Sunday 25 June 2017

WIND KASINA MEDITATION ವಾಯು ಕಸಿನಾ

ವಾಯು ಕಸಿನಾ :

                ಯಾರು ವಾಯು ಕಸಿನಾ ಸಿದ್ಧಿಸಲು ಹೊರಟಿರುವರೋ, ಅವರು ಗಾಳಿಯನ್ನು ಧ್ಯಾನಿಸಬೇಕಾಗುತ್ತದೆ. ಗಾಳಿಯನ್ನು ವೀಕ್ಷಿಸಿಯೋ ಅಥವಾ ಅದರ ಸ್ಪರ್ಶವನ್ನು ನಿರಂತರ ಧ್ಯಾನಿಸಿ ಸಮಾಧಿ ಪಡೆಯಬೇಕಾಗುತ್ತದೆ.
                ಇಲ್ಲಿ ಸಾಧಕ, ನಿರ್ಜನ, ನಿಶ್ಶಬ್ದ ಹಾಗು ಗಾಳಿಯಿಂದ ಅಲ್ಲಾಡುವ ಗಿಡಗಳ ಬಳಿ ಸಾಧನೆ ಮಾಡಬೇಕಾಗುತ್ತದೆ. ಆತನು ತಲೆಯಿಂದ ನಾಲ್ಕು ಇಂಚು ಎತ್ತರದ ಎತ್ತರದಲ್ಲಿ ನಾಲ್ಕು ದೂರದಿಂದ ಪದ್ಮಾಸನದಲ್ಲಿ ಕುಳಿತು ಅಲ್ಲಾಡುವ ಕಬ್ಬಿನ ಗಿಡವೋ ಅಥವಾ ಇನ್ನಾವುದೋ ಗಿಡವನ್ನು ವೀಕ್ಷಿಸುತ್ತಾ ವಾಯು, ವಾಯು.. ಎಂದು ಜಪಿಸುತ್ತಾ ಧ್ಯಾನಿಸಬೇಕು.
                ಆತನಿಗೆ ಉಗ್ಗಹನಿಮಿತ್ತ ಬಿಸಿ ತಿರುಗುವ ಆವಿಯಂತೆ ಕಾಣಿಸಬಹುದು, ಹಾಗು ಪ್ರತಿ ಭಾಗ ನಿಮಿತ್ತವು ಶಾಂತ ಮತ್ತು ಅವಿಚಲ ಅನಿಲದಂತೆ ಕಾಣಿಸಬಹುದು. ಆವನು ಅದನ್ನು ಅವಲಂಬಿಸಿ...ಚತುರ್ಥ ಝಾನ ಪ್ರಾಪ್ತಿ ಗಳಿಸಬೇಕು.
                ಅಭಿಜ್ಞಾ ಲಾಭಗಳು : ಆತನು ವಾಯುವಿನ ವೇಗದಷ್ಟು ಚಲಿಸಬಲ್ಲ. ಬಿರುಗಾಳಿಯನ್ನು ಚಂಡಮಾರುತವನ್ನು ಸೃಷ್ಟಿಸಬಲ್ಲ ಇತ್ಯಾದಿ.

                ಪಯರ್ಾಯ ವಿಧಾನ : ಸಾಧಕನು ಸ್ಪರ್ಶದ ಮೂಲಕ ವಾಯು ಕಸಿನಾ ಮಾಡುವಿಕೆ, ಇಲ್ಲಿ ಆತನು ರಂಧ್ರವಿರುವ ಗೋಡೆಗೆ ಎದುರಾಗಿ ಕುಳಿತು ರಂಧ್ರದಿಂದ ಬರುವ ಗಾಳಿಗೆ ದೇಹವನ್ನು ಸ್ಪಶರ್ಿಸಿ ಅದರ ಮೂಲಕ ವಾಯುವನ್ನು ಗ್ರಹಿಸುತ್ತಾನೆ. (ನವೀನ ಯುಗವಾದುದರಿಮದ ಫ್ಯಾನ್ನ ಬಳಕೆಯಿಂದಲು ಇದನ್ನು ಸಾಧಿಸಬಹುದು). ಕೆಲವು ಕಾಲದ ನಂತರ ಆತನು ನಡೆಯುವಾಗ, ನಿಂತಿರುವಾಗ, ಕುಳಿತಿರುವಾಗ ಮತ್ತು ಮಲಗಿರುವಾಗೆಲ್ಲಾ ವಾಯುವಿನ ಅನುಭವವನ್ನು ಪಡೆಯುತ್ತಾನೆ. ವಾಯುವು ದೇಹದ ಯಾವುದೇ ಒಂದು ಭಾಗಕ್ಕೆ ಮಾತ್ರ ಸ್ಪಶರ್ಿಸಿದರೆ ಏಕಾಗ್ರತೆ ಸುಲಭ ಹಾಗು ಸಮಾಧಿ ಪಡೆಯಬಹುದು. ನಂತರ ಹಾಗೆಯೇ ಸಾಧನೆಯಿಂದ ಚತುರ್ಥ ಸಮಾಧಿ ಪಡೆಯಬೇಕು

No comments:

Post a Comment