Sunday 25 June 2017

Kasina meditations ಕಸಿಣ ಧ್ಯಾನಗಳು

Kasina meditations ಕಸಿಣ ಧ್ಯಾನಗಳು

                ಕಸಿನಾಗಳ ಬಗ್ಗೆ ನಮಗೆ ಮಾಹಿತಿಯು ದೀರ್ಘನಿಕಾಯದ ಪಾಥಿಕ ವರ್ಗದಲ್ಲಿ ಮಜ್ಜೀಯನಿಕಾಯದ 50ನೇ ಸುತ್ತದಲ್ಲಿ. ಅಂಗುತ್ತರ ನಿಕಾಯದ ಭಾಗ 1ರಲ್ಲಿ ಜಾತಕ ಕಥೆಗಳಲ್ಲಿ, ಪಟಿಸಂಬಿದ ಮಾರ್ಗದಲ್ಲಿ, ಧಮ್ಮ ಸಂಗಿನಿಯಲ್ಲಿ ಕಥಾವಸ್ತುವಿನಲ್ಲಿ ಸಿಗುತ್ತದೆ. ಮತ್ತು ವಿವರವಾಗಿ ಅರಹಂತ  ಉಪತಿಸ್ಸರವರ ವಿಮುಕ್ತಿಮಾರ್ಗ ಮತ್ತು ಬುದ್ಧ ಪೋಷರವರ ವಿಶುದ್ಧಿಮಾರ್ಗದಲ್ಲಿ ಸಿಗುತ್ತದೆ. ಕಸಿನ ಧ್ಯಾನಗಳು ಇವು ಒಟ್ಟಾರೆ 10 ಇದೆ. ಸಾಮಾನ್ಯವಾಗಿ ಇವುಗಳನ್ನು ಸಮಥಾ ಯಾನಿಕ ಎನ್ನುವರು. ಅಂದರೆ ಆಳವಾದ ಶಾಂತತೆ ಪ್ರಾಪ್ತಿಗಳಿಸುವಂತ ವಾಹನವಾಗಿದೆ. ಅಶುಭಾಧ್ಯಾನ, ಕಾಯಾಗತಸತಿ, ಅನಾಪಾನಾಸತಿ ಇವೆಲ್ಲಾ ವಿಪಶ್ಶನ ಯಾನಿಕ ಎನ್ನುತ್ತಾರೆ. ಅಂದರೆ ಪ್ರಜ್ಞಾಯನ್ನುಂಟು ಮಾಡುವಂತಹ ವಾಹನ ಎಂದರ್ಥ. ಇವೆರಡು ಮಾರ್ಗದಲ್ಲಿಯೂ ಅರಹಂತರಾಗಬಹುದು. ಸಮಥ ಧ್ಯಾನದಲ್ಲಿ ಸಿದ್ಧಿಸುವುದು ಸ್ವಲ್ಪ ಕಷ್ಟಕರ ಎನ್ನುತ್ತಾರೆ. ಅದಕ್ಕಾಗಿ ಯೊಗ್ಯ ಧ್ಯಾನವನ್ನು ಪಡೆಯಬೇಕು ಮತ್ತು ನಿಮ್ಮಲ್ಲಿ ಪ್ರಚನ್ನತೆಯಿರಬೇಕು ಮತ್ತು ಎಲ್ಲಾ ಕಸಿಣಾ ಧ್ಯಾನಗಳು ಕಣ್ಣಿನ ಮುಖಾಂತರ ಧ್ಯಾನ ಮಾಡುವಂತಹದ್ದಾಗಿದೆ. ಝಾನ ಎಂದರೆ ವಿಷಯವೊಂದರ ಮೇಲಿರುವ ಪ್ರಬಲ ಏಕಾಗ್ರತೆ ಆಗಿದೆ.
ಪ್ರಥಮ ಸಮಾಧಿಯಲ್ಲೇ ಎರಡು ರೀತಿಯ ಸಮಾಧಿಯ ಹಂತಗಳಿವೆ.
1.            ಉಪಚರ ಸಮಾಧಿ (ಸಾಮೀಪ್ಯ ಸಮಾಧಿ)
2.            ಅಪ್ಪಣ ಸಮಾಧಿ (ಪ್ರಥಮ ಸಮಾಧಿ) (ಸ್ಥಿರ ಸಮಾಧಿ)
                ಐದು ನಿವರಣಗಳ ಅಂತ್ಯವಾದರೆ ಪ್ರಾರಂಭಿಕ ಉಪಚರ ಸಮಾಧಿ ಲಭಿಸುತ್ತದೆ. ತಡೆಗಳು ಇಲ್ಲದೆ ಹೋದಾಗ ಮನಸ್ಸು ಅತ್ಯಂತ ಸ್ವಚ್ಛ ಮತ್ತು ಶಾಂತವಾಗುತ್ತದೆ. ಆಗ ನಿಮಗೆ ಮನಸ್ಸು ಮೃದುವಾಗಿರುವುದು, ಶಾಂತವಾಗಿರುವುದು ಮತ್ತು ಏಕಾಗ್ರತೆಯಲ್ಲಿರುವುದು ಕಂಡುಬರುವುದು. ಆಗ ನಿಮಗೆ ಯಾವ ಶಬ್ದವು ಕೇಳಿಸದು ಹಾಗೂ ಶರೀರದಲ್ಲೂ ಯಾವ ಬಾಹ್ಯಸ್ಪರ್ಶ ನಿಮಗೆ ಆಗದು. ಆಗ ಮನಸ್ಸು ಅಚಲವಾಗಿರುತ್ತದೆ.
                ಇನ್ನೂ ಅನೇಕ ಅನುಭವಗಳು ನಿಮಗೆ ಬರುವುದು.
ಕಸಿನಾಗಳು 10 ವಿಧದ್ದಾಗಿವೆ.
                1. ಪ್ರಥ್ವಿ 2. ಅಪೋ 3. ತೇಜೋ 4. ವಾಯು 5. ನೀಲಿ 6. ಹಳದಿ 7. ಕೆಂಪು 8. ಬಿಳಿ 9. ಬೆಳಕು ಮತ್ತು 10 ಪರಿಮಿತ ಆಕಾಶ ಕಸಿನಾ.

ಈಗ ವಿವರವಾಗಿ ಅರಿಯೋಣ.

No comments:

Post a Comment