Sunday 25 June 2017

MEDITATION ON FLOWERS ಹೂ ಕಸಿನಾ

ಹೂ ಕಸಿನಾ :


                ಒಮ್ಮೆ ಧರ್ಮಸೇನಾಪತಿಯಾಗಿದ್ದ ಸಾರಿಪುತ್ರರು ತಮ್ಮ ಶಿಷ್ಯನಿಗೆ ಅಶುಭಾ ಧ್ಯಾನವನ್ನು ನೀಡಿದರು. ಆತನು 4 ತಿಂಗಳು ಸಾಧನೆ ಮಾಡಿದರೂ, ಆತನಿಗೆ ನಿಮಿತ್ತ ಸೃಷ್ಟಿಸಲು ಸಾಧ್ಯವಾಗದೆ ಅಸಮರ್ಥನಾದನು. ಆಗ ಸಾರಿಪುತ್ರರು ಆತನನ್ನು ಕರೆದುಕೊಂಡು ಬುದ್ಧರ ಬಳಿಗೆ ಬಂದು ವಿಷಯ ತಿಳಿಸಿದರು. ಆಗ ಭಗವಾನರು ಹೀಗೆಂದರು : ಸಾರಿಪುತ್ರ ನಿನಗೆ ಆಶಯಾನುಶಯ (ಪರರ ಪ್ರಚನ್ನಯ ಜ್ಞಾನ) ಜ್ಞಾನವಿಲ್ಲ. ಈತನನ್ನು ಸಂಜೆಗೆ ಕರೆದುಕೊಂಡು ಬಾ ಎಂದನು. ಶಿಷ್ಯನು 500 ಜನ್ಮಗಳಲ್ಲಿ ಕೇವಲ ಅಕ್ಕಸಾಲಿಗನಾಗಿದ್ದನು. ಹೀಗಾಗಿ ಆತನು ಶರೀರದ ಅಂಗಗಳ, ಕುರೂಪತೆ ಅರಿಯುವ ಗ್ರಹಿಕೆ ಉಂಟಾಗಿರಲಿಲ್ಲ.
                ಸಂಜೆ ಶಿಷ್ಯನನ್ನು ಆಮ್ರವನಕ್ಕೆ ಕರೆದೊಯ್ದು ಒಂದು ಪುಷ್ಕರಣಿಯನ್ನು ಸೃಷ್ಟಿಸಿ ಹಾಗೆಯೇ ಕಮಲದ ಪುಷ್ಪವನ್ನು ಸೃಷ್ಠಿಸಿ, ಹೂವನ್ನು ಗಮನಿಸುತ್ತಿರು ಎಂದು ಹೇಳಿದರು. ಆತ ಹೂವನ್ನು ನೋಡುತ್ತಾ ಸಮಾಧಿ ಪ್ರಾಪ್ತಿ ಮಾಡಿದನು. ನಂತರ ಹೂವಿನಲ್ಲಿ ಅನಿತ್ಯತೆಯನ್ನು ಭಗವಾನರು ಉಂಟುಮಾಡಿದರು. ಸ್ಪಲ್ಪ ಕಾಲದಲ್ಲಿ ಹೂವು ಬಾಡಿಹೋಯಿತು. ದಳಗಳೆಲ್ಲಾ ಉದುರಿಹೋಯಿತು. ದಂಟು ಮಾತ್ರ ಉಳಿಯಿತು. ಆಗ ಶಿಷ್ಯನು ... ಹೂವೆ ರೀತಿ ಬಾಡಿತು... ಇನ್ನೂ ನನ್ನ ಶರೀರವು ಹೀಗೆ ಮುಪ್ಪಿಗೆ, ಮರಣಕ್ಕೆ ಈಡಾಗುವುದು ನನ್ನ ಮನಸ್ಸು ಅನಿತ್ಯವಾಗಿದೆ. ಯೋಚನೆಗಳೆಲ್ಲಾ ಅನಿತ್ಯವಾಗಿವೆ. ಎಲ್ಲಾ ಸಂಖಾರಗಳು ಅನಿತ್ಯ ಎಂದು ವಿಪಶ್ಶನದಲ್ಲಿ ಸ್ಥಾಪಿತವಾದನು.
                ಆಗ ಭಗವಾನರು ಆತನ ಮುಂದೆ ಪ್ರತ್ಯಕ್ಷರಾಗಿ ಹೀಗೆ ಹೇಳಿದರು.
                ಶರತ್ ಋತುವಿನ ಕುಮುದದಂತೆ ಸ್ನೇಹದ ಬೇರುಗಳನ್ನು ಕಿತ್ತು ಎಸೆದುಬಿಡು. ಸುಗತರು ಉಪದೇಶಿಸಲ್ಪಟ್ಟ ನಿಬ್ಬಾಣದ ಶಾಂತಿ ಮಾರ್ಗದಲ್ಲಿ ನಡೆ.
                ಆಗ ಆತನು ಅಂಟಿಕೊಳ್ಳುವಿಕೆಯಿಂದ ಬಿಡುಗಡೆ ಪಡೆದನು. ಹಾಗು ಆನಂದ ಉಧಾನವೊಂದನ್ನು ಹಾಡಿದನು. ರೀತಿಯಲ್ಲಿ ಭಗವಾನರು ಒಂದೇ ದಿನದಲ್ಲಿ ಪಟಿಸಂಬಿದಾ ಜ್ಞಾನ ಸಹಿತ ಅರಹಂತಸ್ಥಿತಿ ಪ್ರಾಪ್ತಿ ಮಾಡಿಸಿದರು

No comments:

Post a Comment