Sunday 25 June 2017

NOTHINGNESS MEDITATION ಅಕಿಂಚಾಯಾತನ

ಅಕಿಂಚಾಯಾತನ :


                ನಂತರ ಭಿಕ್ಷುವು ವಿನ್ಯಾನಂಚಯಾತನ ಧ್ಯಾನದಲ್ಲಿ 5 ರೀತಿ ಪ್ರಾವಿಣ್ಯತೆ ಗಳಿಸುತ್ತಾನೆ. ಆಗ ಆತನು ಧ್ಯಾನವನ್ನು ಪುನರ್ ಅವಲೋಕನ ಮಾಡಿದಾಗ ಆತನಿಗೆ ವಿನ್ಯಾನಂಚಯಾತನವು ಸ್ಥೂಲವಾಗಿ ಕಂಡುಬರುತ್ತದೆಅದನ್ನು ಮೀರಿದ ಸ್ಥಿತಿಯಾದ ಅಕಿಂಚಾಯಾತನದ (ಶೂನ್ಯ) ಸೂಕ್ಷ್ಮತೆಯ ಸುಳಿವು ಸಿಗುತ್ತದೆ. ಆಗ ಆತನಿಗೆ ಅಕಿಂಚ (ಏನೂ ಇಲ್ಲ) ಆಯಾತನ ಸ್ಥಿತಿಯೇ ಸೂಕ್ಷ್ಮವಾಗಿ ಶಾಂತವಾಗಿ ಕಂಡುಬರುತ್ತದೆ. ಆಗ ಆತನು ವಿನ್ಯಾನಂಚಯಾತನವನ್ನು ಮೀರಲು ನಿರಂತರ ಯತ್ನಿಸುತ್ತಾನೆ. ವಿನ್ಯಾನದ (ಅರಿವಿನ) ನಿಮಿತ್ತ ಮೀರಿದಾಗ ಆತನಲ್ಲಿ ಏನೂ ಇಲ್ಲವೆಂಬ ಶೂನ್ಯಸ್ಥಿತಿಯು ಉಳಿಯುತ್ತದೆ. ಇದು ಅನಂತ ಅರಿವಿಗಿಂತ ಅಪಾರವಾಗಿ ಸೂಕ್ಷ್ಮತೆಯುಳ್ಳದ್ದು ಹಾಗು ಶ್ರೇಷ್ಠಕರವಾಗಿರುತ್ತದೆ. ಸ್ಥಿತಿಯು ಅವನಿಗೆ ವಿನ್ಯಾನಂಚ ಯಾತನವನ್ನು ಪೂರ್ಣವಾಗಿ ಮೀರಿದ್ದರಿಂದಾಗಿ ಏನೂ ಇಲ್ಲದ ಸ್ಥಿತಿಯು ಪ್ರಾಪ್ತಿಯಾಗಿರುತ್ತದೆ. ಆತನು ಅರಿವನ್ನು ಇಲ್ಲದಂತೆ ಮಡಿದ್ದಾನೆ. ಆತನು ಕೇವಲ ಏನೂ ಇಲ್ಲ ಸ್ಥಿತಿಯೇ ಗೋಚರಿಸುತ್ತದೆ. ಆಲ್ಲಿ ಆತನು ಹಿಡಿಯುವಂತಹುದು ಏನೂ ಇರುವುದಿಲ್ಲ. ಆತನು ಅರಿವನ್ನು ಇಲ್ಲದಂತೆ, ಗಮನಿಸದಂತೆ, ನೆನಪಿಸದಂತೆ ಮಾಡಿ ಏನೂ ಇಲ್ಲದಂತಹ ಶೂನ್ಯದಲ್ಲಿ ಪ್ರವೇಶಿಸಿ ದೀರ್ಘಕಾಲ ನೆಲಸುತ್ತಾನೆ. ಸ್ಥಿತಿಗೆ ಹೆಸರು ಬರಲು ಕಾರಣ ಏನೆಂದರೆ ಅಕಿಂಚ ಎಂದರೆ ಏನೂ ಇಲ್ಲ ಏನೂ ಇಲ್ಲದ ಸ್ಥಿತಿಯ ಆಧಾರವುಳ್ಳದರಿಂದ ಇದಕ್ಕೆ ಅಕಿಂಚಾಯಾತನ ಎನ್ನುತ್ತಾರೆ. ರೀತಿಯಲ್ಲಿ ಆತನು ಅಕಿಂಚಾಯಾತನದಲ್ಲಿ ವಿಹರಿಸುತ್ತಾನೆ

No comments:

Post a Comment