Sunday 25 June 2017

BLUE KASINA MEDITATION ನೀಲಕಸಿನಾ : (ನೀಲಿ/ಹಸಿರು ಕಸಿನಾ)

ನೀಲಕಸಿನಾ : (ನೀಲಿ/ಹಸಿರು ಕಸಿನಾ)

                ಸಾಧಕನು ನಿಶ್ಶಬ್ಧ, ನಿರ್ಜನ ವಾತಾವರಣದಲ್ಲಿ, ನೀಲಿಯ ಬಟ್ಟೆಯಿಂದಲೂ ಅಥವಾ ನೀಲಿ ಹೂವುಗಳಿಂದಲೊ, ಅಥವಾ ನೀಲಿ ಹರಳಿನಿಂದಲೋ ಅಥವಾ ನೀಲಿಯ ಬಣ್ಣದ ಮಂಡಲವನ್ನು ನಿಮರ್ಿಸಿ (ನೀಲಿಯ ವರ್ಣದ ಬಟ್ಟೆಯನ್ನು ತಟ್ಟೆಗೆ ಸುತ್ತಿ ಅದನ್ನು ಗೋಡೆಗೆ ನೇತುಹಾಗಿ, ಅಥವಾ ಕೆಳಗಿಟ್ಟು ಸಾಧನೆ ಮಾಡಬೇಕು. ನೀಲಿಯ ಮಂಡಲದ ಅಂಚಿನಲ್ಲಿ ಆತ ಬೇರೆ ಗಾಢವರ್ಣದ ಬಟ್ಟೆ ಹಾಕಿರಬೇಕು. ಅಥವಾ ಬಣ್ಣ ಬಳಿದಿರಬೇಕು. ಏಕೆಂದರೆ ನೀಲಿ ವರ್ಣದ ಮಂಡಲ ಎದ್ದು ಕಾಣಿಸುವಂತಿರಬೇಕು. ನಂತರ ಆತನು 4 ಅಡಿಗಳ ದೂರದಲ್ಲಿ ಕುಳಿತು ನೀಲಿ ವರ್ಣದ ಮಂಡಲ ಎದ್ದು ಕಾಣಿಸುವಂತಿರಬೇಕು. ನಂತರ ಆತನು 4 ಅಡಿಗಳ ದೂರದಲ್ಲಿ ಕುಳಿತು ನೀಲಿ ಮಂಡಲವನ್ನು ಆತ ತದೇಕ ದೃಷ್ಟಿಯಿಂದ ಧ್ಯಾನಿಸುತ್ತಾ ನೀಲ...ನೀಲ...ನೀಲ... ಎಂದು ಜಪಿಸುತ್ತಿರಬೇಕು. ಹೀಗೆ ಏಕಾಗ್ರತೆ ವಹಿಸಬೇಕು.
                ಆತನಿಗೆ ಉಗ್ಗಹ ನಿಮಿತ್ತವು ಹೂನಂತೆ ಕಾಣಿಸುತ್ತದೆ, ನಂತರ ಪತಿಭಾಗ ನಿಮಿತ್ತವು ಆಕಾಶದಲ್ಲಿ ಸ್ಫಟಿಕದ ಬೀಸಣಿಗೆಯಂತೆ ಕಾಣಿಸುತ್ತದೆ. ನೀಲಿಯ ವಶೀಕೃತ ಚಿನ್ಹೆಯಿಂದ ಆತನು ಎಲ್ಲೆಲ್ಲೂ ನೀಲಿ ಕಾಣುತ್ತಾನೆ. ಅದು ಮಂಡಲದಿಂದ ಮುಕ್ತವಾಗಿರುತ್ತದೆ. ಅದನ್ನು ಅವಲಂಬಿಸಿ ಸಾಮೀಪ್ಯ ಸಮಾಧಿ ಹಾಗೆಯೇ... ಚತುರ್ಥ ಸಮಾಧಿ ಸಾಧಿಸಬೇಕು.

ಅಭಿಜ್ಞಾ ಲಾಭಗಳು : ಆತ ನೀಲಿ ವರ್ಣದ ಯಾವುದೇ ವಸ್ತುಗಳನ್ನು ಸೃಷ್ಟಿಸಬಲ್ಲ, ಆತ ಯಾವುದೇ ವಸ್ತುವನ್ನು ನೀಲಿಯಾಗಿ ಪರಿವರ್ತನೆ ಮಾಡಬಲ್ಲ. ಹಾಗೆಯೇ ಕಪ್ಪು ಆಕಾರಗಳನ್ನು ಸೃಷ್ಟಿಸಬಲ್ಲ. ಕತ್ತಲೆಯನ್ನು ತರಿಸಬಲ್ಲ. ಸುಂದರನಾಗಬಲ್ಲ. ಹಾಗೆಯೇ ಕುರೂಪಿಯೂ ಆಗಬಲ್ಲ ಮತ್ತು ಶುಭ ವಿಮೋಕ್ಷ ಪಡೆಯಬಲ್ಲ

No comments:

Post a Comment