Sunday 25 June 2017

YELLOW KASINA MEDITATION ಪೀತ ಕಸಿಣಾ (ಹಳದಿ ಕಸಿನಾ)

ಪೀತ ಕಸಿಣಾ (ಹಳದಿ ಕಸಿನಾ) :

                ಇಲ್ಲಿ ಸಾಧಕನು ಧ್ಯಾನದ ಶಾಂತ ವಾತಾವರಣದಲ್ಲಿ ಹಳದಿಯ ಪುಷ್ಪಗಳನ್ನು ಅಥವಾ ಹಳದಿ ಬಟ್ಟೆಯನ್ನು ಅಥವಾ ಹಳದಿ ಧಾತುವಿನ ವಸ್ತುವನ್ನು ಅಥವಾ ಮಂಡಲ ನಿಮರ್ಿಸಿ 4 ಅಡಿ ದೂರದಲ್ಲಿಟ್ಟುಕೊಂಡು ಪದ್ಮಾಸನದಲ್ಲಿ ಅಸೀನನಾಗಿ ಹಳದಿಯ ಮಂಡಲವನ್ನು ತದೇಕ ದೃಷ್ಟಿಯಿಂದ ನೋಡುತ್ತಾ ಪೀತ...ಪೀತ...ಪೀತ ಎಂದು ಜಪಿಸುತ್ತಾ ಹಳದಿಯನ್ನು ಧ್ಯಾನಿಸಬೇಕು ಮತ್ತು ಚತುರ್ಥ ಧ್ಯಾನ ಸಾಧಿಸಬೇಕು.
                ಮಿಕ್ಕ ಎಲ್ಲಾ ವಿಷಯ ನೀಲಿ ಕಸಿಣಾದಂತೆಯೇ ಇರುತ್ತದೆ. ಕೇವಲ ವರ್ಣ ಮಾತ್ರ ಬೇರೆಯಾಗಿರುತ್ತದೆ. ಇಲ್ಲಿ ಪ್ರತಿಭಾಗ ನಿಮಿತ್ತವು ಕೆಲವರಿಗೆ ಆಕಾಶದ ಹಳದಿ ಸೂರ್ಯನಂತೆ ಪ್ರಕಾಶಿಸುತ್ತದೆ..
ಅಭಿಜ್ಞಾ ಲಾಭಗಳು :
                ಇಲ್ಲಿ ಆತನು ಹಳದಿ ವರ್ಣದ ಯಾವುದೇ (ಚಿನ್ನ) ವಸ್ತುವನ್ನು ಸೃಷ್ಠಿಸಬಹುದು. ಯಾವುದನ್ನು ಹಳದಿಯಾಗಿ ಪರಿವತರ್ಿಸಬಹುದು ಮತ್ತು ಶುಭ ವಿಮೋಕ್ಷ ಪಡೆಯುತ್ತಾನೆ

No comments:

Post a Comment