Sunday 25 June 2017

FIRE KASINA MEDITATION (ಅಗ್ನಿ) ತೇಜೋ ಕಸಿನಾ

(ಅಗ್ನಿ) ತೇಜೋ ಕಸಿನಾ :



                ಇಲ್ಲಿ ಸಾಧಕನು ನಿರ್ಜನ ನಿಶ್ಶಬ್ದ ವಾತಾವರಣದಲ್ಲಿದ್ದು, ತೇಜೋ ಕಸಿನಕ್ಕಾಗಿ ಬೆಂಕಿಯನ್ನು ಸಿದ್ಧಪಡಿಸಬೇಕು. ಅದಕ್ಕಾಗಿ ಕಟ್ಟಿಗೆಗಳನ್ನು ತೆಗೆದುಕೊಂಡು ಬೆಂಕಿ ಹಚ್ಚಿ ಉರಿಸಬೇಕು ನಂತರ ಅದಕ್ಕೆ ಎದುರಾಗಿ ಒಂದು ಚಾಪೆ ಅಥವಾ ಬಟ್ಟೆ ಅಥವಾ ಚರ್ಮವನ್ನು ಅದಕ್ಕೆ ನೇತುಹಾಕಿ, ಸಾಧಕನಿಗೆ ವೀಕ್ಷಿಸಲು ಮುಕ್ಕಾಲು ಅಡಿಯ ವ್ಯಾಸದ ರಂಧ್ರ ಕೊರೆದು ರಂಧ್ರದ ಮೂಲಕ ಸಾಧಕನು, ಪದ್ಮಾಸನದಲ್ಲಿ ಕುಳಿತು ಗಮನಿಸುತ್ತಾ ತೇಜೋ ತೇಜೋ ತೇಜೋ ಎಂದು ಜಪಿಸಬೇಕು.
                ಸಾಧಕನು ಬೆಂಕಿಯ ನೀಲಿ ಇತ್ಯಾದಿ ವರ್ಣಗಳ ಬಗ್ಗೆ ಗ್ರಹಿಕೆ ಮಾಡಬಾರದು, ಹಾಗೆಯೇ ಉಷ್ಣದ ದಾತುವಿನ ಗಮನಕೊಡಬಾರದು, ಕೇವಲ ಮಧ್ಯಭಾಗದ ಜ್ವಾಲೆಯ ಮೇಲೆ ಪ್ರಬಲ ಏಕಾಗ್ರತೆ ವಹಿಸಿ ವೀಕ್ಷಿಸಬೇಕು. ಆತನು ದುರುಗುಟ್ಟಿ ನೋಡಬಾರದು. ಕೇವಲ ದರ್ಪಣವನ್ನು ವೀಕ್ಷಿಸುವಂತೆ ನೋಡಬೇಕು. ಸಾಧ್ಯವಾದರೆ ರೆಪ್ಪೆಯನ್ನು ಮಿಟುಕಿಸಬಾರದು.
                ಆತನಿಗೆ ಉಗ್ಗದ ನಿಮಿತ್ತವು ಆರುವ ಜ್ವಾಲೆಯಂತೆಯೂ, ಉರಿಯುವ ಕಟ್ಟಿಗೆಯಂತೆಯೂ ಅಥವಾ ಹೊಗೆಯಂತೆಯು ಕಾಣಬಹುದು. ಆದರೆ ಪ್ರತಿಭಾಗ ನಿಮಿತ್ತವು ಆಕಾಶದಲ್ಲಿ ಅವಿಚಲ ಕೆಂಪು ಬಟ್ಟೆಯಂತೆಯೂ, ಬಂಗಾರದ ಬೀಸಣಿಕೆಯಂತೆಯೂ, ಇತ್ಯಾದಿ ರೀತಿ ಕಾಣಬಹುದು ಅದನ್ನು ಅವಲಂಭಿಸಿ ಸಾಮೀಪ್ಯ ಸಮಾಧಿ ಹಾಗೆಯೇ ಚತುರ್ಥ ಧ್ಯಾನದವರೆಗೆ ಸಿದ್ಧಿಸಬೇಕು.
ಅಭಿಜ್ಞಾ ಲಾಭಗಳು :
                ಸಾಧಕನಿಗೆ ಹೊಗೆ ಸೃಷ್ಟಿಸುವ, ಬೆಂಕಿಯನ್ನು ಸೃಷ್ಟಿಸುವ, ಕಿಡಿಗಳನ್ನು ಸೃಷ್ಟಿಸುವ, ಉರಿಸುವ ಸಾಮಥ್ರ್ಯ ಸಿಗುತ್ತದೆ. ಇಚ್ಛಿಸುವುದನ್ನು ಸುಡುವ ಸಾಮಥ್ರ್ಯ ಸಿಗುತ್ತದೆ. ಹಾಗೆಯೇ ದಿವ್ಯದೃಷ್ಟಿ ಲಭಿಸುತ್ತದೆ ಮತ್ತು ಇತ್ಯಾದಿ

No comments:

Post a Comment