Monday 5 June 2017

walking meditation in kannada ನಡಿಗೆಯ ಧ್ಯಾನ

  ನಡಿಗೆಯ ಧ್ಯಾನ :

                ಬೌದ್ಧರ ಧ್ಯಾನವು ಎಲ್ಲಾ ಅವಸ್ಥೆಯಲ್ಲಿರುತ್ತದೆ. ಕುಳಿತು, ನಿಂತು, ನಡೆದು ಮತ್ತು ಮಲಗಿ ರೀತಿ ನಾಲ್ಕು ಅವಸ್ಥೆಯಲ್ಲಿಯೂ ಧ್ಯಾನಿಸುತ್ತಾರೆ. ಪಾಳಿ ಸಾಹಿತ್ಯದಲ್ಲಿ ಸಿಗುವ ಮಾಹಿತಿಯ ಪ್ರಕಾರ ಬುದ್ಧರು ಸಂಬೋಧಿ ಪ್ರಾಪ್ತಿಯ ನಂತರ ಒಂದುವಾರ ಕಾಲ ನಿಂತು ಧ್ಯಾನಿಸುತ್ತಾರೆ ಮತ್ತು ಒಂದುವಾರ ಕಾಲ ನಡುಗೆಯ ಧ್ಯಾನದಲ್ಲಿರುತ್ತಾರೆ ಮತ್ತು 42 ದಿನ ಕುಳಿತು ಧ್ಯಾನಿಸುತ್ತಾರೆ. ಅಷ್ಟೇ ಅಲ್ಲ, ಪೂಜ್ಯ ಆನಂದ ಭಿಕ್ಷು ಅರಹಂತರಾಗಿದ್ದು ಧ್ಯಾನಿಸುತ್ತಾ ಮಲಗುವಾಗ ಮತ್ತು ವಿಶುದ್ಧಿ ಮಾರ್ಗದ ಪ್ರಕಾರ ಒಬ್ಬ ಭಿಕ್ಷು ನಡುಗೆಯ ಧ್ಯಾನದಲ್ಲಿ ನಿಬ್ಬಾಣ ಸಾಧಿಸುತ್ತಾನೆ. ರೀತಿಯಲ್ಲಿ ನಡುಗೆಯ ಧ್ಯಾನವು ಬುದ್ಧರಿಂದ ಮತ್ತು ಬುದ್ಧರ ಕಾಲದಿಂದ ಪ್ರಚಲಿತದಲ್ಲಿದೆ.
                ನಿದ್ದೆಯನ್ನು ಗೆಲ್ಲಲು, ಜಡತೆಯನ್ನು ದೂರವಾಗಿಸಲು, ಪರಿಶ್ರಮ ಹೆಚ್ಚಿಸಲು, ದೇಹದ ತೂಕ ಕಡಿಮೆ ಮಾಡಲು, ಆರೋಗ್ಯವಾಗಿರಲು, ದೀರ್ಘಕಾಲ ಕುಳಿತುಕೊಳ್ಳಲು ಸಹಾಯಕವಾಗಲು ಮತ್ತು ನಿರಂತರ ಜಾಗ್ರತೆ ಸ್ಥಾಪಿಸಲು ನಡುಗೆಯ ಧ್ಯಾನ ಅತ್ಯಗತ್ಯವಾಗಿದೆ.
ನಡಿಗೆಯ ಧ್ಯಾನದಲ್ಲಿರುವ ವಿಧಗಳು :
1.            ನಾಲ್ಕು ಬ್ರಹ್ಮ ವಿಹಾರಗಳು. 2. 10 ಅನುಸ್ಸತಿಗಳನ್ನು ಮತ್ತು 3. ವಿಪಶ್ಶನವನ್ನು ನಡಿಗೆಯ ಧ್ಯಾನದಲ್ಲಿ ಮಾಡಬಹುದು. ಬುದ್ಧರ ಮೆತ್ತಾ ಸುತ್ತದಲ್ಲಿ ಹೀಗೆ ಹೇಳಿದ್ದಾರೆ.
                ಭಿಕ್ಷುವು ರೀತಿಯಾದ ಚಿತ್ತದಿಂದ (ಬ್ರಹ್ಮ ವಿಹಾರದಿಂದ ನಿಂತಿರಲಿ, ನಡೆಯುತಿರಲಿ, ಕುಳಿತಿರಲಿ ಅಥವಾ ಮಲಗಿರಲಿ ಆತನು ಸದಾ ರೀತಿಯ ಚಿತ್ತದಿಂದಿರಲಿ, ಎಲ್ಲಿಯವರೆಗೆ ಆತ ಜಾಗೃತನೋ ಅಲ್ಲಿಯವರೆಗೆ ಹೀಗೆ ಸಾಧನೆ ಮಾಡುವುದಕ್ಕೆ ಬ್ರಹ್ಮವಿಹಾರ ಎನ್ನುತ್ತಾರೆ.
ಮತ್ತು ಕಾಯಾಗತಾಸತಿಯಲ್ಲಿ ಹೀಗೆ ಹೇಳುತ್ತಾರೆ :
                ಇಲ್ಲಿ ಭಿಕ್ಷುವು ನಡೆಯುತ್ತಿರುವಾಗ ನಡೆಯುತ್ತಿದ್ದೇನೆ ಎಂಬ ಜಾಗ್ರತೆಯನ್ನು ಮತ್ತು ಅರಿವನ್ನು ಹೊಂದಿರುತ್ತಾನೆ...
                ರೀತಿಯಲ್ಲಿ ನಡಿಗೆಯ ಧ್ಯಾನದಲ್ಲಿ ಆಗಿನ ಕಾಲದಲ್ಲಿ ಭಿಕ್ಷುಗಳು ರಾತ್ರಿಯಿಡೀ ಧ್ಯಾನಿಸುತ್ತಿದ್ದರು ಮತ್ತು ಮತ್ತೆ ಕುಳಿತೂ ಧ್ಯಾನಿಸುತ್ತಿದ್ದರು. ಕಸಿನಾ ಧ್ಯಾನವು ನಡಿಗೆಯ ಧ್ಯಾನಕ್ಕೆ ಸೂಕ್ತವಲ್ಲ.
ನಡಿಗೆಯ ಧ್ಯಾನ ವಿಧಾನ :
                ನಡಿಗೆಯ ಧ್ಯಾನ ಮಾಡುವ ಧ್ಯಾನಿಯು ಅದಕ್ಕಾಗಿ ನಿರ್ಜನ, ನಿಶ್ಶಬ್ದ, ಏಕಾಂತ ಮತ್ತು ಆಧುನಿಕತೆಯ ವಾಹನಗಳು ವಾತಾವರಣದಿಂದ ದೂರವಿರಬೇಕು. ನೆಲವು ಕಲ್ಲುಗಳಿಂದ ಮತ್ತು ಮುಳ್ಳುಗಳಿಂದ ಮುಕ್ತವಾಗಿರಬೇಕು.
1.            ಬ್ರಹ್ಮವಿಹಾರ ಮತ್ತು ಅನುಸತಿ ಧ್ಯಾನದಲ್ಲಿ ತಲ್ಲೀನರಾಗುವವರು ಮನವನ್ನು ಅಂತರ ಮುಖಗೊಳಿಸಿ, ಧ್ಯಾನ ವಿಷಯದಲ್ಲಿ ತಲ್ಲೀನರಾಗಿ ಯಾಂತ್ರಿಕವಾಗಿ ನಡೆಯಬೇಕು.
2.            ಕಾಯಾಗತಾಸತಿ ಮಾಡುವವರು ಮನವನ್ನು ಪಾದಗಳ ಮೇಲೆಯೇ ಕೇಂದ್ರೀಕೃತಗೊಳಿಸಬೇಕು. ಜಾಗರೂಕತೆಯಿಂದ ಪ್ರತಿಕ್ಷಣವು ಎಚ್ಚರಿಕೆಯಿಂದ ಚಲಿಸಬೇಕು. ಇಲ್ಲಿ ಭಿಕ್ಷುವು ಕೈಗಳನ್ನು ಹಿಂದಕ್ಕೆ ಅಥವಾ ಮುಂದಕ್ಕೆ ಕಟ್ಟಿಕೊಳ್ಳಬೇಕು. ತಲೆ, ಬೆನ್ನು, ನೇರವಾಗಿರಬೇಕು. ಆದರೆ ಕಣ್ಣನ್ನು ಪೂರ್ಣವಾಗಿ ತೆರೆಯಬಾರದು. 4 ಅಡಿ ನೆಲವನ್ನು ನೋಡುತ್ತಿರಬೇಕು. ಕಣ್ಣು ಮುಚ್ಚಿ ನಡೆಯಬಾರದು. ನಂತರ ನಿಧಾನವಾಗಿ ನಡೆಯಬೇಕು. ಏಕೆಂದರೆ ನಿಧಾನವಾಗಿ ನಡೆದಷ್ಟು ತಾವು ಅಲ್ಲಿನ ಕ್ರಿಯೆಯನ್ನು ಗಮನಿಸಬಹುದು. ಹೇಗೆಂದರೆ ನಾವು ವಾಹನದಲ್ಲಿ ವೇಗವಾಗಿ ಹೋಗುವಾಗ ದಾರಿಯಲ್ಲಿನ ಫಲಕಗಳನ್ನು ಓದಲಾಗುವುದಿಲ್ಲ. ಆದರೆ ನಿಧಾನವಾಗಿ ಹೋಗುವಾಗಿ ಫಲಕಗಳನ್ನು ಓದಬಹುದು. ಹಾಗೆಯೇ ನಾವು ನಿಧಾನವಾಗಿ ನಡೆಯುವಾಗ ಪಾದಗಳಲ್ಲಿ ನಡೆಯುವ ಕ್ರಿಯೆಯನ್ನು ಗಮನಿಸುತ್ತಾ ಸತ್ಯವನ್ನು ಅರಿಯಬಹುದು.
                ನಾವು ನಡೆಯುವಾಗ ಹೀಗೆ ನಡೆಯುತ್ತೇವೆ. 1. ಪಾದವನ್ನು ಎತ್ತುತ್ತೇವೆ.  2. ಪಾದವನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತೇವೆ.  3. ಪಾದವನ್ನು ನೆಲಕ್ಕೆ ಇಡುತ್ತೇವೆ.  4. ಪಾದವನ್ನು ನೆಲಕ್ಕೆ ಸ್ಪಶರ್ಿಸುತ್ತೇವೆ. ಅಥವಾ ಪಾದವನ್ನು ನೆಲಕ್ಕೆ ಒತ್ತುತ್ತೇವೆ. ನಾಲ್ಕು ಹಂತಗಳಲ್ಲೂ ನಾವು ಅತ್ಯಂತ ಜಾಗರೂಕರಾಗಿರಬೇಕಾಗುತ್ತದೆ. ಆಗ ನಮಗೆ ನಾವು ಹೇಗೆ ನಡೆಯುತ್ತೇವೆ ಎಂಬುದು ತಿಳಿಯುತ್ತದೆ. ಕ್ರಿಯೆಯನ್ನೇ ಮುಂದುವರೆಸಬೇಕು.
                ಆಗ ನಮಗೆ ಕೆಲವು ಅನುಭವಗಳಾಗುತ್ತದೆ. ಏನೆಂದರೆ ಪಾದವು ನೆಲಕ್ಕೆ ಸ್ಪಶರ್ಿಸಿದಾಗ ನೆಲದ ಒರಟು ಅಥವಾ ಮೃದುತನ ಅನುಭವಕ್ಕೆ ಬರುತ್ತದೆ. ಹಾಗೆಯೇ ಬಿಸಿನೆಲ ಅಥವಾ ತಂಪುನೆಲದ ಅನುಭವ ಉಂಟಾಗುತ್ತದೆ. ಹೀಗಾಗಿ ಪೃಥ್ವಿಧಾತುವಿನ ಪರಿಚಯವಾಗುತ್ತದೆ. ಹಾಗೆಯೇ ನಾವು ಪಾದವನ್ನು ಮೇಲಕ್ಕೆ ಎತ್ತಿದಾಗ ಹಗುರತನದ ಅನುಭವ ಉಂಟಾಗುತ್ತದೆ. ಹಾಗೆಯೇ ಪಾದವನ್ನು ನೆಲದ ಮೇಲೆ ಇಡುವಾಗ ಭಾರದ ಅನುಭವ ಉಂಟಾಗುತ್ತದೆ. ಮತ್ತು ಪಾದವನ್ನು ಚಲಿಸುವಾಗ ವಾಯುವಿನ ಸ್ಪರ್ಶ ಉಂಟಾಗುತ್ತದೆ. ಮುಂದೆ ಪಾದ ಮೇಲಕ್ಕೆ ಎತ್ತುವಾಗ ಹಗುರತನದ ಅನುಭವಕ್ಕೆ ಕಾರಣವಾದ ಅಗ್ನಿಧಾತು ಮತ್ತು ವಾಯುಧಾತುಗಳ ಅನುಭವ ಉಂಟಾಗುತ್ತದೆ. ಹಾಗೆಯೇ ಕೆಳಗೆ ಪಾದವನ್ನು ಇಡುವಾಗ ಭಾರಕ್ಕೆ ಕಾರಣ ಜಲದಾತು ಎಂದು ಅರಿವಾಗುತ್ತದೆ. ರೀತಿ ನಮಗೆ 4 ಧಾತುಗಳ ಜ್ಞಾನವು ಸಿಗುತ್ತದೆ.
                ರೀತಿಯಾಗಿ 4 ಧಾತುಗಳ ಪರಿಚಯದ ಜೊತೆಯಲ್ಲೇ ನಿರಂತರ ಜಾಗೃತಿ ಸ್ಥಾಪಿತವಾಗುತ್ತಿರುವುದು ಅರಿವಿಗೆ ಬರುತ್ತದೆ. ಹೀಗಾಗಿ ದೇಹ ಮನಸ್ಸುಗಳು ಇಲ್ಲಿ ಉದಯಿಸಿ ಮರೆಯಾಗುತ್ತಿರುವುದು ಅರಿವಿಗೆ ಬರುತ್ತದೆ. ಅಂದರೆ ನಡಿಗೆಯಲ್ಲಿನ ಹಂತಗಳಲ್ಲಿ ನಡಿಗೆಯ ಧ್ಯಾನದ ಹಂತಗಳಲ್ಲಿ ವೈವಿಧ್ಯತೆಗಳಲ್ಲಿ ಅಷ್ಟು ಬಾರಿಯು ಮನಸ್ಸು ಆಯಾ ರೀತಿಯಲ್ಲಿ ಬದಲಾವಣೆ ಹೊಂದುತ್ತಿರುತ್ತದೆ. ಅನಿತ್ಯತೆ ಅರಿವಿಗೆ ಬರುತ್ತದೆ.
                ನಂತರ ಹೀಗೆ ನಡೆಯುತ್ತಿದ್ದಂತೆಯೆ ಆತನಿಗೆ ನಡಿಗೆಗೆ ಕಾರಣ ಇಚ್ಛೆ ಎಂದು ಜ್ಞಾನೋದಯವಾಗುತ್ತದೆ. ಇಚ್ಛೆಯಿಲ್ಲದಿದ್ದರೆ ನಿಧರ್ಾರ ಬರುತ್ತಿರಲಿಲ್ಲ. ನಿಧರ್ಾರವಿಲ್ಲದಿದ್ದರೆ ಶ್ರಮ ಬೀಳುತ್ತಿರಲಿಲ್ಲ. ಶ್ರಮವಿಲ್ಲದಿದ್ದರೆ, ಜಾಗ್ರತೆ ಉಂಟಾಗುತ್ತಿರಲಿಲ್ಲ. ಜಾಗ್ರತೆಯಿಲ್ಲದಿದ್ದರೆ ಏಕಾಗ್ರತೆ ಉಂಟಾಗುತ್ತಿರಲಿಲ್ಲ. ಏಕಾಗ್ರತೆ ಇಲ್ಲದಿದ್ದರೆ ಜ್ಞಾನವು ಸಿಗುತ್ತಿರಲಿಲ್ಲ. ಆದ್ದರಿಂದ ಧ್ಯಾನಕ್ಕೆ ಇಚ್ಛೆಯೇ ಕಾರಣ ಎಂದು ಅರಿವು ಉಂಟಾಗುತ್ತದೆ. ಹಾಗೆಯೇ ಆತನಿಗೆ ಇಡೀ ಜೀವನದ ಕಾರ್ಯಗಳಿಗೆ ಇಚ್ಛೆಯೇ ಕಾರಣ ಎಂದು ಅರಿವಿಗೆ ಬರುತ್ತದೆ. ಹಾಗೆಯೇ ಪಾಪ, ಪುಣ್ಯಗಳಿಗೆ, ಸಮಾಧಿಗೆ, ಸರ್ವಕ್ಕೂ ಇಚ್ಛೆಯೇ ಕಾರಣ. ಇಚ್ಛೆಗೆ ಕಾರಣ ಜ್ಞಾನ ಅಥವಾ ಮಿಥ್ಯಾಜ್ಞಾನ ಅಥವಾ ಅಜ್ಞಾನ ಎಂದು ಅರಿವಾಗುತ್ತದೆ. ರೀತಿಯಲ್ಲಿ ಆತನಿಗೆ ಇಚ್ಛೆಗೆ ಕಾರಣ ತನ್ನಲ್ಲಿನ ಜ್ಞಾನ ಮತ್ತು ಅಜ್ಞಾನವೇ ಹೊರತು ಯಾವುದೇ ದೇವರಲ್ಲ. ಯಾವುದೇ ಸೈತಾನನಲ್ಲ, ಯಾವುದೇ ವಿಧಿಯಲ್ಲ, ಯಾವುದೇ ಸಾರ್ವಭೌಮತ್ವದ ಶಕ್ತಿಯಲ್ಲ. ಯಾವುದೇ ಆತ್ಮವಲ್ಲ. ಎಂದು ಯತಾರ್ಥವಾಗಿ ಅರಿಯುತ್ತಾನೆ. ಆತನಿಗೆ ನಿತ್ಯವಾದ ಯಾವ ಆತ್ಮವು ಕಾಣಿಸುವುದಿಲ್ಲ. ಸದಾ ನಿರಂತರತೆಯೇ, ಸದಾ ಉದಯಿಸಿ ನಶಿಸುವಂತಹುದೇ ಅರಿಯುತ್ತಾನೆ. ನಿತ್ಯ ಶುದ್ಧವಾದುದು ಯಾವುದೂ ಕಾಣಲಾರ. ಹೀಗಾಗಿ ಆತನು ಸಂಶಯಗಳಿಂದ ಮುಕ್ತನಾಗಿ ಕೇವಲ ದೇಹವಿದೆ ಹಾಗು ಮನಸ್ಸಿದೆ. ಅವುಗಳು ಸದಾ ಉದಯಿಸಿ ಅಳಿಯುತ್ತದೆ ಎಂದು ಅರಿಯುತ್ತಾನೆ. ಉದಯಿಸಿ ಅಳಿಯುವಿಕೆಯ ಕ್ರಿಯೆಯು ತುಂಡು ತುಂಡಾದ ಪ್ರಕ್ರಿಯೆಯೇ ಆಗಿದ್ದು, ಇದು ನಿರಂತರವಾಗಿ ನಡೆಯುವುದರಿಂದ ಇದು ನಿತ್ಯತೆಯ ಭ್ರಮೆ ಉಂಟುಮಾಡುತ್ತದೆ. ಆದ್ದಿಂದ ಇಲ್ಲಿ ನಿತ್ಯವಾದುದು ಯಾವುದು ಇಲ್ಲ. ಎಂದು ಯತಾರ್ಥಜ್ಞಾನ ಪಡೆಯುತ್ತಾನೆ.
                ಯಾವುದೆಲ್ಲಾ ಅನಿತ್ಯವೋ ಅವೆಲ್ಲಾ ಅತೃಪ್ತಕರವಾಗಿವೆ. ಅವು ದುಃಖಕರವಾಗಿವೆ. ಅವುಗಳಲ್ಲಿ ಅಂಟುವುದು ದಡ್ಡತನ ಎಂದು ಅರಿಯುತ್ತಾನೆ. ಆಗ ಅವನಿಗೆ ಇಂದ್ರೀಯ ವಿಷಯಗಳೆಲ್ಲವೂ ಅನಿತ್ಯದ ಸ್ವರೂಪವೇ ಗೋಚರಿಸುತ್ತದೆ. ಹೀಗಾಗಿ ಅವನು ಎಲ್ಲಾ ಇಂದ್ರೀಯ ವಿಷಯಗಳು, ಹಾಗು ದೇಹ ಮನಸ್ಸಿನಿಂದ ಬಯಕೆರಹಿತನಾಗುತ್ತಾನೆ, ವಿಮುಖನಾಗುತ್ತಾನೆ. ಸಮಚಿತ್ತತೆ ತಾಳುತ್ತಾನೆ. ಆತನಿಗೆ ಇಡೀ ಇಂದ್ರೀಯ ವಿಷಯಗಳಲ್ಲಿ ಹಾಗು ದೇಹ ಮನಸ್ಸಿನ ಮೇಲೆ ಭಯ ಮೂಡುತ್ತದೆ. ಆತನು ವಿಮುಖನಾಗುತ್ತಾನೆ.
                ಆಗ ಆತನು ದೇಹ ಮನಸ್ಸನ್ನು ನನ್ನದು ಎಂದು ಭಾವಿಸಲಾರ. ದುಃಖವೆಂದು ಭಾವಿಸುತ್ತಾನೆ. ಅಷ್ಟೇ ದುಃಖದ ಮೂಲ ಎಂದು ಭಾವಿಸುತ್ತಾನೆ. ದೇಹ ಮನಸ್ಸಿನ ವಿಮುಖತೆ ನಿರೋಧತೆಯೇ ದುಃಖ ನಿರೋಧ ಎಂದು ಭಾಸವಾಗುತ್ತದೆ. ಯಾವಾಗ ದೇಹದ ಧಾತುಗಳಾಗಲಿ, ಸನ್ಯಾವಾಗಲಿ, ವೇದನೆಯಾಗಲಿ, ವಿಜ್ಞಾನವಾಗಲಿ, ಸಂಖಾರವಾಗಲಿ, ಯಾವುವು ತನ್ನದಲ್ಲವೊ, ಅವು ನಾನು ಸಹಾ ಅಲ್ಲ, ಅವುಗಳಲ್ಲಿ ನಿತ್ಯ ಇಲ್ಲದಿರುವುದರಿಂದ ಆವು ಆತ್ಮವೂ ಅಲ್ಲ ಎಂಬ ಯತಾರ್ಥ ಅನಾತ್ಮತೆಯ ಜ್ಞಾನ ಸಿಗುತ್ತದೆ. ರೀತಿಯಾಗಿ ಆತನು ಸೋತಪನ್ನ ಸ್ಥಿತಿಗಿಂತ ಕಡಿಮೆ ಸ್ಥಿತಿಯನ್ನು ತಲುಪುತ್ತಾನೆ. ಮುಂದೆ ಇದೇ ರೀತಿಯಾದ ಅಭ್ಯಾಸದಿಂದ ಆತ ಆರ್ಯ ಸ್ಥಿತಿಗಳಾದ ಸೋತಪನ್ನ ಸಕದಾಗಾಮಿ, ಅನಾಗಾಮಿ ಮತ್ತು ಅರಹಂತ ಸ್ಥಿತಿಗಳನ್ನು ಪಡೆಯುತ್ತಾನೆ. (ಇಲ್ಲಿ ಇಡೀ ಪ್ರಕ್ರಿಯೆ ಸಂಕ್ಷಿಪ್ತವಾಗಿದೆ. ಕೃತಿಯ ಮುಂದಿನ ಭಾಗದಲ್ಲಿ ವಿವರವಾದ ವಿವರಣೆ ಸಿಗುತ್ತದೆ.)


ಇಲ್ಲಿಗೆ ನಡಿಗೆಯ ಧ್ಯಾನವು ಮುಗಿಯಿತು

No comments:

Post a Comment