷೇತ್ರದಿಂದ ಪೂರ್ಣವಾಗಿ ಮುಕ್ತರಾಗುವಿರಿ ಎಂಬ ಅನುಭವ ಉಂಟಾಗುತ್ತದೆ.
                ನೀವು ಐದು ಧ್ಯಾನಗಳಿಂದ ಕೂಡಿದ ಕ್ಷಣವೇ ಪ್ರಥಮ ಸಮಾಧಿ ಪಡೆದಿದ್ದೀರಿ ಎಂದು ಎಂದೂ ಯೋಚಿಸಬೇಡಿ. ನೀವು ಧ್ಯಾನಂಗಗಳ ಬಗ್ಗೆ ಕೆಲವು ಹಂತದ ಜ್ಞಾನ ನಿಮಗೆ ಇದ್ದಾಗ ನೀವು ತಪ್ಪಾಗಿ ಯೋಚಿಸಲಾರಿರಿ. ನಾವು ಪಡೆದಿರುವುದು ಸಾಮಿಪ್ಯ ಸಮಾಧಿಯಾದರೂ ಅದು ಸ್ಥಿರ ಸಮಾಧಿ ಎಂದು ಮಿಥ್ಯಾದೃಷ್ಟಿ ಉಂಟಾಗುತ್ತದೆ. ಅದು ಸರಿಯಲ್ಲ. ಹಂತಕ್ಕೆ ಹೀಗಾದರೆ ಎಲ್ಲಕ್ಕಿಂತ ಪರಮಸೂಕ್ಷ್ಮವಾದ ನಿಬ್ಭಾನವನ್ನು ನೀವು ಹೇಗೆ ಅರಿಯಬಲ್ಲಿರಿ.
                ಸಾಮೀಪ್ಯ ಸಮಾಧಿಯು ಅಲೆಗಳಿರುವ ಸಾಗರದಲ್ಲಿ ಚಲಿಸುವ ಹಡಗಿನಂತೆ ಆದರೆ ಸ್ಥಿರ ಸಮಾಧಿಯು ಅಲೆಗಳಿಲ್ಲದ ಸಾಗರದಲ್ಲಿ ಚಲಿಸುವ ಹಡಗಿನಂತೆ. ಸಾಮೀಪ್ಯ ಸಮಾದಿಯಲ್ಲಿ ಧ್ಯಾನಂಗಗಳು ಅಷ್ಟು ಬಲಿಷ್ಠವಾಗಿರುವುದಿಲ್ಲ. ಆದರೆ ಸ್ಥಿರ ಸಮಾಧಿಯಲ್ಲಿ ಧ್ಯಾನಂಗಗಳು ಬಲಿಷ್ಠವಾಗಿರುತ್ತದೆ. ಹೇಗೆಂದರೆ ಸಾಮೀಪ್ಯ ಸಮಾಧಿಯು ಮಗುವಿನಂತೆ ನಡೆಯುವ ಮುನ್ನ ಬಹಳಷ್ಟು ಸಾರಿ ಬೀಳುತ್ತದೆ. ಆದರೆ ದೊಡ್ಡದಾದ ಮೇಲೆ ಬೀಳದೆ ಸಮಂಜಸವಾಗಿ ನಡೆಯುವುದು.
                ಪ್ರತಿಬಾಗ ನಿಮಿತ್ತವನ್ನು (ಪ್ರತಿಫಲಿತ ಚಿಹ್ನೆ) ನೀವು ಅತ್ಯಂತ ರಕ್ಷಿಬೇಕಾಗುತ್ತದೆ. ಹಾಗು ವಿಕಸಿಸಬೇಕಾಗುತ್ತದೆ. ಮೊದಲು ಅಂಗೈ ಅಗಲವಿದ್ದ ಚಿಹ್ನೆಯನ್ನು ಚಕ್ರದಷ್ಟು ದೊಡ್ಡದಾಗಿ ವೃದ್ಧಿಸಿ, ನಂತರ ಹಳ್ಳಿಯಷ್ಟು, ನಂತರ ನಗರದಷ್ಟು ಹಾಗೆಯೇ ಇಡೀ ಪೃಥ್ವಿಯಷ್ಟು ವಿಕಸಿಸಿ ಧ್ಯಾನಿಸಬೇಕಾಗುತ್ತದೆ. ಏಕೆಂದರೆ ಇದರಿಂದ ಚಿತ್ತವು ಅಭಿವೃದ್ಧಿಯಾಗುತ್ತದೆ.
                ನಂತರ ಸಾಧಕನು ಹಿಂದೆ ವಿವರಿಸುವ 10 ವಿಧದ ಧ್ಯಾನದ ಕೌಶಲ್ಯಗಳನ್ನು ಪ್ರಾವಿಣ್ಯತೆಯನ್ನು ಸಾಧಿಸಬೇಕಗುತ್ತದೆ. ಅವೆಂದರೆ : 1. ಸ್ವಚ್ಛತೆ 2. ಧ್ಯಾನಂಗ ಸಮತೋಲನ 3. ಚಿಹ್ನೆಗಳಲ್ಲಿ ಕುಶಲತೆ 4. ಪ್ರಯತ್ನಶೀಲ 5. ಸಂಯಮ 6. ಸ್ಫೂತರ್ಿ 7. ಸಮಚಿತ್ತತೆ 8. ಸಮಾಧಿ ಇಲ್ಲದವರ ವರ್ಜನೆ. 9. ಸಮಾಧಿ ಹೊಂದಿರುವವರ ಸ್ನೇಹ 10. ಸ್ಥಿರನಿಧರ್ಾರ.
                ನಂತರ ಧ್ಯಾನಂಗಗಳ ವಿಕಸತೆಯಿಂದ, ಅಪಾರ ಚಿತ್ತ ಏಕಾಗ್ರತೆಯಿಂದ ಹಾಗು ಕೌಶಲತೆಯ್ತಿಂದ ಮನವು ಸ್ಥಿರವಾಗಿದ್ದು, ಮನಸ್ಸು ಇಂದ್ರೀಯ ಕ್ಷೇತ್ರದಿಂದ ರೂಪವಾಚರ ಕ್ಷೇತ್ರಕ್ಕೆ ಬದಲಾಯಿಸುತ್ತದೆ.
                ಪ್ರಥಮ ಸಮಾಧಿ : ಸಮಯದಲ್ಲಿ ಇಂದ್ರೀಯ ಭೋಗಗಳಿಂದ, ಅಕುಶಲ ಯೋಚನೆಗಳಿಂದ ಮನಸ್ಸು ಮುಕ್ತವಾಗಿ, ಪಂಚನಿವರಣಗಳು ನಿವಾರಣೆಯಾಗಿ 5 ಧ್ಯಾನದ ಅಂಗಗಳಿಂದ ಬಲಿಷ್ಠವಾಗಿ ಕೂಡಿ ಪ್ರಥಮ ಸಮಾಧಿ ಸ್ಥಾಪಿತವಾಗುತ್ತದೆ.
                ಹೀಗೆ ಚಿತ್ತವು ವಿಶುದ್ಧಿಯನ್ನು ಪಡೆಯುತ್ತದೆ. ಆಗ ಬಾಹ್ಯದ ಸದ್ದು ಸ್ವಲ್ಪವೂ ಕೇಳಿಸದು. ದೇಹದಲ್ಲಿ ಏನಾದರೂ ಸರಿದಾಡಿದರೂ, ಏನಾದರೂ ಕಚ್ಚಿದರೂ ಅವರ ಅರಿವು ಬಾರದು. ದೇಹದ ಅರಿವು ಇಲ್ಲದೆ ಹೋಗುತ್ತದೆ. ಇನ್ನೊಂದು ವಿಧವಾಗಿ ಹೇಳಬೇಕೆಂದರೆ ಸಾಧಕನಲ್ಲಿ ಪಂಚ ನಿವರಣಗಳು ನಾಶವಾಗುತ್ತಿದ್ದಂತೆಯೇ ಆನಂದವುಂಟಾಗುತ್ತದೆ. ಆನಂದವು ಮನವನ್ನಷ್ಟೇ ಅಲ್ಲದೆ ದೇಹವನ್ನು ಆವರಿಸುತ್ತದೆ. ಆಗ ದೇಹವು ಶಾಂತವಾಗುತ್ತದೆ. ಆಗ ಸುಖವು ಉದಯಿಸಿ ಪ್ರಸರಿಸುತ್ತದೆ. ಆಗ ಮನವು ಸ್ಥಿರವಾಗಿ ಏಕಾಗ್ರವಾಗುತ್ತದೆ. ಆಗ ಅಡೆತಡೆಗಳು ಪೂರ್ಣವಾಗಿ ಇಲ್ಲವಾಗಿ ಮನಸ್ಸು ಸಾಧಾರಣ ಚಿತ್ತದಿಂದ (ಇಂದ್ರೀಯ ಕ್ಷೇತ್ರ) ಸಮಾಧಿಯ ಲೋಕದ ಚಿತ್ತವಾಗಿ ಗೋತ್ರ ಪರಿವರ್ತನೆಯಾಗುತ್ತದೆ. ಹಾಗು ಪ್ರಥಮ ಝಾನವನ್ನು ಪಠವಿಯ ಮೇಲೆ ಸ್ಥಾಪಿತವಾಗುತ್ತದೆ. ಝಾನದ ಪದಶಃ ಅರ್ಥ ಧ್ಯಾನ ವಿಷಯವನ್ನು ಪ್ರಕಾಶವುಂಟು ಮಾಡುವಿಕೆ ಮತ್ತು ವಿರೋಧವನ್ನು ಸುಟ್ಟುಹಾಕುವಿಕೆ ಎಂದರ್ಥ. ಪ್ರಥಮಬಾರಿ ಸಮಾಧಿ ಲೋಕದ ಚಿತ್ತವಾಗಿ ಪರಿವರ್ತನೆ ಆಗಿರುವುದರಿಂದ ಇದಕ್ಕೆ ಪ್ರಥಮ ಝಾನ ಎನ್ನುತ್ತಾರೆ. ನಂತರ ಸಾಧಕನು 5 ಹಂತದ ಸಮಾಧಿ ಪ್ರಾವಿಣ್ಯತೆ ಪಡೆಯಬೇಕಾಗುತ್ತದೆ. ಅವೆಂದರೆ:
                1. ಸಮಾಧಿಯಲ್ಲಿ ಪ್ರವೇಶಿಸುವಿಕೆ 2. ಸಮಾಧಿ ಪ್ರಾಪ್ತಿ 3. ಸಮಾಧಿಯಲ್ಲಿ ದೀರ್ಘಕಾಲ ಇರುವಿಕೆ 4. ಸಮಾಧಿಯಿಂದ ನಿರ್ಗಮನ 5. ಸಮಾಧಿಯ ಪುನರ್ ಅವಲೋಕನ. ರೀತಿಯಲ್ಲಿ ಸಾಧಕನು ನಿರಂತರ ಪ್ರಾವಿಣ್ಯತೆ ಪಡೆದ ಮೇಲೆ ಅವನು ಇಚ್ಛಿಸಿದ ಸ್ಥಳದಲ್ಲಿ. ಇಚ್ಛಿಸಿದಷ್ಟು ಕಾಲ ಕ್ಷಿಪ್ರವಾಗಿ ಸಮಾಧಿ ಸಿದ್ಧಿಸಬಲ್ಲ ಹಾಗೆಯೇ ದೀರ್ಘವಾಗಿ ಉಳಿಯಬಲ್ಲ ಹಾಗೆಯೇ ಕ್ಷಿಪ್ರವಾಗಿ ಹೊರಬರಬಲ್ಲ. ಹಾಗೆಯೇ ಆತನು ಪುನರ್ ಅವಲೋಕಿಸಿದಾಗ ಆತನಿಗೆ ವಿತಕ್ಕ, ವಿಚಾರಗಳು ಸ್ಥೂಲವಾಗಿ ಕಂಡುಬರುತ್ತದೆ. ಹಾಗು ಪೀತಿ, ಸುಖ, ಏಕಾಗ್ರತೆಗಳು ಶಾಂತವಾಗಿ ಕಾಣುತ್ತವೆ. ಆಗ ಅವನು ಮತ್ತೇ ಸೀಮಿತವನ್ನು ಮನಸ್ಸಿಗೆ ತಂದುಕೊಂಡು ಸ್ಥೂಲವಾದ ವಿತಕ್ಕ, ವಿಚಾರವನ್ನು ತೊಡೆದುಹಾಕುತ್ತಾನೆ. ಹಾಗು ಶಾಂತವಾಗಿರುವ ಪೀತಿ, ಸುಖ, ಏಕಾಗ್ರತೆಯನ್ನು ಪಡೆಯುತ್ತಾನೆ. ಹಾಗೆಯೇ ದ್ವಿತೀಯ ಧ್ಯಾನವನ್ನು ಪಡೆಯುತ್ತಾನೆ.
                ದ್ವಿತೀಯ ಸಮಾಧಿ : ರೀತಿಯಾಗಿ ಸಾಧಕನು ವಿತಕ್ಕ, ವಿಚಾರಗಳನ್ನು ಬೇರ್ಪಡಿಸಿ, ಆಂತರಿಕದ ಪ್ರಬಲ ಶ್ರದ್ಧೆಯಿಂದ ಏಕೋಭಾವವನ್ನು ಪಡೆದು, ವೃದ್ಧಿಸಿ, ಪ್ರೀತಿ, ಸುಖದಿಂದ ಕೂಡಿದ ದ್ವಿತೀಯ ಸಮಾಧಿ ಪಡೆಯುತ್ತಾನೆ.
                ನಂತರ ಸಮಾಧಿಯ 5 ಹಂತದ ಪ್ರಾವಿಣ್ಯತೆ ಪಡೆದು ಸಮಾಧಿಯನ್ನು ಅವಲೋಕಿಸಿದಾಗ ಆತನಿಗೆ ಪೀತಿಯು ಸ್ಥೂಲವಾಗಿ ಕಂಡುಬರುತ್ತದೆ. ಹಾಗು ಸುಖ ಮತ್ತು ಏಕಾಗ್ರತೆಯು ಶಾಂತವಾಗಿ ಸೂಕ್ಷ್ಮವಾಗಿ ಕಂಡುಬರುತ್ತದೆ.
                ತೃತೀಯ ಸಮಾಧಿ : ಆಗ ಸಾಧಕನು ಪೀತಿ (ಆನಂದವನ್ನು)ಯನ್ನು ಬೇರ್ಪಡಿಸಿ ದೂರಿಕರಿಸುತ್ತಾನೆ. ಆತನು ಸಮಚಿತ್ತತೆಯಿಂದ ವಿಹರಿಸುತ್ತಾನೆ ಮತ್ತು ಪೂರ್ಣವಾಗಿ ಎಚ್ಚರಿಕೆಯಿಂದ ಹಾಗು ಅರಿವಿನಿಂದ ಕೂಡಿರುತ್ತಾನೆ. ಆಗ ಆತನ ಶರೀರವು ಸುಖ (ದಿವ್ಯವಾದ ಶಾಂತತೆ)ದಿಂದ ಕೂಡಿದ್ದು ಆತನು ತೃತೀಯ ಧ್ಯಾನದಲ್ಲಿ ಪ್ರವೇಶಿಸಿ ನೆಲಸುತ್ತಾನೆ. ಅಂತಹ ಸ್ಥಿತಿಗೆ ಆರ್ಯರು ರೀತಿ ಹೇಳುತ್ತಾರೆ ಸಮಚಿತ್ತತೆ ಮತ್ತು ಜಾಗರೂಕತೆ ಹೊಂದಿದ ಸುಖದಲ್ಲಿ ಈತ ವಿಹರಿಸುತ್ತಿದ್ದಾನೆ.
                ಸಮಾಧಿಯು ವಿರಾಗದಿಂದ ಸ್ಥಾಪಿತವಾಗಿದೆ ಹಾಗು ಇದರ ತತ್ಕ್ಷಣದ ಕಾರ್ಯ ಪೀತಿಯ ಮರೆಯಾಗುವಿಕೆಯಾಗಿದೆ. ನಂತರ ಸಮಾಧಿಯಲ್ಲಿ ಪ್ರಾವಿಣ್ಯತೆ ಪಡೆದು ಆತನು ತೃತೀಯ ಸಮಾಧಿ ಅವಲೋಕಿಸಿದಾಗ, ಆತನಿಗೆ ಸುಖವು (ದಿವ್ಯಶಾಂತಸ್ಥಿತಿ) ಸ್ಥೂಲವಾಗಿ ಕಂಡುಬರುತ್ತದೆ. ಹಾಗು ಸಮಚಿತ್ತತೆ ಮತ್ತು ಏಕಾಗ್ರತೆಯು ಶಾಂತವಾಗಿ ಸೂಕ್ಷ್ಮವಾಗಿ ಕಂಡುಬರುತ್ತದೆ.
ಚತುರ್ಥ ಸಮಾಧಿ : ಇಲ್ಲಿ ಭಿಕ್ಷುವು ಸುಖವನ್ನು ಹಾಗು ನೋವನ್ನು ಬೇರ್ಪಡಿಸಿ, ದೂರಿಕರಿಸಿ. ಸುಖ ಮತ್ತು ಶೋಕಗಳಿಂದ ಮುಕ್ತವಾದ ಚತುರ್ಥ ಸಮಾಧಿಯಲ್ಲಿ ಪ್ರವೇಶಿಸಿ ವಿಹರಿಸುತ್ತಾನೆ. ಮಹಾಸ್ಥಿತಿಯು ನೋವು ಮತ್ತು ನಲಿವು ರಹಿತವಾದ ಜಾಗರೂಕತೆಯುತ ಸಮಚಿತ್ತತೆ ಮತ್ತು ಏಕಾಗ್ರತೆಯಿಂದ ಕೂಡಿದ ಚತುರ್ಥ ಸಮಾಧಿ ಪ್ರಾಪ್ತಿ ಮಾಡುತ್ತಾನೆ.
                ಸ್ಥಿತಿಯಲ್ಲಿ ಎಚ್ಚರಿಕೆಯು ಪರಿಶುದ್ಧವಾಗುತ್ತದೆ. ಸ್ಪಷ್ಟವಾಗುತ್ತದೆ. ಆದ್ದರಿಂದ ಸ್ಥಿತಿಗೆ ಸಮಚಿತ್ತತೆಯಿಂದ ಶುದ್ಧಗೊಂಡ ಜಾಗ್ರತೆ ಎನ್ನುವರು. ಇಲ್ಲಿ ಸಮಚಿತ್ತತೆಯನ್ನು ಸಂವೇದನೆಯಾಗಿಯು ಹಾಗು ಸಮಾಧಿಯಾಗಿಯು ಪರಿಗಣಿಸಬೇಕು. ಇಲ್ಲಿ ಕೇವಲ ಎರಡು ಅಂಶಗಳಿವೆ, ಸಮಚಿತ್ತತೆ ಮತ್ತು ಏಕಾಗ್ರತೆ. ರೀತಿಯಾಗಿ ಆತನು ಪಠವಿ ಕಸಿಣಾದ ಮೂಲಕ ಚತುರ್ಥ ಸಮಾಧಿ ಪ್ರಾಪ್ತಿ ಮಾಡುತ್ತಾನೆ.

                ಪಠವಿಕಸಿನಾದ ಅಭಿಜ್ಞಾ ಲಾಭಗಳು : ಹಲವು ಶರೀರಗಳನ್ನು ಪಡೆಯುತ್ತಾನೆ. ಹಾಗೆಯೇ ಏಕ ಶರೀರಧಾರಿಯು ಆಗುತ್ತಾನೆ, ನೀರಿನಲ್ಲಿ ಅಥವಾ ಆಕಾಶದಲ್ಲಿ ಭೂಮಿಯಂತೆ, ನಡೆಯುತ್ತಾನೆ, ನಿಲ್ಲುತ್ತಾನೆ, ಕೂರುತ್ತಾನೆ ಮತ್ತು ಮಲಗುತ್ತಾನೆ ಮತ್ತು ಇತ್ಯಾದಿ.

No comments:

Post a Comment