Sunday 25 June 2017

WATER MEDITATION ಅಪೋ (ಜಲ) ಕಸಿನ

2.         ಅಪೋ (ಜಲ) ಕಸಿನ :
                ಇಲ್ಲಿ ಭಿಕ್ಷುವು ಸಾಧನೆಗಾಗಿ ನಿಶ್ಶಬ್ದ, ನಿರ್ಜನ ಪ್ರದೇಶ ಆಯ್ಕೆ ಮಾಡಬೆಕು. ನಂತರ ಜಲಕಸಿನಾಗಾಗಿ ಪಾರದರ್ಶಕ ಬಟ್ಟಲನ್ನು ತೆಗೆದುಕೊಂಡು ಸ್ವಚ್ಛವಾದ ನೀರನ್ನು ಆಯ್ಕೆ ಮಾಡಬೇಕು. ಹಾಗು ನೀರು ವರ್ಣರಹಿತವಾಗಿರಬೇಕು. ಅಷ್ಟೇ ಅಲ್ಲದೆ ಆತನು ನೀರಿನ ಬಣ್ಣಗಳ ಬಗ್ಗೆ ಗ್ರಹಿಕೆ ಮಾಡಬಾರದು. ಬಟ್ಟಲನ್ನು 4 ಅಡಿ ದೂರದಲ್ಲಿದ್ದು ಪದ್ಮಾಸನದಲ್ಲಿ ಕುಳಿತು ತದೇಕ ದೃಷ್ಟಿಯಿಂದ ವಿಕ್ಷೀಸುತ್ತಾ ಅಪೋ...ಅಪೋ...ಅಪೋ... ಎಂದು ಜಪಿಸುತ್ತಾ ಪಠವಿ ಕಸಿನಾದಂತೆ ಪ್ರತಿ ಹಂತವನ್ನು ದಾಟಿ ಚತುರ್ಥ ಝಾನ ಪ್ರಾಪ್ತಿ ಮಾಡಬೇಕು.
                ಆತನಿಗೆ ಉಗ್ಗಹ ನಿಮಿತ್ತ ಚಲಿಸುವಂತೆ ಕಾಣುವುದು. ನೀರು ಬುರುಡೆಗಳಿಂದ ಕೂಡಿದ್ದರೆ, ಉಗ್ಗಹ ನಿಮಿತ್ತವು ಹಾಗೇ ಕಾಣಿಸಬಹುದು.
                ಆತನಿಗೆ ಪ್ರತಿಭಾಗ ನಿಮಿತ್ತವು ಆಕಾಶದಲ್ಲಿ ಸ್ಫಣಿಕದ ಬೀಸಣಿಕೆಯಂತೆಯೂ, ಅಥವಾ ಸ್ಫಣಿಕದ ದರ್ಪಣದ ತಟ್ಟೆಯಂತೆಯೂ ಕಾಣಿಸಬಹುದು. ಅದನ್ನು ಅವಲಂಬಿಸಿಕೊಂಡು ಆತನು ಝಾನದ ಹಂತಗಳನ್ನು ದಾಟಿ ಚತುರ್ಥ ಸಮಾಧಿ ತಲುಪಬೇಕು.

                ಅಭಿಜ್ಜಾ ಲಾಭಗಳು : ಇದರಲ್ಲಿ ಪ್ರಾವಿಣ್ಯ ಪಡೆದ ಸಿದ್ಧನು ಭೂಮಿಯಲ್ಲಿ ನೀರಿನಂತೆ ಮುಳುಗಬಲ್ಲ. ಮಳೆಗಳನ್ನು ತರಿಸಬಲ್ಲ. ಭೂಕಂಪನ ಮಾಡಬಲ್ಲ. ನದಿ ಹಾಗು ಸಾಗರಗಳನ್ನೇ ಸೃಷ್ಟಿಸಬಲ್ಲ ಇತ್ಯಾದಿ.

No comments:

Post a Comment