Sunday 25 June 2017

BOUNDLESS SPACE MEDITATION ಆಕಾಶ ನಂಚಾಯತನ

ನಾಲ್ಕು ಅರೂಪ ಝಾನಗಳು :
1.        ಆಕಾಶ ನಂಚಾಯತನ :

                ಇಲ್ಲಿ ಸಾಧಕನು 9 ಕಸಿನಾಗಳು ಪರಿಮಿತ ಆಕಾಶದ ಹೊರತು ಚತುರ್ಥ ಧ್ಯಾನ ಪ್ರಾಪ್ತಿ ಮಾಡಿದ ನಂತರ ಅಥವಾ ಅನಾಪಾನಾಸತಿಯಲ್ಲಿ ಚತುರ್ಥ ಧ್ಯಾನ ಪ್ರಾಪ್ತಿ ಮಾಡಿದ ನಂತರ ಅಥವಾ ಬ್ರಹ್ಮ ವಿಹಾರದ ಉಪೇಖ್ಖಾ ಧ್ಯಾನದ ಪ್ರಾಪ್ತಿಯ ನಂತರ 5 ವಿಧದಲ್ಲಿ ಧ್ಯಾನ ಪ್ರವೀಣನಾಗುತ್ತಾನೆ. (ಅಂದರೆ ಲಕ್ಷ ನೀಡುವಿಕೆ, ಪ್ರವೇಶ ಮಾಡುವಿಕೆ, ಸ್ಥಿರವಾಗಿ ನೆಲೆಸುವಿಕೆ, ಕ್ಷಿಪ್ರವಾಗಿ ಹೊರಬರುವಿಕೆ ಮತ್ತು ಪುನರ್ ಅವಲೋಕನ ಮಾಡುವಿಕೆ) ನಂತರ ಆತನಿಗೆ ರೂಪ ಝಾನವು ಸ್ಥೂಲವಾಗಿ ಕಂಡುಬರುತ್ತದೆ. ಆತನು ಅದನ್ನು ದಾಟಲು ಇಚ್ಛಿಸುತ್ತಾನೆ. ಆತನಿಗೆ ರೂಪ ಝಾನವು ಸ್ಥೂಲವಾಗಿ ಕಂಡುಬರುತ್ತದೆ. ಆತನು ಅದನ್ನು ದಾಟಲು ಇಚ್ಛಿಸುತ್ತಾನೆ. ಆತನಿಗೆ ರೀತಿಯ ಅರಿವು ಬರುತ್ತದೆ ದೇಹದಿಂದಲೇ (ರೂಪದಿಂದಲೇ) ನಾನಾರೀತಿಯ ಹೋರಾಟಗಳು, ವಿವಾದಗಳು, ಪಾಪಗಳು ಉಂಟಾಗುತ್ತವೆ. ರೂಪವಿಲ್ಲದಿದ್ದರೆ ಇದ್ಯಾವುದು ಇರುವುದಿಲ್ಲ.
                ದೇಹವಿದ್ದರೆ ನಾನಾ ರೊಗಗಳು, ಮುಪ್ಪು, ಮರಣಗಳಿಗೆ ಸಿಲುಕುತ್ತಲೆ ಇರಬೇಕಾಗುತ್ತದೆ. ಶೀತೋಷ್ಣ, ಹಸಿವು, ಬಾಯಾರಿಕೆ ಇತ್ಯಾದಿ ತೊಂದರೆ ಇದ್ದೇ ಇರುತ್ತದೆ. ಆದರೆ ರೂಪದ ಗ್ರಹಿಕೆಗಳನ್ನು ಮೀರಿದಾಗ, ಆತನಿಗೆ ಇನ್ನಾವುದು ತೊಂದರೆ ಇರುವುದಿಲ್ಲ ಎಂದು ಚಿಂತಿಸುತ್ತಾ ಆತನು ದೇಹತೀತ ಧ್ಯಾನವಾದ ಹಾಗು ರೂಪ ಶಬ್ದ, ವಾಸನೆ, ರುಚಿ ಮತ್ತು ಸ್ಪರ್ಶಗಳಿಗೆ ಅತೀತವಾದ ಅರೂಪ ಝಾನ ಮಾಡಲು ನಿರ್ಧರಿಸುತ್ತಾನೆ. ಮೊದಲನೆಯ ಸಮಾಧಿಯಲ್ಲಿ ಶಬ್ದವು ನಿಲ್ಲುತ್ತದೆ, ನಾಲ್ಕನೆಯ ಸಮಾದಿಯಲ್ಲಿ ಉಸಿರಾಟ ನಿಲ್ಲುತ್ತದೆ. ಆದರ ಅರೂಪ ಝಾನದಲ್ಲಂತು ಎಲ್ಲಾ ವಿಧವಾದ ರೂಪ ಮೀರಿ ರೂಪತೀತ (ದೇಹತೀತ ಮತ್ತು ಇಂದ್ರಿಯಾತೀತ) ಕ್ಷೇತ್ರಕ್ಕೆ ಹೋಗುತ್ತಾನೆ.
                ಇಂದ್ರಿಯ ವಲಯದ ಮಾನವ ಪ್ರಥಮ ಸಮಾಧಿಗೆ ಹೊರಟಾಗ ಆತನು ರೂಪ ಧ್ಯಾನದ ಬ್ರಹ್ಮಾ ವಲಯದಲ್ಲಿ ಪ್ರವೇಶಿಸುತ್ತಾನೆ. ಈಗ ಆತನು ರೂಪವಲಯವನ್ನು ದಾಟಿ ಅರೂಪ ವಲಯಕ್ಕೆ ಪ್ರವೇಶಿಸುತ್ತಾನೆ. ಸ್ಥಿತಿಯಲ್ಲಿರುವವರು ದೇಹದ ಎಲ್ಲಾ ವಿಧವಾದ ಸಂಪರ್ಕ ಕಡಿದುಕೊಳ್ಳುತ್ತಾರೆ. ಹೇಗೆ ಸರ್ಪಕ್ಕೆ ಭಯಪಡುವ ಮನುಷ್ಯ ಹಗ್ಗವನ್ನು ಕಂಡು ಬೆಚ್ಚಿಬಿದ್ದು ಅಲ್ಲಿಂದ ವಿಮುಖವಾಗುವಂತೆ ಆತನು ಚತುರ್ಥ ಧ್ಯಾನದಿಂದ ಮೀರಿಹೋಗಲು ಇಚ್ಛಿಸುತ್ತಾನೆ.
                ಆತನು 4ನೆಯ ಧ್ಯಾನದ ಪುನರ್ ಅವಲೋಕನ ಮಾಡಿದಾಗ ಆತನಿಗೆ ಚತುರ್ಥ ಧ್ಯಾನವು ಸ್ಥೂಲವಾಗಿ ಕಂಡುಬರುತ್ತದೆ. ಹಾಗೂ ಆಕಾಶದ ಅನಂತತೆಯು ಸೂಕ್ಷ್ಮವಾಗಿ, ಶಾಂತಿಯಾಗಿ ಕಂಡುಬರುತ್ತದೆ. ಆಗ ಆತನು ರೂಪದ ಚಿಹ್ನೆ (ರೂಪನಿಮಿತ್ತಗಳಿಂದ) ಹೊರಬರಲು ಯತ್ನಿಸುತ್ತಾನೆ. ಚತುರ್ಥ ಸಮಾಧಿಯಲ್ಲಿ ಗಮನ ನೀಡದೆ ಆಕಾಶದಲ್ಲಿ ಗಮನ ನೀಡಿದ್ದರಿಂದಾಗಿ ಆತನು ಝಾನ ಸಾಧಿಸುತ್ತಾನೆ ಅಥವಾ ರೂಪಚಿಹ್ನೆಗಳೆಲ್ಲವೂ ಮೀರಿ ಬರಿದು ಮಾಡಿದ್ದರಿಂದಾಗಿ ಆಕಾಶವು ಉಳಿಯುತ್ತದೆ. ಮತ್ತೆ ಮತ್ತೆ ಪ್ರಯತ್ನಿಸಿದ್ದರಿಂದ ಸ್ಮೃತಿಯು ಮನವು ಏಕಾಗ್ರವಾಗಿ ಅರೂಪ ಝಾನವು ಸ್ಥಾಪಿಸಲ್ಪಡುತ್ತದೆ.

                ರೂಪಚಿಹ್ನೆಗಳನ್ನು (ನಿಮಿತ್ತಗಳನ್ನು) ಪೂರ್ಣವಾಗಿ ಬರಿದು ಮಾಡಿ ಆಕಾಶ ಸಾದಿಸಿ, ಅಥವಾ ಆಕಾಶವನ್ನು ಸ್ಥಾಪಿಸಿ ರೂಪನಿಮತ್ತಗಳನ್ನು ಮೀರಿ, ಆತನು ಆಕಾಶ ಅನಂತ ಆಯಾತನ ಸ್ಥಿತಿ ಪ್ರವೇಶಿಸುತ್ತಾನೆ. (ಆಗ ಆತನಲ್ಲಿ ರೂಪದ ಗ್ರಹಿಕೆಗಳು ಮಾತ್ರವಲ್ಲ, ರೂಪದ ಸಂಖಾರಗಳು, ರೂಪದ ವೇದನೆಗಳು ಹಾಗು ರೂಪದ ವಿನ್ಯಾಸವು ಸಹಾ ಅಳಿಯುತ್ತದೆ). ಕೇವಲ ಅರೂಪ ಗ್ರಹಿಕೆ ಸ್ಥಾಪಿತವಾಗುತ್ತದೆ. ಕಸಿನಾದಿಂದ ಅರೂಪ ಸಾಧಿಸುವಾಗ ಆತನು ಎಲ್ಲಾ ಮಹಾಭೂತಗಳ ಅಥವಾ ಎಲ್ಲಾ ವರ್ಣಗಳ ನಿಮಿತ್ತಗಳನ್ನು ಮೀರುತ್ತಾನೆ. ಬ್ರಹ್ಮವಿಹಾರದಿಂದ ಅರೂಪ ಸಾಧಿಸುವಾಗ ಎಲ್ಲಾ ವ್ಯಕ್ತಿಗಳ ನಿಮಿತ್ತವನ್ನು ಮೀರುತ್ತಾನೆ. ಅನಾಪಾಸತಿಯಿಂದ ಅರೂಪ ಸಾಧಿಸುವಾಗ ಆತನು ದೇಹದ ಸ್ಪರ್ಶಗಳನ್ನು, ನಿಮಿತ್ತಗಳನ್ನು ಮೀರುತ್ತಾನೆ. ಹಾಗು ಉಳಿದಿರುವ ಆಕಾಶ (ಶೂನ್ಯತೆ), ಆತನು ತನ್ನ ಚಿತ್ತವನ್ನು ಅಕಾಶದಲ್ಲಿ ನೆಲೆಸಿ, ಅದನ್ನು ಅನಂತವಾಗಿ ಹರಡಿಸುತ್ತಾನೆ (ಪ್ರಸರಿಸುತ್ತಾನೆ). ಆತನು ರೀತಿಯ ಅನಂತ ಆಕಾಶದ ಸ್ಥಿತಿಯಲ್ಲಿ ವಿಹರಿಸುತ್ತಾನೆ. ಆಯಾತನ ಎಂದರೆ ಆಧಾರ ಎಂದರ್ಥ. ಒಟ್ಟಾರೆ ಹೇಳುವುದಾದರೆ ಆನಂತ ಆಕಾಶದ ಆಧಾರದಲ್ಲಿ ವಿಹರಿಸುತ್ತಾನೆ ಎಂದರ್ಥ. ಆದ್ದರಿಂದ ಸ್ಥಿತಿಗೆ ಆಕಾಶ ಅನಂತ ಆಯಾತನ ಎನ್ನುತ್ತಾರೆ ಅಥವಾ ಆಕಾಶ ನಂಚಾಯತನ ಎನ್ನುತ್ತಾರೆ. ರೀತಿಯಾಗಿ ಆತನು ಆಕಾಶ ಅನಂತ ಆಯಾತನ ಝಾನದಲ್ಲಿ ವಿಹರಿಸುತ್ತಾನೆ

No comments:

Post a Comment